Advertisements

ಯುಗಪುರುಷ ಸಿನಿಮಾದಲ್ಲಿ ನೆಗೆಟಿವ್ ಕ್ಯಾರೆಕ್ಟರ್ ಮಾಡಿ‌ ಪ್ರೇಕ್ಷಕರ ಮನಗೆದ್ದ ಕಾಮಿನಿದೇವಿ ಈಗ ಹೇಗಾಗಿದ್ದಾರೆ…ಅವರು ಮಾಡುತ್ತಿರುವ ಕೆಲಸ ಏನು ನೋಡಿ..

Cinema Entertainment

ನಮಸ್ತೆ ಸ್ನೇಹಿತರೆ, ಸಿನಿಮಾಗಳಲ್ಲಿ ಹೀರೋಗಳು ಮಾತ್ರ ತುಂಬಾ ಫೇಮಸ್ ಆಗುವುದಿಲ್ಲ. ವಿಲನ್ ಗಳು ಸಹ ಅವರ ನೆಗಟಿವ್ ನಟನೆಯೊಂದಿಗೆ ತುಂಬಾ ಫೇಮಸ್ಸಾದ ಉದಾಹರಣೆಗಳು ಸಹ ಇವೆ. ಅದರಲ್ಲಿ ನಟಿ ಮೂನ್ ಮೂನ್ ಸೆನ್ ಕೂಡ ಒಬ್ಬರು. ಹೌದು 1989 ರಲ್ಲಿ ತೆರೆಕಂಡ ಯುಗಪುರುಷ ಸಿನಿಮಾ ಪುನರ್ಜನ್ಮದ ಕತೆಗೆ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿ’ಟ್ ಆಗಿ ಹೊರಹೊಮ್ಮಿತ್ತು. ಈ ಸಿನಿಮಾಗೆ ಸಾಕಷ್ಟು ಪ್ರೇಕ್ಷಕರು ಮಾರುಹೋಗಿದ್ದರು ಅಂತ ಹೇಳಿದರೆ ತಪ್ಪಿಲ್ಲ. ಇನ್ನೂ ಯುಗಪುರುಷ ಸಿನಿಮಾದಲ್ಲಿ ನೆಗೆಟಿವ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಂಡು ತಮ್ಮ  ಸೌಂದರ್ಯದಿಂದ ಕನ್ನಡ ಪ್ರೇಕ್ಷಕರನ್ನು ಸೆಳೆದ ನಟಿ ಮೂನ್ ಮೂನ್ ಸೇನ್.

Advertisements
Advertisements

ಯುಗಪುರುಷ ಸಿನಿಮಾ ಸೂಪರ್ ಹಿ’ಟ್ ಆದ ನಂತರ, ಮೂನ್ ಮೂನ್ ಸೆನ್ ಅವರು ವೈಶಾಖದ ದಿನಗಳು ಹಾಗೂ ಮಾಂಗಲ್ಯದ ಬಂಧನ ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸನ್ನು ಸೆಳೆದಿದ್ದಾರೆ. ಇನ್ನು ನಟಿ ಮೂನ್ ಮೂನ್ ಸೇನ್ ಅವರು 1954 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದರು. ಇವರ ತಾಯಿ ಜನಪ್ರಿಯ ಬಂಗಾಲಿ ನಟಿ ಸುಮಿತ್ರಾ ಸೇನ್ ಹಾಗೂ ಇವರ ತಂದೆ ದಿಬನಾತ್ ಸೇನ್.

ಇವರ ತಂದೆ ದಿಬನಾತ್ ಸೇನ್ ಕೋಲ್ಕತ್ತಾದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಮೂನ್ ಮೂನ್ ಸೇನ್ ರವರ ತಾತ‌ ಕೂಡ ತುಂಬಾ ಫೇಮಸ್ ಆಗಿದ್ದಾರಂತೆ, ಯಾಕೆಂದರೆ ಇವರು ತ್ರಿಪುರ ಮಹಾರಾಜರ ಆಸ್ಥಾನದಲ್ಲಿ ದಿವಾನರಾಗಿದ್ದರು. ಮೂನ್ ಮೂನ್ ಸೇನ್ ರವರು 1978 ರಲ್ಲಿ ಭರತ್ ದೇವ್ ವರ್ಮಾ ಎಂಬುವರನ್ನು ವಿವಾಹವಾಗುತ್ತಾರೆ. ಭರತ ದೇವ್ ತ್ರಿಪುರ ರಾಜ್ಯದ ಮಹಾರಾಜರ ಮನೆತನದರಾಗಿದ್ದಾರೆ. ಇನ್ನು ಮೂನ್ ಮೂನ್ ಸೇನ್ ತಮ್ಮ ಸಿನಿ ಕೆರಿಯರನ್ನು ಮದುವೆ ಹಾಗೂ ಮಕ್ಕಳಾದ ಮೇಲೆ ಪ್ರಾರಂಭಿಸಿರುವುದು ಬಹಳ ವಿಶೇಷ ಅಂತ ಹೇಳಬಹುದು.

ಕೆಲವು ವರ್ಷಗಳ ಕಾಲ ಸಿನಿರಂಗದಲ್ಲಿ ಮಿಂ’ಚಿದ ಇವರು, ನಂತರ ಸಿನಿ ರಂಗವನ್ನು ತೊರೆದು ಹೊರಬಂದರು. ನಂತರ ಮೂನ್ ಮೂನ್ ಸೇನ್ ರವರು 2014 ರ ಲೋಕಸಭಾ ಚುನಾವಣೆಯಲ್ಲಿ ಸಂಸದೆಯಾಗಿ ಆಯ್ಕೆಯಾಗಿ ಜನರ ಸೇವೆಯನ್ನು ಮಾಡುತ್ತಿದ್ದಾರೆ. ಸದ್ಯ ಇದೀಗ ನಟಿ ಮೂನ್ ಮೂನ್ ಸೇನ್ ರವರಿಗೆ 66 ವರ್ಷ ವಯಸ್ಸು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಕೂಡ ಸಿನಿಮಾರಂಗದ ಖ್ಯಾತ ನಟಿಯರಾಗಿ ಮಿಂ’ಚಿದ್ದಾರೆ. ಪ್ರಸ್ತುತ ಕಾಮಿನಿ ದೇವಿ ಪಾತ್ರಧಾರಿಯ ಮೂನ್ ಮೂನ್ ಸೇನ್ ತಮ್ಮ ಪತಿಯ ಜೊತೆ ಸುಖವಾದ ಸಂಸಾರವನ್ನು ನಡೆಸಿಕೊಂಡು ನೆಮ್ಮದಿಯಿಂದ ಇದ್ದಾರೆ. ಇವರ ನಟನೆಯ ಬಗ್ಗೆ ನೀವೇನಂತೀರ ಸ್ನೇಹಿತರೆ ಕಮೆಂಟ್ ಮಾಡಿ ತಿಳಿಸಿ..