Advertisements

ಮಗನ ಸಮಾಧಿ ಮೇಲೆ ಮಲಗಿ ಈ ತಾಯಿ ಮಾಡಿರೋ ಕೆಲಸ ನೋಡಿದ್ರೆ ಕರುಳು ಕಿತ್ತು ಬರುತ್ತೆ.!

Kannada News

ನಮಸ್ಕಾರ ವೀಕ್ಷಕರೆ ಹೊರಗಡೆಯವರು ನಮ್ಮ ಮೇಲೆ ಎಷ್ಟೇ ಪ್ರೀತಿ ತೋರಿಸಿದರು ಅದು ನಮ್ಮ ತಂದೆ ತಾಯಿ ನಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ಸಮ ಆಗೋದಿಲ್ಲ ತಂದೆ ಮನಸ್ಸಿನಲ್ಲೆ ಪ್ರೀತಿ ಇಟ್ಟುಕೊಳ್ಳುತ್ತಾರೆ ಹೊರಗೆ ಮಕ್ಕಳ ಮೇಲಿನ ಪ್ರೀತಿಯನ್ನು ಅಪ್ಪಂದಿರು ತೋರಿಸಿಕೊಳ್ಳುವುದಿಲ್ಲ ಆದರೆ ತಾಯಿಯ ವಿಷಯದಲ್ಲಿ ಆಗೇ ಹೇಳಲು ಸಾಧ್ಯವಿಲ್ಲ ಮಕ್ಕಳಿಗೆ ಏನಾದರೂ ಒಂದು ಚಿಕ್ಕ ಗಾಯವಾದರೆ ಅದನ್ನು ನೋಡಿ ಅವರ ತಾಯಿ ಸಹಿಸಿ ಕೊಳ್ಳೋದಿಲ್ಲ ಕಣ್ಣೀರು ಹಾಕುತ್ತಾರೆ ಇದೇ ರೀತಿಯ ಒಂದು ತಾಯಿ ಮಗನ ನಡುವೆ ನಡೆದಂತ ಮನಕಲಕುವ ಘಟನೆಯ ಬಗ್ಗೆ ಸಂಪೂರ್ಣವಾಗಿ ಓದಿ ನೋಡಿ.. ತಮಿಳುನಾಡಿನಲ್ಲಿ ಸುಜಾತ ಎಂಬ ಮಹಿಳೆ ತನ್ನ ಐದು ವರ್ಷದ ಮಗನಾದ ದರ್ಶನ್ ಜೊತೆ ವಾಸ ಮಾಡುತ್ತಿದ್ದಳು, ಸುಜಾತ ಗಂಡ ಕಳೆದ ವರ್ಷ ಆಕ್ಸಿಡೆಂಟ್ ಒಂದರಲ್ಲಿ ಸತ್ತುಹೋಗಿದ್ದ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಗಂಡನನ್ನು ಕಳೆದುಕೊಂಡಿದ್ದ ಸುಜಾತ ಮಗ ದರ್ಶನ್ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದಳು ತಾಯಿ ಮಗ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟು ಒಂದು ನಿಮಿಷ ಕೂಡ ಇರುತ್ತಿರಲಿಲ್ಲ ದರ್ಶನ್ ಗೆ ಮೂರು ವರ್ಷ ವಯಸ್ಸು ತುಂಬಿದ ನಂತರ ತಮ್ಮ ಮನೆಯ ಪಕ್ಕದಲ್ಲೇ ಇದ್ದಂತಹ ಶಾಲೆಗೆ ಸುಜಾತ ಸೇರಿಸಿದ್ದಳು ಒಂದು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಾ ಇದರಲ್ಲಿ ಬರುತ್ತಿದ್ದ ಸಂಬಳದಿಂದ ಮಗನ ಶಾಲೆಯ ಫೀಸ್ ಕಟ್ಟಿ ಮನೆಯ ಖರ್ಚುಗಳನ್ನು ಸುಜಾತ ಮೆಂಟೇನ್ ಮಾಡುತ್ತಿದ್ದಳು ತನ್ನ ಮಗ ದರ್ಶನ್ ಚೆನ್ನಾಗಿ ಓದಿ ಒಳ್ಳೆಯ ಸ್ಥಾನಕ್ಕೆ ಬರಬೇಕು ಅಪ್ಪ ಇಲ್ಲದ ಮಗನನ್ನು ತಾಯಿ ಸರಿಯಾಗಿ ಓದಿಸಲಿಲ್ಲ ಎಂದು ಯಾರು ಆಡಿ ಕೊಳ್ಳಬಾರದು

Advertisements
Advertisements

ಅಂತ ಸುಜಾತ ಮಗನ ಮೇಲೆ ತುಂಬಾ ಗಮನವಿಟ್ಟು ದರ್ಶನ್ ನ ಓದಿಸುತ್ತಿದ್ದಳು ಪ್ರತಿದಿನ ತಾನು ಕೆಲಸಕ್ಕೆ ಹೋಗುವಾಗ ಮಗ ದರ್ಶನ್ ನ ತನ್ನ ಸ್ಕೂಟಿಯಲ್ಲೆ ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಮತ್ತೆ ಪುನಃಹ ಸಂಜೆ ಕೆಲಸದಿಂದ ಮನೆಗೆ ಬರುವಾಗ ಮಗನನ್ನು ಮತ್ತೆ ತನ್ನ ಗಾಡಿಯಲ್ಲಿ ಕೂರಿಸಿಕೊಂಡು ಮನೆಗೆ ಕರೆದುಕೊಂಡು ಸುಜಾತ ಬರುತ್ತಿದ್ದಳು.. ಹೀಗೆ ಒಂದು ದಿನ ಸುಜಾತ ದರ್ಶನ್ ನ ಸ್ಕೂಟಿಯಲ್ಲಿ ಕೂರಿಸಿಕೊಂಡು ಬರುತ್ತಿದ್ದಾಗ ಅತಿ ವೇಗದಿಂದ ಬರುತ್ತಿದ್ದ ಲಾರಿಯೊಂದರ ಬ್ರೇಕ್ ಫೇಲ್ ಆಗಿ ಆ ಲಾರಿ ಸುಜಾತ ಗಾಡಿಗೆ ಜೋರಾಗಿ ಬಂದು ಗುದ್ದು ಬಿಟ್ಟಿತು ಈ ಭೀಕರ ಅಪಘಾತದಲ್ಲಿ ಸುಜಾತಾಗೆ ಗಂಭೀರವಾದ ಗಾಯಗಳಾದವು ಪಾಪ ಐದು ವರ್ಷದ ಹುಡುಗ ದರ್ಶನ್ ಗೆ ತಲೆಗೆ ಪೆಟ್ಟು ಆಗಿದ್ದರಿಂದ ದರ್ಶನ್ ಅಪಘಾತವಾದ ಸ್ಥಳದಲ್ಲೆ ಸತ್ತುಹೋದ ಸುಜಾತಾಗೆ ಗಂಭೀರವಾಗಿ ಗಾಯವಾಗಿದ್ದರಿಂದ ಆಕೆನಾ ಹಾಸ್ಪಿಟಲ್ ಗೆ ಸೇರಿಸಲಾಯಿತು ಸುಜಾತ ಕೋಮಾ ಸ್ಟೇಜ್ ಗೆ ಹೋಗಿ ಬಿಟ್ಟಳು ಹೀಗಾಗಿ ಸುಜಾತಾಳ ಅಕ್ಕಪಕ್ಕದ ಮನೆಯವರೆಲ್ಲರೂ ಸೇರಿ ದರ್ಶನ್ ಅಂತ್ಯಕ್ರಿಯೆ ಮಾಡಿದರು ಮೂರುದಿನದ ನಂತರ ಸುಜಾತ ಗೆ ಮರಳಿ ಜ್ಞಾನ ಬಂತು, ಜ್ಞಾನ ಬಂದಕೂಡಲೇ ಸುಜಾತ ತನ್ನ ಮಗ ದರ್ಶನ್ ಎಲ್ಲಿ ಮಗ ಹೇಗಿದ್ದಾನೆ ಎಂದು ಕಣ್ಣೀರು ಹಾಕಲು ಶುರು ಮಾಡಿದಳು ನೀನು ಹೀಗಿರುವ ಸ್ಥಿತಿಯಲ್ಲಿ ದರ್ಶನ್ ನೋಡಿದ್ರೆ ಭಯ ಪಡುತ್ತಾನೆ ಅಮ್ಮ ಕೆಲಸಕ್ಕೆ ಹೋಗಿದ್ದಾಳೆ ಎಂದು ಹೇಳಿ ಅವನನ್ನು ಸಮಾಧಾನ ಮಾಡಿದ್ದೀವಿ


ನೀನು ಮೊದಲು ಹುಷಾರಾಗು ಆಮೇಲೆ ನಿಮ್ಮ ಮಗನನ್ನು ಕರೆದುಕೊಂಡು ಬರ್ತೀವಿ ಎಂದು ಪರಿಚಯಸ್ಥರು ಸುಜಾತಾಳನ್ನು ಸಮಾಧಾನ ಮಾಡಿದ್ದರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ನನ್ನ ಮಗ ದರ್ಶನ್ ಹೇಗಿದ್ದಾನೆ ಊಟ ಮಾಡಿದನ ಶಾಲೆಗೆ ಯಾರು ಕರೆದುಕೊಂಡು ಹೋಗಿ ಬಿಡುತ್ತಿದ್ದಾರೆ.. ಅಂತಾ ಮಗ ತಾನು ಸತ್ತು ಹೋಗಿದ್ದಾನೆ ಎಂದು ಗೊತ್ತಿಲ್ಲದೆ ಸುಜಾತ ಅಕ್ಕ ಪಕ್ಕದ ಮನೆಯವರನ್ನು ವಿಚಾರಿಸುತ್ತಲೇ ಇದ್ದಳು, ಸುಜಾತ ಈ ಸ್ಥಿತಿಯಲ್ಲಿ ಇರುವಾಗ ಮಗ ಸತ್ತುಹೋಗಿರುವ ವಿಷಯ ಹೇಳಬಾರದು ಅಂತ ಸುಳ್ಳು ಹೇಳಿ ಹೇಗೋ ಸಮಾಧಾನ ಪಡಿಸಿದರು ಹದಿನೈದು ದಿನದ ನಂತರ ಹುಷಾರಾಗಿ ಆಸ್ಪತ್ರೆಯಿಂದ ಮನೆಗೆ ಬಂದ ದರ್ಶನ್ ತಾಯಿ ಸುಜಾತ ದರ್ಶನ್ ಎಲ್ಲಿ ಎಂದು ಕೇಳಿದಳು ಈಗ ಸತ್ಯ ಹೇಳಿದರು ಆಕ್ಸಿಡೆಂಟ್ ಆದ ದಿನವೇ ನಿನ್ನ ಮಗ ಸ್ಥಳದಲ್ಲೇ ಸತ್ತುಹೋದ ನಾವೇ ನೀನು ಕೋಮಾ ಸ್ಥಿತಿಯಲ್ಲಿ ಇದ್ದಿದ್ದರಿಂದ ದರ್ಶನ್ ಅಂತಿಮ ಸಂಸ್ಕಾರವನ್ನು ಮಾಡಿ ಮುಗಿಸಿದೆವು ಎಂದು ಪಕ್ಕದ ಮನೆಯವರು ಸುಜಾತಾಗೆ ಎಲ್ಲ ಸತ್ಯವನ್ನು ಹೇಳಿದರು ತನ್ನ ಮಗ ಸತ್ತುಹೋದ ವಿಷಯ ಕೇಳಿ ಬಿಕ್ಕಿ ಬಿಕ್ಕಿ ಅತ್ತು ಕೂಗಾಡಿದಳು ಅಯ್ಯೋ ಭಗವಂತ ನನ್ನ ಮಗನನ್ನು ತಾನೆ ಸಾಯಿಸಿ ಬಿಟ್ಟೆನಲ್ಲ ಅಯ್ಯಯ್ಯೋ ಅಯ್ಯಯ್ಯೋ ಎಂದು ಸುಜಾತ ಬಾಯಿ ಬಡಿದುಕೊಂಡಳು ಆ ನಂತರ ನನ್ನ ಮಗನನ್ನು ಎಲ್ಲಿ ಸಮಾಧಿ ಮಾಡಿದ್ದೀರಾ ಎಂದು ಕೇಳಿ ದರ್ಶನ್ ಸಮಾಧಿ ಬಳಿ ಸುಜಾತ ಬಂದಿದ್ದಾಳೆ


ಮಗನ ಸಮಾಧಿಯ ಮೇಲೆ ಅಡ್ಡವಾಗಿ ಮಲಗಿ ಅಯ್ಯೋ ನನ್ನ ಮುದ್ದು ಕಂದ ನಾನಿಲ್ಲದೆ ನೀನು ಮಲಗುತ್ತಿರಲಿಲ್ಲವಲ್ಲ ನಿನ್ನನ್ನು ಯಾರು ಮಲಗಿಸಿದರು ಹೇಳು ಎಂದು ಸುಜಾತ ಕಣ್ಣೀರು ಹಾಕಿದಳು ಸುಜಾತಾಳ ಸ್ಥಿತಿಯನ್ನು ನೋಡಿ ಸುಜಾತ ತನ್ನ ಮಗನ ಸಮಾದಿ ಬಳಿ ಮಾತನಾಡುತ್ತಿದ್ದನ್ನು ಕೇಳಿ ಅಲ್ಲಿದ್ದವರ ಕಣ್ಣುಗಳು ಕೂಡ ಒದ್ದೆಯಾದವು ಆನಂತರ ಹೇಗೋ ಸಮಾಧಾನ ಮಾಡಿ ಸುಜಾತಾಳನ್ನು ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದಾರೆ ಮಾರನೆಯದಿನ ಪಕ್ಕದ ಮನೆಯವರು ಬಂದು ನೋಡಿದರೆ ಸುಜಾತ ಮನೆಯಲ್ಲಿ ಇರಲಿಲ್ಲ ಎಲ್ಲಿ ಹೋದಳು ಸುಜಾತ ಎಂದು ಹುಡುಕಿದರೆ ಸುಜಾತ ಮನೆಯ ಸುತ್ತಮುತ್ತ ಎಲ್ಲಿ ಕಾಣಿಸಲಿಲ್ಲ ಮಗನ ಸಮಾಧಿ ಬಳಿ ಸುಜಾತ ಮತ್ತೆ ಹೋಗಿರಬಹುದು ಅಂತ ಸ್ಮಶಾನಕ್ಕೆ ಹೋಗಿ ನೋಡಿದರೆ ಅಲ್ಲಿ ಸುಜಾತ ಮಗನ ಸಮಾಧಿಯ ಮೇಲೆ ಮಲಗಿ ಕಂದ ನಾನು ಇಲ್ಲೇ ಇದ್ದೀನಿ ನೀನೇನು ತಲೆ ಕೆಡಿಸ್ಕೋಬೇಡ ಮಲಗು ಮಗನೇ ಎಂದು ಗೋಳಾಡುತ್ತಿದ್ದಳು ಸುಜಾತ ಯಾಕೆ ಇಷ್ಟು ಬೆಳಿಗ್ಗೆ ಇಲ್ಲಿಗೆ ಬಂದಿದ್ದೀಯಾ ಎಂದು ಪಕ್ಕದ ಮನೆಯವರು ಕೇಳಿದರು ಆಗ ನನ್ನ ಮಗನೇ ನನಗೆ ಇಲ್ಲಿ ನಿದ್ದೆ ಬರುತ್ತಿಲ್ಲ ಅಮ್ಮ ನನ್ನ ಬಳಿ ಬಾ ಎಂದು ಕೂಗಿದ ಹೀಗಾಗಿ ಇಲ್ಲಿಗೆ ಓಡಿಬಂದೆ ಎಂದು ಸುಜಾತ ಹೇಳಿದಳು ಸುಜಾತ ಹೇಳಿದ ಮಾತು ಕೇಳಿ ಏನು ಉತ್ತರಕೊಡಬೇಕೆಂದು ಗೊತ್ತಾಗದೆ ಮತ್ತೆ ಸುಜಾತಾಳನ್ನು ಸಮಾಧಾನಪಡಿಸಿ ಮನೆಗೆ ಕರೆದುಕೊಂಡು ಬಂದಿದ್ದಾರೆ

ಮಾರನೆಯ ದಿನ ಮನರೋಗ ಡಾಕ್ಟರ್ ಬಳಿ ಸುಜಾತಾಳನ್ನು ಕರೆದುಕೊಂಡು ಹೋಗಿ ಟ್ರೀಟ್ ಮೆಂಟ್ ಕೊಡಿಸಿದರು ಈಗ ಸ್ವಲ್ಪ ಸ್ವಲ್ಪವಾಗಿ ಸುಜಾತ ಮಗನ ಅಗಲಿಕೆಯ ನೋವನ್ನು ಮರೆಯುತ್ತಿದ್ದಾಳೆ ಡಾಕ್ಟರ್ ಕೊಟ್ಟ ರಿಪೋರ್ಟ್ ನಲ್ಲಿ ಸುಜಾತಾ ರೀತಿಯಲ್ಲಿ ಮಗ ದರ್ಶನ್ ಕೂಡ ಹೆಲ್ಮೆಟ್ ಹಾಕಿಕೊಂಡಿದ್ದರೆ ಈತ ಕೂಡ ಸಾಯುತ್ತಿರಲಿಲ್ಲ ಎಂದು ಬರೆಯಲಾಗಿತ್ತು ಸ್ನೇಹಿತರೆ ನಾವುಗಳು ಕೂಡ ಇದೇ ತಪ್ಪು ಮಾಡುತ್ತಿದ್ದೇವೆ ನಾವುಗಳು ಗಾಡಿ ಓಡಿಸುವಾಗ ನಾವು ಹೆಲ್ಮೆಟ್ ಹಾಕಿರುತ್ತೀವಿ ಆದರೆ ನಮ್ಮ ಜೊತೆ ಬರುವ ಮಕ್ಕಳಿಗೆ ಹೆಲ್ಮೆಟ್ ಹಾಕಿಸಿರಲ್ಲ ಈಗಿನಿಂದಲೇ ಮಕ್ಕಳಿಗೆ ಹೆಲ್ಮೆಟ್ ಹಾಕಿಕೊಳ್ಳುವುದನ್ನು ರೂಡಿ ಮಾಡಿಸಿದರೆ ಮುಂದೆ ಅವರಿಗೂ ಹೆಲ್ಮೆಟ್ ಎಷ್ಟು ಪ್ರಯೋಜನಕಾರಿ ಎಂದು ಗೊತ್ತಾಗುತ್ತೆ ಒಂದು ವೇಳೆ ಅಪಘಾತಗಳು ಸಂಭವಿಸಿದರೆ ಹೆಲ್ಮೆಟ್ ಹಾಕಿದ್ದರೆ ಮಕ್ಕಳಿಗೆ ಏನಾಗುವುದಿಲ್ಲ ನಾವುಗಳು ಕೂಡ ಚಿಕ್ಕ ಹುಡುಗರಿದ್ದಾಗ ಹೆಲ್ಮೆಟ್ ಹಾಕಿಕೊಂಡು ರೂಢಿ ಮಾಡಿಕೊಂಡಿದ್ದರೆ ಸರ್ಕಾರ ಈಗ ಎಷ್ಟೇ ಹೇಳಿದರು ನಾವು ಹೆಲ್ಮೆಟ್ ಹಾಕಲೂ ಹಿಂಜರಿಯುತ್ತೀವಿ ಸ್ನೇಹಿತರೆ ಇನ್ನು ಮುಂದೆ ದಯವಿಟ್ಟು ನೀವು ನಿಮ್ಮ ಮಕ್ಕಳನ್ನು ಟು ವೀಲರ್ ಗಳಲ್ಲಿ ಕರೆದುಕೊಂಡು ಹೋಗುತ್ತಿದ್ದರೆ ನಿಮ್ಮ ಮಕ್ಕಳಿಗೂ ಕೂಡ ಹೆಲ್ಮೆಟ್ ಹಾಕಿ ಹಾಗೆ ನೀವು ತಪ್ಪದೇ ಹೆಲ್ಮೆಟ್ ಹಾಕಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..