Advertisements

ಹನುಮಾನ್ ಮಂದಿರಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ದಾನ ನೀಡಿದ ಮುಸ್ಲಿಂ ವ್ಯಕ್ತಿ..! ನಂತರ ಆತ ಹೇಳಿದ್ದೇನು ಗೊತ್ತಾ.?

ನಮಸ್ತೆ ಸ್ನೇಹಿತರೆ, ಬೆಂಗಳೂರಿನ ಹೊರವಲಯದಲ್ಲಿರುವ ಹನುಮಾನ್ ದೇವಾಲಯವನ್ನು ವಿಸ್ತರಿಸಲು ಮುಸ್ಲಿಂ ಉದ್ಯಮಿಯೊಬ್ಬರು 1634 ಚದರ ಅಡಿ ಭೂಮಿಯನ್ನು ದಾನ ಮಾಡಿದ್ದಾರೆ. ಈ ಜಮೀನಿನ ಬೆಲೆ ಸರಿ ಸುಮಾರು 1 ಕೋಟಿ ರೂಪಾಯಿ. ಓರ್ವ ಮುಸ್ಲಿಂ ವ್ಯಕ್ತಿ ಹನುಮಾನ್ ದೇವಾಲಯಕ್ಕೆ ಈ ರೀತಿಯ ದಾನ‌ ನೀಡುವ ಮೂಲಕ ಹಿಂದು ಮುಸ್ಲಿಮರ ಐಕ್ಯತೆಯನ್ನು ಸಾಬೀತುಪಡಿಸಿದ್ದಾರೆ. ಇದೀಗ ಆ ಮುಸ್ಲಿಂ ವ್ಯಕ್ತಿ ಮಾಡಿದ ಈ ಕಾರ್ಯಕ್ಕೆ ಹಿಂದುಗಳು ಸೇರಿದಂತೆ ಅಲ್ಲಿನ ಸುತ್ತಲಿನ ಜನರು ಇವರನ್ನು ಶ್ಲಾಘಿಸುತ್ತಿದ್ದಾರೆ. ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುತ್ತಿರುವ ಎಂಎಂಜಿ ಬಾಷಾ ಅವರು ಹನುಮಾನ್ ದೇವಸ್ಥಾನ ನಿರ್ಮಿಸಲು ತನ್ನ ಮೂರು ಎಕರೆ ಭೂಮಿ ನೀಡಿದ್ದಾರೆ.

Advertisements
Advertisements

ಈ ದೇವಾಲಯದಲ್ಲಿ ಭಕ್ತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿತ್ತು. ಇದರಿಂದ ಬಹಳಷ್ಟು ಜನರಿಗೆ ಅಲ್ಲಿ ಸ್ಥಳಾವಕಾಶ ಸಿಗದೆ ಬಹಳಷ್ಟು ತೊಂ’ದರೆಗಳು ಉಂಟಾಗುತ್ತಿತ್ತು. ಹೀಗಾಗಿ ದೇವಾಲಯವನ್ನು ವಿಸ್ತರಿಸಲು ಟ್ರಸ್ಟ್ ನಿರ್ಧರ ಮಾಡಿತು. ಆದರೆ ಟ್ರಸ್ಟ್ ಬಳಿ ಹಣದ ಕೊರತೆ ಇತ್ತು, ಇದರಿಂದ ದೇವಸ್ಥಾನ ವಿಸ್ತರಣೆ ಸಾಧ್ಯವಾಗಿರಲಿಲ್ಲ. ಆಗ ಬಾಷಾ ಅವರು ತಮ್ಮ ಭೂಮಿಯನ್ನು ದಾನ ಮಾಡುವುದಾಗಿ ದೇವಾಲಯದ ಟ್ರಸ್ಟ್ ಗೆ ತಿಳಿಸಿದರು. ಈ ಭೂಮಿ ರಾಷ್ಟ್ರಿಯ ಹೆದ್ದಾರಿಗೆ ಹತ್ತಿರದಲ್ಲಿರುವುದರಿಂದ ಅದಕ್ಕೆ ಸಾಕಷ್ಟು ಬೇಡಿಕೆಯಿತ್ತು. ಆದರೆ, ದೇವಾಲಯದ ಟ್ರಸ್ಟ್ ಕೇವಲ 1089 ಚದರ ಅಡಿ ಭೂಮಿಯನ್ನು ಕೋರಿತ್ತು, ಆದರೆ ಬಾಷಾ ತಮ್ಮ ಕುಟುಂಬದೊಂದಿಗೆ ಮಾತನಾಡಿದ ನಂತರ 1634 ಚದರ ಅಡಿ ಭೂಮಿಯನ್ನು ದಾನ ಮಾಡಿದರು. ಈ ಜಮೀನಿನ ಮೌಲ್ಯ ಸರಿಸುಮಾರು 1 ಕೋಟಿ.

ಆದರೆ ಒಂದು ರೂಪಾಯಿ ಕೂಡ ತೆಗೆದುಕೊಳ್ಳದೆ ಈ ಭೂಮಿಯನ್ನು ದೇವಸ್ಥಾನಕ್ಕೆ ಭಾಷಾ ಅವರು ದಾನ ಮಾಡಿದ್ದಾರೆ. ಬಾಷಾ ಮತ್ತು ಅವರ ಕುಟುಂಬಕ್ಕೆ ದೇವಸ್ಥಾನದ ಟ್ರಸ್ಟ್ ಧನ್ಯವಾದ ತಿಳಿಸಿದ್ದಾರೆ. ಇಲ್ಲಿ ಆಂಜನೇಯ ದೇವಸ್ಥಾನ ನಿರ್ಮಿಸಿದರೆ ಹಿಂದೂಗಳು ಮತ್ತು ಮುಸ್ಲಿಮರು ದೀರ್ಘಕಾಲ ಒಟ್ಟಿಗೆ ಸೇರಬಹುದು ಎಂದು ಬಾಷಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇತ್ತಿಚಿನ ದಿನಗಳಲ್ಲಿ ರಾಮ‌ ಮಂದಿರ ನಿರ್ಮಾಣದ ಕಾರ್ಯ ಶುರುವಾದಾಗಿನಿಂದ ಹಿಂದೂ ಮುಸ್ಲಿಮರ ಕುರಿತಾಗಿ ಸಾಕಷ್ಟು ವಿ’ಭಜಕ ಚ’ರ್ಚೆಗಳು ನಡೆಯುತ್ತಿವೆ. ಆದರೆ ನಾವು ಪ್ರಗತಿ ಹೊಂದಲು ಬಯಸಿದರೆ ದೇಶವು ಏಕತೆಯಿಂದ ಬದುಕಲು ಸಾಧ್ಯ ಎಂದು ಹೇಳಬಹುದು. ಈ ವ್ಯಕ್ತಿಯು ತೆಗೆದುಕೊಂಡ ನಿರ್ಧಾರವನ್ನು ಅಲ್ಲಿನ ಜನರಷ್ಟೇ ಅಲ್ಲಾ ದೇಶದಾದ್ಯಂತ ಎಲ್ಲಾ ಸಮಾಜದ ಜನರು ಸಹ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ವ್ಯಕ್ತಿಯ ಬಗ್ಗೆ ನೀವೇನಂತೀರಿ ಸ್ನೇಹಿತರೆ.