Advertisements

ಮದುವೆಯಾಗಿ ಎರಡು ತಿಂಗಳಾಗಿತ್ತಷ್ಟೇ.. ಮಾವನ ಆ ವಸ್ತುವನ್ನು ಹಿಡಿದು ಸೆಲ್ಫಿ ತೆಗೆದುಕೊಳ್ಳಲು ಹೋದವಳು ಏನಾದಳು ಗೊತ್ತಾ.. ಬೆಚ್ಚಿಬಿದ್ದ ಗಂಡ..

Kannada News

ಈ ಸೆಲ್ಫಿ ಎಂಬ ಗೀಳು ಯುವ ಜನತೆಯನ್ನು ಯಾವ ಮಟ್ಟಕ್ಕೆ ಹಾಳು ಮಾಡಿದೆ ಎಂದರೆ ಪ್ರಸ್ತುತ ಇರುವ ಕ್ಷಣವನ್ನು ಯಾರೂ ಸಹ ಅನುಭವಿಸುವುದಿಲ್ಲ.. ಬದಲಿಗೆ ಆ ಸಮಯವನ್ನೆಲ್ಲಾ ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೇ ಬಳಸಿಕೊಂಡು ನಿಜವಾದ ಸಂತೋಷವನ್ನು ಅನುಭವಿಸುವುದನ್ನೇ ಮರೆತು ಬಿಡುತ್ತಾರೆ.. ಆದರೆ ಇಷ್ಟಕ್ಕೆ ಈ ಗೀಳು ನಿಲ್ಲೋದಿಲ್ಲ.. ಬದಲಿಗೆ ಸೆಲ್ಫಿ ಹುಚ್ಚಿನಿಂದಾಗಿ ಅದೆಷ್ಟೋ ಜನರು ತಮ್ಮ ಜೀವಗಳನ್ನು ಕಳೆದುಕೊಂಡ ಅನೇಕ ಘಟನೆಗಳು ನಡೆದಿವೆ.. ಆದರೆ ಇಲ್ಲೊಂದು ಘಟನೆ ನಡೆದಿದ್ದು ಆ ಮಹಿಳೆಯ ಸೆಲ್ಫಿ ಗೀಳಿನಿಂದಾಗಿ ಇದೀಗ ಇಡೀ ಕುಟುಂಬ ನೋವು ಅನುಭವಿಸುವಂತಾಗಿದೆ.. ಹೌದು ಈಕೆಯ ಹೆಸರು ರಾಧಿಕಾ ಗುಪ್ತಾ.. ವಯಸ್ಸಿನ್ನೂ ಕೇವಲ ಇಪ್ಪತ್ತಾರು..

Advertisements
Advertisements

ಕೆಲ ತಿಂಗಳ ಹಿಂದಷ್ಟೇ ರಾಧಿಕಾ ಗುಪ್ತಾ ಅವರ ಮದುವೆ ನಡೆದಿತ್ತು ಆದರೆ ಈಗ ನಡೆದದ್ದೇ ಬೇರೆ. ಹೌದು ರಾಧಿಕಾ ಗುಪ್ತಾ ಅವರು ಮೂಲತಃ ಉತ್ತರ ಪ್ರದೇಶದ ಲಖನೌ ನವರಾಗಿದ್ದು ಕಳೆದ ಮೇ ತಿಂಗಳಿನಲ್ಲಿ ಆಕಾಶ್ ಎಂಬುವವರ ಜೊತೆ ಮದುವೆಯಾಗಿದ್ದರು.. ಮದುವೆಯಾಗಿ ಗಂಡನ ಮನೆಗೆ ಬಂದ ರಾಧಿಕಾ ಗುಪ್ತಾ ಅವರಿಗೆ ತನ್ನ ಮಾವನ ಬಳಿ ಗನ್ನಿರುವುದು ತಿಳಿದಿದೆ. ಮೊದಲೇ ಫೋಟೋ ಸೆಲ್ಫಿ ಹೀಗೆ ಆ ರೀತಿಯ ಅಭ್ಯಾಸವಿದ್ದ ರಾಧಿಕಾ ಗುಪ್ತಾ ಅವರು ತಮ್ಮ ಗಂಡನಿಗೆ ಮಾವನ ಗನ್ನುತೋರುವಂತೆ ಕೇಳಿಕೊಂಡಿದ್ದಾರೆ.. ಆದರೆ ಅದು ಲೈಸೆನ್ಸ್ ಇದ್ದ ಗನ್ನಾಗಿದ್ದರಿಂದ ಅದನ್ನು ಪಂಚಾಯಿತಿ ಚುನಾವಣೆ ವೇಳೆ ಸ್ಥಳೀಯ ಪೊಲೀಸ್ ಠಾಣೆಗೆ ನೀಡಲಾಗಿತ್ತು.

ಆದರೆ ಹೆಂಡತಿ ಹಟ ಮಾಡಿದಳೆಂದು ಕಳೆದ ತಿಂಗಳಷ್ಟೇ ಪೊಲೀಸ್ ಠಾಣೆಗೆ ಹೋಗಿ ಆಕಾಶ್ ಮರಳಿ ತಂದಿದ್ದರು.. ಸೆಲ್ಫಿ ಗೀಳಿದ್ದ ರಾಧಿಕಾ ಗುಪ್ತಾ ಅದನ್ನು ಹಿಡಿದು ಸಾಕಷ್ಟು ಫೋಟೋ ಗಳನ್ನು ತೆಗೆಸಿಕೊಂಡಿದ್ದರು. ಆದರೆ ಅದೃಷ್ಟ ಕೆಟ್ಟಿತ್ತು ಎನಿಸುತ್ತದೆ.. ಅದನ್ನು ಕುತ್ತಿಗೆಗೆ ಇಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳಲು ಮುಂದಾದ ರಾಧಿಕಾ ಗುಪ್ತಾ ತಮ್ಮ ಜೀವವನ್ನೇ ಕಳೆದುಕೊಳ್ಳುವಂತಾಗಿದೆ.. ಹೌದು ಅದು ಸಿಂಗಲ್ ಬ್ಯಾರೆಲ್ ಗನ್ನಾಗಿದ್ದುಸಂಪೂರ್ಣವಾಗಿ ಲೋಡ್ ಆಗಿತ್ತು.. ಅದನ್ನು ಕುತ್ತಿಗೆಗೆ ಇಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳಲು ಮುಂದಾದ ರಾಧಿಕಾ ಗುಪ್ತಾ ಸೆಲ್ಫಿ ಬಟನ್ ಒತ್ತುವ ಬದಲು ಟ್ರಿಗರ್ ಒತ್ತಿದ್ದು ಗುಂಡುಹಾ ರಿಕುತ್ತಿಗೆ ಒಳ ಸೇರಿತ್ತು.. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಹ ಮಧ್ಯೆಯೇ ರಾಧಿಕಾ ಗುಪ್ತಾ ಕೊನೆಯುಸಿರೆಳೆದು ಬಿಟ್ಟರು..

ಈ ಬಗ್ಗೆ ಮಾವ ರಾಜೇಶ್ ಗುಪ್ತಾ ಪ್ರತಿಕ್ರಿಯೆ ನೀಡಿ ಮಾತನಾಡಿದ್ದು ಮಗ ಆಕಾಶ್ ಜೊತೆ ಕಳೆದ ಮೇನಲ್ಲಿ ರಾಧಿಕಾ ಮದುವೆಯಾಗಿತ್ತು.. ಇದು ಲೈಸೆನ್ಸ್ ಇರುವ ಗನ್ನಾಗಿತ್ತುಇದನ್ನು ಪಂಚಾಯಿತಿ ಚುನಾವಣೆ ಇದ್ದ ಕಾರಣ ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ್ದೆವೆ. ಕಳೆದ ತಿಂಗಳಷ್ಟೇ ಮರಳಿ ತಂದು ಮಹಡಿ ಮೇಲೆ ಇಡಲಾಗಿತ್ತು.. ಈ ಹಿಂದೆಯೂ ಸಾಕಷ್ಟು ಬಾರಿ ಫೋಟೋ ತೆಗೆದುಕೊಂಡಿದ್ದ ರಾಧಿಕಾ ಈಗ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಈ ಘಟನೆ ನಡೆದಿದೆ ಎಂದಿದ್ದಾರೆ.. ರಾಧಿಕಾ ಗುಪ್ತಾ ಗಣ್ಡ ಆಕಾಶ್ ಕೂಡ ಇದನ್ನೇ ಹೇಳಿದ್ದು ಈ ಹಿಂದೆಯೂ ಸಹ ಹಟ ಮಾಡಿ ಹಲವಾರು ಫೋಟೋ ತೆಗೆಸಿಕೊಂಡಿದ್ದಳು ಆದರೆ ಈಗ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಈ ರೀತಿ ಮಾಡಿಕೊಂಡಿದ್ದಾಳೆ ಎಂದಿದ್ದಾರೆ..

ಆದರೆ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದು ಅಚಾನಕ್ ಆಗಿ ನಡೆದ ಘಟನೆಯೋ ಅಥವಾ ಬೇಕು ಅಂತ ಮಾಡಿಕೊಂಡಿದ್ದಾ ತನಿಖೆಯ ನಂತರ ಸತ್ಯ ತಿಳಿಯಲಿದೆ.. ಆದರೆ ಈ ರೀತಿ ಅಪಾಯಕಾರಿಯಾದ ವಸ್ತುಗಳ ಜೊತೆ ದಯವಿಟ್ಟು ಯಾರೂ ಸಹ ಸೆಲ್ಫಿ ತೆಗೆದುಕೊಳ್ಳಬೇಡಿ. ಈ ಹಿಂದೆಯೂ ಸಾಕಷ್ಟು ಜನರು ಇಂತಹ ಹುಚ್ವಾಟಗಳಿಂದ ಜೀವಗಳನ್ನೇ ಕಳೆದುಕೊಂಡಿದ್ದರೂ ಜನತಿಗೆ ಬುದ್ಧಿ ಮಾತ್ರ ಬಂದಂತೆ ಕಾಣುತ್ತಿಲ್ಲ.. ಕ್ಷಣ ಮಾತ್ರದ ಸಂತೋಷಕ್ಕಾಗಿ ಕೇವಲ ಒಂದು ಫೋಟೋ ಸಲುವಾಗಿ ಜೀವವನ್ನೇ ಕಳೆದುಕೊಳ್ಳಬೇಡಿ..