Advertisements

ಮದುವೆಯಾಗಿ ನಾಲ್ಕು ತಿಂಗಳಿಗೆನೇ 2 ಮಕ್ಕಳನ್ನು ಹೆತ್ತ ನಯನತಾರಾ! ಇದು ಹೇಗೆ ಸಾಧ್ಯ.. ಬೆಚ್ಚಿಬಿದ್ದ ಡಾಕ್ಟರ್ ಗಳು ನೊಡಿ!!

Kannada News

ಈ ವರ್ಷದ ಆರಂಭದಲ್ಲಿ ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ನಯನ ತಾರ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ವಿಘ್ನೇಶ್ ಶಿವನ್ ತಮ್ಮ ಜೀವನದಲ್ಲಿ ಬಂದ ಮತ್ತೊಂದು ಸಂತೋಷದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೌದು ನಯನ ತಾರ ಹಾಗೂ ವಿಘ್ನೇಶ ಶಿವನ್ ಅಪ್ಪ-ಅಮ್ಮ ಆಗಿರುವ ಸಂಭ್ರಮದಲ್ಲಿದ್ದಾರೆ.

ಇತ್ತೀಚಿಗೆ ಸೆಲಿಬ್ರೆಟಿ ನಟ ನಟಿಯರ ಮದುವೆ ಹಾಗೂ ಮಗುವಿನ ವಿಚಾರ ಸಿನಿಮಾ ರಂಗದಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಅಮೂಲ್ಯಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ನಟ ದ್ರುವ ಸರ್ಜಾ ಹಾಗೂ ಪ್ರೇರಣ ಕೂಡ ತಂದೆ ತಾಯಿ ಆಗಿರುವ ಸಂಭ್ರಮದಲ್ಲಿದ್ದಾರೆ. ಅತ್ತ ಬಾಲಿವುಡ್ ನಲ್ಲಿ ಆಲಿಯಾ ಭಟ್ ಕೂಡ ಮುದ್ದಾದ ಮಗುವಿಗೆ ಜನ್ಮ ನೀಡಲು ದಿನ ಎಣಿಸುತ್ತಿದ್ದಾರೆ.

Advertisements
Advertisements

ಇದೀಗ ಸೌತ್ ನಲ್ಲಿಯೂ ಕೂಡ ಲೇಡಿ ಸೂಪರ್ ಸ್ಟಾರ್ ಗುಡ್ ನ್ಯೂಸ್ ನ್ನು ನೀಡಿದ್ದಾರೆ. ಇದು ಅಭಿಮಾನಿಗಳಿಗೂ ಖುಷಿ ತಂದಿದೆ. ಹೌದು, ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಮದುವೆಯಾಗಿ ಒಂದು ವರ್ಷದ ಒಳಗೆ ಅವಳಿ ಗಂಡು ಮಕ್ಕಳನ್ನು ಪಡೆದಿದ್ದಾರೆ. ನಯನ ತಾರಾ ಹಾಗೂ ವಿಘ್ನೇಶ್ ಶಿವನ್ ತಮ್ಮ ಅವಳಿ ಮಕ್ಕಳುಗಳ ಕಾಲಿಗೆ ಮುತ್ತಿಡುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಸಂತಸದ ಈ ವಿಚಾರವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಮತ್ತು ನಯನ ಅಪ್ಪ ಅಮ್ಮ ಆಗಿದ್ದೇವೆ. ನಾವಿಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದೇವೆ. ನಮ್ಮ ಪ್ರಾರ್ಥನೆ, ಪೂರ್ವಜರ ಆಶೀರ್ವಾದ, ಎಲ್ಲರ ಹಾರೈಕೆಯಿಂದ ನಮಗೆ ಇಂದು ಗಂಡು ಮಕ್ಕಳು ಜನಿಸಿವೆ ನಿಮ್ಮೆಲ್ಲರ ಆಶೀರ್ವಾದ ನಮ್ಮ ಜೊತೆ ಇರಲಿ ಎನ್ನುವ ಸಾಲುಗಳನ್ನು ವಿಘ್ನೇಶ್ ಶಿವನ್ ಬರೆದಿದ್ದು ಫೋಟೋ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಪ್ರೀತಿಸಿ ಮದುವೆಯಾದ ಜೋಡಿ. 2022 ಜೂನ್ 9ರಂದು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮದುವೆಯಾದ ಬಳಿಕ ಯುರೋಪ್ ಪ್ರವಾಸ ಕೈಗೊಂಡಿದ್ದ ನವ ಜೋಡಿ ಸುಧೀರ್ಘ ಪ್ರವಾಸದ ಬಳಿಕ ಮತ್ತೆ ಚೆನ್ನೈಗೆ ಹಿಂದಿರುಗಿದ್ದಾರೆ.

ಬಹಳ ಖುಷಿಯಿಂದ ಮದುವೆಯಾಗಿರುವ ನಯನತಾರಾ ವಿಘ್ನೇಶ್ ಶಿವಣ್ಣ ಅವರಿಗೆ ಒಂದು ಫ್ಲಾಟ್ ಅನ್ನು ಕೂಡ ಗಿಫ್ಟ್ ಮಾಡಿದ್ದಾರೆ. ಇನ್ನು ವಿಘ್ನೇಶ್ ಅವರು ಕೂಡ ನಯನತಾರ ಅವರಿಗೆ ಸಾಕಷ್ಟು ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ಮದುವೆಯ ಸಮಯದಲ್ಲಿ ಹಾಕಿದ್ದಾರೆ ಎನ್ನುವ ಸುದ್ದಿ ಇದೆ. ಮದುವೆಯಾದ ಹೊಸತರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿದ್ದಾರೆ.

ಎನ್ನುವ ಕಾರಣಕ್ಕೆ ಕೂಡ ಗುರಿಯಾಗಿದ್ದರು. ಇನ್ನು ಮದುವೆಯಾದ ನಂತರ ಲೇಡೀಸ್ ಸೂಪರ್ ಸ್ಟಾರ್ ಮತ್ತೆ ಸಿನಿಮಾಕ್ಕೆ ಹಿಂದಿರುಗುತ್ತಾರೋ ಇಲ್ವೋ ಎಂಬುದು ಅವರ ಅಭಿಮಾನಿಗಳಲ್ಲಿ ಇರುವ ಆತಂಕ. ಆದರೆ ಇದೀಗ ನಯನತಾರಾ ತಾಯಿಯಾಗಿರುವ ವಿಷಯವನ್ನು ಕೇಳಿ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ ಅವರ ಈ ಪೋಸ್ಟ್ ಗೆ ಲಕ್ಷಾಂತರ ಲೈಕ್ ಹಾಗೂ ಕಮೆಂಟ್ ಗಳು ಕೂಡ ಬಂದಿವೆ.

Leave a Reply

Your email address will not be published.