Advertisements

ಗಂಡನ ಬಿಟ್ಟ ಮಗಳು ಮತ್ತೊಬ್ಬನ ಜೊತೆ ಮಲಗುತ್ತಿದ್ದಳು.. ತಾಯಿ ಅದನ್ನೆಲ್ಲಾ ಕಣ್ಣಾರೆ ಕಂಡಳು‌.‌. ಕೊನೆಗೆ ಮಗಳ ಜೊತೆ ಇದ್ದವ ತಾಯಿಯ ಜೊತೆ ಮಾಡಿದ ಕೆಲಸ ನೋಡಿ..

Kannada News

ಆಧುನಿಕತೆ ಹೆಚ್ಚಾದಂತೆ ಜನರ ಜೀವನ ಶೈಲಿಯೂ ಬದಲಾಗಿ ಹೋಗ್ತಿದೆ.. ಆಚಾರ ವಿಚಾರಗಳು ಪೇಟೆಯ ಬೀದಿಗಳಲ್ಲಿ‌‌ ಮಾಯವಾಗುತ್ತಿದೆ.. ಆಶ್ಚರ್ಯವೆಂದರೆ ಪೇಟೆಯ ಜನರಿಗಿಂತ ಹೆಚ್ಚಾಗಿ ಮಾನ ಮರ್ಯಾದೆಯೇ ಜೀವ ಎನ್ನುವ ಹಳ್ಳಿ ಕುಟುಂಬದ ಮಕ್ಕಳು ಪೇಟೆಗೆ ಬಂದು ಆಧಿನಿಕತೆಗೆ ದಾಸರಾಗಿ ಮಾಡಬಾರದ ತಪ್ಪುಗಳನ್ನು ಮಾಡಿ ಕೊನೆಗೆ ತಮ್ಮ ಜೀವನಕ್ಕೆ ಅರ್ಥವೇ ಇಲ್ಲದಂತೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟು ಮಾತ್ರ ಆಗಿದ್ದರೆ ಪರವಾಗಿಲ್ಲ ಆದರೆ ತಮ್ಮವರ ತಮ್ಮ ಕುಟುಣ್ಬದವರ ಜೀವನವನ್ನೂ ಸಹ ಹಾಳು ಮಾಡುತ್ತಿರುವುದ ಕಂಡರೆ ನಿಜಕ್ಕೂ ಮುಂದೆ ಒಂದಷ್ಟು ವರ್ಷಗಳಲ್ಲಿ ಜನರು ಜೀವನ ನಡೆಸುವ ರೀತಿ ಯಾವ ರೀತಿ ಇರಬಹುದೆಂದೂ ಸಹ ಊಹಿಸೋದು ಕಷ್ಟವಾಗಿದೆ.‌.

ಹೌದು ಇಲ್ಲೊಂದು ಅಂತಹುದೇ ಘಟನೆ ನಡೆದಿದ್ದು ಗಂಡನ ಬಿಟ್ಟ ಮಗಳು ಯಾರೋ ಅಪರಿಚಿತನೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದಳು.. ಅದನ್ನು ಕಣ್ಣಾರೆ ಕಂಡ ಆಕೆಯನ್ನು ಹೆತ್ತ ತಾಯಿ ಅದನ್ನು ವಿರೋಧ ಮಾಡಿದಳು.. ಆದರೆ ಮುಂದೆ ನಡೆದಿದ್ದು ಮಾತ್ರ ನಿಜಕ್ಕೂ ಬೆಚ್ಚಿ ಬೀಳುವಂತಿದೆ.. ಹೌದು ಈ ಮಹಿಳೆಯ ಹೆಸರು ನಂಜಮ್ಮ.. ವಯಸ್ಸು ಐವತ್ತೆರೆಡು.. ಈಕೆಗೆ ಒಬ್ಬ ಮಗಳಿದ್ದಳು ಆಕೆ ಗಂಡನಿಂದ ದೂರಾಗಿದ್ದಳು.. ಆ ಬಳಿಕ ಮಗಳು ಮತ್ತೊಬ್ಬ ಪುರುಷನ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದಳು..

ಮಗಳ ಈ ವರ್ತನೆಯನ್ನು ಹಾಗೂ ಮತ್ತೊಬ್ಬ ಪುರುಷನ ಜೊತೆ ಇರುವುದನ್ನು ಕಣ್ಣಾರೆ ಕಂಡ ನಂಜಮ್ಮ ಮಗಳಿಗೆ ಮೊದಲು ಬುದ್ಧಿವಾದ ಹೇಳಿ ಇದನ್ನೆಲ್ಲಾ ಬಿಟ್ಟು ಬಿಡು ಎಂದಳು. ಮಗಳು ಒಪ್ಪದಿದ್ದಾಗ ಆಕೆಗೆ ಖಾರವಾಗಿಯೇ ಎಚ್ಚರಿಕೆ ಕೊಟ್ಟು ಇಂತಹ ಅಭ್ಯಾಸಗಳನ್ನೆಲ್ಲಾ ಬಿಡು ಎಂದರು.. ಆದರೆ ಮಗಳು ಮಾತ್ರ ತಾಯಿಯ ಮಾತನ್ನು ಕೇಳುವ ತಾಳ್ಮೆಯಲ್ಲಾಗಲಿ ವಿವೇಚನೆಯಲ್ಲಾಗಲಿ‌ ಇರಲಿಲ್ಲ.. ಮಗಳು ಜೊತೆಯಿದ್ದ ಆ ಪುರುಷನ ಜೊತೆ ಮೊದಲು ಮದುವೆಯಾಗು ನಂತರ ಜೊತೆಯಲ್ಲಿರು ಎಂದು ಕೇಳಿಕೊಂಡಳು ಆ ತಾಯಿ..

ಆದರೆ ಆ ತಾಯಿ ಮಗಳ ಗೌರವ ಹಾಳಾಗಬಾರದೆಂದು ಪದೇ ಪದೇ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದರು..‌ ಮದುವೆಯಾಗದಿದ್ದರೆ ಈ ಸಂಬಂಧವನ್ನು ಇಲ್ಲಿಯೇ ಮುಕ್ತಾಯ ಮಾಡಿ ಎಂದಿದ್ದರು.. ಇತ್ತ ನಂಜಮ್ಮ ನಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗುವರು ಎಂದು ತಿಳಿದ ರಾಘು ಮಾಡಿದ ಕೆಕಸವೇ ಬೇರೆ.. ಹೌದು ರಾಘು ಸೀದಾ ನಂಜಮ್ಮ ವಾಸವಾಗಿದ್ದ ಬೆಂಗಳೂರಿನ ಗೋವಿಂದ ರಾಜ ನಗರದ ಮನೆಗೆ ತೆರಳಿದ್ದಾನೆ.. ಹೋದವನೇ ಸೀದಾ ವೈರ್ ನಿಂದ ನಂಜಮ್ಮನನ್ನು ಇಲ್ಲವಾಗಿಸಿ ಅಲ್ಲಿಂದ ತೆರಳಿದ್ದಾನೆ..

ಪಕ್ಕದ ಮನೆಯವರು ಬಂದು ನೋಡಿದಾಗ ನಂಜಮ್ಮ ಅದಾಗಲೇ ಜೀವ ಕಳೆದುಕೊಂಡು ಬಿದ್ದಿದ್ದು ತಕ್ಷಣ ಗೋವಿಂದರಾಜ ನಗರದ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದ್ದಾರೆ.. ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ರಾಘು ಸಿಕ್ಕಿ ಬಿದ್ದಿದ್ದಾನೆ.. ಏನು ಸಾಧಿಸಿದರು ಅವರ ಆ ಸಂಬಂಧದಿಂದ.. ತನ್ನ ಆಸೆಗಳಿಗೆ ತನ್ನ ಹೆತ್ತವಳೇ ಇಲ್ಲವಾಗಲು ಕಾರಣಳಾದಳು.. ಅತ್ತ ಹೆಣ್ಣಿನ ಮೋಹಕ್ಕೆ ಬಿದ್ದವ ಇಂದು ಪೊಲೀಸರ ಪಾಲಾದ.. ಏನು ಸಾಧಿಸಿದರು ಆ ಸಂಬಂಧದಿಂದ.. ಮಗಳ ಹಿತ ಬಯಸಿದ ಒಬ್ಬ ಹಿರಿಯ ತಾಯಿಯ ಜೀವ ಹೋಯಿತಷ್ಟೇ.. ತಾಯಿಯನ್ನು ಇಲ್ಲವಾಗಿಸಿ ಆಕೆ ಜೀವನ ಪೂರ್ತಿ ನೆಮ್ಮದಿಯಾಗಿ ಜೀವನ ಮಾಡಲು ಸಾಧ್ಯವಾ..