Advertisements

ಸಾಕಷ್ಟು ವಯಸ್ಸಾಗಿದ್ದರೂ ನಮ್ಮ ನಿಮ್ಮೆಲ್ಲರ ನೆಚ್ಚಿನ ಸೀರಿಯಲ್ ನಟಿ ಸಿರಿಜಾ ರವರು ಮದುವೆಯಾಗದೆ ಇನ್ನು ಸಿಂಗಲ್ ಆಗಿರಲು ಕಾರಣವೇನು ಗೊತ್ತಾ? ಅವರು ಈ ಬಗ್ಗೆ ಹೇಳಿದ್ದೇನು ನೀವೇ ನೋಡಿ!!

Kannada News

ಕನ್ನಡ ಕಿರುತೆರೆಯಲ್ಲಿ ಹಿಂದಿನಿಂದಲೂ ಅನೇಕ ಧಾರವಾಹಿಗಳು‌ ಜನರನ್ನು ರಂಜಿಸುತ್ತಿದ್ದವು. ಆಗಿನ ಕಾಲದಲ್ಲಿ ಸೀರಿಯಲ್ ಅಂದರೆ ಅದು ಅನೇಕರಿಗೆ ನೈಜ ಘಟನೆ ಅನ್ನುವಂತೆಯೇ ಭಾಸವಾಗುತ್ತಿತ್ತು. ಇದೀಗ ಇದ್ದಂತೆ ಆಗ ಕಲರ್ಸ್ ಕನ್ನಡ, ಜೀ ಕನ್ನಡದಂತೆ ಅದ್ದೂರಿಯಾದ ಸೀರಿಯಲ್ ಪ್ರಸಾರ ಆಗುತ್ತಿರಲಿಲ್ಲ. ಬದಲಾಗಿ‌ ಒಂದು ನಿಜ ಜೀವನದಲ್ಲಿ ಒಂದು ಕುಟುಂಬ, ಸಂಸಾರ ಹೇಗಿರುತ್ತದೆಯೋ ಅದೇ ರೀತಿ ಸಿಂಪಲ್ ಆಗಿ ಇರುತ್ತಿದ್ದವು. ಸುವರ್ಣ, ಈಟಿವಿ, ಉದಯ ಇವು ಧಾರವಾಹಿಗಳಲ್ಲಿ ಮುಂಚೂಣಿಯಲ್ಲಿದ್ದವು. ಹಲವಾರು ವರ್ಷಗಳ ಹಿಂದೆ ಪ್ರಸಾರ ಆಗ್ತಿದ್ದ ಹಲವಾರು ಧಾರವಾಹಿಗಳು ಜನರ ಮನಸ್ಸನ್ನು ಗೆದ್ದಿದ್ದವು.

Advertisements
Advertisements

ಆ ಧಾರವಾಹಿಗಳು ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.‌ ಇಂತಹ ಧಾರವಾಹಿಗಳಲ್ಲಿ ರಂಗೋಲಿ ಹಾಗೂ ಬದುಕು ಧಾರವಾಹಿಗಳು ಕೂಡ ಒಂದು. ಇನ್ನು, ಈ ಧಾರವಾಹಿಗಳಲ್ಲಿ ನಟಿಸಿದ ಪ್ರಮುಖ ಕಲಾವಿದರಲ್ಲಿ ನಟಿ ಸಿರಿ ಕೂಡ ಒಬ್ಬರು. ಅದು ಡಿಜಿಟಲ್‌ ಯುಗ ಅಲ್ಲದಿದ್ದರೂ ಸಹ ಜನರ ಮನೆ ಮಾತಾಗಿದ್ದರು ಸಿರಿ. ಹಲವಾರು ಧಾರವಾಹಿಗಳಲ್ಲಿ‌ ಇವರು ನಟಿಸಿದ್ದರೂ ಬದುಕು ಹಾಗೂ ರಂಗೋಲಿ ಧಾರವಾಹಿ ಮಾತ್ರ ಇವರಿಗೆ ದೊಡ್ಡ ಹೆಸರು‌ ತಂದಿತ್ತು.‌ ಅಂಬಿಕಾ ಅನ್ನುವ ಧಾರವಾಹಿ ಮೂಲಕ ಬಣ್ಣದ‌ ಲೋಕಕ್ಕೆ ಕಾಲಿಟ್ಟ ಅವರು ಸಿನಿಮಾದಲ್ಲಿಯೂ‌‌ ನಟಿಸಿದ್ದಾರೆ.

ಆದರೆ ಅವರಿಗೆ ಸಿನಿಮಾಗಿಂತ‌ ಧಾರವಾಹಿಯಲ್ಲಿ ನಟಿಸುವುದೇ ಇಷ್ಟವಾಗಿತ್ತು. ಸಿನಿಮಾದಲ್ಲಿ ನಟಿಸುವವರು ಸ್ಟಾರ್ ಆಗುತ್ತಾರೆ ಆದರೆ ಧಾರವಾಹಿಯಲ್ಲಿ ನಟಿಸುವವರು ಮನೆ‌ಮಕ್ಕಳಾಗುತ್ತಾರೆ ಅನ್ನುವುದು ಅವರ ಅಭಿಪ್ರಾಯ. ಇವರು ಅಭಿನಯಿಸಿದ ಪ್ರತಿಯೊಂದು ಧಾರವಾಹಿ ಕೂಡ ಸಾವಿರದ ಐನೂರು ಎಪಿಸೋಡ್ ಗಳನ್ನು ದಾಟಿದೆ. ಸಿರಿ ಅವರು ಕನ್ನಡ ಕಿರುತೆರೆಯಲ್ಲಿ ಮಾತ್ರವಲ್ಲದೇ.. ತೆಲುಗು ಕಿರುತೆರೆಯಲ್ಲಿ ಕೂಡ ತಮ್ಮ ಕೀರ್ತಿ ಪತಾಕೆಯನ್ನ ಹಾರಿಸಿದ್ದಾರೆ. ಇವರು ಸುಮಾರು ಮೂವತ್ತಕ್ಕು ಹೆಚ್ಚು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ಇವರು ಕನ್ನಡ ಧಾರವಾಹಿಗಳಲ್ಲಿ ಕಾಣಿಸುತ್ತಿಲ್ಲ‌ ಬದಲಾಗಿ ತೆಲುಗು ಧಾರವಾಹಿಯಲ್ಲಿ ಬ್ಯುಸಿ ಆಗಿಬಿಟ್ಟಿದ್ದಾರೆ.‌

ಇದರ ಜೊತೆ ಇದೀಗ ಮದುವೆ ಆಗಲು ಸಿದ್ಧರಾಗಿರುವ ಸಿರಿ, ತಕ್ಕ ಹುಡುಗನಿಗಾಗಿ ಕಾಯುತ್ತಿದ್ದಾರೆ. ಅವರಿಗೆ ಸಿರಿ ಅವರ ಪ್ರೊಫೆಷನಲ್ ಲೈಫ್ ನ‌ ಅರ್ಥ ಮಾಡಿಕೊಳ್ಳುವಂತಹ ಹುಡುಗ ಬೇಕು ಅಂದಿದ್ದಾರೆ. ಜೊತೆಗೆ ಸಿಂಪಲ್ ಮದುವೆ ಆಗಲು ಇಷ್ಟ‌ ಅಂದಿದ್ದಾರೆ. ಸದ್ಯ ತೆಲುಗು ಸೀರಿಯಲ್ ಗಳಲ್ಲಿ ಬ್ಯುಸಿ ಆಗಿರುವ ಸಿರಿ, ಕನ್ನಡದಲ್ಲಿ ಈ ವರೆಗೆ ಅಭಿನಯಿಸಿರುವ ಪಾತ್ರಕ್ಕಿಂತ ಭಿನ್ನವಾಗಿರುವ, ಚಾಲೆಂಜಿಂಗ್ ಆಗಿರುವ ಪಾತ್ರ ಸಿಕ್ಕರೆ ಮತ್ತೆ‌ ಕನ್ನಡದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ.‌ ನಟಿ ಸಿರಿ ಕುರಿತ ಈ ಮಾಹಿತಿ ಬಗ್ಗೆ ನಿಮ್ಮ‌ ಅನಿಸಿಕೆ ಏನು ಅನ್ನುವುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.