ನಮಸ್ಕಾರ ಪ್ರಿಯ ಗೆಳೆಯರೆ ಸಿನೆಮಾಗಳನ್ನು ಹೊರತು ಪಡಿಸಿ ಜನರನ್ನು ಮನರಂಜಿಸುವ ಶೋ ಗಳೆಂದರೆ ಅವು ರಿಯಾಲಿಟಿ ಶೋಗಳು. ಅದರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರತಿಯೂಬ್ಬರ ನೆಚ್ಚಿನ ಶೋ ಆಗಿದೆ. ಈಗಾಗಲೆ ಬಿಗ್ ಬಾಸ್ ಸಿಸನ್ 9 ಪ್ರಾರಂಭವಾಗಲಿದೆ. ಯಾರು ಊಹೆ ಮಾಡಲಾಗದ ಸ್ಪರ್ಧಿಗಳನ್ನು ಪ್ರತಿ ಭಾರಿಯೂ ಬಿಗ್ ಬಾಸ್ ಆಯ್ಕೆ ಮಾಡುತ್ತದೆ. ಅದು ಆ ಶೋ ದಿ ಮೊಸ್ಟ್ ಸಿಕ್ರೆಟ್ ಆಗಿರುತ್ತದೆ. ಪ್ರತಿಯೊಬ್ಬ ಬಿಗ್ ಬಾಸ್ ಶೋ ಪ್ರಿಯ ರಲ್ಲಿ ಯಾರು ಈ ಬಾರಿಯ ಕಂಟೆಸ್ಟ್ ಆಗಿ ಬರುತ್ತಾರೆ ಎಂಬ ಕುತೂಹಲವು ಇರುತ್ತದೆ.
ಬಿಗ್ ಬಾಸ್ ಶೊ ಕೆವಲ ಸೆಲೆಬ್ರೆಟಿ ಗಳನ್ನು ಮಾತ್ರ ಆಯ್ಕೆ ಮಾಡದೆ, ಕಾಮನ್ ಜನರಿಗೂ ಭಾಗವಹಿಸುವ ಅವಕಾಶ ನೀಡಿ ಅವರನ್ನು ಸಹ ಸೆಲೆಬ್ರಿಟಿ ಗಳನ್ನಾಗಿ ಮಾಡಿ, ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಅವಕಾಸ ಒದಿಗಿಸಿದೆ.ಬಿಗ್ ಬಾಸ್ನಲ್ಲಿ ಪುರುಷ ಮಹಿಳೆಯರು ಸಮಾನವಾಗಿ ತಮ್ಮ ಪಾತ್ರಗಳನ್ನು ನಿಭಾಯಿಸುತ್ತಾರೆ. ಅಡುಗೆಗೂ ಸೈ ,ಆಟ ಆಡೊದ್ರಲ್ಲಿಯೂ ಸೈ ಎಂದೆನಿಸಿಕೊಂಡಿದ್ದಾರೆ ಹಲವು ಮಹಿಳಾ ಸ್ಪರ್ಧಿಗಳು. ಉದಾಹರಣೆಗೆ ಅನುಪಮಾ, ದಿವ್ಯ ಉರುಡಗ ಹಾಗೂ ದೀಪಿಕಾ ದಾಸ್.

ಇನ್ನು ಬಿಗ್ ಬಾಸ್ ಮನೆಯಲ್ಲಿ ಹಲವು ಟಾಸ್ಕಗಳನ್ನು ನೀಡಲಾಗುತ್ತದೆ. ಸ್ಪರ್ಧಿಗಳು ಮೊದ ಮೊದಲು ನಿಧಾನವಾಗಿ ಆಟವನ್ನು ಆಡಿದರು, ಅನಂತರ ನಿಯಮಗಳನ್ನು ಆಟವನ್ನು ಆಡುತ್ತಾರೆ. ಗೆದ್ದ ಟೀಮ್ ಗಳಿಗೆ ಬಿಗ್ ಬಾಸ್ ಅವರಿಂದ ಉತ್ತಮ ಪಾಯಿಂಟ್ಸ್ ಹಾಗೂ ಗಿಪ್ಟಗಳು ದೊರೆಯುವುದು ಈ ಆಟಗಳ ಕೊನೆಯ ಹಂತ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಟಾಸ್ಕಗಳು ಆರಂಭಾವಾಗಿದೆ. ಜೋಡಿಯಾಗಿ ಆಟವಾಡಿ ಗೆಲ್ಲುವುದು ಈ ಗೇಮ್ ಆಗಿದೆ.ಪ್ರಶಾಂತ್ ಸಂಬರ್ಗಿ ಹಾಗೂ ವಿನೋದ್ ಗೊಬ್ಬರಗಾಲ ಊಹಿಸಬೇಕಾಗಿದೆ.
ಅದಾಗಲೇ ಪ್ರಶಾಂತ್ ಊಹಿಸಿದ ಹಾಗೆ ಆಗಿದ್ದು ಎರಡು ಪಾಯಿಂಟ್ ಗಳನ್ನು ಕೂಡ ಗಳಿಸಿದ್ದಾರೆ. ನೇಹಾ ಗೌಡ ಹಾಗೂ ಅನುಪಮಾ ಗೌಡ ಮತ್ತು ದೀಪಿಕಾ ದಾಸ್ ಹಾಗೂ ಅಮೂಲ್ಯಾ ಗೌಡ ಈ ಎರಡು ಜೋಡಿಗಳು ಅರ್ಧ ವೃತ್ತದ ಮೇಲೆ ನಿಲ್ಲುವ ಟಾಸ್ಕ್ ನ್ನು ಭರ್ಜರಿಯಾಗಿ ಮುಗಿಸಿದ್ದಾರೆ. ಕನಿಷ್ಠ ನಾಲ್ಕು ಗಂಟೆಗಳ ಕಾಲ ನಿಂತಿದ್ದ ಈ ಜೋಡಿಯಲ್ಲಿ ದೀಪಿಕಾ ದಾಸ್ ಹಾಗೂ ಅಮೂಲ್ಯಾ ಕೊನೆವರೆಗೂ ನಿಂತು ಆ ಟಾಸ್ಕ ಗೆದ್ದುಕೊಂಡಿದ್ದಾರೆ.
ಬಿಗ್ ಬಾಸ್ ದಿನವೇ ಮಹಿಳಾ ಮಣಿಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ.ಇನ್ನು ಟಾಸ್ಕ್ ಗಳು ನಡೆದಾಗ ಸಾಮಾನ್ಯವಾಗಿ ಅಲ್ಲಿರುವವರ ಮಧ್ಯ ಸಾಮಾನ್ಯವಾಗಿ ಜಗಳ ಮನಸ್ಥಾಪಗಳು ಎದುರಾಗುತ್ತವೆ. ಬಿಗ್ ಬಾಸ್ ಆ ದಿನದ ಕೊನೆಯಲ್ಲಿ ತಾವು ಮಾಡಿದ ಟಾಸ್ಕ ಇನ್ನಿತರ ವಿಷಯಗಳ ಕುರಿತು ಚರ್ಚೆ ಮಾಡುತ್ತಾರೆ. ಇದೇ ವಿಷಯವಾಗಿ ನಡುವೆ ಮಧ್ಯ ರಾತ್ರಿ ಅರುಣ್ ಸಾಗರ್ ಅವರ ಮನೋರಂಜನೆ ಹಾಡುಗಳು, ಇತರ ಸ್ಪರ್ಧಿಗಳ ಕುಣಿತ ಟಾಸ್ಕ್ ಮಾಡುತ್ತಿದ್ದ ಸ್ಪರ್ಧಿಗಳಿಗೆ ಮತ್ತಷ್ಟು ಮಜವನ್ನು ನೀಡಿತ್ತು.ಆದರೆ ಈಗ ಹೆಚ್ಚು ಟಫ್ ಫೈಟ್ ಶುರುವಾಗಿರೋದು ಮಯೂರಿ ಹಾಗೂ ಸಾನಿಯಾ ಅಯ್ಯರ್ ಮತ್ತು ಅನುಪಮಾ ಗೌಡ ಮತ್ತು ನೇಹಾ ಗೌಡ ಅವರ ಜೋಡಿ ನಡುವೆ.

ಬಿಗ್ ಬಾಸ್ ಮನೆಯಲ್ಲಿ ತಮ್ಮ ಮಾತುಗಳ ಮೂಲಕವೇ ಇನ್ನುಳಿದ ಜನರಿಗೆ ಚಮಕ್ ನೀಡಿದ್ದಾರೆ. ನೇಹಾ ಊಟದ ವಿಷಯದಲ್ಲಿ ಹೇಳಿದ ಮಾತುಗಳು ಮಯೂರಿಗೆ ನೋವನ್ನುಂಟು ಮಾಡಿದೆ, ಅದಕ್ಕಾಗಿ ಮಯೂರಿ ನಾನಿಲ್ಲಿ ಆಟವಾಡಲು ಬಂದಿದ್ದೇನೆ ಹೊರತು, ಯಾರೊಂದಿಗು ಸಂಬಂಧ ಬೆಳೆಸಲು ಅಲ್ಲ ಅಂತ ತಿರುಗೇಟು ನೀಡಿದ್ದಾರೆ.
ನಾನು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬರಲು ನನ್ನ ಒಂದು ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಬಂದಿದ್ದೆ. ನಾನು ಇಲ್ಲಿ ನೀಡುವ ಪ್ರತಿಯೊಂದು ಟಾಸ್ಕನಲ್ಲಿ ಭಾಗಿಯಾಗುತ್ತೇನೆ. ನಾನು ಇಲ್ಲಿ ಬಂದಿರೋದು ಆಟವನ್ನು ಆಡುವುದಕ್ಕಾಗಿ ಎಂದು ಖಡಕ್ ಆಗಿ ಹೇಳಿಬಿಟ್ಟಿದ್ದಾರೆ.ಈ ರೀತಿಯಾಗಿ ಮಯೂರಿ ಹಾಗೂ ನೇಹಾ ಅವರ ಮಧ್ಯ ಸಣ್ಣದಾದ ಸ್ಪರ್ದೆಯ ಕಿಡಿ ಹೊತ್ತಿ ಹೊಗೆಯಾಡುತ್ತಿದ್ದು, ಯಾರು ಇರ್ತಾರೆ, ಯಾರು ಬಿಗ್ ಬಾಸ್ ಮನೆಯಿಂದ ಔಟ್ ಆಗ್ತಾರೆ ಅಂತ ಕಾದು ನೋಡಬೇಕಿದೆ.