ಕಾಲ ಕೆಟ್ಟೋಯ್ತು ಅನ್ನೋದು ಇದಕ್ಕೇ ಇರಬೇಕು.. ವಯಸ್ಸಿನ ಹುಡುಗರಿಗೇ ಹೆಣ್ ಮಕ್ಕಳು ಸಿಗ್ತಾ ಇಲ್ಲಾ ಅಂತ ಒಂದು ಕಡೆ ಗೋಳಾಡ್ತಾ ಇದ್ರೆ.. ಇಲ್ಲೊಬ್ಬ 78 ವರ್ಷದ ವೃದ್ಧ 17 ವರ್ಷದ ಹುಡುಗಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅದ್ಧೂರಿಯಾಗಿಯೇ ಮದುವೆ ಮಾಡಿಕೊಂಡಿದ್ದಾನೆ.. ಆದರೆ ಇಪ್ಪಂತೊಂದೇ ದಿನಕ್ಕೆ ಯಾರೂ ಊಹಿಸಿರದಂತಹ ಘಟನೆ ನಡೆದಿದೆ..

ಹೌದು ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು 78 ವರ್ಷದ ಅಜ್ಜ ಅಬಾ ಸರ್ನಾ ಎಂಬುವವರು 17 ವರ್ಷದ ಹುಡುಗಿ ನೋನಿ ನವಿತಾ ಎಂಬಾಕೆಯನ್ನು ಮದುವೆಯಾಗಿದ್ದ.. ಅದೂ ಸಹ ಅದ್ಧೂರಿಯಾಗಿ ಮದುವೆ ಸಮಾರಂಭ ನೆರವೇರಿದ್ದು ಎಲ್ಲಾ ರೀತಿಯ ಪೋಸ್ಟ್ ವೆಡ್ಡಿಂಗ್ ಫೋಟೋಚಿತ್ರೀಕರಣ ಕೂಡ ಮಾಡಿಸಿಕೊಂಡಿದ್ದರು.. ಎರಡುಯ್ ಕುಟುಂಬದವರು ಒಪ್ಪಿ ಮದುವೆಯೂ ಆಯಿತು.. ಮುದುಕಪ್ಪನ ಜೊತೆ ಕೆಲ ದಿನ ಸಂಸಾರವನ್ನೂ ಸಹ ಮಾಡಿದ ನೋನಿ ನವಿತಾಗೆ ತಾತಪ್ಪ ಶಾಕ್ ಕೊಟ್ಟಿದ್ದಾನೆ..

ಹೌದು ಮದುವೆಯಾದ 22 ದಿನಕ್ಕೆ ಮದುವೆ ಮುರಿದು ಬಿದ್ದಿದೆ.. ಅದಾಗಲೇ ಆ ಜೋಡಿ ವಿಚ್ಛೇದನವನ್ನೂ ಪಡೆದಾಗಿದೆ.. ಆದರೆ ಆಶ್ಚರ್ಯವೆಂದರೆ ತಾತಪ್ಪನೇ ಈ ಹುಡುಗಿ ಬೇಡ ಅಂತ ನಿರಾಕರಿಸಿರುವುದು ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿದೆ.. ಹೌದು ತಾತಪ್ಪ ವಿಚ್ಛೇದನದ ಅರ್ಜಿ ಕಳುಹಿಸಿದಾಗ ಹುಡುಗಿ ಮನೆಯವರಿಗೆ ಶಾಕ್ ಆಗಿದೆ.. ಇವರ ನಡುವೆ ವಯಸ್ಸಿನ ಅಂತರ ಇದ್ದರೂ ಕೂಡ ನಮ್ಮ ಕುಟುಂಬಕ್ಕೆ ಯಾವುದೇ ಅಭ್ಯಂತರ ಇರಲಿಲ್ಲ.. ಆದರೆ ಈಗ ಈ ರೀತಿ ಹೇಳದೇ ಕೇಳದೇ ಯಾವುದೇ ಮುನ್ಸೂಚನೆ ನೀಡದೇ ಈ ರೀತಿ ನೋಟಿಸ್ ಕಳುಹಿಸಿದ್ದಾರೆ ಎಂದು ಹುಡುಗಿ ಮನೆಯವರು ಕಣ್ಣೀರಿಟ್ಟಿದ್ದಾರೆ..

17 ವರ್ಷದ ನೋನಿ ನವಿತಾ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಳು ಅದಕ್ಕಾಗಿ ವಿಚ್ಛೇದನ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.. ಆದರೆ ಇದನ್ನು ಹುಡುಗಿ ಮನೆಯವರು ತಳ್ಳಿ ಹಾಕಿದ್ದು ಅಜ್ಜನ ಕುಟುಂಬವೇ ತಕರಾರು ಶುರು ಮಾಡಿದೆ ಎಂದಿದ್ದಾರೆ..
ಇದೆಲ್ಲದರ ಜೊತೆಗೆ.. ತಾತಪ್ಪ ತಾನು ಮದುವೆಯಾಗಲು ಹುಡುಗಿಗೆ 50 ಸಾವಿರ ರೂಪಾಯಿ.. ಸ್ಕೂಟರ್.. ಹಾಸಿಗೆ ಹಾಗೂ ಇನ್ನೂ ಅನೇಕ ವಸ್ತುಗಳನ್ನು ನೀಡಿದ್ದನು.. ವಿಚ್ಛೇದನ ಪಡೆಯುತ್ತಿದ್ದಂತೆ ಎರಡು ಆಟೋಗಳಲ್ಲಿ ತಾನು ಕೊಟ್ಟಿದ್ದ ಎಲ್ಲಾ ವಸ್ತುಗಳನ್ನು ತುಂಬಿಕೊಂಡು ಹೋಗಿದ್ದಾನೆ.. ಒಟ್ಟಿನಲ್ಲಿ ವಯಸ್ಸು ಅನ್ನೋದು ಜಸ್ಟ್ ಅ ನಂಬರ್ ಎಂದು 61 ವರ್ಷ ಅಂತರ ಇದ್ದರೂ ಮಧುರ ಬಾಂಧವ್ಯಕ್ಕೆ ಜೊತೆಯಾದ ಜೋಡಿ ಇದೀಗ ದೂರಾಗಿರುವ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ..