Advertisements

ನಿವೇದಿತಾ ಗೌಡ ತಾಯಿಯ ನಿಜವಾದ ವಯಸ್ಸೆಷ್ಟು ಗೊತ್ತಾ? ಇಷ್ಟೇನಾ..

Cinema

ನಿವೇದಿತಾ ಗೌಡ ರವರ ಮುದ್ದು ಮಾತು ಹಾಗೂ ಅದ್ಬುತ ಕೇಶರಾಶಿಗೆ ಅದೆಷ್ಟೋ ಮಂದಿ ಅಭಿಮಾನಿಗಳಿದ್ದು ಅದರಲ್ಲಿಯೂ ಕೂಡ ಬಿಗ್ ಬಾಸ್ ಮನೆಯೊಳಗೆ ಗೊಂಬೆ ಎಂಬ ಹೆಸರಿನಿಂದಲೇ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನೂ ಕೂಡ ಕಂಡುಕೊಳ್ಳುತ್ತಾರೆ. 2019 ರ ಮೈಸೂರು ಯುವ ದಸರಾ ವೇದಿಕೆ ಮೇಲೆ ಲಕ್ಷಾಂತರ ಜನರ ಎದುರೇ ಬಾರ್ಬಿ ಡಾಲ್ ನಿವೇದಿತಾ ಗೌಡಗೆ ಖ್ಯಾತ ರ್ಯಪರ್ ಚಂದನ್ ಶೆಟ್ಟಿ ಉಂಗುರ ತೊಡಿಸಿ ಪ್ರೀತಿ ವ್ಯಕ್ತ ಪಡಿಸಿದ್ದು ಇನ್ನು ಯುವ ದಸರಾ ಕಾರ್ಯಕ್ರಮಕ್ಕಾಗಿ ಹಾಡುತ್ತಿದ್ದ ವೇದಿಕೆಯಲ್ಲೇ ನಿವೇದಿತಾಗೆ ಮಂಡಿಯೂರಿ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದರು. ಹೌದು ಇದು ನಿವೇದಿತಾಗೆ ಸಖತ್ ಸರ್‌ಪ್ರೈಸ್ ತಂದ್ದು ಅಷ್ಟೇ ಅಲ್ಲದೇ ಚಂದನ್ ಅವರ ಈ ನಡೆಗೆ ಅಪಾರ ವಿರೋಧವೂ ವ್ಯಕ್ತವಾಗಿದ್ದು ಕರ್ನಾಟಕದ ಈ ಗಾಯಕನ ಬಂಧನಕ್ಕೆ ಆಗ್ರಹಿಸಿ ಎಲ್ಲೆಡೆ ಪ್ರತಿಭಟನೆಗಳೂ ನಡೆದಿದ್ದವು. ಹೌದು ತದ ನಂತರ ಎಲ್ಲ ತಣ್ಣಗಾದ ಮೇಲೆ ಗುರು- ಹಿರಿಯರ ಸಮ್ಮುಖದಲ್ಲಿ ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಗೊಂಬೆ ಗೊಂಬೆ ಹಾಡಿಗೆ ಈ ಜೋಡಿ ಜೊತೆಯಾಗಿ ಹೆಜ್ಜೆ ಹಾಕಿದ್ದು ಡಿಗ್ರಿ ಮುಗಿದ ಬಳಿಕ ಪ್ರತಿಷ್ಠಿತ ಏರ್‌ಲೈನ್ಸ್ ಕಂಪನಿಯೊಂದಕ್ಕೆ ಆಪರೇಷನ್ ಅಸಿಸ್ಟೆಂಟ್ ಆಗಿ ನಿವೇದಿತಾ ಕೆಲಸ ಮಾಡುತ್ತಿದ್ದಾರೆ.

Advertisements
Advertisements

ಬಿಗ್‌ಬಾಸ್ ವಿನ್ನರ್ ಕಿರೀಟ ಪಡೆದುಕೊಂಡ ಬಳಿಕ ಚಂದನ್‌ ಅವರನ್ನು ಹಲವು ಆಫರ್ಸ್ ಹುಡುಕಿಕೊಂಡು ಬರುತ್ತಿವೆ. ಇನ್ನು ನಿವೇದಿತಾ ಫ್ಯಾಷನ್‌ ಸೆನ್ಸ್‌ಗೆ ಮನಸೋತ ಚಂದನ್ ಗೊಂಬೆ ಗೊಂಬೆ ಎಂಬ ಹಾಡು ಬರೆದು ಸಂಗೀತ ಸಂಯೋಜಿಸಿ ಹಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸ್ನೇಹಿತರಾಗಿ ಪರಿಚಯವಾಗಿ ಬಿಗ್‌ಬಾಸ್ ಮನೆಯಲ್ಲಿ ಸುಮಾರು ಮೂರು ತಿಂಗಳ ಕಾಲ ಜೊತೆಯಾಗಿದ್ದ ಈ ಇಬ್ಬರಲ್ಲಿ ಅಲ್ಲಿಯೇ ಪ್ರೀತಿ ಚಿಗುರಿದ್ದು ಈ ಬಗ್ಗೆ ಹಲವು ಸಂದರ್ಭಗಳಲ್ಲಿ ಇವರಿಬ್ಬರ ಕಾಲೆಳೆದರೂ ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಹೌದು ಮೈಸೂರು ಯುವ ದಸರಾದಲ್ಲಿ ಯಾವಾಗ ಚಂದನ್ ನಿವೇದಿತಾಗೆ ಪ್ರಪೋಸ್ ಮಾಡಿದರೋ ಆಗ ಯಾರಿಗೂ ಅಷ್ಟು ಆಶ್ಚರ್ಯವೇನೂ ಆಗಲಿಲ್ಲ. ಆದರೆ ಪ್ರಪೋಸ್ ಮಾಡಿದ ರೀತಿ ಮಾತ್ರ ಎಲ್ಲರನ್ನೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದು ಸದ್ಯ ಇದೀಗ ವಿವಾಹವಾಗಿರುವ ಚಂದನ್ ಹಾಗೂ ನಿವೇದಿತಾ ಜೋಡಿ ದಾಂಪತ್ಯ ಜೀವನದಲ್ಲಿ ಸುಖವಾಗಿದ್ದಾರೆ. ಆದರೆ ವಿವಾಹವಾದ ದಿನದಿಂದ ಒಂದಲ್ಲ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಿದ್ದ ಇವರು ಏನೇ ಮಾಡಿದರೂ ಸಹ ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದ್ದರು.

ಸದ್ಯ ಇದೀಗ ಎಲ್ಲಾ ನೆಗೆಟಿವ್ ವಿಚಾರಗಳಿಂದ ದೂರ ಉಳಿದಿರುವ ನಿವೇದಿತಾ ಮತ್ತು ಚೆಂದನ್ ರಾಜ ರಾಣಿ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಗೌನ್ಗಳನ್ನು ಧರಿಸಿ ಮಾರುದ್ದ ಜಡೆ ಇರುವಂತಹ ನಿವೇದಿತ ಗೌಡ ನೋಡುವುದಕ್ಕೆ ಥೇಟ್ ಬಾರ್ಬಿ ಡಾಲ್ ತರಾನೇ ಕಾಣಿಸುತ್ತಿದ್ದು ನಿವೇದಿತ ಗೌಡ ಅವರ ತಾಯಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ಇವರ ತಾಯಿಯ ಹೆಸರು ಹೇಮಾ. ಹೌದು 35 ವರ್ಷದವರಾಗಿದ್ದರೂ ಇಬ್ಬರೂ ಪಕ್ಕ ಪಕ್ಕ ನಿಂತರೆ ಅಮ್ಮ ಮಗಳಂತೆ ಕಾಣುವುದೇ ಇಲ್ಲ. ಇವರಿಬ್ಬರಲ್ಲಿ ಎಷ್ಟು ಹೋಲಿಕೆ ಇದೆಯೆಂದರೆ ಕೆಲವೊಮ್ಮೆ ಜನರು ಹೇಮಾ ಅವರನ್ನು ನೋಡಿ ನಿವೇದಿತಾ ಗೌಡ ಎಂದು ಮಾತನಾಡಿಸಿದ್ದು ಇದೆ. ಹೌದು ಇವರಿಬ್ಬರೂ ಸೇರಿ ಹಲವಾರು ರಿಲ್ಸ್ ಗಳನ್ನು ಸಹ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.ತಂದೆ ತಾಯಿಯ ಮೇಲೆ ಅಪಾರವಾದ ಪ್ರೀತಿ ಗೌರವವನ್ನು ಇಟ್ಟುಕೊಂಡಿರುವಂತಹ ನಿವೇದಿತ ಗೌಡ ಸದ್ಯ ಚಂದನ್ ಶೆಟ್ಟಿ ಅವರ ಮನೆಯಲ್ಲಿದ್ದು ಆಗಾಗ ಫೋನ್ ಮಾಡಿ ಅವರ ಆರೋಗ್ಯ ಕ್ಷೇಮ ವಿಚಾರಿಸುತ್ತಾರೆ. ಹೌದು ಇವರಿಬ್ಬರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.