Advertisements

ನಿಧಿ ಸುಬ್ಬಯ್ಯ ಪ್ರಕಾರ ಬಿಗ್ ಬಾಸ್ ಫೈನಲ್ ನಲ್ಲಿ ಗೆಲ್ಲುವ ಸ್ಪರ್ಧಿ ಯಾರು ಗೊತ್ತಾ.? ಸುದೀಪ್ ಜೊತೆಗೆ ನಿಧಿ ಹೇಳಿದ್ದೇನು.?

Entertainment Kannada News

ನಮಸ್ತೆ ಸ್ನೇಹಿತರೆ, ಕನ್ನಡದ ಬಿಗ್ ಬಾಸ್ ಸೀಸನ್ 8 ಈಗಾಗಲೇ 84 ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಸಾಗುತ್ತಿದೆ. ಎರಡನೇ ಇನ್ನಿಂಗ್ಸ್ ಪ್ರಾರಂಭ ಆಗಿ ಎರಡು ವಾರಗಳು ಕಳೆದಿದ್ದು ಇನ್ನು ಫೈನಲ್ ದಿನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಎರಡನೇ ಇನ್ನಿಂಗ್ಸ್ ಪ್ರಾರಂಭ ಆದ ಎರಡನೇ ವಾರದಲ್ಲಿ ನಿಧಿ ಸುಬ್ಬಯ್ಯ ಅವರು ಮೊದಲ ಸ್ಪರ್ಧಿಯಾಗಿ ಮನೆಯಿಂದ ಹೊರ ಹೋಗಿದ್ದಾರೆ. ಈ ಬಾರಿ ರಘು, ಪ್ರಶಾಂತ್ ಸಂಬರ್ಗಿ, ದಿವ್ಯಾ ಸುರೇಶ್, ಮಂಜು ಪಾವಗಡ, ಚಕ್ರವರ್ತಿ , ಪ್ರಿಯಾಂಕ ತಿಮ್ಮೇಶ್ ಹಾಗೂ ನಿಧಿ ಸುಬ್ಬಯ್ಯ ನಾಮಿನೇಟ್ ಆಗಿದ್ದರು. ಕೊನೆಯಲ್ಲಿ ಚಕ್ರವರ್ತಿ ಹಾಗೂ ನಿಧಿ ಉಳಿದುಕೊಂಡಿದ್ದು, ಕೊನೆಗೆ ನಿಧಿಯವರು ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ.

Advertisements
Advertisements

ಇಷ್ಟು ದಿನಗಳಲ್ಲಿ ನಿಧಿ ಸುಬ್ಬಯ್ಯ ಚೆನ್ನಾಗಿಯೇ ಆ ಆಡಿಕೊಂಡು ಬಂದಿದ್ದರು. ಆದರೆ ಕಳೆದ ಬಾರಿ ಅರವಿಂದ್ ಕೆ ಪಿ ಹಾಗೂ ನಿಧಿ ಸುಬ್ಬಯ್ಯ ಅವರ ಜಗ’ಳದಲ್ಲಿ ನಿಧಿಯವರು ಅರವಿಂದ್ ಕೆ ಪಿಯವರ ಸಾಧನೆಗೆ ಅವ’ಮಾ’ನ ಮಾಡಿದ್ದರು. ಅದೇ ನಿಧಿ ಸುಬ್ಬಯ್ಯ ಅವರಿಗೆ ಕಡಿಮೆ ಓಟು ಬೀಳಲು ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಿಧಿ ಸುಬ್ಬಯ್ಯ ಬಳಿ ಕಿಚ್ಚ ಸುದೀಪ್ ಅವರು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ನಿಧಿಸುಬ್ಬಯ್ಯ ಏನು ಉತ್ತರ ಕೊಟ್ಟಿದ್ದಾರೆ ನೋಡೋಣ ಬನ್ನಿ.

ಈ ವಾರ ಮನೆಯಿಂದ ಯಾರು ಹೊರ ಬೇಕು ಎಂದು ಸುದೀಪ್ ಅವರು ಕೇಳಿದಾಗ ಚಕ್ರವರ್ತಿಯವರು ಹೋಗಬೇಕು, ಅವರ ನಡತೆ ಮನೆಯವರಿಗೆ ಇಷ್ಟವಾಗುತ್ತಿಲ್ಲ ಎಂದು ನಿಧಿ ಸುಬ್ಬಯ್ಯ ಹೇಳಿದ್ದರು. ಅದೇ ರೀತಿ ನಿಮ್ಮ ಪ್ರಕಾರ ಫೈನಲ್ ನಲ್ಲಿ ಯಾರು ಇರುತ್ತಾರೆ ಎಂದು ಕೇಳಿದಾಗ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ಶುಭಾ, ವೈಷ್ಣವಿ ಅವರು ಟಾಪ್ ಫೈವ್ ನಲ್ಲಿ ಇರುತ್ತಾರೆ. ಇದರಲ್ಲಿ ಮಂಜು ಪಾವಗಡ ಬಿಗ್ ಬಾಸ್ ವಿನ್ನರ್ ಆಗುತ್ತಾರೆ ಹಾಗೂ ವೈಷ್ಣವಿ ರನ್ನರ್ ಅಪ್ ಆಗುತ್ತಾರೆ ಎಂದು ಹೇಳಿದ್ದಾರೆ. ಇನ್ನು ನಿಧಿಯವರಿಗೆ ಈಗಲೂ ಅರವಿಂದ್ ಕೆಪಿ ಮೇಲೆ ಸಿಟ್ಟಿದೆ ಅನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮನೆಯಿಂದ ಹೊರ ಬರುವಾಗ ಅರವಿಂದ್ ಕೆಪಿಯವರನ್ನೇ ನಿಧಿ ಸುಬ್ಬಯ್ಯ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ನಿಧಿ ಸುಬ್ಬಯ್ಯ ಅವರು ಹೇಳಿರುವ ಬಿಗ್ ಬಾಸ್ ಫೈನಲ್ ಭವಿಷ್ಯ ನಿಮ್ಮ ಪ್ರಕಾರ ನಿಜವಾಗುತ್ತದೆಯೇ. ಕಮೆಂಟ್ ಮಾಡಿ ತಿಳಿಸಿ.