Advertisements

ನಿದ್ರೆಯಲ್ಲಿ ಯಾರೋ ನಿಮ್ಮ ಎದೆ ಮೇಲೆ ಕೂತಂತೆ ಆಗುತ್ತಾ! ಮೇಲಿಂದ ಬಿದ್ದಂತೆ ಆಗುತ್ತಾ, ನಿದ್ರೆಯಲ್ಲಿ ಮಾತಾಡ್ತಿರಾ, ಮಲಗಿದ ತಕ್ಷಣ ಕಾಮಾಸಕ್ತಿ ಹೆಚ್ಚಾಗುತ್ತಾ! ಯಾಕೆ ನೋಡಿ..

Kannada News

ನಮಸ್ಕಾರ ವೀಕ್ಷಕರೆ ಪ್ರತಿಯೊಬ್ಬ ಜೀವಿ ದಿನ ಪೂರ್ತಿಯಾಗಿ ಹಾಯಾಗಿರಬೇಕೆಂದರ ಆತ ನಿದ್ದೆ ಚನ್ನಾಗಿ ಮಾಡಿರಬೇಕು.ಇನ್ನು ನಿದ್ದೆ ಮಾಡುವುದರಿಂದ ದೇಹದ ಆಯಾಸ ದೂರವಾಗುತ್ತದೆ. ಸೌಂದರ್ಯ ಹೆಚ್ಚಾಗುತ್ತದೆ, ಕೊದಲು ಬೆಳೆಯುತ್ತವೆ ಎಂಬೆಲ್ಲ‌ ಸಂಗತಿಗಳು ನಮಗೆಲ್ಲ ತಿಳಿದಿರುತ್ತದೆ. ಆದರೆ ನಾವು ಮಲಗಿದ್ದಾಗ ನಾವು ಏನು ಮಾಡುತ್ತೇವೆ. ನಮ್ಮೊಂದಿಗೆ ಎನೆಲ್ಲ ನಡೆಯುತ್ತದೆ ಎಂಬುವುದನ್ನು ನಾವು ಈ ಸ್ಟೋರಿಲಿ‌ ತಿಳಿದುಕೊಳ್ಳೋಣ. ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಬೇಕಾದರೆ ಕೊನೆವರೆಗೂ ಓದಿ ಹಾಗೂ ನಿಮ್ಮ‌ ಸ್ನೇಹಿತರೊಂದಿಗೆ ಶೇರ್ ಮಾಡಿ..

ನಾವು ಮಲಗಿದ್ದಾಗ ಅನೇಕ‌ ಕನಸ್ಸುಗಳು, ಘಟನೆಗಳು ಅಚ್ಚರಿಯ ಸಂಗತಿಗಳು ನಡೆಯುತ್ತವೆ. ನಾವು ಮಲಗಿರುವಾಗ ಪ್ರಪಾತಕ್ಕೆ ಬಿದ್ದಾ ಹಾಗೂ ಯಾರೂ ಎದೆಯ ಮೇಲೆ‌ ಕುಳಿತ ಹಾಗೆ ಆಗುತ್ತದೆ. ನಿಮಗೆ ಆ ಸಮಯದಲ್ಲಿ ‌ಕೊಗಬೇಕು ಎಂದುಕೊಂಡರು ಅದು ನಮ್ಮಿಂದ ಅಸಾಧ್ಯವಾಗುತ್ತದೆ. ನಾವು ಮಾತನಾಡಬೇಕು ಎಂದರು ನಮ್ಮ‌ ಧ್ವನಿ‌ ಹೊರಬರುವುದಿಲ್ಲ. ಅದೆಲ್ಲ ಯಾಕೆ ಎಂದು ತಿಳಿಯಬೇಕಾದರೆ ಇದನ್ನು ಪೂರ್ತಿಯಾಗಿ ಓದಿ..

ಮೊದಲನೆಯದಾಗಿ ನಾವು ಎತ್ತರದಿಂದ ಕೆಳಗೆ ಬಿದ್ದ ಹಾಗಾಗುತ್ತದೆ. ಸಹಜ‌ ಕ್ರಿಯೆ ಎಲ್ಲರೊಂದಿಗೆ ಆಗುತ್ತದೆ. ಈ ರೀತಿಯಾದಾಗ ಕೆಲವರು ಎದ್ದು ಕುಡುತ್ತಾರೆ, ಇನ್ನು ಕೆಲವರು ಬಿದ್ದು ಒದ್ದಾಡುತ್ತಾರೆ. ಇದು ಅತೀ ಒತ್ತಡದಿಂದಾಗುವ ಆಗುವ ಸಹಜ ಕ್ರಿಯೆಯಾಗಿದೆ. ಇದು ದನಿವಾದಾಗ, ಹೆಚ್ಚು ‌ಮೊಬೈಲ್ ಲ್ಯಾಪ್‌ಟಾಪ್ ಬೇಳಕಿನಡಿಯಲ್ಲಿ ಇದ್ದಾಗ ಹೀಗಾಗುತ್ತದೆ. ಕಾರಣ ನಮ್ಮ‌ ಮೆದುಳು ಈ ಬೆಳಕಿನ ಪ್ರತಿಫಲನವನ್ನು ಸಂಗ್ರಹಿಸಿ ಮಲಗಿದಾಗ ಬೆಳಕು ಗೋಚರಿಸುತ್ತದೆ. ಇದು ಮುಂದೆ ಇನ್ಸೊಮೆನಿಯಾ ಅಥವಾ ಸ್ಲಿಪ್ ಡಿಪರಮೆಷನ್ ಕಾರಣವಾಗುತ್ತದೆ.

ಎರಡನೆಯದಾಗಿ ಮಲಗಿದಾಗ ಆಗುವ ಲೈಂಗಿಕ ಪ್ರಚೋದನೆ ಪ್ರತಿಯೂಬ್ಬರಲ್ಲಿ ನಡೆಯುವ ಸಹಜ ಅವಸ್ಥೆಯಾಗಿದೆ. ಇದಕ್ಕೆ ಕಾರಣ ಆಕ್ಸಿಜನ್ ನಿದ್ರಿಸುವಾಗ ದೇಹದ ಎಲ್ಲ ಭಾಗಗಳಿಗೂ ಒದಗಿ ರಕ್ತ ಸಂಚಲನ ಸುಗಮವಾಗುವುದರಿಂದ ಲೈಂಗಿಕತೆಗೆ ಸಂಭಂಧಿಸಿದ ಅಂಗಗಳು ಕ್ರಿಯೆಯಲ್ಲಿ ತೊಡಗುವುದರಿಂದ ಈ ರೀತಿಯಾಗುತ್ತದೆ.

ಮೂರನೆಯದಾಗಿ ಸ್ಲಿಪ್ ಪ್ಯಾರಾಲೆಸಸ್ ಅಥವಾ ಮಲಗಿದಾಗ ಲಕ್ವಾ ಹೊಡೆದ ರೀತಿಯಾಗುವುದು. ಮಲಗಿದಾಗ ಮಾತನಾಡಲು ಸಾಧ್ಯವಾಗದು, ಎಳಬೇಕೆಂದರು ಅಸಾಧ್ಯವಾಗುವುದು, ಯಾರೋ ನಮ್ಮ ಎದೆಯ ‌ಮೇಲೆ ಬಂದು ಕುಳಿತಂತಾಗುವುದೇ ಸ್ಲಿಪ್ ಪ್ಯಾರಾಲೆಸಸ್. ಇದಕ್ಕೆ ಕಾರಣ ಆಯಾಸ , ದಣಿವು. ದೇಹ ವಿಶ್ರಾಂತ ಸ್ಥಿತಿಯಲ್ಲಿದ್ದರು ನಮ್ಮ ಮೆದುಳು ಕ್ರಿಯೆಯಲ್ಲಿ ತೊಡಗಿರುತ್ತದೆ ಆ ಸಮಯದಲ್ಲಿ‌ ಗಾಢವಾದ ನಿದ್ರೆಯಲ್ಲಿ ಜಾರುವವರಿಗೆ ಈ ರೀತಿಯ ಅನುಭವಾಗುತ್ತದೆ.

ನಾಲ್ಕನೆಯದಾಗಿ ಬ್ರೆನ್ ರೆಸ್ಟೊರೆಷನ್ ಹಾಗೂ ರಿಟಾಸ್ಟಿಸ್ಟೆಷನ್ ಇದು ಒಂದು ವರದಿಯ ಪ್ರಕಾರ ‌ನಾವು ಎಚ್ಚರವಿದ್ದಾಗ ಮಾಡುವ ಕೆಲಸಗಳನ್ನು ನಮ್ಮ‌ ಮೆದುಳು ಸಂಗ್ರಹಿಸಿ ಮಲಗಿದ್ದಾಗ ಕ್ರಿಯೆಯಲ್ಲಿ ತೊಡಗುತ್ತದೆ ಇದನ್ನೆ ಗ್ಲಿಂಪಾಟಿಕ್ ಸಿಸ್ಟಮ್ ಎಂದು ಕರೆಯುತ್ತಾರೆ.

ಐದನೆಯದು ನಿದ್ರೆಯಲ್ಲಿ ಮಾತನಾಡುವುದು. ನಿದ್ರೆಯಲ್ಲಿ ಮೂವತ್ತು ಸೆಕೆಂಡ್ ವರೆಗೂ ಮಾತನಾಡುತ್ತಾರೆ.

ಆರನೆಯದು ಸ್ಲಿಪ್ ವಾಕಿಂಗ್ ಅಥವಾ ನಿದ್ರೆಯಲ್ಲಿ ಚಲಿಸುವ ಕಾಯಿಲೆ. ಇದು ಸಹ ಸಹಜ‌ ಕ್ರಿಯೆ. ಕಣ್ಣು ತರೆದು ಸಹ ನಡೆಯುತ್ತಾರೆ. ಆದರೆ ಈ ಕುರಿತು ಆ ವ್ಯಕ್ಯಿಗೆ ಅದರ ಅರಿವಿರುವುದಿಲ್ಲ. ದಾರಿಯು ಸಹ‌ ಕಾಣುವುದಿಲ್ಲ. ಇದಕ್ಕೆ ಕಾರಣ ಅತಿಯಾದ ಮಾನಸಿಕ‌ ಒತ್ತಡ ಹಾಗೂ ದೈಹಿಕ ದಣಿವು. ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ‌ ಕಂಡು ಬರುತ್ತದೆ.

ಎಳನೆಯಾದಾಗಿ ಪುನರಾವರ್ತಿಸುವ ಕನಸ್ಸು. ಒಂದೆ ಕನಸ್ಸು ಮತ್ತೆ ಮತ್ತೆ ಕಾಣುವುದು. ನಮಗೆ ದಿನವು ಹಲವು‌ ಕನಸ್ಸು ‌ಕಾಣುತ್ತೇವೆ‌. ಅವುಗಳು ನಮಗೆ ನೆನಪಿರುವುದಿಲ್ಲ. ಆದರೆ ಕೆಲವು ಕನಸ್ಸುಗಳು ಖಾಯಂ ಆಗಿ ಬೀಳುತ್ತವೆ. ಇದಕ್ಕೆ ಕಾರಣ ನಮ್ಮ ಸೂಪ್ತಿ ಮನಸ್ಸಿನಲ್ಲಿ ರೆಕಾರ್ಡ್ ಆದ ಕನಸ್ಸಾಗಿರುತ್ತದೆ. ಅದೇ ಆಗಾಗ ನಮ್ಮ ಮೆದುಳು ಅದನ್ನು ನಮಗೆ ಪುನರಾವರ್ತಿಸುತ್ತದೆ. ಉದಾಹರಣೆಗೆ ನಾವು ಪರೀಕ್ಷೆಯಲ್ಲಿ ಹೆದರಿದಾಗ ನಾವು ಫೆಲ್ ಆದ ಹಾಗೆ ಕನಸ್ಸು ಬೀಳುತ್ತದೆ. ಇದರ ಅರ್ಥ ನಾವು ಪ್ರಯತ್ನ ಪಟ್ಟರೆ ಅಸಾಧ್ಯವಿಲ್ಲ ಎಂಬುವುದನ್ನು ನಮ್ಮ ಮೆದುಳು ನಮಗೆ ತೋರಿಸುತ್ತದೆ.

ಇನ್ನು ಎಂಟನೆಯದಾಗಿ ಹೈ ಹಾರ್ಮೋನ್ ಅಥವಾ ಹೈ ಗ್ರೊಥ್ ಹಾರ್ಮೋನ್. ಇದನ್ನು ಹೆಚ್.ಜಿ ಹಾರ್ಮೋನ್ ಎಂದು ಸಹ ಕರೆಯುತ್ತಾರೆ. ನಮ್ಮ ದೇಹದ ಸರ್ವಾಂಗೀಣ ವಿಕಾಸಕ್ಕೆ ಸಹಾಯಕವಾಗಿದ್ದು, ನಾವು ನಿದ್ರಿಸುವಾಗ ಹೆಚ್ಚು ಉತ್ಪತ್ತಿಯಾಗುತ್ತದೆ. ನಮ್ಮ ದೇಹದ ಅಂಗಾಗ ಬೆಳವಣಿಗೆಗೆ ಸಹಾಯಕವಾಗಿರುತ್ತದೆ.

ಒಂಬತ್ತನೆಯದಾಗಿ, ತ್ರೊಟ್ ರಿಲ್ಯಾಕ್ಸೆಷನ್ ಕೆಲವೊಮ್ಮ ನಾವು‌ ಮಲಗಿದಾಗ ನಮ್ಮ‌ ಗಂಟಲು ಹಗುರವಾಗಿ,‌ನಮ್ಮ ಶ್ವಾಸಕೋಶಗಳು ಸ್ವಚ್ಛ ಆಕ್ಸಿಜನ್ ಪಡೆಯುತ್ತವೆ. ಇದು ನಮ್ಮ ಉಸಿರಾಟ ಕ್ರಿಯೆಗೆ ಸಹಾಯಕವಾಗಿದ್ದು ಇದರಿಂದ ನಮಗೆ ಯಾವುದೇ ತೊಂದರೆಯಾಗುದಿಲ್ಲ.

ಇನ್ನು ಕೊನೆಯದಾಗಿ ವೇಗದ ಕಣ್ಣಿನ‌ ಚಲನೆ.‌ ನಾವು ಮಲಗಿದ್ದಾಗ. ಅಥವಾ ಬೇರೆ ಯಾರಾದರು ಮಲಗಿದಾಗ ಅವರ ಕಣ್ಣುಗಳ ಒಳಗೆ ಕಣ್ಣು ಗುಡ್ಡೆಗಳು ವೇಗವಾಗಿ ಸುತ್ತುವುದನ್ನು ಕಾಣುತ್ತೇವೆ. ಇದು ಸಹಜ ಕ್ರಿಯೆ. ನಾವು ಮಲಗಿ ಉತ್ತಮ ನಿದ್ದೆ ಮಾಡುವಾಗ ನಮ್ಮ ದೇಹ ಐದು ಸುತ್ತುಗಳನ್ನು ಪಡೆಯುತ್ತದೆ. ಅದರಲ್ಲಿ ಕೊನೆಯ ಹಂತವೇ ಇದಾಗಿದೆ. 60 ರಿಂದ 90 ಸೆಕೆಂಡಿನವರೆಗೆ ನಡೆಯುತ್ತದೆ. ನಮಗೆ ಅರಿವು ಇರುವುದಿಲ್ಲ.

ಇವೆಲ್ಲವುಗಳು ನಾವು ‌ಮಲಗಿರುವಾಗ ನಡೆಯುವ ವಿಚಿತ್ರವಾದರು ಸತ್ಯ ಸಂಗತಿಗಳಾಗಿದ್ದು, ನಮ್ಮ‌ ದೇಹವು ಇನ್ನು ಈ ರೀತಿಯಾದ ವಿಶಿಷ್ಟ ಸಂಗತಿಯನ್ನು ಒಳಗೊಂಡಿದೆ. ‌ಒಟ್ಟರೆಯಾಗಿ ಉತ್ತಮ‌ ನಿದ್ದೆ ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಹಾಯಕವಾಗಿದೆ.