Advertisements

ಸಂಕಷ್ಟಕ್ಕೆ ಮಿಡಿದು, ಚಿತ್ರರಂಗದ ಕೈ ಹಿಡಿದ ನಟ ನಿಖಿಲ್ ಕುಮಾರಸ್ವಾಮಿ.. ಇವರು ಮಾಡಿದ ಕೆಲಸ ಏನು ಗೊತ್ತಾ..?

Cinema Inspiration

ನಮಸ್ತೆ ಸ್ನೇಹಿತರೆ, ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿಯವರು, ನೃತ್ಯ ಕಲಾವಿದರ ಸಂಕಷ್ಟಕ್ಕೆ ಮಿಡಿದು ಅವರ ಜೊತೆ ನಿಂತಿದ್ದಾರೆ. ಚೀನಾ ರೋ’ಗ ಜಗತ್ತಿನೆಲ್ಲೆಡೆ ಜನರ ಬದುಕನ್ನು ಅ’ಸ್ತವ್ಯ’ಸ್ತ ಮಾಡಿಬಿಟ್ಟಿದೆ. ಇದರ ಬೆನ್ನಲ್ಲೇ ಕೋ’ವಿಡ್ ಮೊದಲನೇ ಅಲೆಗಿಂತ ಹೆಚ್ಚಾಗಿ ಕೋ’ವಿಡ್ ಎರಡನೇ ಅಲೆಯು ಹೆಚ್ಚಾದ ಕಾರಣ ಅನಿವಾರ್ಯವಾಗಿ ಎರಡನೇ ಬಾರಿಗೆ ಸುಮಾರು 2 ತಿಂಗಳುಗಳ ಕಾಲ ಕಠಿಣ ಲಾ’ಕ್ಡೌಡ್ ಮಾಡಬೇಕಾಯಿತು. ಈ ಲಾ’ಕ್ಡೌನ್ ಪರಿಣಾಮ ಕೈಗಾರಿಕೆ, ವಾಣಿಜ್ಯ ಕ್ಷೇತ್ರಗಳು ನಿಂತು ಹೋದವು. ಈ ಪರಿಣಾಮ ಲಕ್ಷಾಂತರ ಮಂದಿ ಉದ್ಯೋಗವಿಲ್ಲದೆ ಊಟಕ್ಕಾಗಿ ಪರದಾಡಿದರು. ಕೆಲಸ ಕಳೆದುಕೊಂಡು ಆದಾಯ ವಿಲ್ಲದೆ ಜನರ ಜೀವನ ಮತ್ತಷ್ಟು ಕ’ಷ್ಟದ ಸ್ಥಿತಿಗೆ ತಲುಪುವಂತಾಯಿತು. ಎಲ್ಲಾ ಕ್ಷೇತ್ರಗಳ ಕಾರ್ಮಿಕರ ಪರಿಸ್ಥಿತಿಯೂ ಸಹ ಅತ್ಯಂತ ಕೀ’ಳು ಹಂತಕ್ಕೆ ಬಂದು ನಿಂತಿತು.

Advertisements
Advertisements

ಇದರಿಂದ ಕನ್ನಡ ಚಿತ್ರರಂಗದ ಪೋಷಕ ಕಲಾವಿದರು, ಕಾರ್ಮಿಕರಿಗೆ, ಸಿಬ್ಬಂದಿ ತಾಂತ್ರಿಕ ವರ್ಗದವರಿಗೂ ಕೂಡ ದೊಡ್ಡ ಆರ್ಥಿಕ ಹೊಡೆತ ಉಂಟಾಗಿ ದಿನದ ಊಟಕ್ಕೂ ಕೂಡ ಪರದಾಡುವ ಸ್ಥಿತಿ ನಿರ್ಮಿಣವಾದಾಗ ಸ್ಯಾಂಡಲ್ ವುಡ್ ಸ್ಟಾರ್ ನಟರು ನೆರವಿನ ಹಸ್ತ ಚಾಚಿದರು. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶ್ರೀ ಮುರುಳಿ, ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ, ಶುಭಪೂಂಜಾ, ರಾಗಿಣಿ ದ್ವಿವೇದಿಯವರು ಆಹಾರ ಧಾನ್ಯ ಕಿಟ್ ಮತ್ತು ಅಗತ್ಯ ಬಿದ್ದವರಿಗೆ ತುರ್ತು ವೈದ್ಯಕೀಯ ಸೇವೆಗಳಿಗೆ ನೆರವು ನೀಡಿದರು. ನಟ ರಾಕಿಂಗ್ ಸ್ಟಾರ್ ಯಶ್ ಬರೋಬ್ಬರಿ ಮೂರು ಸಾವಿರ ಚಿತ್ರರಂಗದ ನಟರು, ತಂತ್ರಜ್ಞರು, ಕಾರ್ಮಿಕರಿಗೆ ತಲಾ ಐದು ಸಾವಿರ ರೂಗಳಂತೆ ಒಂದೂವರೆ ಕೋಟಿಯಷ್ಟು ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದರು.

ನಟ ನಿಖಿಲ್ ಕುಮಾರಸ್ವಾಮಿ ಕೂಡ ಅಗತ್ಯ ಇರುವ ಕುಟುಂಬಗಳಿಗೆ ಆಹಾರ ಧಾನ್ಯ ಪೂರೈಕೆ ಮಾಡಿದ್ದರು. ರಾಮನಗರ ಜಿಲ್ಲಾಸ್ಪತ್ರೆಗೆ ತುರ್ತು ಅಗತ್ಯ ಸೇವೆಗೆ ಅನುಕೂಲವಾಗಲು ಎರಡು ಆಂಬುಲೆನ್ಸ್ ಸೇವೆ ಒದಗಿಸಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿ ರೈಡರ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ನಿಖಿಲ್ ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ. ಇದು ನಿಖಿಲ್ ಅವರ ಅಭಿಮಾನಿಗಳಿಗೆ ಡಬಲ್ ಖುಷಿಯ ವಿಚಾರವಾಗಿದೆ. ಇದೇ ಖುಷಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಬರೋಬ್ಬರಿ 600 ಕ್ಕೂ ಹೆಚ್ಚು ಕರ್ನಾಟಕ ನೃತ್ಯ ಕಲಾವಿದರ ಸಂಘದ ಸದಸ್ಯರಿಗೆಲ್ಲಾ ಫುಡ್ ಕಿಟ್ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ರಾಮನಗರದ ಜನಪದ ಕಲಾವಿದರಿಗೂ ಕೂಡ ನೆರವು ನೀಡಿದ್ದರು. ಈ ವಿಚಾರವನ್ನು ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಮಾಡಿದ ಈ ಕೆಲಸದ ಬಗ್ಗೆ ನೀವೇನಂತಿರಾ ಸ್ನೇಹಿತರೆ.