Advertisements

ಗಟ್ಟಿಮೇಳ ಸೀರಿಯಲ್ ಅಮೂಲ್ಯ ನಿಜ ಜೀವನದಲ್ಲಿ ಅಪ್ಪ ಅಮ್ಮನ ಹೇಗಿರುತ್ತಾರೆ ಗೊತ್ತಾ? ನೋಡಿ..

Entertainment

ಬಜಾರಿ ಜಗಳಗಂಟಿ ರೌಡಿ ಬೇಬಿ ಅಂತೆಲ್ಲಾ ಕರೆಸಿಕೊಂಡಿರುವ ಗಟ್ಟಿಮೇಳ ಸೀರಿಯಲ್ ನ ಅಮೂಲ್ಯ ಅಲಿಯಾಸ್ ನಿಶಾ ತಮ್ಮ ವೇದಾಂತ್ ಬಾಸ್ ನನ್ನ ದಿನನಿತ್ಯ ಗೋಳು ಹೊಯ್ದುಕೊಳ್ಳುವ ಅಮೂಲ್ಯ ಸೊಂಠಿ ಶಂಕರ ಜಗಳಗಂಟ ಅಂತೆಲ್ಲಾ ಕರೆಯುತ್ತಾ ತರ್ಲೆ ಹುಡುಗಿಯಾಗಿ ಸೀರಿಯಲ್ ಪ್ರಿಯರ ಮನಸ್ಸು ಗೆದ್ದಿದ್ದಾಳೆ. ಇನ್ನು ಇವರ ಪರ್ಸನಲ್ ಲೈಫ್ ಬಗ್ಗೆ ಹಾಗೂ ಅವರ ತಂದೆ ತಾಯಿ ಯಾರು ಹೇಗಿದ್ದಾರೆ.ಅವರ ಫ್ಯಾಮಿಲಿ ಹೇಗಿದೆ ಅಂತ ತುಂಬಾ ಜನರಿಗೆ ಗೊತ್ತಿಲ್ಲ.

[widget id=”custom_html-5″]

Advertisements
Advertisements

ಹೌದು ನಿಶಾ ಸೀರಿಯಲ್ ನಲ್ಲಿ ಮಾತ್ರ ಬಾಯಿಬಡಕಿ ರೌಡಿ ಬೇಬಿ ಆದರೆ ಮನೆಯಲ್ಲಿ ತುಂಬಾ ಸೈಲೆಂಟ್ ಹುಡುಗಿ ಅವರ ಅಮ್ಮನ ಮುದ್ದಿನ ಮಗಳು. ಅಮ್ಮನಿಗೆ ಮಗಳು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ದೊಡ್ಡ ಆಸೆ ಇತ್ತಂತೆ ಆಗಾಗಿ ಮಗಳು ಏನೇ ಮಾಡಿದರೂ ಅದಕ್ಕೆ ನಾನಿದ್ದೀನಿ ಮಾಡು ಅಂತ ಪ್ರೋತ್ಸಾಹ ಮಾಡುತ್ತಿದ್ದರಂತೆ. ಈಗ ಮಗಳು ಗಟ್ಟಿಮೇಳ ಸೀರಿಯಲ್ ಮೂಲಕ ಕರ್ನಾಟಕದಾದ್ಯಂತ ಹೆಸರು ಗಳಿಸಿರುವುದನ್ನು ಕಂಡು ನನ್ನ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ ನನ್ನ ಮಗಳು ನನ್ನ ಆಸೆ ಈಡೇರಿಸಿದ್ದಾಳೆ ಅಂತಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

[widget id=”custom_html-5″]

ಅವರ ಅಮ್ಮನ ಹೆಸರು ಉಷಾ ತಂದೆ ಹೆಸರು ರವಿಕೃಷ್ಣನ್ ಹಾಗಾಗಿ ನಿಶಾ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿಶಾ ರವಿಕೃಷ್ಣನ್ ಅಂತ ತಂದೆ ಹೆಸರನ್ನು ಇಟ್ಟುಕೊಂಡಿದ್ದಾರೆ. ಇನ್ನು ತಂದೆಯೆಂದರೆ ನಿಶಾ ಅವರಿಗೆ ಅಚ್ಚುಮೆಚ್ಚು ಶೂಟಿಂಗ್ ನಿಂದ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯುತ್ತಾರಂತೆ. ನಿಶಾ ಹಾಗೂ ಅವರ ಅಮ್ಮನನ್ನು ಒಟ್ಟಿಗೆ ನೋಡಿದವರೆಲ್ಲ ಅಕ್ಕ ತಂಗಿಯಂದೆ ಭಾವಿಸುತ್ತಾರೆ. ಅಷ್ಟು ಯಂಗ್ ಆಗಿ ಇದ್ದಾರೆ ನಿಶಾ ತಾಯಿ ಉಷಾ ಅವರು.

[widget id=”custom_html-5″]