Advertisements

ದಪ್ಪಗಿರುವವರು ಗಂಡನ ಜೊತೆ ಸೇರೋದು ಕಷ್ಟ’ ಎಂದ ಅಭಿಮಾನಿಗೆ ನಟಿ ನೀತು ಶೆಟ್ಟಿ ಕೊಟ್ಟ ಖಡಕ್ ಉತ್ತರ ಹೇಗಿತ್ತು ಗೊತ್ತಾ? ಅಬ್ಬಬ್ಬಾ ನೋಡಿ!!

Kannada News

ನಮ್ಮ ಕೈ ಬೆರಳು ಹೇಗೆ ಒಂದೇ ರೀತಿ ಇರುವುದಿಲ್ಲವೋ ಅದೇ ರೀತಿ ಮನುಷ್ಯ ಕೂಡ ಒಂದೇ ರೀತಿ ಇರುವುದಿಲ್ಲ. ಪ್ರತಿಯೊಬ್ಬರ ದೈಹಿಕ ಸ್ಥಿತಿ ಬೇರೆ ಬೇರೆ ಇರುತ್ತದೆ.‌ ಕೆಲವರು ತೆಳ್ಳಗೆ ಬಳುಕುವ ಬಳ್ಳಿಯಂತಿದ್ದರೆ ಇನ್ನು ಕೆಲವರು ದಪ್ಪಗಿರುತ್ತಾರೆ.‌ ಇನ್ನು ನಮ್ಮ‌ ಸಿನಿಮಾ ಇಂಡಸ್ಟ್ರಿ ಯಲ್ಲಿ ನಾಯಕಿಯಾಗಿ ಅನೇಕ ಅಭಿಮಾನಿಗಳನ್ನು ಪಡೆದಿದ್ದ ಅನೇಕ ನಟಿಯರು ಬೇರೆ ಬೇರೆ ಕಾರಣಗಳಿಂದ ದಪ್ಪಗಾಗಿ ಸಮಾಜದಲ್ಲಿ ಅನೇಕರ ಕೆಟ್ಟ ಕಾಮೆಂಟ್ ಗಳಿಗೆ ಗುರಿಯಾಗುತ್ತಾರೆ. ಸಿನಿಮಾ ಲೋಕಕ್ಕೆ ಕಾಲಿಡುವಾಗ ಅವರು ಕೂಡ ಜೀರೋ ಫಿಗರ್ ಹೊಂದಿದ್ದರು.‌

Advertisements
Advertisements

ಆದರೆ ಥೈರಾಡ್, ಪಿಸಿಓಡಿ ಮುಂತಾದ ಸಮಸ್ಯೆಗಳಿಂದಾಗಿ ಅನೇಕ ನಟಿಯರು ದಪ್ಪಗಾಗಿ ಸಿನಿಮಾ ನಟನೆಯಿಂದ ದೂರ ಉಳಿದಿದ್ದಾರೆ. ಅಂತಹವರಲ್ಲಿ ಕನ್ನಡ ನಟಿ ನೀತು ಶೆಟ್ಟಿ ಕೂಡ ಒಬ್ಬರು. ಕನ್ನಡದ ‘ಗಾಳಿಪಟ’, ‘ಮನಸಾರೆ’ ಸೇರಿದಂತೆ ಇನ್ನೂ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನೀತು ಶೆಟ್ಟಿ, ಒಬ್ಬ ಅದ್ಭುತ ನಟಿ ಅಂದರೆ ತಪ್ಪಾಗಲ್ಲ. ಆದರೆ ತನ್ನ ದೇಹದ ತೂಕ ಹೆಚ್ಚಾದ ಕಾರಣ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ.

ಆದರೆ ಸಾಮಾಜಿಕ ಜಾಲತಾಣದ ಟ್ರೋಲ್ ಫುಂಡರು ಅವರ ದೇಹದ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದ್ದಾರೆ.‌ ಈ ಬಗ್ಗೆ ನೀತು ಶೆಟ್ಟಿ ಅಸಮಧಾನವನ್ನು ಹೊರ ಹಾಕಿದ್ದು, ಆ ರೀತಿ ಕಾಮೆಂಟ್ ಮಾಡುವವರ ವಿರುದ್ಧ ಕಿಡಿ‌ಕಾರಿದ್ದಾರೆ. ನೀತು ಶೆಟ್ಟಿಯವರ ದೇಹದ ಬಗ್ಗೆ ಮಾತ್ರವಲ್ಲದೆ, ಅವರು ತೊಡುವ ಬಟ್ಟೆ ಬಗ್ಗೆಯೂ ಕೆಲವರು ಕೆಟ್ಟದಾಗಿ ನಿಂದಿಸಿದ್ದಾರೆ. ನೀತು ಶೆಟ್ಟಿಯವರು ಕೆಲ ವರ್ಷಗಳ ಹಿಂದೆ ಖಾಸಗಿ ಚಾನೆಲ್ ಒಂದರ ಕಾರ್ಯಕ್ರಮದಲ್ಲಿ ದೇಹಕ್ಕೆ ಅಂಟಿಕೊಳ್ಳುವ ಬಟ್ಟೆ ಹಾಕಿಕೊಂಡಿದ್ದರು.

ಆ ಕಾರ್ಯಕ್ರಮ ರೀ ಟೆಲಿಕಾಸ್ಟ್ ಆದಾಗಲೆಲ್ಲಾ ನೀತು ಶೆಟ್ಟಿಯವರ ದೇಹದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರಂತೆ. ದಪ್ಪಗಿರುವವರು ಟೈಟ್ ಆಗಿರುವ ಬಟ್ಟೆ ಧರಿಸಬಾರದು, ಲೂಸ್ ಆಗಿರುವ ಬಟ್ಟೆ ಹಾಕಿಕೊಳ್ಳಬೇಕು, ದಪ್ಪಗಿರುವವರು ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಲಾಗದು, ದಪ್ಪಗಿರುವವರು ಅನಾರೋಗ್ಯದಿಂದ ಇರುತ್ತಾರೆ ಎಂದೆಲ್ಲಾ ಕೆಟ್ಟ ಮಾತಿನಿಂದ ನಿಂದಿಸಿರುವ ಬಗ್ಗೆ ಖಾರವಾಗಿ ಮಾತನಾಡಿರುವ ನೀತು ಶೆಟ್ಟಿ, ದಪ್ಪಗಿರುವವರಿಗೆ ಪ್ರಾಣಿಗಳ ಹೆಸರಿನ ಮೂಲಕ ಕರೆದು ಜೋಕ್ ಮಾಡಿದರೆ ನೀವು Fatphobic ವ್ಯಕ್ತಿ ಎಂದರ್ಥ.

ನಾವು ನೈಜತೆಯಿಂದ ಬದುಕುತ್ತಿದ್ದೇವೆ, ನಾವು ಏನೆಂದು ತೋರಿಸುತ್ತೇವೆ. ನನ್ನ ಪ್ರಕಾರ ಈ ಫೋಟೋದಲ್ಲಿ ನಾನು ಚೆನ್ನಾಗಿ ಕಾಣುತ್ತಿದ್ದೇನೆ. ಈ ಪೋಸ್ಟ್ ನೋಡಿ ನನಗೆ ಯಾರೂ ಮೋಟಿವೇಶನಲ್ ಮಾತುಗಳನ್ನು ಕಳಿಸಬೇಡಿ. ಯಾವುದೋ ಒಂದು ಉತ್ಪನ್ನದ ಫೋಟೋ ಕಳಿಸಿ ಅದರಿಂದ ಸಣ್ಣಗಾಗಿರುವ ಫೋಟೋಗಳನ್ನು ಕಳಿಸಬೇಡಿ, ನಿಮ್ಮನ್ನು ಒಳ್ಳೆಯವರು ಎಂದು ಹೇಳಿಕೊಳ್ಳುವಂತಹ ಕಾಳಜಿಯುತ ಸಲಹೆಯನ್ನೂ ನೀಡಬೇಡಿ ಎಂದು ಹೇಳಿದ್ದಾರೆ.‌ ನೀತು ಶೆಟ್ಟಿಯವರ ಕುರಿತ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.