Advertisements

ಅವನ ಹೆಂಡತಿ ಒಳ್ಳೆಯವಳಾಗಿದ್ದೆ ಇವನಿಗೆ ತೊಂದರೆಯಾಯಿತು ನೋಡಿ! ಯಪ್ಪಾ ಪ್ರಪಂಚದಲ್ಲಿ ಇಂಥ ಗಂಡಸರೂ ಇರ್ತಾರ?

Kannada News

ಸ್ನೇಹಿತರೆ, ಸಾಮಾನ್ಯವಾಗಿ ಫಾರಿನ್ ಕಂಟ್ರಿ ಎಂದರೆ ಅಲ್ಲಿ ತಮ್ಮ ಜೊತೆಗೆ ಕೆಲಸ ಮಾಡುವವರ ಮೇಲೆ ಪ್ರೀತಿ ಮೂಡಿ, ಸ್ವಲ್ಪ ದಿನಗಳ ಕಾಲ ಸುಖವಾಗಿ ದಿನಕಳೆದು ನಂತರ ಮನೆಯವರು ಒಪ್ಪದಿದ್ದರೂ ಕೂಡ ಮದುವೆ ಮಾಡಿಕೊಳ್ಳುವ ಶುದ್ಧ ಪ್ರೀತಿಯನ್ನು ಹೊಂದಿರುತ್ತಾರೆ. ಆದರೆ ನಾವಿವತ್ತು ತಿಳಿಸುವಂತಹ ಪ್ರೀತಿ ಇವೆಲ್ಲದಕ್ಕೂ ನಾಚಿಕೆಗೇಡಿ ಅನಿಸುವಂತ್ತಿದೆ. ಹೌದು ಸ್ನೇಹಿತರೆ ಮೆರಿನ್ ಹಾಗು ಮ್ಯಾಕ್ ಎಂಬ ಕೇರಳ ಮೂಲದ ಇಬ್ಬರು ಹುಡುಗ-ಹುಡುಗಿಯರು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ.

ಮೆರಿನ್ ಅಮೆರಿಕದ ಖ್ಯಾತ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುತ್ತಾಳೆ. ಹಾಗೆ ಮ್ಯಾಕ್ ಕೂಡ ಹತ್ತಿರದ ಪೆಟ್ರೋಲ್ ಸ್ಟೇಷನ್ ಒಂದರಲ್ಲಿ ಕೆಲಸಕ್ಕೆ ಇದ್ದಂತಹ ಯುವಕ. ಮ್ಯಾಕ್ಗೆ ಸಿಗುತ್ತಿದ್ದಂತಹ ವೇತನ ಮೆರೀನ್ಗಿಂತ ಬಹಳ ಕಡಿಮೆಯಿತ್ತು. ಆದರೂ ಕೂಡ ಅತಿ ಸ್ವಲ್ಪವೂ ಬೇಜಾರು ಮಾಡಿಕೊಳ್ಳದೆ ಅವನನ್ನು ಪ್ರೀತಿಯಿಂದಲೇ ಕಾಣುತ್ತಿದ್ದಳು. ಇತ್ತ ಆಸ್ಪತ್ರೆಯಲ್ಲೂ ಮೆರೀನ್ಗೆ ಉತ್ತಮವಾದ ಹೆಸರಿತ್ತು.

ಆಕೆಯ ಸ್ಕಿಲ್ ಹಾಗೂ ಬುದ್ಧಿವಂತಿಕೆಯಿಂದ ಪ್ರತಿ ತಿಂಗಳು ಸಂಬಳವನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಳು. ಎಲ್ಲ ಸಹೋದ್ಯೋಗಿಯೊಂದಿಗೆ ಬಹಳ ಆತ್ಮೀಯತೆಯಿಂದ ಇರುತ್ತಿದ್ದ ಮೆರೀನ್ ಯಾರಿಗೆ ಏನೇ ಸಹಾಯ ಬೇಕಿದ್ದರೂ ಆಕೆ ತನ್ನ ಕೈಯಲ್ಲಾದಷ್ಟು ಮಾಡುವುದಕ್ಕೆ ಮುಂದಾಗುತ್ತಿದ್ದರು.

ಮೆರೀನ್ ಮತ್ತು ಮ್ಯಾಕ್ ಪರಿಚಯವಾಗಿ ಇಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆ ಕೇಳಲು ಹೋದಾಗ ಮೆರಿನ್ ಮನೆಯವರು ಒಪ್ಪುವುದಿಲ್ಲ ಆಗ ಆಕೆ ಮ್ಯಾಕ್ನನ್ನೆ ತನ್ನ ಸರ್ವಸ್ವವೆಂದು ನಂಬಿ ಮನೆ ಬಿಟ್ಟು ಬಂದು ಮದುವೆಯಾಗುತ್ತಾಳೆ. ಆರಂಭದ ಹಂತದಲ್ಲಿ ಇವರ ವೈವಾಹಿಕ ಜೀವನ ಕೂಡ ಸುಗಮವಾಗಿತ್ತದೆ. ಇವರಿಬ್ಬರಿಗೂ ನೂರಾ ಎಂಬ ಮುದ್ದಾದ ಹೆಣ್ಣು ಮಗಳು ಕೂಡ ಜನಿಸುತ್ತೆ. ಹೀಗೆ ಸುಗಮವಾಗಿದ್ದಂತಹ ಸಂಸಾರದಲ್ಲಿ ಅಸಮಾಧಾನ ಹಾಗೂ ಅಪನಂಬಿಕೆ ಬೆಳೆಯುತ್ತ ಹೋಯಿತು.

ಇದಕ್ಕೆ ಮುಖ್ಯ ಕಾರಣ ಮೆರೀನ್ಗೆ ಇದ್ದಂತಹ ಹೆಸರು ಕೀರ್ತಿ ಮತ್ತು ಖ್ಯಾತಿ ಅಲ್ಲದೆ ಆಕೆ ತನಗಿಂತ ಹೆಚ್ಚು ಸಂಪಾದಿಸುತ್ತಾಳೆ, ಹೊರ ಜಗತ್ತು ಈಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂಬುದೆಲ್ಲ ಮ್ಯಾಕ್ನಲ್ಲಿ ಅಸಮಾಧಾನವನ್ನು ಹುಟ್ಟುಹಾಕಿತು. ಹೀಗೆ ಕೆಲಸಕ್ಕೆ ಹೋಗದೆ ಸೋಮಾರಿತನ ಬೆಳೆಸಿಕೊಂಡಿದ್ದಂತಹ ಮ್ಯಾಕ್ಗೆ ಇದು ಭಾರತ ಅಲ್ಲ ಅಮೆರಿಕ ಇಲ್ಲಿ ಕಷ್ಟಪಟ್ಟು ದುಡಿದರೆ ಬದುಕಲು ಸಾಧ್ಯವಾಗುತ್ತದೆ ಎಂದು ಬುದ್ಧಿವಾದ ಹೇಳುತ್ತಿದ್ದಳು.

ಹೀಗೆ ಹೆಂಡತಿ ದುಡ್ಡಿನಿಂದ ಕುಡಿದು ಬಂದು ಚಿ’ತ್ರಹಿಂ’ಸೆ ನೀಡುತ್ತಿದ್ದ ಮ್ಯಾಕ್ ಮೇಲೆ ಮೆರೀನ್ ಪೊಲೀಸರಿಗೆ ದೂರು ನೀಡಿದ್ದಳು. ಒಂದು ತಿಂಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿ ಬಂದಂತಹ ಮ್ಯಾಕ್ಗೆ ಆಕೆಯ ಮೇಲೆ ಇದ್ದಂತಹಾ ಕೋಪ ಇನ್ನಷ್ಟು ಹೆಚ್ಚಾಯಿತು.

ಈ ಕಾರಣಕ್ಕಾಗಿ ಇನ್ನಷ್ಟು ಹಿಂಸೆ ಕೊಡುತ್ತಿದ್ದಂತಹ ಮ್ಯಾಕ್ನಿಂದ ದೂರವಾಗಲು ಮೆರೀನ್ ನಿರ್ಧರಿಸಿದಳು. ಆದರೆ 2020ರ ಜುಲೈ 20 ನೇ ತಾರೀಖಿನಂದು ತನ್ನ ಸಿಟ್ಟಿನಿಂದ ಮನೆಗೆ ಬಂದಂತಹ ಮೆರೀನ್ ಮೇಲೆ ಮ್ಯಾಕ್ ಮೃದಂಗದಂತೆ ಬಿದ್ದು ಬರೋಬ್ಬರಿ 18 ಸಾರಿ ತನ್ನ ಬಳಿಯಿದ್ದ ಚಾಕುವಿನಿಂದ ಇರಿದು ಮನಸೋಇಚ್ಚೆ ಹ’ತ್ಯೆ ಮಾಡುತ್ತಾನೆ.

ತೀವ್ರ ರಕ್ತಸ್ರಾವಾದಿಂದ ನರಳಿ ನರಳಿ ಸ್ಥಳದಲ್ಲೇ ಆಕೆ ಪ್ರಾಣಬಿಟ್ಟಳು. ಇಂತಹ ಹೆಣ್ಣುಮಕ್ಕಳ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.