ಪ್ರಿಯ ಓದುಗರೆ ಸಿನಿಮಾ ಇಂಡಸ್ಟ್ರಿಯಲ್ಲಿ ನಟ-ನಟಿಯರು ಲಿವಿಂಗ್ ಟುಗೆದರ್ ನಲ್ಲಿ ಇರುವುದು, ನಟರೊಂದಿಗೆ ಇರುವುದು ಸಾಮಾನ್ಯವಾಗಿದೆ. ಆದರೆ ಈ ರಂಗದಲ್ಲಿ ನಂಬಿಕೆ ಗಳಿಸಿಕೊಳ್ಳುವುದು ಕಷ್ಟ. ಅದನ್ನು ಗಳಿಸಿಕೊಳ್ಳಲು ಸುಮಾರು ವರ್ಷಗಳೇ ಬೇಕಾಗುತ್ತವೆ.ಆದರೆ ಕಳೆಯಲು ಕೇವಲ ಮೂರು ನಿಮಿಷ ಸಾಕು. ಇದೀಗ ಓಂ ಪ್ರಕಾಶ್ ರಾವ್ ಕೂಡ ಮಾಡಿದ್ದು ಹೀಗೆ.
ಇದೀಗ ಓಂ ಪ್ರಕಾಶ್ ರಾವ್ ರನ್ನು ರಸಿಕ, ಹೆಣ್ಣುಬಾಕ, ಚಪಲರಾಯ ಎಂಬ ಮಾತುಗಳಿಂದ ಕರೆಯುತ್ತಿದ್ದಾರೆ. ಕಾರಣ ಅವರು ಮಾಧ್ಯಮ ಒಂದರ ಸ್ಟಿಂಗ್ ಆಪರೇಷನ್ ನಲ್ಲಿ ಹೇಳಿದ ಮಾತುಗಳು. ಹೌದು ಓದುಗರೆ… ಇವರು ಈ ವೇಳೆ ಆಡಿದ ಮಾತುಗಳು ಎಲ್ಲರನ್ನು ನಿಬ್ಬೆರಗಾಗಿಸಿವೆ. ತಮ್ಮ ಐದು ದಶಕದ ಸಿನಿಮಾ ಹಾದಿಗೆ, ಯಶಸ್ಸಿಗೆ ಇದು ಕಪ್ಪುಚುಕ್ಕಿ ಅಂತಾಗಿದೆ.

ಇವರು 1994 ರಲ್ಲಿ ‘ಪಾಳೇಗಾರ ‘ ಎಂಬ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಕನ್ನಡ ಸಿನಿಮಾ ನಿರ್ದೇಶಕರಾದರು. ಇವರ ತಂದೆ ಎಂ ಎಸ್ ರಾವ್ ಇದ್ದಾಗ ಈ ಚಿತ್ರ ತೆರೆಗೆ ಬಂತು. ನಂತರ ‘ಲಾಕಪ್ ಡೆತ್ ‘ ಎನ್ನುವ ಚಿತ್ರ ಇವರಿಗೆ ‘ಉತ್ತಮ ಡೈರೆಕ್ಟರ್’ ಎನ್ನುವ ಬಿರುದನ್ನು ನೀಡಿತು. ನಂತರ ಸಿನಿಮಾಗಳಾದ “ಏಕೆ-47, “ಹುಚ್ಚ “, ‘ಒಂದೇ ಮಾತರಂ ‘, ‘ಕಲಾಸಿಪಾಳ್ಯ ‘, ‘ಸಾಹುಕಾರ’, ‘ಹುಬ್ಬಳ್ಳಿ’, ‘ಭೀಮಾತೀರ’, ‘ಹುಚ್ಚ-2’ ಚಿತ್ರಗಳಿಗೆ ನಿರ್ದೇಶನ ಮಾಡಿ ಸುಪ್ರಸಿದ್ಧ ಡೈರೆಕ್ಟರ್ ಎಂಬ ಹೆಸರು ಗಳಿಸಿದರು. 45ಕ್ಕೂ ಹೆಚ್ಚು ಚಿತ್ರಗಳಿಗೆ ಇವರು ನಿರ್ದೇಶನ ಮಾಡಿದ್ದ ಕೀರ್ತಿಯನ್ನು ಒಂದು ಕಪ್ಪುಚುಕ್ಕೆ ನುಂಗಿಹಾಕಿದೆ.
ಹೌದು ಇವರುಎಂದು ನೇರವಾಗಿ ಖಡಕ್ಕಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು.

ಮಾಧ್ಯಮದ ಮುಂದೆ “ನಾನು ಕಾಸುಕೊಟ್ಟು ಬೇಕಾದಷ್ಟು ಜನರ ಜೊತೆ ನಾನು ಮಲಗಿದ್ದೇನೆ. ಸಿನಿಮಾ ನಟಿಯರನ್ನು ನಾನು ಬಳಸಿಕೊಂಡಿಲ್ಲ. ಯಾರಾದ್ರೂ ನಟಿ ಮುಂದೆ ಬಂದು ನನ್ನ ಮೇಲೆ ಆರೋಪ ಹೊರಿಸಲಿ ನಾನು ಎದುರಿಸಲು ಸಿದ್ದ”
ಎಂದು ನೇರವಾಗಿ ಖಡಕ್ಕಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ಇದು ಸ್ಯಾಂಡಲ್ ವುಡ್ ನಲ್ಲಿ ಭಾರಿ ಮಟ್ಟಕ್ಕೆ ಸುದ್ದಿಯಾಗಿದ್ದು ಅವರು ಗಳಿಸಿದ ಅಪಾರ ಅಭಿಮಾನಿಗಳ ಪ್ರೀತಿ ಹೆಸರನ್ನು ಒಂದು ಕಪ್ಪುಚುಕ್ಕೆ ಅಳಿಸಿ ಹಾಕಿದಂತಾಗಿದೆ. ಇದು ಎಷ್ಟರಮಟ್ಟಿಗೆ ಸರಿಯೋ?-ತಪ್ಪೋ?ಎನ್ನುವುದು ಅಭಿಮಾನಿಗಳಾದ ನೀವೇ ಉತ್ತರಿಸಬೇಕಿದೆ.