Advertisements

ಸ್ಟಾರ್ ನಟಿಯರನ್ನು ಮೀರಿಸುವ ಚೆಲುವು ಎಲ್ಲಾ ಅರ್ಹತೆ ಇದ್ದರೂ ಪವಿತ್ರಾ ಲೋಕೇಶ್ ರವರಿಗೆ ಸ್ಟಾರ್ ನಟಿ ಆಗಲಿಲ್ಲ, ಇದಕ್ಕೆ ಕಾರಣವೇನು ಗೊತ್ತಾ?

Kannada News

ಈ ಬಣ್ಣದ ಜಗತ್ತು ಅನ್ನುವುದು ಹೊರಗಿನಿಂದ ನೋಡುವವರಿಗೆ ಮಾತ್ರ ಸುಂದರ. ಅವರ ಮೇಕಪ್, ಬಟ್ಟೆ ಬರೆ, ಶೂಟಿಂಗ್ ಪ್ಲೇಸ್, ಅವರ ಕಲರ್ ಫುಲ್ ಜೀವನ ಅನ್ನುವಂತೆ ಕಾಣುವ ಕೆಲವು ಚಿತ್ರಗಳು ಇವುಗಳನ್ನು ನೋಡಿ ಅದೆಷ್ಟೋ ಮಂದಿ ಈ ಸಿನಿಮಾದವರು ನಿಜಕ್ಕೂ ಅದೃಷ್ಟವಂತರು ಎಂದು ಅಂದುಕೊಂಡಿರುತ್ತಾರೆ. ಆದರೆ ಅಲ್ಲಿ‌ ಕೆಲಸ ಮಾಡಿರುವವರಿಗಷ್ಟೇ ಅಲ್ಲಿನ ಕರ್ಮಕಾಂಡಗಳು ಗೊತ್ತಿರುವುದು. ಸಿನಿಮಾ ರಂಗದಲ್ಲಿ ಬೆಳೆಯಬೇಕು ಅಂತ ಹೋದವರಲ್ಲಿ ಆಳಿದವರಿಗಿಂತ ಅಳಿದವರೇ ಹೆಚ್ಚು.

Advertisements
Advertisements

ಇದೇ ರೀತಿ ಸಿನಿಮಾ ರಂಗದಲ್ಲಿ ಅದೆಷ್ಟೋ ಸಂಕಷ್ಟಗಳನ್ನು ಅನುಭವಿಸಿ ಇದೀಗ ಅದ್ಭುತ ಪೋಷಕ ನಟಿ ಅನ್ನಿಸಿಕೊಂಡವರು ಪವಿತ್ರಾ ಲೋಕೇಶ್. ಸಾಮಾನ್ಯವಾಗಿ ಒಬ್ಬರ ತಂದೆ ಸಿನಿಮಾ ರಂಗದಲ್ಲಿದ್ದರೆ ಮುಂದೆ ಅವರ ಮಕ್ಕಳಿಗೆ ಅವಕಾಶಗಳು ಸುಲಭವಾಗಿ ಸಿಗುತ್ತದೆ ಎಂದು ನಂಬಲಾಗಿದೆ.‌ ಆದರೆ ಇದು ಪವಿತ್ರಾ ಲೋಕೇಶ್ ಅವರ ಜೀವನದಲ್ಲಿ ಮಾತ್ರ ಸುಳ್ಳಾಗಿತ್ತು. ಪವಿತ್ರಾ ಲೋಕೇಶ್ ಅವರು ಖ್ಯಾತ ಹಾಸ್ಯ ನಟ ಅದೇ ರೀತಿ ರಂಗಭೂಮಿ ನಟರಾಗಿದ್ದ ಮೈಸೂರು ಲೋಕೇಶ್ ಅವರ ಮಗಳು. ಆದರೆ ಪವಿತ್ರಾ ಲೋಕೇಶ್ ಅವರಿಗೆ ನಟನೆಯ ಬಗ್ಗೆ ಒಲವಿರಲಿಲ್ಲ.

ತಾನೊಬ್ಬ ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕು ಅನ್ನುವ ಕನಸು ಹೊತ್ತಿದ್ದರು. ಆದರೆ ತಂದೆಯ ಮರಣಾ ನಂತರ ಅವರ ಕುಟುಂಬದ ಸಂಪೂರ್ಣ ಜವಬ್ದಾರಿ ಇವರ ಮೇಲೆ ಬಂದಿತ್ತು. ಹೀಗಾಗಿ ಸಿನಿಮಾದಲ್ಲಿಯೇ ಕೆಲಸ ಮಾಡಬೇಕು ಅಂತ ನಿರ್ಧರಿಸಿದ್ದರು. ಹೀಗೆ ನಟ ಅಂಬರೀಶ್ ಅವರ ನೆರವಿನಿಂದ ಕೇವಲ 16 ನೇ ವಯಸ್ಸಿನಲ್ಲಿ ಪವಿತ್ರಲೋಕೇಶ್ ಮಿಸ್ಟರ್ ಅಭಿಷೇಕ್ ಸಿನಿಮಾದಲ್ಲಿ ನಟನೆ ಮಾಡುತ್ತಾರೆ. ತದನಂತರ ಬಂಗಾರದ ಕಳಶ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ.ಆದರೆ ಎಲ್ಲಿಯೂ ಅವರು ಯಶಸ್ಸು ಸಿಗುವುದಿಲ್ಲ.

ಹೀಗಾಗಿ ಇನ್ನು ಸಿನಿಮಾ ಸಹವಾಸ ಬೇಡ ಎಂದು ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡಲು ಆರಂಭಿಸುತ್ತಾರೆ. ಆದರೆ ನಂತರ ಮತ್ತೆ ಇವರನ್ನು ಸಿನಿಮಾ ರಂಗ ಆಹ್ವಾನಿಸಿ ಶಿವ ರಾಜ್ ಕುಮಾರ್ ಅಭಿನಯದ ಜನುಮದ ಜೋಡಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅದೇ ರೀತಿ ರಮೇಶ್ ಅರವಿಂದ್ ಜೊತೆ ಉಲ್ಟಾ ಪಲ್ಟಾ ಸಿನಿಮಾ, ಗಿರೀಶ್ ಕಾರ್ನಾಡ್ ಅವರ ನಾಯಿ ನೆರಳು ಸಿನಿಮಾದಲ್ಲಿ ನಟಿಸಿ ಅದ್ಭುತ ನಟಿ ಅನ್ನಿಸಿಕೊಂಡರು. ಹೀಗೆ ಒಂದಾದರ ಮೇಲೆ ಒಂದರಂತೆ ಬೇರೆ ಬೇರೆ ಭಾಷೆಗಳಲ್ಲಿ ಸೇರಿ 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಇದೀಗ ಬಹು ಬೇಡಿಕೆಯ ಪೋಷಕ ನಟಿಯಾಗಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ಬುವುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.