ನಮಸ್ಕಾರ ವೀಕ್ಷಕರೇ ಪವಿತ್ರ ಲೋಕೇಶ್ ಮತ್ತು ನಟ ನರೇಶ್ ನಡುವಿನ ಮದುವೆ ಗಲಾಟೆ ಈಗ ಮತ್ತೊಂದು ಹಂತ ತಲುಪಿದೆ ಇದೀಗ ನಟಿ ಪವಿತ್ರ ಲೋಕೇಶ್ ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆಯೇ ಬಹಿರಂಗವಾಗಿ ಮಾತನಾಡಿದ್ದಾರೆ ನಟ ಸುಚೇಂದ್ರ ಪ್ರಸಾದ್ ಜೊತೆಗಿನ ಮದುವೆ ಬಗ್ಗೆಯೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಪವಿತ್ರ ಲೋಕೇಶ್ ಅವರು ದುಡ್ಡಿಗಾಗಿ ನರೇಶ್ ಜೊತೆ ಇದ್ದಾರೆ ಎಂದು ಸುಚೇಂದ್ರ ಪ್ರಸಾದ್ ಹೇಳಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು ಅದಕ್ಕೆ ಪವಿತ್ರ ಲೋಕೇಶ್ ತಿರುಗೇಟು ನೀಡಿದ್ದಾರೆ ನಾನು ಸುಚೇಂದ್ರ ಪ್ರಸಾದ್ ಜೊತೆ ಹನ್ನೊಂದು ವರ್ಷ ಒಟ್ಟಿಗೆ ಇದ್ದೆ ಈಗ ಐದು ವರ್ಷದಿಂದ ಅವರ ಜೊತೆ ಇಲ್ಲ ಸುಚೇಂದ್ರ ಪ್ರಸಾದ್ ಅವರು ನನ್ನನ್ನು ಮದುವೆ ಕೂಡ ಆಗಿಲ್ಲ ಹನ್ನೊಂದು ವರ್ಷ ನಾನು ಅವರು ಜೊತೆಗಿದ್ದಾಗ ಅವರ ಬಳಿ ಏನು ಇರಲಿಲ್ಲ ದುಡ್ಡು ಕಾರು ಮನೆ ಕೂಡ ಇರಲಿಲ್ಲ ದುಡ್ಡಿಗಾಗಿಯೇ ಇರೋದು ಆಗಿದ್ದರೆ ಕೇವಲ ಒಂದು ವರ್ಷ ಆ ಸಂಬಂಧ ಉಳಿಯುತ್ತಿತ್ತು..

ಹನ್ನೊಂದು ವರ್ಷ ಇರುತ್ತಿರಲಿಲ್ಲ ಎಂದು ಪವಿತ್ರ ಲೋಕೇಶ್ ಹೇಳಿದ್ದಾರೆ ನಾನು ಮತ್ತು ಸುಚೇಂದ್ರ ಪ್ರಸಾದ್ ಒಟ್ಟಿಗೆ ಹನ್ನೊಂದು ವರ್ಷ ಇದ್ದದ್ದು ನಿಜ ಆದರೆ ಅವರ ಜೊತೆ ನನ್ನ ಮದುವೆ ಆಗಿಲ್ಲ ಮದುವೆ ಆಗದೆ ಯಾಕೆ ಹನ್ನೊಂದು ವರ್ಷಗಳ
ಕಾಲ ಜೊತೆಗೆ ಇದ್ದೆವು ಎನ್ನುವುದನ್ನು ನಾನು ಹೇಳಲಾರೆ ಅದನ್ನು ಸುಚೇಂದ್ರ ಪ್ರಸಾದ್ ಅವರೇ ಹೇಳಬೇಕು ಮದುವೆ ಆಗದೆ ಇರುವುದಕ್ಕೆ ಅವರೇ ಕಾರಣ ಆದರೂ ಅವರನ್ನು ನಾನು ಇವತ್ತಿಗೂ ಗೌರವಿಸುತ್ತೇನೆ ನಮ್ಮ ಮದುವೆ ವಿಚಾರವನ್ನು ಇಷ್ಟೇ ಹೇಳುವುದಕ್ಕೆ ಸಾಧ್ಯ ಎಂದಿದ್ದಾರೆ ನಾನು ಮದುವೆಯಾಗಿರುವುದಕ್ಕೆ ಏನಾದರೂ ದಾಖಲೆ ಇದೆಯಾ ಅದು ನನಗೆ ಬಿಟ್ಟಿದ್ದು ಮಾಧ್ಯಮಗಳ ಮುಂದೆ ನಾನೇಕೆ ಮಾತನಾಡಬೇಕು ಎಂದು ಹೇಳಿದ್ದಾರೆ ನಾನು ಮದುವೆನೇ ಆಗಿಲ್ಲ ವಿಚ್ಛೇದನ ಯಾಕೆ ತೆಗೆದುಕೊಳ್ಳಬೇಕು ಎಂದು..

ಪ್ರಶ್ನಿಸಿದ್ದಾರೆ ಸುಚೇಂದ್ರ ಪ್ರಸಾದ್ ಒಳ್ಳೆಯ ಮನುಷ್ಯ ನಮ್ಮಿಬ್ಬರ ನಡುವೆ ಒಳ್ಳೆಯ ಫ್ರೆಂಡ್ ಶಿಪ್ ಯಾವಾಗಲೂ ಇರುತ್ತದೆಯೆಂದು ಅವರು ಹೇಳಿಕೆ ನೀಡಿದ್ದಾರೆ.. ವೈಯಕ್ತಿಕ ಕಾರಣಗಳಿಂದ ನಾನು ಸುಚೇಂದ್ರ ಪ್ರಸಾದ್ ಅವರಿಂದ ದೂರ ಇದ್ದೇನೆ ನನಗೆ ಹೇಗೆ ನಡೆದುಕೊಳ್ಳಬೇಕು ಎಂದು ನನಗೆ ಗೊತ್ತಿದೆ ಹಲವಾರು ಜನ ನನ್ನ ಬಗ್ಗೆ ಏನೇ ತಿಳಿದುಕೊಂಡರು ಅದು ಅವರಿಗೆ ಬಿಟ್ಟದ್ದು ನನ್ನ ಜೀವನ ತೀರ್ಮಾನವನ್ನು ನಾನು ತೆಗೆದುಕೊಳ್ಳುತ್ತೇನೆ ಬೇರೆ ಯಾರು ನಿರ್ಧಾರ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ