Advertisements

3 ಮದುವೆಯಾಗಿರುವ ಪವಿತ್ರ ಲೋಕೇಶ್ ಗಂಡಂದಿರು ಯಾರ್ಯಾರು? ಮಕ್ಕಳೆಷ್ಟು ಇದ್ದಾರೆ ಗೊತ್ತಾ ?

Cinema

ಕನ್ನಡ ಚಿತ್ರರಂಗ ಕಂಡಂತಹ ಖ್ಯಾತ ನಟರಲ್ಲಿ ಮೈಸೂರು ಲೋಕೇಶ್ ಅವರು ಕೂಡ ಒಬ್ಬರಾಗಿದ್ದು ಖಳನಟನ ಪಾತ್ರ ಹಾಸ್ಯ ಪಾತ್ರ ಎರಡು ರೀತಿಯ ಪಾತ್ರಗಳಲ್ಲಿಯೂ ಸಹ ನಟಿಸಿ ಕನ್ನಡ ಸಿನಿಪ್ರಿಯರ ಗಮನ ಸೆಳೆದಿದ್ದ ನಟ ಮೈಸೂರು ಲೋಕೇಶ್ ರವರು ಚಿತ್ರರಂಗಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ.ಹೌದು ಆದರೆ ಇದೀಗ ಅವರು ನಮ್ಮೊಂದಿಗಿಲ್ಲ. ಆದರೆ ಅವರ ಇಬ್ಬರು ಮಕ್ಕಳು ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಪವಿತ್ರಾ ಲೋಕೇಶ್ ಹಾಗು ಆದಿ ಲೋಕೇಶ್ ಇಬ್ಬರು ಸಹ ಮೈಸೂರು ಲೋಕೇಶ್ ಅವರ ಮಕ್ಕಳಾಗಿದ್ದಾರೆ. ಇನ್ನು ನಟಿ ಪವಿತ್ರ ಲೋಕೇಶ್ ಅವರು ಇದೀಗ ಅದ್ಭುತವಾದ ನಟನೆಯ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದು ಆದರೆ ಅವರು ಇಷ್ಟೊಂದು ಖ್ಯಾತಿ ಹಾಗೂ ಈ ಮಟ್ಟಕ್ಕೆ ಏರಲು ಪಟ್ಟ ಕಷ್ಟ ಒಂದೆರಡಲ್ಲ. ಹೌದು ಒಂದು ಕಾಲದಲ್ಲಿ ಸರಿಯಾದ ಅವಕಾಶ ಸಿಗದೆ ಇದ್ದಾಗ ಪವಿತ್ರ ಲೋಕೇಶ್ ಅವರು ಚಿತ್ರರಂಗ ಬಿಟ್ಟು ಬೇರೆ ವಿಭಾಗದಲ್ಲಿ ಕೆಲಸ ಮಾಡಿದ್ದರು.

Advertisements
Advertisements

1994 ರಲ್ಲಿ ತಂದೆ ಮೈಸೂರು ಲೋಕೇಶ್ ರವರು ಇದ್ದಕ್ಕಿದ್ದಂತೆ ಕೊನೆಯುಸಿರೆಳೆದಿದ್ದು ಆ ಸಮಯದಲ್ಲಿ ಮನೆ ನಿಭಾಯಿಸಲು ತಾಯಿಗೆ ಕಷ್ಟ ಆಗಿದೆ ಎಂದು ಮನೆಯ ಜವಾಬ್ದಾರಿಯನ್ನು ಅತೀ ಚಿಕ್ಕ ವಯಸ್ಸಿಗೆ ವಹಿಸಿಕೊಂಡರು ನಟಿ ಪವಿತ್ರಾ ಲೋಕೇಶ್ ರವರು. ಕೇವಲ 16 ನೇ ವಯ್ಯಸ್ಸಿಗೆ ನಟಿ ಪವಿತ್ರಾ ಲೋಕೇಶ್ ರವರು ಬಣ್ಣ ಹಚ್ಚಿದ್ದು ತಂದೆಗೆ ಜನಪ್ರಿಯತೆ ಇದ್ದ ಕಾರಣ ಚಿತ್ರರಂಗ ತನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ ಅವಕಾಶಗಳು ಬಹಳ ಸಿಗುತ್ತದೆ ಎಂದು ಪವಿತ್ರ ಲೋಕೇಶ್ ಭಾವಿಸಿದ್ದರು. ಆದರೆ ನಡೆದಿದ್ದೆ ಬೇರೆ. ಚಿತ್ರರಂಗದಲ್ಲಿ ಅವಕಾಶ ಪಡೆಯುವುದು ಅಂದು ಅವರಿಗೆ ಸಲುಭದ ಮಾತಾಗಿರಲಿಲ್ಲ.ಸಿನಿಮಾದಲ್ಲಿ ಅವಕಾಶಕ್ಕಾಗಿ ಅಲೆಯುತ್ತಿದ್ದಾಗ ಚಿತ್ರರಂಗದ ಸಾಕಷ್ಟು ಜನ ಪವಿತ್ರಾ ಅವರನ್ನು ಬೇರೆ ರೀತಿಯಲ್ಲಿ ನೋಡುತ್ತಿದ್ದರಂತೆ ಹಾಗೂ ಗೊತ್ತಿರುವ ವ್ಯಕ್ತಿಗಳೇ ಕೂಡ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದದ್ದು ಅವರಿಗೆ ನೋವು ಉಂಟು ಮಾಡಿತ್ತು.

ಕೊನೆಗೆ ರೆಬಲ್ ಸ್ಟಾರ್ ಅಂಬರೀಷ್ ರವರ ಸಹಾಯದಿಂದ ಅವಕಾಶ ಪಡೆದ ಪವಿತ್ರಾ ಅವರು ಆರೇಳು ಸಿನಿಮಾಗಳಲ್ಲಿ ನಟಿಸಿದ್ದು ಆದರೆ ಅವರು ನಟಿಸಿದ ಸಿನಿಮಾಗಳು ಕೂಡ ತಕ್ಕ ಮಟ್ಟಿಗೆ ಯಶಸ್ಸು ತಂದುಕೊಡಲಿಲ್ಲ. ಹೌಫು ಕೊನೆಗೆ ಅವಕಾಶಗಳು ಕಡಿಮೆಯಾಗಿ ಯಾವುದೇ ಪಾತ್ರ ಸಿಗದೆ ಮನೆಯಲ್ಲೇ ಕೂರುವ ಪರಿಸ್ಥಿತಿ ಎದುರಾಗಿ ಬಿಡುತ್ತದೆ. ಇಂತಹ ಸಮಯದಲ್ಲಿ ಹೊತ್ತಿನ ಊಟಕ್ಕೂ ಕೂಡ ಕಷ್ಟ ಪಡುತ್ತಾರೆ ನಟಿ ಪವಿತ್ರಾ ಲೋಕೇಶ್ ರವರು.ಆದರೆ ಯಾರು ಕೂಡ ಇವರಿಗೆ ಸಹಾಯ ಮಾಡಲಿಲ್ಲ ಎಂಬುದು ಬೇಸರ ವಿಚಾರವಾಗಿದ್ದು ಮನೆಯ ಜವಾಬ್ದಾರಿಯೂ ತಮ್ಮ ಮೇಲಿದ್ದ ಕಾರಣ ಚಿತ್ರರಂಗದಿಂದ ದೂರವಾದ ಪವಿತ್ರ ಲೋಕೇಶ್ ರವರು ಒಂದು ಪ್ರೈವೇಟ್ ಕಂಪನಿಯಲ್ಲಿ ಹೆಚ್.ಆರ್ ಅಸಿಸ್ಟಂಟ್ ಆಗಿ ಕೆಲಸಕ್ಕೆ ಸೇರಿಕೊಂಡು ಸಂಸಾರ ನಡೆಸುತ್ತಾರೆ.

ಒಂದು ವರ್ಷಗಳ ಕಾಲ ಸಾಮಾನ್ಯ ಹುಡುಗಿಯಂತೆ ಬಿಎಂಟಿಸಿ ಬಸ್ ನಲ್ಲಿ ಓಡಾಡಿ ಆಫೀಸ್ ನಲ್ಲಿ ದುಡಿದು ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ನಂತರ ಒಂದು ವರ್ಷದ ಬಳಿಕ ಚಿತ್ರರಂಗಕ್ಕೆ ರೀಎಂಟ್ರಿ ಕೊಟ್ಟ ಪವಿತ್ರ ಲೋಕೇಶ್ ರವರು ಯಾರ ಬಳಿಯೂ ಅವಕಾಶ ಕೇಳದೆ ತಮ್ಮ ಅದ್ಭುತವಾದ ನಟನೆ ಮೂಲಕ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲೂ ಕೂಡ ಅವಕಾಶ ಪಡೆದುಕೊಳ್ಳುತ್ತಾರೆ. ಇದೀಗ ಇವರು ಕನ್ನಡದಲ್ಲಿ ನಟಿಸುವುದು ಕಡಿಮೆಯಾಗಿದ್ದು ತೆಲುಗು ಚಿತ್ರರಂಗದಲ್ಲಿ ಇವರು ಬಹುಬೇಡಿಕೆ ಇರುವ ನಟಿಯಾಗಿದ್ದಾರೆ. ಇನ್ನು ಪವಿತ್ರಾ ಲೋಕೇಶ್ ರವರ ಮೂರು ಜನ ಗಂಡಂದಿರು ಯಾರು ಗೊತ್ತಾ? ಪವಿತ್ರಾ ಲೋಕೇಶ್ ರವರ ಮೊದಲ ಪತಿ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿದ್ದರು. ಆದರೆ ಕೆಲಚು ವಯಕ್ತಿಕ ವಿಚಾರದಿಂದಾಗಿ ಇಬ್ಬರು ಕೂಡ ದೂರವಾಗುತ್ತಾರೆ. ನಂತರ 2007ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಮತ್ತು ಪವಿತ್ರ ಲೋಕೇಶ್​ವಿವಾಹವಾಗಿದ್ದಾರೆ.

ಇನ್ನು ಇಬ್ಬರೂ ಕೂಡ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಿ 2007ರಲ್ಲಿ ಮದುವೆಯಾದ ಈ ಜೋಡಿಗೆ ಇದು ಎರಡನೆಯ ಮದುವೆ. ಅಂದರೆ ಇಬ್ಬರಿಗೂ ಕೂಡ ಇದು ಎಡನೆಯ ಮದುವೆ. ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದಾರೆ. ಇಬ್ಬರ ಮಕ್ಕಳ ಜೊತೆಗೆ ಸಖ ಸಂಸಾರ ನಡೆಸುತ್ತಿದ್ದ ಈ ಜೋಡಿಯ ದಾಂಪತ್ಯ ಈಗ ಕೆಟ್ಟಿದೆ.. ಇನ್ನು ಕೆಲವೊಂದು ಮಾಹಿತಿಗಳ ಪ್ರಕಾರ ಕೆಲ ವರ್ಷಗಳಿಂದ ಸುಚೇಂದ್ರ ಪ್ರಸಾದ್​ಹಾಗೂ ಪವಿತ್ರ ಲೋಕೇಶ್​ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ಸುಚೇಂದ್ರ ಪ್ರಸಾದ್​ಅವರ ಕೋಪವೇ ಕಾರಣ ಎನ್ನುವ ಗುಸು-ಗುಸು ಕೂಡ ಕೇಳಿ ಬರುತ್ತಿದೆ. ಹಲವು ವರ್ಷಗಳಿಂದ ಈ ಜೋಡಿ ದೂರ ದೂರ ವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈಗ ಬೆಳಕಿಗೆ ಬಂದಿದೆ. ಸದ್ಯ ಪವಿತ್ರ ಲೋಕೇಶ್ ಅವರೆ ಜೊತೆಗೆ ನಟ ನರೇಶ್ ಹೆಸರು ಕೇಳಿ ಬರುತ್ತಿದೆ.

ಈ ನರೇಶ್ ತೆಲುಗಿನ ಸೂಪರ್​ಸ್ಟಾರ್​ಕೃಷ್ಣ ಅವರ ಮಗ. ಮಹೇಶ್​ಬಾಬು ತಂದೆ ಕೃಷ್ಣ ಅವರ ಎರಡನೇ ಹೆಂಡತಿ ಮಗ ಈ ನರೇಶ್​. ಕೃಷ್ಣ ಅವರ ಎರಡನೇ ಹೆಂಡತಿ ವಿಜಯ ನಿರ್ಮಲ. ವಿಜಯ ನಿರ್ಮಲ ಮತ್ತು ಅವರ ಮೊದಲ ಪತಿ ಕೆ.ಎಸ್​ಮೂರ್ತಿ ಅವರ ಮಗ ನರೇಶ್. ಕೆ.ಎಸ್​ಮೂರ್ತಿ ಜೊತೆ ಡಿವೋರ್ಸ್ ಪಡೆದು ಕೃಷ್ಣ ಅವರನ್ನು ಮದುವೆಯಾಗಿದ್ದರು ವಿಜಯ ನಿರ್ಮಲ. ಸದ್ಯ ನರೇಶ್ ಹಾಗೂ ಪವಿತ್ರ ಲೋಕೇಶ್​ಇಬ್ಬರು ಒಟ್ಟಿಗೆ ಮಹಾಬಲೇಶ್ವರಕ್ಕೆ ತೆರಳಿದ್ದಾರೆ. ಅಲ್ಲಿನ ಸ್ವಾಮಿಗಳ ಬಳಿ ಆಶೀರ್ವಾದ ಕೂಡ ಪಡೆದುಕೊಂಡು ಬಂದಿದ್ದಾರಂತೆ. ಮಹಾಬಲೇಶ್ವರ ಭೇಟಿ ಬೆನ್ನಲ್ಲೆ ಇವರ ಮದುವೆ ಗಾಸಿಪ್ ಹಬ್ಬಿದೆ. ಸಜ್ಜೆ ಎಲ್ಲ ವಿಚಾರಗಳಿಗೂ ಪವಿತ್ರಾ ಲೋಕೇಶ್ ರವರೇ ಉತ್ತರ ನೀಡಬೇಕಿದೆ.