Advertisements

ಬಿಎಸ್ ಪದವಿ ಓದಲು ಕಷ್ಟಪಟ್ಟು ಕಳುಹಿಸಿದರು.. ಆದರೆ ವಿದ್ಯಾರ್ಥಿ ನಿಲಯದಲ್ಲಿ ಈಕೆ ಎಂತಹ ಸ್ಥಿತಿಯಲ್ಲಿ ಸಿಕ್ಕಳು ಗೊತ್ತಾ.. ಬೆಚ್ಚಿಬಿದ್ದ ಅಪ್ಪ ಅಮ್ಮ.. ಇವಳ ಜನ್ಮಕ್ಕಿಷ್ಟು..

Kannada News

ಹುಡುಗನೇ ಆಗಲಿ ಹುಡುಗಿಯೇ ಆಗಲಿ ಒಂದು ವಯಸ್ಸಿಗೆ ಬಂದಾಗ ಮನಸ್ಸು ಚಂಚಲ ಆಗೋದು ಸಹಜ.. ಬುದ್ಧಿ ಬೇಡವೆಂದರೂ ಮನಸ್ಸು ನಾನಾ ಕಡೆಗೆ ಎಳೆದೊಯ್ಯುತ್ತದೆ ನಿಜ.. ಅಂತಹ ಸಮಯದಲ್ಲಿ ಸರಿಯಾಗಿ ಮನಸ್ಸಿಗೆ ಕಡಿವಾಣ ಹಾಕಿ ಹೆತ್ತವರ ಬಗ್ಗೆ ಆಲೋಚಿಸಿ.. ಅವರ ಗೌರವದ ಬಗ್ಗೆ ಯೋಚಿಸಿ ಮುಂದಿನ ಭವಿಷ್ಯದ ಬಗ್ಗೆ ಮಾತ್ರವೇ ಗಮನ ನೀಡಿದಾಗ ನಮ್ಮ ಜೀವನ ನಿಜಕ್ಕೂ ಸಮಾಜದ ಮುಂದೆ ತಲೆ ಎತ್ತಿ ನಿಲ್ಲುವಂತಾಗುತ್ತದೆ.. ಹೆತ್ತವರ ಕಷ್ಟಕ್ಕೂ ಸಹ ಪ್ರತಿಫಲ ದೊರೆಯುತ್ತದೆ.. ಆದರೆ ಅದನ್ನು ಬಿಟ್ಟು ಇನ್ನೂ ಪ್ರಬುದ್ಧತೆ ಬಾರದ ವಯಸ್ಸಿನಲ್ಲಿ.. ಮನಸ್ಸಿನ ಆಸೆಗಳ ಹಿಂದೆ ಹೋಗಿ ಆಕರ್ಷಣೆಗಳನ್ನು ಪ್ರೀತಿ ಎಂದುಕೊಂಡು ಅದರ ಹಿಂದೆ ಹೋದರೆ ಇಂದು ಈಕೆ ಹೆತ್ತವರಿಗೆ ಸಿಕ್ಕ ಸ್ಥಿತಿಯಂತೆಯೇ ಆಗಬೇಕಾಗುತ್ತದೆ..

ಹೌದು ಹಳ್ಳಿಯಲ್ಲಿನ ಅಪ್ಪ ಅಮ್ಮ ಕಷ್ಟಪಟ್ಟು ಮಗಳನ್ನು ಪಿಯುಸಿ ಓದಿಸಿ ಮಗಳು ಬಿಎಸ್ ಸಿ ಅಗ್ರಿಕಲ್ಚರಿಸ್ಟ್ ಆಗಲಿ ಎಂದು ಪೇಟೆಗೆ ಕಳುಹಿಸಿದರು.. ಆದರೆ ಅದೇ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಈಕೆ ನಿನ್ನೆ ಹೆತ್ತವರಿಗೆ ಸಿಕ್ಕಿರುವ ಸ್ಥಿತಿ ಯಾವ ತಂದೆ ತಾಯಿಗೂ ಬಾರದಿರಲಿ.. ಹೌದು ಇಂತಹ ಮನಕಲಕುವ ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ ನಮ್ಮದೇ ರಾಜ್ಯದ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ.. ಹೌದು ಈಕೆಯ ಹೆಸರು ಪವಿತ್ರಾ.. ಈಕೆಯ ವಯಸ್ಸು ಹತ್ತೊಂಭತ್ತೋ ಇಪ್ಪತ್ತೋ ಇರಬಹುದು.. ಈಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರಬೂರು ಸರ್ಕಾರಿ ಕೃಷಿ ಮಹಾವಿದ್ಯಾಲಯದಲ್ಲಿ ಬಿಎಸ್ ಸಿ ಅಗ್ರಿಕಲ್ಚರ್ ಓದುತ್ತಿದ್ದಳು.. ಇನ್ನು ಎರೆಡು ವರ್ಷದಲ್ಲಿ ಮಗಳು ಪದವಿ ಪಡೆದು ನಮ್ಮನ್ನು ನೋಡಿಕೊಳ್ಳುತ್ತಾಳೆ.. ಅವಳು ತನ್ನ ಭವಿಷ್ಯವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳುತ್ತಾಳೆ ಎಂದು ಹೆತ್ತವರು ನಂಬಿದ್ದರು..

ಆಕೆಯನ್ನು ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ಇರಿಸಿದ್ದರು.. ಮಗಳಿಗೆ ಓದಲು ಅನುಕೂಲವಾಗಬಹುದು ಎಂದು ಕೊಂಡಿದ್ದರು.. ಆದರೆ ಪದವಿ ತರಲು ಹೋದ ಪವಿತ್ರಾ ಅಪ್ಪ ಅಮ್ಮನಿಗೆ ತಂದದ್ದೇ ಬೇರೆ.. ಹೌದು ಪವಿತ್ರಾ ತನ್ನ ಗಮನವನ್ನು ಓದಿನ ಕಡೆಯಿಂದ ಬೇರೆಯದ್ದೇ ಕಡೆಗೆ ಬಿಟ್ಟಿದ್ದಳು.. ಫೇಸ್‌ಬುಕ್‌ ಇನ್ಸ್ಟಾಗ್ರಾಂ ಬಳಕೆ ಹೆಚ್ಚಾಗಿತ್ತು.. ಇನ್ಸ್ಟಾಗ್ರಾಂ ನಲ್ಲಿ ಹುಡುಗನೊಬ್ಬನ ಪರಿಚಯವೂ ಆಯಿತು.. ಆ ಪರಿಚಯ ಮೂರೇ ತಿಂಗಳಿಗೆ ಪ್ರೀತಿಯಾಯಿತಂತೆ.. ಆ ಮೂರು ತಿಂಗಳ ಪ್ರೀತಿ ಜೀವವನ್ನೇ ಕಳೆದುಕೊಳ್ಳುವಷ್ಟು ಮಟ್ಟಕ್ಕೆ ಬಂದು ನಿಂತಿತೆಂದರೆ ನಿಜಕ್ಕೂ ಈಗಿನ ಮಕ್ಕಳ ಮನಸ್ಸು ಅದ್ಯಾವ ಮಟ್ಟಕ್ಕಿದೆ.. ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಮನಸ್ಸನ್ನು ಗಟ್ಟಿ ಮಾಡುವ ಮೌಲ್ಯ ಶಿಕ್ಷಣ ಎಷ್ಟು ಮುಖ್ಯ ಎನ್ನುವುದ ತೋರುತ್ತಿದೆ..

ಹೌದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಫೋಟೋ ನೋಡಿ ಆದ ಆಕರ್ಷಣೆಯನ್ನು ಪ್ರೀತಿ ಎಂದುಕೊಂಡ ಪವಿತ್ರಾ ಮೂರು ತಿಂಗಳುಗಳ ಕಾಲ ಹುಡುಗನ ಜೊತೆ ಪ್ರೀತಿಯನ್ನು ಮಾಡಿದಳಂತೆ.. ಆದರೀಗ ಆ ಹುಡುಗ ಕೈ ಕೊಟ್ಟ ಎನ್ನುವ ಕಾರಣಕ್ಕೆ ಹತ್ತೊಂಭತ್ತು ವರ್ಷ ತನಗಾಗಿ ಜೀವ ಸವೆಸಿದ ಹೆತ್ತವರ ಬಗ್ಗೆ ಆಲೋಚಿಸದೇ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ..ಹೌದು ವಿದ್ಯಾರ್ಥಿ ನಿಲಯದಲ್ಲಿಯೇ ಈ ಕೆಲಸ ಮಾಡಿಕೊಂಡಿದ್ದು.. ಹೋಗುವ ಮುನ್ನ ಮೊಬೈಲ್ ನಲ್ಲಿ ತನ್ನ ಪ್ರೇಮ ಪುರಾಣವನ್ನು ಹೇಳಿದ್ದು.. ಇನ್ಸ್ಟಾಗ್ರಾಂ ನಲ್ಲಿ ಹುಡುಗನ ಜೊತೆ ಪರಿಚಯವಾಗಿ ಪ್ರೀತಿಯಾಯ್ತು..

ಆದರೆ ಈಗ ಅವನು ನನ್ನನ್ನು ಬೇಡ ಅಂತಿದ್ದಾನೆ.. ಅದೇ ಕಾರಣಕ್ಕೆ ನಾನು ಜೀವ ಕಳೆದುಕೊಳ್ಳುತ್ತಿದ್ದೇನೆ ಎಂದಿದ್ದಾಳೆ.. ಪತ್ರದಲ್ಲಿಯೂ ಸಹ ಇದನ್ನೇ ಬರೆದಿಟ್ಟಿದ್ದಾಳೆ.. ಇವಳ ಜನ್ಮಕ್ಕಿಷ್ಟು.. ಹುಟ್ಟಿಸಿದ ಅಪ್ಪನಿಗಾಗಿ ಅಲ್ಲ.. ಒಂಭತ್ತು ತಿಂಗಳು ಹೊತ್ತು ಹೆತ್ತು ತನ್ನ ದೇಹವನ್ನೇ ಮಗಳಿಗಾಗಿ ನೀಡಿದ ತಾಯಿಗಾಗಿ ಅಲ್ಲ.. ಅಥವಾ ಈ ದೇಶಕ್ಕಾಗಿ ಅಲ್ಲ.. ಬದಲಿಗೆ ಮೂರು ತಿಂಗಳು ಪ್ರೀತಿ ಅಂದವನಿಗಾಗಿ ಜೀವ ಕಳೆದುಕೊಂಡಿದ್ದಾಳೆ.. ಇವಳೇನೋ ಹೋದಳು.. ಮಗಳನ್ನು ಆ ಸ್ಥಿತಿಯಲ್ಲಿ ಕಂಡ ಹೆತ್ತವರ ಸಂಕಟ ನೋಡಲಾಗದಂತಿತ್ತು.. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.. ಅವರೇನು ತಪ್ಪು ಮಾಡಿದ್ರು.. ಮಗಳನ್ನು ಹೆತ್ತಿದ್ದೇ ತಪ್ಪಾ..ಅಥವಾ ಮಗಳು ಚೆನ್ನಾಗಿ ಓದಲೆಂದು ಕಾಲೇಜಿಗೆ ಕಳುಹಿಸಿದ್ದೇ ತಪ್ಪಾ..

ನಿಜಕ್ಕೂ ಈಗಿನ‌ ಮಕ್ಕಳು ಆಲೋಚಿಸಬೇಕಾದ ವಿಚಾರ.. ದಯವಿಟ್ಟು ಇಂತಹ ಕೆಲಸ ಯಾರೂ ಮಾಡಬೇಡಿ.. ಹೆತ್ತವಳ ಬಗ್ಗೆ ಒಂದು ಕ್ಷಣ ಆಲೋಚಿಸಿ.. ನಾವಿಲ್ಲವಾದರೆ ಆ ಜೀವ ಅನುಭವಿಸುವ ಸಂಕಟ ಒಮ್ಮೆ ನೆನೆದರೂ ಇಂತಹ ನಿರ್ಧಾರವನ್ನು ಯಾರೂ ಸಹ ಮಾಡೋದಿಲ್ಲ.. ಪ್ರೀತಿ ಮಾಡೋದು ತಪ್ಪಲ್ಲ..ಆದರೆ ಮಾಡೋ ವಯಸ್ಸು ತಪ್ಪು.. ಮೊದಲು ಓದಿ ನಮ್ಮ ಕಾಲಮೇಲೆ ನಾವು ನಿಂತು.. ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರಬುದ್ಧತೆ ಬಂದ ಮೇಲೇ ಪ್ರೀತಿ ಪ್ರೇಮ ಎಲ್ಲವೂ ಸರಿ ಇರುತ್ತದೆ.. ಆದರೆ ವೀಡಿಯೋ ಫೋಟೋ ನೋಡಿ ಆಗೋದು ಆಕರ್ಷಣೆ ಮಾತ್ರ.. ಅದನ್ನು ಅರ್ಥಮಾಡಿಕೊಳ್ಳಬೇಕಷ್ಟೇ.. ಆ ತಂದೆ ತಾಯಿಗೆ ನೋವು ತಡೆಯುವ ಶಕ್ತಿ ನೀಡಲಿ.. ಅಪ್ಪ ಅಮ್ಮನಿಗೆ ನೋವ ನೀಡುವ ಮಕ್ಕಳು ಮತ್ತೆಂದೂ ಅವರ ಹೊಟ್ಟೆಯಲ್ಲಿ ಹುಟ್ಟದಿರಲಿ..