Advertisements

ತನ್ನ ಮಗನಿಗೆ ಔಷಧಿ ತರಲು ಈ ತಂದೆ ಇಂತಹ ಸಾಹಸ ಮಾಡಿದ್ದಾರೆ ಗೊತ್ತಾ..? ಕೇಳಿದರೆ ಗ್ರೇಟ್ ಅಂತೀರಾ..

Inspiration

ನಮಸ್ತೆ ಸ್ನೇಹಿತರೆ, ಚೀನಾ ರೋ’ಗದ ಪರಿಣಾಮದಿಂದ ನಮ್ಮ ರಾಜ್ಯದಲ್ಲೆಡೆ ಲಾಕ್ಡೌನ್ ಘೋಷಿಸಿದ್ದಾರೆ. ಈ ಲಾಕ್ಡೌನ್ ಪ್ರಭಾವ ಜನಸಾಮಾನ್ಯರು ಮನೆಯಲ್ಲೇ ಸ್ತಬ್ದರಾಗಿದ್ದಾರೆ. ಜನಸಾಮಾನ್ಯರಿಗೆ ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣಿಸಲು ಸಾರಿಗೆ ವ್ಯವಸ್ಥೆಯೂ ಸಹ ಲಭ್ಯವಿಲ್ಲ. ಇಂತಹ ಕಷ್ಟದ ಕಾಲದಲ್ಲೂ ಒಬ್ಬ ತಂದೆ ತನ್ನ ಮಗನಿಗೆ ಔಷಧಿ ತರಲು 280 ಕಿಲೋಮೀಟರ್ ದೂರ ಇರುವ ಬೆಂಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಬಂದಾಗ, ಯಾರೂ ಮಾಡಿದ ಸಾಹಸವನ್ನು ಈ ತಂದೆ ಮಾಡಿದ್ದಾರೆ.. ಅಸಲಿಗೆ ಈ ತಂದೆ ಮಾಡಿದ ಸಾಹಸವಾದರೂ ಏನು ತಿಳಿಯೋಣ ಬನ್ನಿ.

Advertisements
Advertisements

ಆ ತಂದೆಯ ಹೆಸರು ಆನಂದ್. ಇವರು ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರು ಮಗನಿಗಾಗಿ 280 ಕಿಲೋಮೀಟರ್, ಮೂರು ದಿನಗಳ ಕಾಲ ಸೈಕಲ್ ತುಳಿದು ಬೆಂಗಳೂರಿನಿಂದ ಔಷಧಿ ತಂದಿದ್ದಾರೆ. ಆನಂದ್ ಅವರ ಮಗ ಮಾನಸಿಕ ವಿಶೇಷ ಚೇತನನಾಗಿದ್ದು, ಕಳೆದ 10 ವರ್ಷಗಳಿಂದ ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಔಷಧಿ ಖಾಲಿಯಾದ ಕಾರಣ, ಬೆಂಗಳೂರಿಗೆ ತೆರಳಿ ಔಷಧಿ ತರಲು ವಾಹನಗಳ ಚಾಲಕರನ್ನು ವಿಚಾರಿಸಿದಾಗ ರಾಜ್ಯದಲ್ಲಿ ಚೀನಾ ರೋ’ಗದ ಲಾಕ್‍ಡೌನ್‍ನಿಂದಾಗಿ ಯಾರು ಕೂಡ ಬರಲು ಒಪ್ಪಲಿಲ್ಲಾ. ಹಾಗಾಗಿ ಸ್ವತಃ ಆನಂದ್ ಅವರು ತಮ್ಮ ಸೈಕಲನ್ನು ತುಳಿದುಕೊಂಡು ಹೋಗಿ ಮಗನಿಗೆ ಔಷಧಿ ತಂದಿದ್ದಾರೆ.

ತಮ್ಮ ಈ ಪರಿಸ್ಥಿಯನ್ನು ಮೀಡಿಯಾದೊಂದಿಗೆ ಹಂಚಿಕೊಂಡಿರುವ ಆನಂದ್ ಅವರು, ಪ್ರತಿ ಎರಡು ತಿಂಗಳಿಗೊಮ್ಮೆ ಬೆಂಗಳೂರಿಗೆ ಹಾಗೆ ಔಷಧಿ ತರುವಂತಹ ಪರಿಸ್ಥಿತಿ ಇದೆ. ನಾನು ಸ್ಥಳೀಯ ಆಸ್ಪತ್ರೆಗಳಲ್ಲಿ ಔಷಧಿಯನ್ನು ವಿಚಾರಿಸಿದಾಗ ಇಲ್ಲಿ ಸಿಗುವುದಿಲ್ಲ ಎಂದಿದ್ದಾರೆ. ಹಾಗಾಗಿ ಬೆಂಗಳೂರಿಗೆ ತೆರಳಲು ವಾಹನಗಳನ್ನು ವಿಚಾರಿಸಿದೆ ಯಾರು ಕೂಡ ಸಹಾಯ ಮಾಡಲು ಮುಂದೆ ಬರಲಿಲ್ಲ. ಹಾಗಾಗಿ ನಾನು ಸೈಕಲ್‍ನಲ್ಲಿ ಹೋಗಿ ಬಂದಿದ್ದೇನೆ. ನನ್ನ ಮಗನಿಗೆ 18 ವರ್ಷ ಆಗುವವರೆಗೆ ಈ ಔಷಧಿ ಕಡ್ಡಾಯವಾಗಿ ಕೊಡಿಸಬೇಕು, ಒಂದು ದಿನ ತಪ್ಪಿದರೆ ಮತ್ತೆ ಸಂಕಷ್ಟ ಎದುರಾಗುತ್ತದೆ ಎಂದಿದ್ದಾರೆ. ನೋಡಿದ್ರಲ್ವಾ ಸ್ನೇಹಿತರೇ ತಂದೆಯ ಜವಾಬ್ದಾರಿ ಹಾಗೂ ಪ್ರೀತಿಯ ಮುಂದೆ ಬೇರೆ ಯಾವುದು ದೊಡ್ಡದಲ್ಲ.. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.