Advertisements

ರಾತ್ರಿ ಬಡವನ ಮನೆಗೆ ಹೋದ ಶ್ರೀಮಂತ ಬಡವ ಮಾಡ್ತಿದ್ದ ಕೆಲಸ ನೋಡಿ ಬೆಚ್ಚಿ ಬಿದ್ದ!

Kannada News

ನಮಸ್ಕಾರ ವೀಕ್ಷಕರೇ ಒಂದು ದಿನ ಒಬ್ಬ ಕೋಟ್ಯಾಧಿಪತಿ ತನ್ನ ಕಾರಿನಲ್ಲಿ ಯಾವುದೋ ಕೆಲಸ ನಿಮಿತ್ತ ಹೊರಗೆ ಹೋಗುತ್ತಿದ್ದ ಆಗ ಒಂದು ಹಳ್ಳಿಯ ಬಳಿ ಈ ಶ್ರೀಮಂತ ವ್ಯಕ್ತಿಯ ಕಾರು ರಿಪೇರಿಯಾಗಿ ನಿಂತುಬಿಟ್ಟಿತು ಅಯ್ಯೋ ಈ ಹಳ್ಳಿಯಲ್ಲಿ ನನ್ನ ಕಾರು
ಕೆಟ್ಟೋಯಿತಲ್ಲ ಇವಾಗ ಏನು ಮಾಡೋದು ಯಾರಾದರೂ ನನ್ನ ಸಹಾಯಕ್ಕೆ ಬರುತ್ತಾರ ಎಂದು ಈ ಶ್ರೀಮಂತ ವ್ಯಕ್ತಿ ಸುತ್ತಮುತ್ತ ಗಮನಿಸಿದ ಆಗ ಈತನಿಗೆ ಅಲ್ಲಿ ಒಬ್ಬ ನೇಕಾರನ ಮನೆಯೊಂದು ಕಾಣಿಸಿತು ಆಗ ಶ್ರೀಮಂತ ವ್ಯಕ್ತಿ ಆ ನೇಕಾರನ ಮನೆ ಹತ್ತಿರ ಹೋಗಿ ಸರ್ ನನ್ನ ಕಾರು ರಸ್ತೆಯಲ್ಲಿ ರಿಪೇರಿಯಾಗಿ ನಿಂತುಬಿಟ್ಟಿದೆ ನಾನು ತುಂಬಾ ದೂರದಿಂದ ಬಂದಿದ್ದೀನಿ ಮುಂದೆ ತುಂಬಾ ದೂರ ಹೋಗಬೇಕಿದೆ.. ನಿಮಗೆ ಏನು ಅಭ್ಯಂತರ ಇಲ್ಲ ಅಂದರೆ ಕಾರು ರಿಪೇರಿ ಮಾಡಲೂ ಮೆಕಾನಿಕ್ ಬರುವವರೆಗೂ ಇವತ್ತು ನಿಮ್ಮ ಮನೆಯಲ್ಲೇ ಉಳಿದುಕೊಳ್ಳಬಹುದ ಎಂದು ನೇಕಾರನನ್ನು ಶ್ರೀಮಂತ ಕೇಳಿದ ಆಗ ನೇಕಾರನಿಗೆ ಈ ವ್ಯಕ್ತಿ ದೊಡ್ಡ ಶ್ರೀಮಂತ ಎಂಬ ವಿಷಯ ಗೊತ್ತಿರಲಿಲ್ಲ ಆಯ್ತು ಸರ್ ಪರವಾಗಿಲ್ಲ ನಮ್ಮ ಮನೆಯಲ್ಲೇ ಮಲಗಿಕೊಳ್ಳಿ ಎಂದು ನೇಕಾರ ಹೇಳಿದ ಕೊನೆಗೆ ನೇಕಾರನ ಮನೆಯಲ್ಲೇ ಕೋಟ್ಯಾಧೀಶ ಉಳಿದುಕೊಂಡ ಮಾರನೆಯದಿನ ಬೆಳಂಬೆಳಗ್ಗೆ ನೇ ಆ ನೇಕಾರ ತನ್ನ ಸೀರೆಯನ್ನು ನೇಯುವ ಕೆಲಸ ಶುರುಮಾಡಿದ್ದ

Advertisements
Advertisements

ಆ ನೇಕಾರ ಎಡಗೈಯಲ್ಲಿ ಒಂದು ದಾರ ಕಟ್ಟಿಕೊಂಡಿದ್ದ ಏನಿದು ದಾರ ಎಂದು ಶ್ರೀಮಂತ ವ್ಯಕ್ತಿ ಕೇಳಿದ ಆಗ ನೇಕಾರ ತೊಟ್ಟಿಲಲ್ಲಿ ಇರುವ ಮಗುವನ್ನು ತೂಗಲು ಈ ರೀತಿ ಎಡಗೈಗೆ ದಾರ ಕಟ್ಟಿ ಕೊಂಡಿದ್ದೀನಿ ಸರ್ ಮಗು ಅತ್ತಾಗ ಇಲ್ಲಿಂದಲೇ ದಾರದ ಸಹಾಯದಿಂದ ತೊಟ್ಟಿಲು ತೂಗುತ್ತೀನಿ ಎಂದು ಹೇಳಿದ ನೇಕಾರ ತನ್ನ ಬಲ ಕಾಲಿಗೆ ಒಂದು ಕೋಲನ್ನು ದಾರದಿಂದ ಕಟ್ಟಿಕೊಂಡಿದ್ದ ಏನಿದು ಇಷ್ಟೂ ಉದ್ದದ ಕೋಲನ್ನು ಕಾಲಿಗೆ ಯಾಕೆ ಕಟ್ಟಿ ಕೊಂಡಿದ್ದೀರಾ ಎಂದು ಶ್ರೀಮಂತ ಕೇಳಿದ ಸರ್ ನನ್ನ ಹೆಂಡತಿ ಮನೆಯ ಹೊರಗೆ ಆಹಾರ ಧಾನ್ಯಗಳನ್ನು ಬಿಸಿಲಿಗೆ ಒಣಗಲು ಇಟ್ಟಿದ್ದಾಳೆ ಇಲ್ಲಿ ಪಕ್ಷಿಗಳು ಜಾಸ್ತಿ ಇರೋದ್ರಿಂದ ಪಕ್ಷಿಗಳು ಆಹಾರ ಧಾನ್ಯಗಳನ್ನೆಲ್ಲಾ ಹಾರಿ ಬಂದು ತಿಂದು ಬಿಡುತ್ತವೆ ಹೀಗಾಗಿ ಈ ಕೋಲಿನ ತುದಿ ಭಾಗಕ್ಕೆ ಒಂದು ಛತ್ರಿಯನ್ನು ಕಟ್ಟಿದ್ದೀನಿ ನಾನು ಕೋಲನ್ನು ಇಲ್ಲಿ ಅಲ್ಲಾಡಿಸಿದರೆ ಆಚೆ ಛತ್ರಿ ಓಪನ್ ಆಗುತ್ತೆ ಛತ್ರಿ ಓಪನ್ ಆದ ಶಬ್ದಕ್ಕೆ ಪಕ್ಷಿಗಳು ಹೆದರಿ ಹಾರಿ ಹೋಗುತ್ತಾವೇ ಎಂದು ಹೇಳಿದ ನಂತರ ನೇಕಾರ ತನ್ನ ಸೊಂಟಕ್ಕೆ ಒಂದು ಮಣಿಗಳ ಸರವನ್ನು ಕಟ್ಟಿಕೊಂಡಿದ್ದ ಇದು ಯಾಕೆ ಈ ರೀತಿ ಮಣಿಸರ ಕಟ್ಟಿ ಕೊಂಡಿದ್ದೀರಾ ಎಂದು ಶ್ರೀಮಂತ ಕೇಳಿದ ಅಯ್ಯೋ ಸರ್ ನಮ್ಮ ಮನೆಯಲ್ಲಿ ಇಲಿ ಕಾಟ ಜಾಸ್ತಿ ಇದೆ ಹೀಗಾಗಿ ಈ ಮಣಿಸರ ಕಟ್ಟಿಕೊಂಡಿದ್ದೀನಿ ನಾನು ಕೆಲಸ ಮಾಡುವಾಗ ಈ ಮಣಿಸರ ಅಲ್ಲಾಡುತ್ತೆ ಆಗ ಮಣಿಸರದ ಜೊತೆ ಇರುವ ಗಂಟೆಯ ಶಬ್ದಕ್ಕೆ ಇಲಿಗಳು ಓಡಿ ಹೋಗುತ್ತಾವೇ

ಅದಕ್ಕಾಗಿ ಈ ಗಂಟೆ ಇರುವ ಮಣಿಸರವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದೀನಿ ಎಂದು ನೇಕಾರ ಹೇಳಿದ, ಆಮೇಲೆ ನೇಕಾರನ ಮನೆಯ ಎದುರಿಗೆ ನಾಲ್ಕೈದು ಮಕ್ಕಳು ನಿಂತು ನೇಕಾರರನ್ನೇ ಸುಮ್ಮನೆ ನೋಡುತ್ತಿದ್ದರು ಈ ಮಕ್ಕಳು ಯಾಕೆ ಈ ರೀತಿ ನಿಮ್ಮ ಮನೆಯ ಮುಂದೆ ನಿಂತಿದ್ದಾರೆ ಎಂದು ಶ್ರೀಮಂತ ವ್ಯಕ್ತಿ ಪ್ರಶ್ನೆ ಮಾಡಿದ ಸರ್ ನನ್ನ ಕೈಕಾಲುಗಳು ಮಾತ್ರ ಕೆಲಸ ಮಾಡುತ್ತಿವೆ ಅದು ನನ್ನ ಬಾಯಿ ಸುಮ್ಮನೆ ಇದೆ ತಾನೇ ಹೀಗಾಗಿ ನನಗೆ ಗೊತ್ತಿರುವ ಕೆಲವು ಹಾಡುಗಳನ್ನು ಆ ಮಕ್ಕಳಿಗೆ ಹೇಳಿಕೊಡುತ್ತಿದ್ದೀನಿ ಅವರು ಮನೆಯ ಹೊರಗೆ ನಿಂತು ನಾನು ಹೇಳಿಕೊಡುತ್ತಿರುವ ಹಾಡುಗಳನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ನೇಕಾರ ಹೇಳಿದ ಹೌದಾ ಹಾಗಾದರೆ ಅವರು ಯಾಕೆ ಆಚೆ ನಿಂತು ನಿಮ್ಮ ಹಾಡು ಕಲಿತಿದ್ದಾರೆ ಮನೆಯ ಒಳಗೇನೇ ಬಂದು ಕೂತು ಹಾಡು ಕಲಿ ಬಹುದಲ್ವ ಎಂದು ಶ್ರೀಮಂತ ವ್ಯಕ್ತಿ ಮರುಪ್ರಶ್ನೆ ಮಾಡಿದ ಅವರ ಕಿವಿ ತಾನೇ ಸರ್ ನನ್ನ ಹಾಡು ಕೇಳುತ್ತಿದೆ ಆ ಮಕ್ಕಳ ಕಾಲುಗಳು ಸುಮ್ಮನಿವೆ ಹೀಗಾಗಿ ನಾನು ಮಡಿಕೆ ಮಾಡಲು ಮಣ್ಣು ಮೃದು ಮಾಡಲು ತಮ್ಮ ಕಾಲುಗಳಿಂದ ಆ ಮಣ್ಣನ್ನು ತುಳಿಯುವಂತೆ ಮಕ್ಕಳಿಗೆ ಹೇಳಿದ್ದೀನಿ ಹೀಗಾಗಿ ಆ ಮಕ್ಕಳು ಹಾಡು ಕಲಿಯುತ್ತ ಮನೆ ಹೊರಗಿನ ಮಣ್ಣನ್ನು ಮೆತ್ತಗೆ ಮಾಡುತ್ತಿದ್ದಾರೆ.. ಅದಕ್ಕೆ ಅವರು ಮನೆಯ ಒಳಗೆ ಬರೆದೆ ಆಚೇನೆ ಕೂತು ಹಾಡು ಕಲಿಯುತ್ತಿದ್ದಾರೆ ಎಂದು ನೇಕಾರ ಹೇಳಿದ ಅರೆರೆರೆ ಒಂದೇ ಸಮಯದಲ್ಲಿ ಒಬ್ಬ ಮನುಷ್ಯ ಒಟ್ಟಿಗೆ ಇಷ್ಟೊಂದು ಕೆಲಸಗಳನ್ನು ಮಾಡಬಹುದ ಎಂದು ಶ್ರೀಮಂತ ವ್ಯಕ್ತಿ ಶಾಕ್ ಆಗಿ ಹೋದ ಒಂದೇ ಸಮಯದಲ್ಲಿ ಇಷ್ಟೆಲ್ಲ ಕೆಲಸಗಳನ್ನು ಮಾಡುತ್ತೀರಲ್ಲ

ಎಂದು ನೇಕಾರನನ್ನು ಶ್ರೀಮಂತ ಕೇಳಿದ ಇದು ಇಷ್ಟೆ ಅಲ್ಲಾ ಸರ್ ನನ್ನ ಹೆಂಡತಿ ಒಬ್ಬಳು ಗ್ರೀಕ್ ಭಾಷೆ ಹೇಳಿಕೊಡುವ ಒಬ್ಬಳು ಪ್ರತಿದಿನ ಟೀಚರ್ ಸ್ಲೇಟ್ ನಲ್ಲಿ ಹತ್ತು ಗ್ರೀಕ್ ಭಾಷೆಯ ಶಬ್ದಗಳನ್ನು ಬರೆದಿಟ್ಟು ಹೋಗುತ್ತಾಳೆ ನಾನು ಆ ಸ್ಲೇಟ್ ನೋಡಿಕೊಂಡು ಗ್ರೀಕ್ ಭಾಷೆ ಕೂಡ ಕಲಿತಿದ್ದೇನೆ ಎಂದು ನೇಕಾರ ಹೇಳಿದ ಒಬ್ಬ ಮನುಷ್ಯ ಮನಸ್ಸು ಮಾಡಿದರೆ ಒಂದೇ ಟೈಮ್ ನಲ್ಲಿ ಸೀರೆ ನೇಯುವುದು ಪಕ್ಷಿ ಓಡಿಸುವುದು ಇಲಿ ಓಡಿಸುವುದು ಮಕ್ಕಳಿಗೆ ಹಾಡು ಕಲಿಸುವುದು ತೊಟ್ಟಿಲು ತೂಗುವುದು ಗ್ರೀಕ್ ಭಾಷೆ ಕಲಿಯೋದು ಇಷ್ಟೆಲ್ಲಾ ಕೆಲಸಗಳನ್ನು ಒಂದೇ ಸಮಯದಲ್ಲಿ ಮಾಡಬಹುದು ಎಂಬುದಕ್ಕೆ ಈ ನೇಕಾರನೇ ಸ್ವಷ್ಟವಾದ ಉದಾಹರಣೆ.. ನಾವುಗಳು ನಮ್ಮ ಕೈಯಲ್ಲಿ ಏನು ಮಾಡಕ್ಕಾಗಲ್ಲ ಎಂದು ಸೋಂಬೇರಿ ಗಳಾಗಿ ಕೂರುವ ಬದಲು ನಮ್ಮ ಕೈಲಾದಷ್ಟು ಕೆಲಸಗಳನ್ನು ಮಾಡಿ ಜೀವನ ಮಾಡೋಣ ಸ್ನೇಹಿತರೆ ನೀವುಗಳು ಅಷ್ಟೇನೆ ಸಮಯವೆಂಬುದು ತುಂಬಾ ಪ್ರಮುಖ ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಕೆಲಸ ಮಾಡದೆ ಸುಮ್ಮನೆ ಕೂತು ಅತ್ಯಮೂಲ್ಯವಾದ ನಿಮ್ಮ ಸಮಯವನ್ನು ಹಾಳು ಮಾಡಬೇಡಿ ಎಂಬುದೇ ಈ ಕಥೆಯ ಸಾರಾಂಶ ಒಂದೇ ಟೈಮ್ ನಲ್ಲಿ ಇಷ್ಟೆಲ್ಲಾ ಕೆಲಸ ಮಾಡುತ್ತಿರುವ ಈ ನೇಕಾರನ ಬುದ್ಧಿ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..