ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಸಿನಿಮಾ ನಟರಿಗೆ ಎಷ್ಟು ಬೇಡಿಕೆ ಇದೆಯೋ, ಅಷ್ಟೇ ಬೇಡಿಕೆ ಧಾರವಾಹಿ ನಟರಿಗೂ ಸಹ ಇದೆ. ಧಾರವಾಹಿ ಕರ್ನಾಟಕದಲ್ಲಿ ಒಳ್ಳೆ ರೆಸ್ಪಾನ್ಸ್ ಪಡೆಯುತ್ತಿದೆ, ಯಾಕೆಂದರೆ ಈಗ ಬರುತ್ತಿರುವ ಧಾರವಾಹಿಗಳು ಫ್ಯಾಮಿಲಿ ಲೇಡೀಸ್ ಜೊತೆಗೆ ಯುವಕ-ಯುವತಿಯರನ್ನು ಸಹ ಸೆಳೆಯುತ್ತಿವೆ. ಅದರಿಂದಾಗಿಯೇ ಕರ್ನಾಟಕದಲ್ಲಿ ವೀಕ್ಷಕರು ಇತ್ತೀಚೆಗೆ ಹೆಚ್ಚಾಗಿ ಧಾರವಾಹಿಗಳನ್ನೂ ವೀಕ್ಷಿಸುತ್ತಿದ್ದಾರೆ. ಧಾರವಾಹಿಗಳಲ್ಲಿ ನಟಿಸುವ ನಟರನ್ನು ಅವರ ಹೆಸರಿಗಿಂತಲೂ ಹೆಚ್ಚಾಗಿ ಅವರ ಪಾತ್ರದ ಹೆಸರಿನಲ್ಲೇ ಕರೆಯೋದನ್ನ ರೂಢಿ ಮಾಡಿಕೊಂಡಿದ್ದಾರೆ ನಮ್ಮ ಜನ. ಅದೇ ರೀತಿ ಕರೆಯುವ ಒಬ್ಬ ಖಳನಟಿಯ ಬಗ್ಗೆ ತಿಳಿಯೋಣ ಬನ್ನಿ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಯಶಸ್ವಿ ಧಾರವಾಹಿ ಪುಟ್ಟ ಗೌರಿ ಮದುವೆ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಬರೋಬ್ಬರಿ 2 ವರ್ಷಗಳ ಕಾಲ ಪ್ರಸಾರವಾಗಿದ್ದ ಈ ಧಾರವಾಹಿ ಕನ್ನಡದ ಕಿರುತೆರೆಯ ಇತಿಹಾಸದಲ್ಲಿ ಹೈಯೆಸ್ಟ್ ಟಿಆರ್.ಪಿ ತಂದು ಕೊಟ್ಟು ದಾಖಲೆ ಸೃಷ್ಟಿಸಿದೆ. ಈ ಧಾರವಾಹಿಯಲ್ಲಿ ಕೇವಲ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರಂಜಿನಿ ರಾಘವನ್ ಹಾಗೂ ರಕ್ಷಿತ್ ಗೌಡ ಮಾತ್ರ ಫೇಮಸ್ ಆಗಿಲ್ಲ, ಇವರ ಜೊತೆಗೆ ಈ ಧಾರವಾಹಿಯಲ್ಲಿ ವಿಲನ್ ರೋಲ್ ನ್ನು ನಿರ್ವಹಿಸಿದ್ದ ಸಾಗರಿ (ಸಿಂಧು) ಕೂಡ ಫೇಮಸ್ ಆಗಿದ್ದಾರೆ. ಎಲ್ಲೇ ಹೋದರೂ ಜನರು ಇವರನ್ನು ಸಾಗರಿ ಅಂತಾನೆ ಕರೆಯುತ್ತಾರೆ. ಅಷ್ಟೊಂದು ಪರಿಣಾಮವಾಗಿತ್ತು ಸಿಂಧು ನಟಿಸಿದ ಸಾಗರಿ ಎಂಬ ಪಾತ್ರ. ಈಗ ಪುಟ್ಟಗೌರಿ ಮದುವೆ ಧಾರವಾಹಿ ಮುಗಿದು ವರ್ಷಗಳೇ ಕಳೆದಿದೆ, ಆದರೆ ಜನರು ಸಿಂಧು ರವರನ್ನು ಇಂದಿಗೂ ಸಾಗರಿ ಅಂತಾನೆ ಗುರುತಿಸೋದು. ವಿಲನ್ ಪಾತ್ರ ಕೂಡ ಇಷರ ಮಟ್ಟಿಗೆ ಮನ ಮುಟ್ಟಿದೆ ಅಂದರೆ ಮೆಚ್ಚಲೇಬೇಕು.

ಸಿಂಧು ಅವರು ಧಾರವಾಹಿಯಲ್ಲಿ ನೋಡೋಕೆ ತುಂಬಾ ಯಂಗ್ ಆಗಿ ಹದಿಹರೆಯದ ಹುಡುಗಿಯಂತೆ ಕಾಣುತ್ತಿದ್ದರು. ಆದರೆ ಅವರಿಗೆ ಮದುವೆಯಾಗಿದೆ ಎಂಬ ವಿಷಯ ಬಹಳ ಜನರಿಗೆ ತಿಳಿದಿಲ್ಲ. ಕಲ್ಯಾಣ್ ಎಂಬುವವರ ಜೊತೆ ಮದುವೆಯಾಗಿರುವ ಸಿಂಧು ಈಗಾಗಲೇ 7 ವರ್ಷದ ಮಗಳಿಗೆ ತಾಯಿಯಾಗಿದ್ದಾರೆ. ಧಾರವಾಹಿಗಳಲ್ಲಿ ಅಷ್ಟೊಂದು ಖಡಕ್ ರೋಲ್ ನಲ್ಲಿ ಕಾಣಿಸಿಕೊಳ್ಳುವ ಸಿಂಧು ನಿಜಜೀವನದಲ್ಲಿ ಫುಲ್ ಸೈಲೆಂಟ್ ಅಂತೆ ಗೊತ್ತಾ. ಪುಟ್ಟ ಗೌರಿ ಧಾರವಾಹಿ ಮುಗಿದ ಮೇಲೆ ಇವರು ಏನು ಮಾಡುತ್ತಿದ್ದರು ಗೊತ್ತಾ.? ತಿಳಿಯೋಣ ಬನ್ನಿ..

ಹಲವಾರು ಮಂದಿಗೆ ತಿಳಿದಿರುವ ಹಾಗೆ ಸಿಂಧು ಅವರು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಅದೇ ರೀತಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಣಿ ಧಾರವಾಹಿಯಲ್ಲಿಯೂ ಸಹ ವಿಲನ್ ಆಗಿ ನಟಿಸುತ್ತಿದ್ದಾರೆ. ಆದರೆ ಸಿಂಧು ರವರ ಪ್ರಕಾರ ಇಂದಿಗೂ ಜನರು ಸಾಗರಿ ಪಾತ್ರದ ಮತ್ತಿನಿಂದ ನಿಂದ ಇನ್ನೂ ಹೊರಬಂದಿಲ್ಲ. ಪುಟ್ಟ ಗೌರಿ ಮದುವೆಯ ಈ ಪಾತ್ರ ನನ್ನ ಲೈಫ್ ನಲ್ಲಿ ದೊಡ್ಡ ತಿರುವು ನೀಡಿದೆ ಎಂದು ಹೇಳಿಕೊಂಡಿದ್ದಾರೆ ಸಿಂಧು. ಸಿಂಧೂ ರವರ ಸಾಗರಿ ಪಾತ್ರ ಹೇಗಿತ್ತು ಕಾಮೆಂಟ್ ಮಾಡಿ ತಿಳಿಸಿ…