Advertisements

ತಾಯಿಗಾಗಿ ಪ್ರಭುದೇವ ಅವರು ಕಟ್ಟಿಸಿದ ದುಬಾರಿ ಮನೆ ಹೇಗಿದೆ ಗೊತ್ತಾ.? ಐಷಾರಾಮಿ ಮನೆ..! ಮೊದಲ ಬಾರಿಗೆ ನೋಡಿ..

Cinema Entertainment

ಕನ್ನಡ ಚಿತ್ರರಂಗದ ಹೆಸರಾಂತ ನೃತ್ಯ ನಿರ್ದೇಶಕರು ಮೂಗುರು ಸಂದರ್ ಮಾಸ್ಟರ್. ದಕ್ಷಿಣ ಭಾರತ ಚಿತ್ರರಂಗದ ಪ್ರಸಿದ್ಧ ನೃತ್ಯ ನಿರ್ದೇಶಕರಲ್ಲಿ ಒಬ್ಬರು ಇವರು. ಇವರ ಪತ್ನಿ ಮಹಾದೇವಮ್ಮ ಹಾಗು ಇವರ ಮೊದಲ ಮಗ ಪ್ರಭುದೇವ. ಪ್ರಭುದೇವ ಅವರು ತಮ್ಮ ನೃತ್ಯ ಶೈಲಿಯಿಂದ ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದಿದ್ದಾರೆ. ಮೂಲತಃ ಮೈಸೂರಿನವರಾದರು ಪ್ರಭುದೇವ ಅವರು ಖ್ಯಾತಿ ಪಡೆದದ್ದು ತಮಿಳು ಚಿತ್ರರಂಗದಲ್ಲಿ, ಆದರೆ ಹುಟ್ಟೂರನ್ನು ಮರೆಯದ ಇವರು ತಾಯಿಗಾಗಿ ಮೈಸೂರಿನಲ್ಲಿ ಕಟ್ಟಿಸಿರುವ ಮನೆ ಹೇಗಿದೆ ಗೊತ್ತಾ ? ತಿಳಿಯಲು ಮುಂದೆ ಓದಿ..

Advertisements
Advertisements

ಇವರ ತಂದೆ ತಾಯಿ ಕೂಡ ಇಂದಿಗೂ ಮೈಸೂರಿನಲ್ಲೇ ನೆಲೆಸಿದ್ದಾರೆ. ತಾಯಿಯ ಕನಸಿನ ಮನೆ ಬಗ್ಗೆ ಅರಿತ ನಟ ಪ್ರಭುದೇವ, ತಾಯಿಗಾಗಿ ಮೈಸೂರಿನಲ್ಲಿ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದಾರೆ. ಎಷ್ಟೇ ಕೆಲಸ ಇದ್ದರೂ, ಆಗಾಗ ಬಿಡುವು ಮಾಡಿಕೊಂಡು ಮೈಸೂರಿಗೆ ಬಂದು ತಂದೆ ತಾಯಿ ಜೊತೆ ಕಾಲ ಕಳೆದು ಹೋಗುತ್ತಾರೆ ನಟ ಪ್ರಭುದೇವ. ತಾಯಿಗಾಗಿ ಪ್ರಭುದೇವ ಅವರು ಕಟ್ಟಿಸಿರುವ ಮನೆಯಲ್ಲಿ ಬಹಳ ವಿಶಾಲವಾದ ಅಡುಗೆ ಮನೆ, ಬೆಡ್ ರೂಮ್ ಮತ್ತು ಅವರು ಬಂದಾಗ ಉಳಿದುಕೊಳ್ಳಲು ಮತ್ತೊಂದು ರೂಮ್ ಹೀಗೆ ತಾಯಿಯ ಆಲೋಚನೆಯಂತೆ ಮನೆ ಕಟ್ಟೆಸಿದ್ದಾರೆ. ತಾಯಿಯ ಆಸೆ ಅಭಿರುಚಿಗೆ ತಕ್ಕಂತೆ ಮನೆ ಕಟ್ಟಿಸಿಕೊಟ್ಟಿದ್ದಾರೆ ನಟ ಪ್ರಭುದೇವ.

ಮಗ ತಮಗಾಗಿ ಕಟ್ಟಿಸಿದ್ದ ಮನೆಯೊಳಗೆ ಪ್ರವೇಶಿಸುವಾಗ ಆ ತಾಯಿ ಮುಖದಲ್ಲಿ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ದೊಡ್ಡ ಮನೆ ಎನ್ನುವುದಕ್ಕಿಂತ ಮಗ ನನಗಾಗಿ ಕಟ್ಟಿಸಿರುವ ಮನೆ ಎನ್ನುವುದು ಬಹಳ ದೊಡ್ಡ ಸಂತೋಷ. ಬೇರೆ ಬೇರೆ ಊರುಗಳಲ್ಲಿ ನೆಲೆಸಿ, ಅಲ್ಲಿನ ಭಾಷೆ ಬಂದರೂ ಕೂಡ, ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ಪ್ರಭುದೇವ ಅವರ ತಾಯಿ ಕನ್ನಡದಲ್ಲೇ ಮಾತನಾಡುತ್ತಾರೆ. ಪ್ರಭುದೇವ ಅವರು ತಾಯಿ ಮೇಲೆ ಇಟ್ಟಿರುವ ಪ್ರೀತಿ ಮೆಚ್ಚುವಂಥದ್ದು. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.