Advertisements

ಈ ಹುಡಗನಿಗೆ ಕೈ ಕಾಲು ಬಿದ್ದೋಗಿದೆ! ಆದರೂ ಹಠ ಹಿಡಿದು ಈ ಹುಡುಗಿ ಮಾಡಿದ್ದೇನು ಗೊತ್ತಾ?

Kannada News

ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿ ಗಂಟೆಗಳೆಲ್ಲೆ ಅರಳಿ, ವಾರಗಳಲ್ಲಿಯೇ ಬಾಡಿ ಹೋಗುವ ಇಂದಿನ ಪ್ರೀತಿ ಮಧ್ಯ ನಿಸ್ವಾರ್ಥ ಪ್ರೀತಿ ಸಿಗುವುದು ಅಪರೂಪವಾದರೂ ಸತ್ಯ ಎಂಬಂತ ಘಟನೆಗಳು ನಮ್ಮನಡುವೆ ಜರುಗುತ್ತಲೆ ಇರುತ್ತವೆ. ಪ್ರೀತಿ ಮಾಡುತ್ತಿರುವಾಗಲೇ ಒಬ್ಬರಿಗೊಬ್ಬರು ಮೋಸ ಮಾಡುತ್ತಾ ಮತ್ಯಾತದೊ ಪ್ರೀತಿ ಬಯಸಿ ಸಂಬಂಧಗಳಿಗೆ ಗುಡ್ ಬಾಯ್ ಹೇಳುವ ಕಾಲದಲ್ಲಿ ಪ್ಯಾರಾಲೆಸಸ್ ನಿಂದಾಗಿ ಎರೆಡು ಕಾಲುಗಳ ಸ್ವಾಸ್ಥ್ಯ ಕಳೆದುಕೊಂಡ ವಿಷಯ ತಿಳಿದರು ಅವರನ್ನೆ ಮೆಚ್ಚಿ ಮದುವೆಯಾದ ಹುಡುಗಿ… ಆಕೆ ಯಾರು? ಏನಿದು ಸ್ಟೋರಿ ಅಂತಿರಾ ಹಾಗಿದ್ದರೆ ಈ ಕಥೆನಾ ಕೊನೆವರೆಗೂ ಓದಿ..

Advertisements
Advertisements

ಪ್ರೀತಿ ಎಂದರೆ ಕೇಲವ ಬಾಹ್ಯ ಸೌಂದರ್ಯ ‌ನೋಡಿ ಹುಟ್ಟುವಂತದಲ್ಲ… ಅದು ಮನಸ್ಸುಗಳ ಸಮ್ಮಿಲ್ಲ‌.ಇಲ್ಲಿ ದೈಹಿಕ‌ ರೂಪಕ್ಕೆ ಯಾವುದೆ ಜಾಗವಿರಲ್ಲ. ಜೀವನದಲ್ಲಿ ಯಾವುದೇ ಕಷ್ಟ ಎದುರಾದರೂ ಕೈ ಬೀಡದೆ ಬಾಳು ಸಾಗಿಸುವವರೆ ನಿಜವಾದ ಪ್ರೇಮಿಗಳು…ಆದರೆ ಈಗಿನ ಈ ಕಾಲದಲ್ಲಿ ಪ್ರೀತಿ‌ ಸೌಂದರ್ಯ, ಸುಖ ಸಂಪತ್ತಿಗಾಗಿ ಮಾರುಹೋಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇಂತಹ ಸ್ವಾರ್ಥ ಸಂಬಂಧಗಳ ನಡುವೆ ಕೇರಳದ ಜೋಡಿಯೊಂದು ಪ್ರೀತಿಗೆ ನಂಬಿಕೆಯ ರೂಪ ಕೊಟ್ಟಿದೆ. ಪ್ರೀತಿ‌ ಎಂದರೆ ಸೆಲ್ಪಿ, ಸ್ಟೆಟಸ್, ತಿರುಗಾಟವಲ್ಲದೆ ಪ್ರತಿ ಹೆಜ್ಜೆಯಲ್ಲಿಯೂ ಒಬ್ಬರಿಗೊಬ್ಬರು ಸಾಥ್ ನೀಡುವ ಶಪತವಾಗಿದೆ ಎಂಬುವುದಕ್ಕೆ ಈ ಜೋಡಿಯೆ ಉದಾಹರಣೆ..

ಹೌದು ಕಾಲೇಜು ಕರಿಯರ್ ಎಂದು ಯಾವಾಗಲೂ ಬ್ಯುಜಿ‌ ಇರುವ ಪ್ರಣವ್ ಎಂಬಾತ ಹುಡುಗ ದುರಾದೃಷ್ಟವಶಾತ್ ವಿಧಿಯ ಕೈಗೊಂಬೆಯಾಗಿ ಬಿಡ್ತಾನೆ… ಅದೊಂದು ದಿನ ಕಾಲೇಜಿಗೆ ಕಾರ್ ನಲ್ಲಿ ಹೋಗುತ್ತಿರುವಾಗ ಭೀಕರ ಅಪಘಾತವಾಗಿ ಪಾರ್ಶ್ವವಾಯುವಿಂದಾಗ ಆತನ ಎರೆಡು ಕಾಲುಗಳು ಅಸ್ತಿತ್ವ ಕಳೆದಕೊಂಡು… ವ್ಹಿಲ್ ಚೇರ್ ಆತನ ಬದುಕಾಗಿ ಬಿಡುತ್ತದೆ.

ಪ್ರತಿಯೊಂದು ಕೆಲಸದಲ್ಲಿ ಬಹಳ ಆಸಕ್ತಿ ತೋರಿಸುತ್ತಿದ್ದಂತಹ ಯುವಕನ ಬಾಳಲ್ಲಿ ಇದೊಂದು ಘಟನೆ ಎಲ್ಲವನ್ನು ಬದಲಿಸಿಬಿಡುತ್ತದೆ. ಆದರೂ ಛಲದಿಂದ ಆತ್ಮಸ್ಥೈರ್ಯವನ್ನು ತುಂಬಿಕೊಂಡು ತನ್ನ ಜೀವನದ ಕುರಿತು ಫೇಸ್ಬುಕ್ನ ಮೂಲಕ ಮಾಹಿತಿಯನ್ನು ತಿಳಿಸುತ್ತಾ ಇತರರಿಗೂ ಜೀವನದಲ್ಲಿ ಬಂದಿದ್ದೆಲ್ಲವನ್ನು ಸಂತೋಷದಿಂದ ಸ್ವೀಕರಿಸಬೇಕು ಎಂಬ ಸಂದೇಶವನ್ನು ಸಾರುತ್ತಾನೆ. ಎಲ್ಲರ ಬದುಕಿಗೂ ಪ್ರೇರಣೆ ನೀಡುತ್ತಾನೆ ಪ್ರಣವ್.

ಅವನು ನೀಡುವ ಪ್ರೇರಣೆಯೆ ಅವನ ಬಾಳಲ್ಲಿ ಬೆಳಕಾಗುತ್ತದೆ. ಫೆಸ್ ಬುಕ್ ನಲ್ಲಿ ಈತನ ಫೋಟೋಗಳು ಹಾಗೂ ವಿಡಿಯೋಗಳನ್ನು ಸಹನಾ ಎಂಬಾಕೆ ನೋಡಿ, ಅವರ ನಂಬರ್ ಪಡೆದುಕೊಂಡು ಪ್ರಣವ್ ಕುರಿತು ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ.ಅನಂತರ ಅವನ‌‌ ಗುಣಗಳಿಗೆ ಮೆಚ್ಚಿ ಮದುವೆಯಾದರೆ ನಿಮ್ಮನೆ ಎಂಬ ತೀರ್ಮಾನಕ್ಕೆ ಬರುತ್ತಾಳೆ. ಸಹನಾಳ ಈ ನಿರ್ಧಾರಕ್ಕೆ‌ ಒಪ್ಪದ ಪ್ರಣವ್ ಅನೇಕ ಬಾರಿ ಬುದ್ಧಿವಾದ ಹೇಳಿರುತ್ತಾನೆ. ನನ್ನನ್ನು ಕಟ್ಟಿಕೊಂಡು ನೀನು ಅಂದುಕೊಂಡಂತೆ ಬದುಕು ಸಾಧ್ಯವಾಗುವುದಿಲ್ಲ‌ ಎಂದು ಹೇಳುತ್ತಾನೆ.

ಪ್ರಣಯ್ ಮನಸ್ಸು ಒಪ್ಪಿಸುವುದರಲ್ಲಿ ಕೊನೆಗು ಯಶಸ್ವಿಯಾದ ಸಹನಾ ಅವನೊಂದಿಗೆ ಸಪ್ತಪದಿ ತುಳಿಯಲು ಸಿದ್ಧಳಾಗುತ್ತಾಳೆ.
ಹೌದು ಸ್ನೇಹಿತರೆ ಕಳೆದ ವರ್ಷ ಇವರಿಬ್ಬರ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನೆರವೇರಿದ್ದು, ಈ ಮುದ್ದಾದ ಜೋಡಿಗಳು ಯೂಟ್ಯೂಬ್ ಹಾಗೂ ಫೇಸ್ಬುಕ್ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಜರ್ನಿಯನ್ನು ಜನರೊಂದಿಗೆ ಮಾಡಿಕೊಳ್ಳುವ ಮೂಲಕ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಮತ್ತು ಅಭಿ‌ಮಾನಿಗಳಿಂದ ಹಾರೈಕೆಯನ್ನು ಪಡೆದಿದ್ದಾರೆ.ಪ್ರೀತಿ ಕುರುಡು, ಅದು ಮನಸ್ಸುಗಳ ಮಿಲನ ಅದು ಪರಸ್ಪರ ಭಾವನೆಗಳ‌ ಕೊಂಡಿ ಎಂಬುವುದಕ್ಕೆ ಈ‌ ಜೋಡಿಯೆ‌ ಸಾಕ್ಷಿ..

ಸ್ನೇಹಿತರೆ ಈ ವೀಡಿಯೋ ನೋಡಿ ಯುಟ್ಯೂಬ್ ಚಾನಲ್ ಅನ್ನು ದಯವಿಟ್ಟು Subscribe ಮಾಡಿ..