Advertisements

ನಿನ್ನ ಬಿಟ್ಟು ನಾನು ಬದುಕಲಾರೆ ಎಂದು ಪ್ರೀತಿಸುವ ಯುವತಿಯರು, ಕೊನೆಗೆ ಪ್ರೀತಿಸಿದ ಹುಡುಗನಿಗೆ ಯಾಕೆ ಕೈಕೊಟ್ಟು ಎಸ್ಕೇಪ್ ಆಗುತ್ತಾರೆ ಗೊತ್ತಾ? ಯುವತಿಯರು ಹೇಗೆಲ್ಲಾ ಯೋಚಿಸುತ್ತಾರೆ ನೋಡಿ!!

Kannada News

ಈ ಜಗತ್ತಿನಲ್ಲಿ ಬದುಕುತ್ತಿರುವ ಪ್ರತಿಯೊಬ್ಬನೂ ಈ ಪ್ರೀತಿ ಅನ್ನುವ ಭಾವನೆಯನ್ನು ಹೊಂದಿರುತ್ತಾನೆ. ಪ್ರೀತಿ ಭಾವನೆ ಇಲ್ಲದ ವ್ಯಕ್ತಿ ಮನುಷ್ಯನಾಗಿರೋಕೆ ಸಾಧ್ಯನೇ ಇಲ್ಲ. ಇನ್ನು ಮಾನವ ಸಂಘ ಜೀವಿ. ಆತನಿಗೆ ಏಕಾಂಗಿಯಾಗಿ ಬದುಕಲು ಸಾಧ್ಯ ಇಲ್ಲ. ಜೀವನದಲ್ಲಿ ಜಿಗುಪ್ಸೆ ಅನ್ನುವುದು ಬಂದರೆ ಮಾತ್ರ ಆತ ಎಲ್ಲವನ್ನೂ ಬಿಟ್ತು ಹೋಗುತ್ತಾನೆ. ಆದರೆ ಆತನ ಜೊತೆಯಾಗಿ ಯಾರಾದರೂ ಇರಲೇ ಬೇಕು. ಇನ್ನು ಈ ಪ್ರೀತಿ ಅನ್ನುವುದು ಇಂತವರ ನಡುವೆಯೇ ಹುಟ್ಟುತ್ತದೆ ಎಂದು ಹೇಳಲು ಸಾಧ್ಯ ಇಲ್ಲ. ಈ ಭಾವನೆಯೇ ಶ್ರೇಷ್ಟ. ಅದನ್ನೂ ಯಾರಿಂದಲೂ ಬಣ್ಣಿಸುಲು ಸಾಧ್ಯ ಇಲ್ಲ. ಕೆಲವರು ಈ ಲವ್ ಅಂತ ಹೇಳಿದ ಕೂಡಲೇ ಜೋಡಿಗಳ ನಡುವಿನ ಭಾವನೆ ಅಂದುಕೊಳ್ಳುತ್ತಾರೆ.

Advertisements
Advertisements

ಆದರೆ ಅಣ್ಣ- ತಂಗಿ, ಅಪ್ಪ- ಮಗ, ಅಪ್ಪ- ಮಗಳು, ಅಮ್ಮ- ಮಕ್ಕಳು, ಗೆಳೆಯರು ಹೀಗೆ ಪ್ರತಿಯೊಂದು ಸಂಬಂಧದ ನಡುವೆಯೂ ಈ ಪ್ರೀತಿ ಅನ್ನುವುದು ಇರುತ್ತದೆ. ಈ ಪ್ರೀತಿ ಅನ್ನುವುದು ಇದ್ದರೆ ಮಾತ್ರ ಈ ಜಗತಿನಲ್ಲಿ ಬದುಕಬಹುದು. ಇನ್ನು ಇವತ್ತು ನಾವು ಹೇಳ ಹೊರಟಿರುವುದು ಗಂಡು ಹೆಣ್ಣಿನ ನಡುವೆ ಹುಟ್ಟುವ ಪ್ರೀತಿಯ ಬಗ್ಗೆ. ಈಗಿನ ಕಾಲದಲ್ಲಿ ಹೈಸ್ಕೂಲ್ ಮಟ್ಟದಲ್ಲಿಯೇ ಮಕ್ಕಳು ಪ್ರೀತಿ, ಪ್ರೇಮ, ಪ್ರಣಯ ಅಂತ ಹೋಗುತ್ತಾರೆ. ಓದಿನ ಮೇಲಿನ ಆಸಕ್ತಿ ಬಿಟ್ಟು ಪ್ರೀತಿ ಅಂತ ಸುತ್ತಾಡುತ್ತಾರೆ. ಆದರೆ 90% ಇದು ನಿಜವಾದ ಪ್ರೀತಿ ಆಗಿರುವುದಿಲ್ಲ. ಆಕರ್ಷಣೆ ಆಗಿರುತ್ತದೆ. ಇದು ಕೆಲವೇ ತಿಂಗಳಲ್ಲಿ ಮುರಿದು ಬೀಳುವಂತಹ ಪ್ರೀತಿ ಆಗಿರುತ್ತದೆ.

ಇನ್ನು ಕೆಲವು ಉದಾಹರಣೆಗಳೂ ಇವೆ, ಹೈಸ್ಕೂಲ್ ಲವ್ ಮುಂದುವರಿದು ಕೊನೆಗೆ ಮದುವೆಯೂ ಆಗಿ ಸುಖ ಜೀವನ ನಡೆಸುತ್ತಾರೆ. ಇನ್ನು ನಾವು ಹಲವಾರು ಉದಾಹರಣೆ, ನೈಜ ಕಥೆಗಳನ್ನು ಕೇಳಿದ್ದೇವೆ. ಗಂಡು ಮಕ್ಕಳು ತಾನು ಪ್ರೀತಿಸಿದ ಹುಡುಗಿಯನ್ನು ಬಿಟ್ಟ್ ಬೇರಾರನ್ನೂ ಮದುವೆ ಆಗಲ್ಲ, ತನ್ನ ಹೆಣ್ಣು ಬಿಟ್ತು ಹೋದರೆ ಆತ ಆಕೆಯ ನೆನಪಲ್ಲ್ ಬದುಕುತ್ತಾನೆ, ಆದರೆ ಹೆಣ್ಣು ಹಾಗಲ್ಲ ಪ್ರೀತಿ ಮಾಡುವುದು ಒಬ್ಬನ ಜೊತೆ ಕೊನೆಗೆ ಮದುವೆ ಆಗುವುದು ಅಪ್ಪ ಅಮ್ಮ ತೋರಿಸಿದ ಹುಡುಗನ ಜೊತೆ ಎಂದು.

ಹೌದು, ಹೆಚ್ಚಾಗಿ ಹೆಣ್ಮಕ್ಕಳು ತಾನು ಪ್ರೀತಿಸಿದ ಹುಡುಗನ ಜೊತೆ ಮದುವೆ ಆಗುವುದಿಲ್ಲ ಇದಕ್ಕೆ ಕಾರಣ ತನ್ನನ್ನು ಸಾಕಿ ಸಲಹಿದ ಅಪ್ಪ ಅಮ್ಮನನ್ನು ಎದುರು ಹಾಕಿಕೊಳ್ಳಲು ಧೈರ್ಯ ಇರುವುದಿಲ್ಲ ಜೊತೆಗೆ ಅವರಿಗೆ ನೋವು ಕೊಡಲು ತಯಾರಿರುವುದಿಲ್ಲ. ಇಷ್ಟು ವರ್ಷ ಸಾಕಿ ಬೆಳೆಸಿದ ತಂದೆ ತಾಯಿಗೆ ಮೋಸ ಮಾದುವುದು ಸರಿಯಲ್ಲ ಅನ್ನುವ ಕಾರಣಕ್ಕೆ ಹೆಚ್ಚಾಗಿ ಹೆಣ್ಣು ಮಕ್ಕಳು ಪ್ರೀತಿಸಿದ ಹುಡುಗನಿಗೆ ಕೈ ಕೊಡುತ್ತಾರೆ. ಇನ್ನು ಕೆಲವ್ರು ಹೇಗಾದರೂ ಮಾಡಿ ತನ್ನ ಪೋಷಕರನ್ನು ಒಪ್ಪಿಸಿ ಮದುವೆ ಆಗುತ್ತಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.