Advertisements

ಈಗಲೂ 21 ವರ್ಷದ ಯುವತಿಯ ತರ ಕಾಣಿಸುವ ನಟಿ ಪ್ರಿಯಾಮಣಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ನೀವು ನಂಬೋದಿಲ್ಲಾ ನೋಡಿ..

Kannada News

ಪ್ರೀಯ ಓದುಗರೇ ಸ್ಯಾಂಡಲವುಡ್ ನಲ್ಲಿ ಸೂಪರ್ ಸ್ಟಾರ ನಟಿಯರು ಇದ್ದಾರೆ. ಹಿರಿಯ ನಟಿಯರ ಜೊತೆಗೆ ಈಗಿನ ನಟಿಯರು ಕಂಪ್ಯಟೇಷನ್ ಮಾಡತಾ ಇದ್ದಾರೆ. ಯಾಕಂದ್ರೆ ಇವರ ವಯಸ್ಸನ್ನು ಮರೆಮಾಚುವಷ್ಟು ಇವರು ತಮ್ಮ ಸೌಂದರ್ಯ ವನ್ನು ಹೆಚ್ಚಿಸಿಕೊಂಡಿದ್ದಾರೆ. ಇವರಲ್ಲಿ ವಯಸ್ಸಾದವರು ಯಾರು? ಯಂಗ್ ಹೀರೋಯಿನ್ಸ್ ಯಾರು ಅಂತಾ ಗೊತ್ತಾಗುತ್ತಿಲ್ಲ. ಇಂದಿನ ನಟಿಮಣಿಯರಾದ ರಕ್ಷಿತಾ, ರಮ್ಯಾ, ಅನುಷ್ಕಾ, ದೀಪಿಕಾ, ಹೀಗೆ ವಯಸ್ಸು ಹೆಚ್ಚಾದ್ರೂ ಅವರ ಮುಖದ ಸೌಂದರ್ಯ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಸಹ ನೋಡಲು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಇದ್ದಾರೆ.

ಈ ಯಂಗ್ ನಟಿಯರಲ್ಲಿ ಪ್ರಿಯಾಮಣಿ ಕೂಡಾ ಒಬ್ಬರು. ಇವರ ವಯಸ್ಸು ಆಗಿದ್ದರೂ ಈಗ್ಲೂ 20 ವರ್ಷದ ಯುವತಿಯಂತೆ ಕಂಗೊಳಿಸುತ್ತಾರೆ. ಇವರ ನಿಜವಾದ ವಯಸ್ಸು ಎಷ್ಟು ಗೊತ್ತಾ? ಇವರ ಬ್ಯಾಗ್ರೌಂಡ್ ಬಗ್ಗೆ ನಿಮಗೆಷ್ಟು ಗೊತ್ತು? ಪ್ರಿಯಾಮಣಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಸ್ತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಇಂದಿಗೂ ಸ್ಯಾಂಡಲ್ ವುಡ್ ಸೇರಿದಂತೆ ಬೇರೆ ಭಾಷೆಗಳಲ್ಲೂ ಬಹು ಬೇಡಿಕೆ ಇರುವ ನಟಿ ಪ್ರಿಯಾಮಣಿ. ಇವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ಹೆಸರಾಂತ ನಟಿಯರಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇರುವ ನಟಿ ಪ್ರಿಯಾಮಣಿ.

ಇವರು ಮೂಲತಃ ಬೆಂಗಳೂರಿನವರು. ಹೌದು ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ತಂದೆ ವಾಸುದೇವ ಮಣಿ ಮತ್ತು ತಾಯಿ ಲತಾಮಣಿ ವಾಸುದೇವ ಮಣಿ ಅವರು ಅಗ್ರಿಕಲ್ಚರ್ ಉದ್ಯಮಿಯಾಗಿದ್ದಾರೆ. ಇನ್ನು ತಾಯಿ ಲತಾಮಣಿ ಬಗ್ಗೆ ನಿಮಗೂ ಗೊತ್ತಿರಬಹುದು ಅವರು ಅಂತರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ. ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಭಾರತವನ್ನು ಪ್ರತಿನಿಧಿಸಿದ ಆಟಗಾರ್ತಿ ಲತಾಮಣಿ. ಪ್ರಿಯಾಮಣಿ ಕೂಡ ಕ್ರೀಡೆಯಲ್ಲಿ ಹೊಂದಿದವರು ಆದರೆ ಅವರು ವೃತ್ತಿಯನ್ನು ಆಯ್ದುಕೊಂಡಿದ್ದು ಮಾತ್ರ ನಟಿಯಾಗಿ. ಬಹುಮುಖ ಪ್ರತಿಭೆ ಆಗಿರುವ ನಟಿ ಪ್ರಿಯಾಮಣಿ ಕನ್ನಡದವರೇ ಆದರೂ ತಮಿಳು ತೆಲುಗು ಹಿಂದಿ ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿ ನಟಿಸಿದ ಅತ್ಯದ್ಭುತ ಅಭಿನೇತ್ರಿ.

2003ರಲ್ಲಿ ತೆರೆಕಂಡ ಇವರೇ ಆಟಗಾಡು ಎನ್ನುವ ತಮಿಳು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದರು.
ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿದ ಅಭುತಾಪೂರ್ವ ಅಭಿನಯಿ ಪ್ರಿಯಾಮಣಿ. ಇಲ್ಲಿವರೆಗೂ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಅಭಿನಯ ಎಂದ್ರೆ ಎಲ್ಲರ ಚಿತ್ತ ಇವರತ್ತನೇ ಇರುತ್ತದೆ. ಇವರ ಈ ನೈಜ ಅಭಿನಯಕ್ಕೆ ಹಲವಾರು ಪ್ರಶಸ್ತಿಗಳು ಕೂಡ ಸಂದಿದೆ. ಅದರಲ್ಲಿ ಫಿಲಂ ಫೇರ್ ಅವಾರ್ಡ್, ರಾಷ್ಟ್ರೀಯ ಚಿತ್ರಕಲಾ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

ಕನ್ನಡದಲ್ಲಿ ರಾಮ್ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟರು.ಮೊದಲ ಚಿತ್ರದಲ್ಲಿಯೇ ಹೆಸರು ಖ್ಯಾತಿ ಗಳಿದವರು ಎಂದ್ರೆ ಅದು ಪ್ರಿಯಾಮಣಿ. ನಂತರದ ಸಿನಿಮಾಗಳಾದ ಅಣ್ಣಾಬಾಂಡ್, ದನ ಕಾಯೋನು, ದ್ವಜ, ದ್ವಿಪಾತ್ರದ ಅಭಿನಯದಲ್ಲಿ ಚಾರುಲತಾ, ಲಕ್ಷ್ಮಿ, ಹೀಗೆ ಇವರು ನಟಿಸಿದ ಪ್ರತಿ ಸಿನಿಮಾ ಕೂಡಾ ಸೂಪರ್ ಹಿಟ್ ಆಗಿದ್ದವು. ಪ್ರಿಯಾಮಣಿ ಅವರು 2017ರಲ್ಲಿ ಮುಸ್ತಫ ರಾಜ್ ಎಂಬ ಉದ್ಯಮಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮಾನ್ಯವಾಗಿ ನಟಿಯರು ಮದುವೆಯಾದ ನಂತರ ಸಿನಿಮಾದಲ್ಲಿ ಅಭಿನಯಿಸುವುದನ್ನು ಬಿಡುತ್ತಾರೆ. ಇವರು ಮದುವೆಯಾದ ನಂತರವೂ ಕೂಡ ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಮಣಿ ಈಗಲೂ ಮನಮೋಹಕ ನಟಿ. ಇವರ ವೈಯಾರಕ್ಕೆ ಮನಸೋಲದವರೇ ಇಲ್ಲ. ನೋಡುವುದಕ್ಕೆ ಕೇವಲ 20 ವರ್ಷದವರಂತೆ ಇದೀಗ 34 ವರ್ಷದ ವಸಂತದಲ್ಲಿದ್ದಾರೆ.

Leave a Reply

Your email address will not be published.