Advertisements

ಪ್ರಿಯಾಂಕಾ ಚೋಪ್ರಾ ಹುಟ್ಟು ಹಬ್ಬಕ್ಕೆ ಪತಿ ನಿಕ್ ನೀಡಿದ ವೈನ್ ಬೆಲೆ ಎಷ್ಟು ಲಕ್ಷ ಗೊತ್ತಾ..? ಅಬ್ಬಾ ಇಷ್ಟ..!

Cinema Entertainment

ನಮಸ್ತೆ ಸ್ನೇಹಿತರೆ, ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಯಾರಿಗೆ ಗೊತ್ತಿಲ್ಲ ಹೇಳಿ. ಭಾರತ ಚಿತ್ರರಂಗ ಕಂಡ ಖ್ಯಾತ ನಟಿಯರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಒಬ್ಬರು. ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ನಟನೆ ಮಾಡುವುದರ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಗಳಿಸಿದ್ದಾರೆ. ಇನ್ನೂ ನಿಮಗೆಲ್ಲ ತಿಳಿದಿರುವ ಹಾಗೆ ವಿದೇಶದ ವ್ಯಕ್ತಿಯಾದ ನಿಕ್ ಅನ್ನು ನಟಿ ಪ್ರಿಯಾಂಕಾ ಚೋಪ್ರಾ ಅವರು ಮದುವೆ ಆಗಿದ್ದಾರೆ. ಸದ್ಯ ನಿಕ್ ಅವರ ಜೊತೆ ಖುಷಿಯಿಂದ ಜೀವನ ಸಾಗಿಸುತ್ತಿರುವ ಪ್ರಿಯಾಂಕಾ ಅವರು ತಮ್ಮ ಕೆಲವು ಸಂತೋಷದ ಕ್ಷಣಗಳನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

Advertisements
Advertisements

ಇನ್ನು ವಿಷಯಕ್ಕೆ ಬರುವುದಾದರೆ ಕಳೆದ ಕೆಲವು ದಿನಗಳ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಅವರ ಹುಟ್ಟಿದ ದಿನ ಇತ್ತು. ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಹುಟ್ಟು ಹಬ್ಬವನ್ನು ತಮ್ಮ ಗಂಡನ ಜೊತೆ ಬಹಳ ಸಡಗರದಿಂದ ಆಚರಣೆ ಮಾಡಿದ್ದಾರೆ. ಇನ್ನೂ ನಟ ನಟಿಯರ ಹುಟ್ಟು ಹಬ್ಬ ಅಂದಮೇಲೆ ಅಲ್ಲಿ ಕುಡಿತ, ಕುಣಿತ ಇರುವುದು ಸರ್ವೇ ಸಾಮಾನ್ಯ. ಇನ್ನೂ ತನ್ನ ಹೆಂಡತಿಯ ಹುಟ್ಟಿದ ಹಬ್ಬದ ಸಲುವಾಗಿ ಪತಿ ನಿಕ್ ಅವರು ಪ್ರಿಯಾಂಕಾ ಚೋಪ್ರಾ ಅವರಿಗೆ ಬಹಳ ದುಬಾರಿ ಬೆಲೆಯ ವೈನ್ ನೀಡಿದ್ದು ಅದರ ಬೆಲೆಯನ್ನು ಕೇಳಿದರೆ ನೀವು ಶಾ’ಕ್ ಆಗುವುದಂತೂ ಗ್ಯಾರಂಟಿ…

ಹೌದು ಪತ್ನಿ ಪ್ರಿಯಾಂಕಾ ಚೋಪ್ರಾ ಅವರ ಹುಟ್ಟಿದ ಹಬ್ಬದ ಸಲುವಾಗಿ ಪತಿ ನಿಕ್ ಅವರು ಮಡದಿಗೆ ದುಬಾರಿ ಬೆಲೆಯ ವೈನ್ ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಇದು ಜನರನ್ನು ಹುಬ್ಬೇರುವಂತೆ ಮಾಡಿದೆ. ಯಾಕೆಂದರೆ ನಿಕ್ ಅವರು ‘ಚಾಟ್ಯೂ ಮೌಟನ್ ರೋಥ್ ಚಿಲ್ಡ್ 1982’ ಎಂಬ ಹೆಸರಿನ ವೈನ್ ಉಡುಗೊರೆಯ ರೂಪದಲ್ಲಿ ನೀಡಿದ್ದಾರೆ. ಈ ವೈನ್ ಬಹಳ ಅಪರೂಪದ ವೈನ್ ಆಗಿದ್ದು ಇದರ ಬೆಲೆ ಸರಿಸುಮಾರು 13 ಲಕ್ಷ ರೂಪಾಯಿ. ಇನ್ನೂ ಈ ವೈನ್ ಬಹಳ ಅಪರೂಪದ ವೈನ್ ಆಗಿದ್ದು ಫ್ರಾನ್ಸ್ ನ ಬೋರ್ಡೆಕ್ಸ್ ನಗರದ ಪೌಲಾಕ್ ಎಂಬ ಹಳ್ಳಿಯಲ್ಲಿ ತಯಾರಿಸಲಾಗುತ್ತದೆ. ತನ್ನ ಹೆಂಡತಿಗಾಗಿ ನಿಕ್ ಈ ಅಪರೂಪದ ವೈನ್ ಅನ್ನು ಗಿಫ್ಟ್ ನೀಡಿದ್ದಾರೆ. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.