Advertisements

ಚಿತ್ರೀಕರಣದ ಸಮಯದಲ್ಲಿ ತೆರೆಯ ಹಿಂದೆ ಸೆರೆಸಿಕ್ಕ ಈ ಫೋಟೋ ಈಗ ಬಾರಿ ವೈರಲ್, ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತೇ?

Kannada News

ಬಾಲಿವುಡ್ ನಟಿ , ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾ ಸದಾ ಒಂದಲ್ಲ ಒಂದು ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಪಾಪ್ ಸಿಂಗರ್ ನೀಕ್ ಜೋನಸ್ ರನ್ನು ಮದುವೆಯಾಗಿರುವ ಪ್ರಿಯಾಂಕ ಚೋಪ್ರಾ ಬಾಲಿವುಡ್ ನಲ್ಲಷ್ಟೇ ಅಲ್ಲ, ಹಾಲಿವುಡ್ ನಲ್ಲೂ ಬಹು ಬೇಡಿಕೆಯ ನಟಿ. ಮಾಜಿ ವಿಶ್ವ ಸುಂದರಿ ಪ್ರಿಯಾಂಕ ಚೋಪ್ರಾ ರಿಗೂ ಗಾಸಿಪ್ ಗಳಿಗೂ ಅವಿನಾಭಾವ ಸಂಬಂಧ ಇದೆ. ಇದೀಗ ಸಿನಿಮಾ ಶೂಟಿಂಗ್ ನಲ್ಲಿ ನಡೆದ ಒಂದು ಘಟನೆ ಕೂಡ ಚಿತ್ರ ಭಾರೀ ವೈರಲ್ ಆಗಿದ್ದು ನಾನಾ ವದಂತಿಗಳಿಗೆ ಕಾರಣವಾಗಿದೆ.

ಪಿಂಕಿ ನಟಿಸಿದ್ದ ಬೇ ವಾಚ್ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಅದು ಪ್ಲಾಪ್ ಆಗಿತ್ತು. ಆ ಸಿನಿಮಾ ನಂತರ ಪಿಂಕಿ ಹಾಲಿವುಡ್ ನ ಇಸಂಟ್ ಇಟ್ ರೋಮ್ಯಾಂಟಿಕ್ ಚಿತ್ರ ಒಪ್ಪಿಕೊಂಡಿದ್ದರು. ಆ ಸಿನಿಮಾದಲ್ಲಿ ನಡೆದ ಒಂದು ಘಟನೆ ಭಾರೀ ಸುದ್ದಿಯಾಗಿತ್ತು. ಆ ಚಿತ್ರದ ನಟ ಡೇವಿನ್ ಹಾಗೂ ಪ್ರಿಯಾಂಕ ಅವರ ಒಂದು ಫೋಟೋ ಹಿಂದೆ ಹತ್ತು ಹಲವು ಕಥೆಗಳು ಹುಟ್ಟಿಕೊಂಡಿತ್ತು. ಅಷ್ಟಕ್ಕೂ ಅಲ್ಲಿ ಆಗಿದ್ದೇನು, ಆ ಫೋಟೋ ಹಿಂದಿನ ಸತ್ಯತೆ ಏನು ? ಅದನ್ನು ನಾವು ಹೇಳ್ತೀವಿ.

Advertisements
Advertisements

ಈ ವೈರಲ್ ಆಗಿರುವ ಫೋಟೋನಲ್ಲಿ ಹಾಲಿವುಡ್ ನಟ ಆಡಮ್ ಡೇವಿನ್ ಪ್ರಿಯಾಂಕ ಚೋಪ್ರಾರನ್ನು ಬಲತ್ಕಾರವಾಗಿ ಎತ್ತಿಕೊಂಡಂತೆ , ಪ್ರಿಯಾಂಕ ಅವರು ಕೊಸರಾಡುತ್ತಿರುವಂತೆ ಭಾಸವಾಗುತ್ತದೆ. ಅಲ್ಲಿ ನೆರೆದವರು ಕೂಡ ಗಾಬರಿಯಿಂದ ನೋಡುತ್ತಿದ್ದಾರೆ. ಅಸಲಿಯಾಗಿ ನಟ ಡೇವಿನ್ ಈ ರೀತಿ ಮಾಡಿರುವ ಹಿಂದೆ ಬೇರೆಯೇ ಕಾರಣ ಇತ್ತು. ಪ್ರಿಯಾಂಕ ಚೋಪ್ರಾ ಅವರು ಫುಡ್ಡೀ. ಸದಾ ಏನಾದರೂ ಒಂದು ವಿಶೇಷ ಖಾದ್ಯಗಳ ರುಚಿ ನೋಡುತ್ತಲೇ ಇರುತ್ತಾರೆ. ಅದೇ ರೀತಿ ಸಿನಿಮಾ ಶೂಟಿಂಗ್ ಮಧ್ಯೆ ಹೋಟೆಲೊಂದರಲ್ಲಿ ಯಾವುದೋ ತಿನಿಸುಗಳನ್ನು ತಿನ್ನುತ್ತಿದ್ದರು.

ಇದೇ ವೇಳೆ ಆ ತಿಂಡಿ ಪ್ರಿಯಾಂಕ ಅವರ ಗಂಟಲಲ್ಲೇ ಸಿಕ್ಕಿ ಹಾಕಿಕೊಳ್ಳುತ್ತದೆ. ಇದರಿಂದ ಪ್ರಿಯಾಂಕ ಅವರಿಗೆ ಉಸಿರಾಡಲು ಕೂಡ ಕಷ್ಟವಾಗಿತ್ತು. ಆಗ ಡೇವಿನ್ , ಪ್ರಿಯಾಂಕ ಚೋಪ್ರಾರನ್ನು ಎತ್ತಿ ಅವರ ಉಸಿರು ಸರಿ ಆಗುವಂತೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಯಾರೋ ಫೋಟೋ ತೆಗೆದಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಚಿತ್ರದ ಬಗ್ಗೆ ನಿಜಾಂಶ ತಿಳಿಯದೆ ಹತ್ತು ಹಲವು ವದಂತಿಗಳು ಕೂಡ ಹುಟ್ಟಿಕೊಂಡಿದ್ದವು. ಆದರೆ ಅಲ್ಲಿ ನಡೆದಿದ್ದೇ ಬೇರೆ. ಇದೀಗ , ಈ ಸಿನಿಮಾ ನಂತರ ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಅನೇಕ ಸಿನಿಮಾಗಳನ್ನು ಮಾಡಿರುವ ಸ್ಟೈಲಿಷ್ ಹಾಗೂ ಫ್ಯಾಷನ್ ಐಕಾನ್ ಆಗಿರುವ ಪ್ರಿಯಾಂಕ ಚೋಪ್ರಾ ಅವರು , 2021ರಲ್ಲಿ ಹಾಲಿವುಡ್ ನಲ್ಲಿ ದಿ ಮೇಟ್ರಿಕ್ಸ್ ರೆಸರೆಕ್ಷನ್ಸ್ ಸಿನಿಮಾ ಮಾಡಿದ್ದಾರೆ.