Advertisements

ಓದಿರೋದು ಅರ್ಥಶಾಸ್ತ್ರದಲ್ಲಿ ಪದವಿ.. ಆದರೆ ಹೊಟ್ಟೆ ಪಾಡಿಗೆ ಮಾಡುತ್ತಿರೋದು ಬೀದಿ ಬದಿ ಟೀ ವ್ಯಾಪಾರ.. ಈ ಹೆಣ್ಣು ಮಗಳು ನಿಜಕ್ಕೂ ಯಾರು ಗೊತ್ತಾ..

Kannada News

ಜೀವನ ನಿರ್ವಹಣೆಗೆ ಉದ್ಯೋಗ ಅನ್ನೋದು ಅತ್ಯವಶ್ಯಕ.. ಮೊದಲೆಲ್ಲಾ ಹೆಣ್ಣು ಮಕ್ಕಳು ಮನೆಯಲ್ಲಿದ್ದು ಗಂಡು ಮಕ್ಕಳು ದುಡಿಯಲು ಹೊರಗೆ ಹೋಗುತ್ತಿದ್ದರು.. ಆದರೀಗ ಕಾಲ ಬದಲಾಗಿದೆ.. ಕಾಲ ಬದಲಾಗಿದೆ ಅನ್ನೋದಕ್ಕಿಂತ ಹೆಣ್ಣು ಮಕ್ಕಳು ಸಹ ದುಡಿಯುವುದು ಅನಿವಾರ್ಯವಾಗಿ ಹೋಗಿದೆ.. ಅತಿಯಾದ ಬೆಲೆ ಏರಿಕೆ.. ಬದಲಾದ ಜೀವನ ಶೈಲಿ.. ಮಧ್ಯಮ ವರ್ಗದ ಕುಟುಂಬದ ಹೇಳಲಾಗದಷ್ಟು ಕಮಿಟ್ಮೆಂಟ್ ಗಳು ಹೀಗೆ ಸಾಲು ಸಾಲು ಕಾರಣಗಳಿಂದ ಹೆಣ್ಣು‌ಮಕ್ಕಳು ಸಹ ದುಡಿಯುವುದು ಅನಿವಾರ್ಯವಾಗಿದೆ.. ಒಂದು ಪದವಿ ಅಂತ ಪಡೆದು ಒಳ್ಳೆಯ ಉದ್ಯೋಗ ಪಡೆಯುವುದು ಪ್ರತಿಯೊಬ್ಬರ ಕನಸಾಗಿರುತ್ತದೆ.. ಅದೇ ರೀತಿ‌ ಒಳ್ಳೆಯ ಶಿಕ್ಷಣ ಏನೋ ಪಡೆಯುತ್ತಾರೆ ಆದರೆ ಉದ್ಯೋಗ ಅನ್ನೋದು ಇತ್ತೀಚಿನ ದಿನಗಳಲ್ಲಿ ಅದೃಷ್ಟ ಇದ್ದವರಿಗೆ ಮಾತ್ರ ಎನ್ನುವಂತಾಗಿ ಹೋಗಿದೆ..

ಹೌದು ಶಿಕ್ಷಣಕ್ಕೆ ತಕ್ಕ ಉದ್ಯೋಗ ಸಿಗದೆ ಅದೆಷ್ಟೋ ಮಂದಿ ಈಗಲೂ ಸಹ ವರ್ಷಾನುಗಟ್ಟಲೆ ಪರದಾಡುವ ಸ್ಥಿತಿ ಉಂಟಾಗಿದೆ.. ಇನ್ನು ಉದ್ಯೋಗವನ್ನು ಹುಡುಕುತ್ತಲೇ ಇದ್ದರೆ ಆಗೊದಿಲ್ಲ ಎಂದು ಸಾಕಷ್ಟು ಮಂದಿ ಸ್ವಂತ ಉದ್ಯಮವನ್ನು ಆರಂಭಿಸಿ ಜೀವನ ಕಟ್ಟಿಕೊಂಡವರೂ ಇದ್ದಾರೆ.. ಕೆಲವರು ಕೈ ಸುಟ್ಟುಕೊಂಡವರೂ ಇದ್ದಾರೆ.. ಅದೇ ರೀತಿ ಇಲ್ಲೊಬ್ಬ ಹೆಣ್ಣು ಮಗಳು ಪದವಿ ಮುಗಿಸಿ ಟೀ ಅಂಗಡಿ ಇಟ್ಟಿದ್ದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಅಷ್ಟಕ್ಕೂ ಈ ಹುಡುಗಿ ಯಾರು ಈಕೆಯ ನಿಜವಾದ ಕತೆ ಏನು ಗೊತ್ತಾ..

ಸಾಮಾಜಿಕ ಜಾಲತಾಣದಲ್ಲಿ ಚಾಯ್ ವಾಲಿ‌ ಎಂದು ಫೇಮಸ್ ಆಗಿರುವ ಈ ಹೆಣ್ಣು ಮಗಳ ಹೆಸರು ಪ್ರಿಯಾಂಕ ಗುಪ್ತಾ.. ವಯಸ್ಸು ಕೇವಲ ಇಪ್ಪತ್ತ ಮೂರು.. ಬಿಹಾರ ಮೂಲದ ಪ್ರಿಯಾಂಕ ಗುಪ್ತಾ ಕಳೆದ ಎರಡು ವರ್ಷದ ಹಿಂದೆ ಅರ್ಥಶಾಸ್ತ್ರದಲ್ಲಿ ಪದವಿ ಮುಗಿಸಿದ ಹೆಣ್ಣು ಮಗಳು.. ಹೌದು 2019 ರಲ್ಲಿ‌ ಪದವಿಯಲ್ಲಿ ಒಳ್ಳೆಯ ಅಂಕ‌ ಪಡೆದು ಉತ್ತೀರ್ಣಳಾದ ಪ್ರಿಯಾಂಕ ಗುಪ್ತಾ ಇತರರಂತೆ ತನ್ನ ಓದಿಗೆ ತಕ್ಕಂತೆ ಒಳ್ಳೆಯ ಉದ್ಯೋಗ ಪಡೆಯಲು ಸಾಕಷ್ಟು ಕಂಪನಿಗಳಿಗೆ ಅಲೆದಳು.. ಆದರೆ ಕೆಲಸ ಮಾತ್ರ ಸಿಗಲಿಲ್ಲ.. ಎರಡು ವರ್ಷಗಳ ಕಾಲ ಕೆಲಸಕ್ಕಾಗಿ ಅಲೆದಾಟವೇ ಆಗಿ ಹೋಯ್ತು.. ಅದರೆ ಸಮಯ ವ್ಯರ್ಥ ವಾಯಿತೇ ಹೊರತು ಬೇರೇನೂ ಉಪಯೋಗವಾಗಲಿಲ್ಲ..

ಕೊನೆಗೆ ಹಿಂಜರಿಕೆಯೆಲ್ಲಾ ಬಿಟ್ಟು ಬಿಹಾರ ರಾಜ್ಯಧಾನಿ‌ ಪಾಟನಾ ದಲ್ಲಿನ ಮಹಿಳಾ ಕಾಲೇಜಿನ ಮುಂಭಾಗ ಟೀ ಅಂಗಡಿ ಇಟ್ಟುಕೊಂಡ ಪ್ರಿಯಾಂಕ ಸ್ವಂತ ಉದ್ಯಮವನ್ನು ಆರಂಭ ಮಾಡಿದಳು.. ವಿಧವಿಧವಾದ ಟೀ ಮಾಡುವ ಪ್ರಿಯಾಂಕ ಇದೀಗ ಚಾಯ್ ವಾಲಿ ಎಂದೇ ಖ್ಯಾತಿ ಗಳಿಸಿದ್ದಾರೆ. ಅಷ್ಟೇ ಅಲ್ಲದೇ ರಾಷ್ಟ್ರೀಯ ಮಾದ್ಯಮವೂ ಸಹ ಈಕೆಯ ಬಗ್ಗೆ ವರದಿ ಮಾಡಿದ್ದು ಪ್ರಿಯಾಂಕ ತನ್ನ ಕತೆಯನ್ನು ಹೇಳಿಕೊಂಡಿದ್ದಾಳೆ..

ಹೌದು ನಾನು 2019 ರಲ್ಲಿ‌ ಪದವಿ ಮುಗಿಸಿ‌ ಕೆಲಸ ಹುಡುಕಾಡಿದೆ ಆದರೆ ಸಿಗಲಿಲ್ಲ.. ಈಗಾಗಲೇ ಎಂಬಿಎ ಮಾಡಿ ಅರ್ಧಕ್ಕೆ ಬಿಟ್ಟು ಟೀ ಅಂಗಡಿ ಇಟ್ಟಿರುವ ಪ್ರಫುಲ್ ಬಿಲ್ಲೋರ್ ಅವರ ಕತೆ ನನಗೆ ಸ್ಪೂರ್ತಿಯಾಯಿತು.. ನಾನು ಸಹ ಯಾಕೆ ಟೀ ಅಂಗಡಿ ಇಡಬಾರದು ಎಂದುಕೊಂಡು ಟೀ ಅಂಗಡಿ ಶುರು ಮಾಡಿದೆ.. ಸಧ್ಯ ನನ್ನ ಜೀವನ ನಿರ್ವಹಣೆ ಚೆನ್ನಾಗಿಯೇ ನಡೆಯುತ್ತಿದೆ ಎಂದಿದ್ದಾರೆ ಪ್ರಿಯಾಂಕ..

ಇನ್ನು ಈ ಹಿಂದೆ ಎಂ ಬಿಎ ಮಾಡಿ ಅರ್ಧಕ್ಕೆ ಬಿಟ್ಟು ಪ್ರಫುಲ್ ಬಿಲ್ಲೋರ್ ಎಂಬ ಯುವಕ ಟೀ ಅಂಗಡಿ ಇಟ್ಟು ದೊಡ್ಡ ಸುದ್ದಿಯಾಗಿತ್ತು.. ಮಧ್ಯ ಪ್ರದೇಶದ ಎಂಬಿಎ ಚಾಯ್ ವಾಲಾ ಎಂದೇ ಪ್ರಫುಲ್ ಖ್ಯಾತರಾಗಿದ್ದರು.. ಇದೀಗ ಅದೇ ಸಾಲಿಗೆ ಪದವಿ ಚಾಯ್ ವಾಲಿ ಪ್ರಿಯಾಂಕ ಸೇರ್ಪಡೆಯಾಗಿದ್ದಾರೆ.. ಒಟ್ಟಿನಲ್ಲಿ ಬದುಕು ಅನ್ನೋದು ಜೀವನದ ಪಾಠಗಳನ್ನು ತಾನಾಗಿಯೇ ಕಲಿಸಿ ಬಿಡುತ್ತದೆ ಎಂಬುದಕ್ಕೆ ಈ ಎರಡು ಘಟನೆಗಳೇ ನೈಜ್ಯ ಉದಾಹರಣೆ.. ಇವರಿಬ್ಬರು ಮಾತ್ರವಲ್ಲ ಇಂತಹ ಕತೆ ನೂರಾರಿದೆ.. ಸುದ್ದಿಯಾಗಿಲ್ಲವಷ್ಟೇ.. ಆದರೆ ಹಿಂಜರಿಕೆ ಅದು ಇದು ಎಲ್ಲಾ ಪಕ್ಕಕ್ಕಿಟ್ಟು ಯಾವುದೇ ಕೆಲಸವಾದರೂ ನಿಷ್ಠೆಯಿಂದ ನಮಗಾಗಿ ನಮ್ಮ ಕುಟುಂಬಕ್ಕಾಗಿ ಮಾಡಿದಾಗಲೇ ನಮ್ಮ ನಮ್ಮ ಬದುಕಿನ ಬಂಡಿಗಳು ನಡೆಯೋದು.. ಶುಭವಾಗಲಿ ಪ್ರಿಯಾಂಕಳಂತ ಸ್ವಾವಲಂಬಿ ಜೀವನ ನಡೆಸುತ್ತಿರುವ ಸಾಕಷ್ಟು ಹೆಣ್ಣು ಮಕ್ಕಳಿಗೆ..