Advertisements

ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಫೋಟೋಸ್ ನೋಡಿ ಶುಭಾ ಪೂಂಜಾ ಎಂದು ಕನ್ಫ್ಯೂಸ್ ಆದ ಕನ್ನಡಿಗರು! ಅಯ್ಯೋ ಶಿವನೇ ಆಗಿದ್ದೇನು ನೋಡಿ ಫೋಟೋಸ್

Kannada News

ಸ್ನೇಹಿತರೆ, ಬಿಗ್ ಬಾಸ್ ಸೀಸನ್ ಎಂಟರ ವೈಲ್ಡ್ ಕಾರ್ಡ್ ಎಂಟ್ರಿಯಾದ ಸ್ಪರ್ಧೆ ಪ್ರಿಯಂಕ ತಿಮ್ಮೇಶ್ ಸಿಂಗರ್ ಶಮಂತ್ ಗೌಡ ಅವರ ಜೊತೆಗಿನ ಒಡನಾಟದಿಂದಲೇ ಸಾಕಷ್ಟು ಫೇಮಸ್ ಆದರು ಎಂದರೆ ತಪ್ಪಾಗಲಾರದು. ಇನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ತಮ್ಮ ಅದ್ಭುತ ಆಟದ ಮೂಲಕ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ ಪ್ರಿಯಾಂಕಾ ತಿಮ್ಮೇಶ್ ಬಿಗ್ ಬಾಸ್ ಮನೆಯಿಂದ ಹೊರಬಂದ ಸಾಕಷ್ಟು ಸಿನಿಮಾಗಳ ಆಫರ್ಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.

ಹೀಗಿರುವಾಗ ತಮ್ಮ ಬಿಡುವಿನ ಸಮಯದಲ್ಲಿ ಫೋಟೋಶೂಟ್ ಒಂದನ್ನು ಮಾಡಿಸಿದ್ದು, ಅದನ್ನು ಕಂಡಂತಹ ಅಭಿಮಾನಿಗಳು ಶುಭ ಪೂಂಜಾ ಎಂದು ಕನ್ಪ್ಯೂಸ್ ಆಗಿದ್ದಾರೆ. ಹಾಗಾದ್ರೆ ಅಭಿಮಾನಿಗಳು ಇಷ್ಟು ಗೊಂದಲಕ್ಕೊಳಗಾಗಲು ಕಾರಣವಾದರೂ ಏನು? ಪ್ರಿಯಾಂಕಾ ಅವರಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಫ್ರೆಂಡ್ಸ್ ನಟಿ ಪ್ರಿಯಾಂಕರವರಿಗೆ ಕನ್ನಡದ ಸೀರಿಯಲ್ ಒಂದರಲ್ಲಿ ನಟಿಸಲು ಅವಕಾಶ ಒದಗಿಬರುತ್ತದೆ. ಅದುವೆ ‘ಪ್ರೀತಿಯಿಂದ’ ಎಂಬ ಧಾರಾವಾಹಿ. ಇದು 2011ರಲ್ಲಿ ಮೂಡಿಬಂದಿದ್ದು, ಅಲ್ಲಿಗೆ ನೋಡುವುದಾದರೆ ಇವರು ಕೇವಲ 16 ವರ್ಷವಿದ್ದಾಗಲೇ ಆಕ್ಟಿಂಗ್ ಫೀಲ್ಡಿಗೆ ಎಂಟ್ರಿ ಕೊಟ್ಟವರು. ತದನಂತರ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ ಪ್ರಿಯಾಂಕ 2015ರಲ್ಲಿ ಬಿಡುಗಡೆಯಾದ ಗಣಪ ಚಿತ್ರದಲ್ಲಿ ಬೃಂದಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡರು.

Advertisements
Advertisements

ಇನ್ನು ನಿಮ್ಮೆಲ್ಲರಿಗೂ ತಿಳಿದ ಹಾಗೆ ಗಣಪ ಚಿತ್ರ ಸಕ್ಕತ್ ಹಿಟ್ ಆಗುತ್ತದೆ, ಹಾಗೆಯೇ ಬೇರೆಬೇರೆ ಸಿನಿಮಾಗಳ ಆಪರ್ಚುನಿಟಿ ಸಹ ಪ್ರಿಯಾಂಕರವರಿಗೆ ಒದಗಿಬರುತ್ತದೆ. ಇದರ ನಡುವೆ ಅದೃಷ್ಟವೆಂಬಂತೆ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆಯೊಳಗೆ ಹೋಗುವಂತಹ ಅವಕಾಶ ನಟಿ ಪ್ರಿಯಂಕ ತಿಮ್ಮೇಶ್ರವರಿಗೆ ದೊರಕುತ್ತದೆ. ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಪ್ರಿಯಾಂಕಾ ಕರ್ನಾಟಕದ ಜನರಿಗೆ ತಮ್ಮ ಪರಿಚಯವನ್ನು ಅದ್ಭುತವಾಗಿ ಮಾಡಿಕೊಟ್ಟರು.

ಸದ್ಯ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಪ್ರಿಯಾಂಕಾ ಅವರಿಗೆ ಹಲವಾರು ಸಿನಿಮಾಗಳ ಆಫರ್ ಕೂಡ ದೊರಕಿದ್ದು, ಇದರ ನಡುವೆ ಫೋಟೋಶೂಟ್ಗಳನ್ನು ಭರ್ಜರಿಯಾಗಿ ಮಾಡಿಸುತ್ತಿದ್ದಾರೆ. ಹೌದು ಇನ್ಸ್ಟಾಗ್ರಾಂನಲ್ಲಿ ಸಾಕಷ್ಟು ಫಾಲೋವರ್ಗಳನ್ನು ಹೊಂದಿರುವ ಪ್ರಿಯಾಂಕ ತಿಮ್ಮೇಶ್ ತಮ್ಮ ಟಿಕ್ ಟಾಕ್ ವಿಡಿಯೋ ಫೋಟೋಸ್ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಹೀಗಿರುವಾಗ ನೆನ್ನೆಯಷ್ಟೇ ತಮ್ಮ ಹಾಟ್ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು, ಇದನ್ನು ಕಂಡಂತಹ ಅಭಿಮಾನಿಗಳು ಲೈಕ್ಗಳ ಉರಿಮಳೆ ಅನುಸರಿಸುವುದರ ಜೊತೆಗೆ ಕೊಂಚ ಶುಭಪುಂಜರವರಂತೆ ಕಾಣುತ್ತಿದ್ದೀರಾ ಎಂದು ಕಾಲೆಳೆದಿದ್ದಾರೆ.

ಈ ಪುಟದಲ್ಲಿರುವ ಫೋಟೋದ ಮೂಲಕ ನೀವು ಪ್ರಿಯಂಕ ತಿಮ್ಮೇಶ್ ಅವರ ಲೇಟೆಸ್ಟ್ ಫೋಟೋವೊಂದನ್ನು ನೋಡಬಹುದಾಗಿದೆ. ಪ್ರಿಯಾಂಕರವರ ಸಿನಿ ಜೀವನದ ಬೆಳವಣಿಗೆಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.