ಈ ಘಟನೆ ಬಗ್ಗೆ ಗೊತ್ತಾದ್ರೆ ಅರೆ ಹೀಗೂ ನಡಿಯುತ್ತಾ ಅಂತೀರಾ. ಖಂಡಿತ ನಡೆದಿದೆ. ದಕ್ಷಿಣ ಕೊ’ರಿ’ಯಾದ ವ್ಯಕ್ತಿಯೊಬ್ಬನ ಅದೃಷ್ಟ ಕುಲಾಯಿಸಿತು. ಆನ್ಲೈನ್ ಮೂಲಕ ಖರೀದಿಸಿದ ಫ್ರಿಡ್ಜ್ ನಿಂದ ಬರೋಬ್ಬರಿ 96 ಲಕ್ಷ ರೂಪಾಯಿ ನಗದನ್ನ ಪಡೆದಿದ್ದಾನೆ. ದಕ್ಷಿಣ ಕೊರಿಯಾದ ಜೇಜೊ ದ್ವೀಪದ ನಿವಾಸಿಯಾಗಿದ್ದ ಈತನಿಗೆ ಫ್ರಿಡ್ಜ್ ನಲ್ಲಿ ಹಣ ಇರೋದ್ರು ಬಗ್ಗೆ ತಿಳಿದಿರಲಿಲ್ಲ. ಆತ ಫ್ರಿಡ್ಜ್ ಅನ್ನು ಸ್ವಚ್ಛಗೊಳಿಸುವಾಗ ಈ ನಗದು ಹಣ ಸಿಕ್ಕಿದೆ. ಆತ ಸ್ವಚ್ಛಗೊಳಿಸುತ್ತಿದ್ದ ಫ್ರಿಡ್ಜ್ ಇತ್ತೀಚೆಗಷ್ಟೇ ಆನ್ಲೈನ್ ಮೂಲಕ ಖರೀದಿಸಿದ್ದು.

ಅದರಲ್ಲಿ ಹಣವನ್ನ ಪ್ಲಾಸ್ಟಿಕ್ ಹಾಳೆಯಲ್ಲಿ ಪ್ಯಾಕ್ ಮಾಡಿ ಫ್ರಿಡ್ಜ್ ನ ಕೆಳಭಾಗಕ್ಕೆ ಅಂಟಿಸಲಾಗಿತ್ತು. ಇದನ್ನು ನೋಡಿದ ಆ ವ್ಯಕ್ತಿ ಬರೋಬ್ಬರಿ 96 ಲಕ್ಷ ರೂಪಾಯಿ ಹಣವನ್ನ ಪೊಲೀಸರಿಗೆ ನೀಡಿದ್ದಾನೆ. ಬಳಿಕ ಪೊಲೀಸರು ರೆಪ್ರೇಜರಿ ರೆಟರ್ಡ್ ಡೆಲಿವರಿ ಮಾಡಿದ ಆನ್ಲೈನ್ ಮಾರಾಟಗಾರರನ್ನ ಗುರುತಿಸಿ ವಿಚಾರಣೆಗೆ ಕರೆದಿದ್ದಾರೆ. ಇನ್ನು ಇದು ಬಹಳ ದೊಡ್ಡ ಮೊತ್ತವಾಗಿ ಇರೋದ್ರಿಂದ ಫ್ರಿಡ್ಜ್ ನ ಮಾಲೀಕರು ಪೊಲೀಸರಿಗೆ ಹಣವನ್ನು ಹಿಂದಿರುಗಿಸಿದ್ದರು..

ಸಹ ಗ್ರಾಹಕ ಮತ್ತೆ ಹಣವನ್ನ ಮರಳಿ ಪಡೆಯುವ ಸಾಧ್ಯತೆ ಇದೆ. ಯಾಕಂದ್ರೆ ದಕ್ಷಿಣ ಕೊರಿಯಾದ ಲಾಸ್ಟ್ ಅಂಡ್ ಫೌಂಡ್ ಆಕ್ಟ್ ಅಡಿಯಲ್ಲಿ ಮಾಲೀಕರು ಸಿಗದಿದ್ದರೆ ಇದನ್ನ ಪಡೆದವರಿಗೆ ಕೊಡುವ ಸಾಧ್ಯತೆಯಿದೆ ಹಕ್ಕು ಸಹ ಇದೆ. ಹೀಗಾಗಿ ಹಣದ ಮಾಲಿಕ ಪತ್ತೆಯಾದ್ರೆ ಒಟ್ಟು ಮೊತ್ತದ 22 ರಷ್ಟನ್ನ ತೆರಿಗೆಯಾಗಿ ನೀಡಬೇಕಾಗುತ್ತೆ.ಬಳಿಕ ಉಳಿದ ಹಣವನ್ನ ಮಾಲಿಕ ಪಡೆಯಬಹುದು. ಆದ್ರೆ ಹಣದ ಹಿಂದೆ ಕ್ರಿ’ಮಿ’ನಲ್ ಕೇ’ಸ್ ಏನಾದ್ರು ಇತ್ತು ಅಂತ ಅಂದ್ರೆ ಆ ಹಣವನ್ನ ಯಾರಿಗೂ ಸಹ ಕೊಡಲಾಗುವುದಿಲ್ಲ. ಇದಕ್ಕೆ ಅಲ್ವ ಹೇಳೋದು ಅದೃಷ್ಟ ಅಂತ..