Advertisements

ಪಬ್ಲಿಕ್ ಟಿವಿ ನಿರೂಪಕಿ ಡಿಂಪಲ್ ದಿವ್ಯಾ ಅವರು ಸಂಭಾವನೆ ಎಷ್ಟು ಗೊತ್ತಾ? ಇವರ ಗಂಡ ಯಾರು ಅಂತ ನೋಡಿ. ತುಂಬಾ ಫೇಮಸ್

Entertainment

ನಮಸ್ತೆ ಸ್ನೇಹಿತರೆ, ಪಬ್ಲಿಕ್ ಟಿವಿ ಕನ್ನಡದ ಟಾಪ್ ನ್ಯೂಸ್ ಚಾನಲ್ ಗಳಲ್ಲಿ ಒಂದು. ಪಬ್ಲಿಕ್ ಟಿವಿಯಲ್ಲಿ ರಾತ್ರಿ ಒಂಬತ್ತು ಗಂಟೆಗೆ ಬರುವ ಬಿಗ್ ಬುಲೆಟಿನ್ ನ್ಯೂಸ್ ನಲ್ಲಿ ರಂಗಣ್ಣನ ಪಕ್ಕದಲ್ಲಿ ನಿರೂಪಣೆ ಮಾಡುವ ನಿರೂಪಕಿಯನ್ನ ನೀವು ನೋಡಿರುತ್ತೀರಿ. ಈ ನಿರೂಪಕಿ ರಂಗಣ್ಣ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸುತ್ತಾ ಹೌದು ಸರ್ ನೀವು ಕರೆಕ್ಟ್ ಅಂತ ಕುಳಿತಿರುತ್ತಾರೆ. ಆದರೆ ಸೋಷಿಯಲ್ ಮಿಡಿಯಾಗಳ ಟ್ರೋಲ್ ಪೇಜುಗಳಲ್ಲಿ ಈ ನಿರೂಪಕಿ ಡಿಂಪಲ್ ದಿವ್ಯಾ ಅಂತ‌ ತುಂಬಾ ಫೇಮಸ್. ಈಕೆಯ ಪೂರ್ಣ ಹೆಸರು ದಿವ್ಯ ಜ್ಯೋತಿ ಅಂತ. ಈಕೆಗಿನ್ನು ಕೇವಲ 25 ವರ್ಷ ವಯಸ್ಸು. ಬೆಂಗಳೂರಿನಲ್ಲೇ ಜನಿಸಿರುವ ದಿವ್ಯಾ, ಬಿಕಾಂ ಪದವಿಯನ್ನು ಮುಗಿಸಿಕೊಂಡಿದ್ದಾರೆ.

Advertisements
Advertisements

2007ರಲ್ಲಿ ಉದಯ ಮ್ಯೂಸಿಕ್ ವಾಹಿನಿ ಮೂಲಕ ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಡುತ್ತಾರೆ ಡಿಂಪಲ್ ದಿವ್ಯ. ಉದಯ ಮ್ಯೂಸಿಕ್ ವಾಹಿನಿಯಲ್ಲಿ ಕೆಲ ವರ್ಷಗಳ ಕಾಲ ನಿರೂಪಕಿಯಾಗಿ ಕೆಲಸ ಮಾಡಿದ ಬಳಿಕ ಎಲೆಕ್ಟ್ರಾನಿಕ್ ಮೀಡಿಯಾ ಲೋಕಕ್ಕೆ ಎಂಟ್ರಿ ಕೊಟ್ಟ ದಿವ್ಯಾ ಕೆಲ ನ್ಯೂಸ್ ಚಾನೆಲ್ ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಾರೆ. ಈಗ ಸದ್ಯಕ್ಕೆ ಡಿಂಪಲ್ ದಿವ್ಯ ಅವರು ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಡಿಂಪಲ್ ದಿವ್ಯಾ ಅವರಿಗೆ ಹೆಸರು, ಖ್ಯಾತಿ ತಂದು ಕೊಟ್ಟದ್ದು ಮಾತ್ರ ಪಬ್ಲಿಕ್ ಟಿವಿಯಲ್ಲಿ ಪ್ರತೀ ದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುವ ಬಿಗ್ ಬುಲೆಟಿನ್ ಕಾರ್ಯಕ್ರಮ ಎಂದರೆ ತಪ್ಪಲ್ಲ. ಪಬ್ಲಿಕ್ ಟಿವಿಯ ಮುಖ್ಯಸ್ಥರು ಆಗಿರುವ HR ರಂಗನಾಥ್ ಅವರು ನಡೆಸಿಕೊಡುವ ಈ ಬಿಗ್ ಬುಲೆಟಿನ್ ನ್ಯೂಸ್ ಅನ್ನು ಸುಮಾರು ಜನರು ವೀಕ್ಷಣೆ ಮಾಡುತ್ತಾರೆ. ಈ ಬಿಗ್ ಬುಲೆಟಿನ್ ನಿಂದ ಡಿಂಪಲ್ ದಿವ್ಯಾ ಅವರು ತುಂಬಾ ಫೇಮಸ್ ಆಗಿಬಿಟ್ಟಿದ್ದಾರೆ.

ಡಿಂಪಲ್ ದಿವ್ಯ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಅತ್ತ್ಯುತ್ತಮ ನಿರೂಪಕಿ ಎಂಬ ಪ್ರಶಸ್ತಿ ಪಡೆದುಕೊಂಡಿರುವ ದಿವ್ಯಾ ಅವರು ಪಬ್ಲಿಕ್ ಟಿವಿಯಿಂದ ಒಂದು ದಿನದ ಸಂಭಾವನೆಯಾಗಿ 5 ಸಾವಿರದವರೆಗೆ ಪಡೆಯುತ್ತಾರೆ. ತಿಂಗಳಿಗೆ ಒಂದು ಲಕ್ಷದ ಮೂವತ್ತು ಸಾವಿರದವರೆಗೂ ಸಂಭಾವನೆ ಪಡೆದುಕೊಳ್ಳುತ್ತಾರೆ. ಇನ್ನು ಮಾಹಿತಿಗಳ ಪ್ರಕಾರ ಇವರ ಒಟ್ಟು ಆಸ್ತಿ ಮೂರು ಕೋಟಿಯವರೆಗೂ ಇದೆಯಂತೆ. ನಿರೂಪಕಿಯೊಬ್ಬರು ಇಷ್ಟೆಲ್ಲಾ ಸಂಭಾವನೆ ಪಡೆಯುತ್ತಾರೆ ಎಂದರೆ ಗ್ರೇಟ್ ಅಲ್ಲವೇ.. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.