Advertisements

ಸಾಮಾನ್ಯ ಪತ್ರಕರ್ತ ಎತ್ತರಕ್ಕೆ ಬೆಳೆದ ರಂಗಣ್ಣನ ಕತೆ.! ಹೆಂಡತಿ ಮಕ್ಕಳು ಹೇಗಿದ್ದಾರೆ ನೋಡಿ..

Inspiration

ನಮಸ್ತೆ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಮಾಧ್ಯಮರಂಗ ತುಂಬಾ ಪ್ರಭಲವಾಗಿ ಬೆಳೆದಿದೆ. ಇನ್ನು ಕನ್ನಡದ ಟಾಪ್ ನ್ಯೂಸ್ ಚಾನೆಲ್ ಗಳಲ್ಲಿ ಪಬ್ಲಿಕ್ ಟಿವಿ ಕೂಡ ಒಂದು. ಈ ಚಾನೆಲ್ ಹುಟ್ಟು ಹಾಕಿದ್ದು ಬೇರೆ ಯಾರು ಅಲ್ಲ ಅವರೇ ರಂಗಣ್ಣ. ರಂಗಣ್ಣ ಅವರೆ ಈ ಚಾನೆಲ್ ನ ಚೇರ್ಮೆನ್ ಹಾಗೂ ಎಂಡಿ. ಮೂಲತಃ ಮೈಸೂರಿನವರಾದ ರಂಗಣ್ಣ ಅವರ ಪೂರ್ಣ ಹೆಸರು ಹೆಬ್ಬಾಳೆ ರಾಮಕೃಷ್ಣಯ್ಯ ರಂಗನಾಥ್ ಎಂದು. ರಾಜಕೀಯ ನಾಯಕರಾಗಿರಲಿ ಅಧಿಕಾರಿಗಳಾಗಿರಲಿ ನೇರವಾಗಿ ಮಾತನಾಡಿ ಅವರಿಗೆ ಬೆ’ವರಿ’ಳಿಸುವ ರಂಗಣ್ಣ ಪಬ್ಲಿಕ್ ಟಿವಿಯನ್ನು ಹುಟ್ಟುಹಾಕಿದ್ದೆ ಒಂದು ರೋಚಕ ಕಥೆ.. ಮಾಧ್ಯಮ ಲೋಕದಲ್ಲಿ ಏನಾದರು ಸಾಧನೆ ಮಾಡಬೇಕೆಂದು ಬೆಂಗಳೂರಿಗೆ ಬಂದು ಪತ್ರಿಕೆಯಲ್ಲಿ ವರದಿಗಾರರಾಗಿ ತನ್ನ ವೃತ್ತಿಯನ್ನು ಶುರು ಮಾಡಿದ್ರು ರಂಗಣ್ಣ.. ಇನ್ನು ರಂಗಣ್ಣ ಅವರ ರಿಯಲ್ ಲೈಫ್ ಹೇಗಿದೆ, ಅವರ ಕುಟುಂಬ ಹೇಗಿದೆ ಎಂಬುದನ್ನ ತಿಳಿಯೋಣ ಬನ್ನಿ..

Advertisements
Advertisements

ಮೇ 12, 1966ರಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನಿಸಿದ ರಂಗಣ್ಣ ಅವರಿಗೆ ಮತ್ತೊಂದು ಅ’ಡ್ಡ ಹೆಸರಿದೆ, ಅದೇ ಕ್ಯಾಪ್ಟನ್ ರಂಗಣ್ಣ. ಈಗ ರಂಗನಾಥ್ ಅಲಿಯಾಸ್ ರಂಗಣ್ಣ ಅವರಿಗೆ 55 ವರ್ಷ. ಬೆಂಗಳೂರಿಗೆ ಬಂದ ಇವರು ಮೊದಲಿಗೆ ಹಲವಾರು ಪತ್ರಿಕೆಗಳಿಗೆ ಜರ್ನಲಿಸ್ಟ್ ಆಗಿ ಕೆಲಸ ಮಾಡಿದ್ರು. ಇವರೊಬ್ಬರೇ ಪಬ್ಲಿಕ್ ಟಿವಿಯ ಸಂಸ್ಥಾಪರಾಗಿದ್ದು ಇದರ ಹೆಡ್ ಆಫೀಸ್ ಬೆಂಗಳೂರಿನ ಯಶವಂತಪುರದಲ್ಲಿದೆ. ಇನ್ನು ರಂಗನಾಥ್ ಅವರ ತಂದೆಯ ಹೆಸರು ರಾಮಕೃಷ್ಣಯ್ಯ ಹಾಗೂ ತಾಯಿಯ ಹೆಸರು ಲೀಲಾ. ರಂಗಣ್ಣ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವುದಕ್ಕೆ ಮೊದಲು ಆರ್ಕೆಸ್ಟ್ರಾದಲ್ಲಿ ಗಾಯಕರಾಗಿದ್ರು ಎಂಬುದು ವಿಶೇಷ. ಫೇಸ್ ಆಫ್ ಬೆಂಗಳೂರು, ವಾಯ್ಸ್ ಆಫ್ ಕರ್ನಾಟಕ ಎಂಬ ಬಿದುರುದುಗಳು ಕೂಡ ಇವರ ಖಾತೆಯಲ್ಲಿವೆ.

9 ಗಂಟೆಗೆ ಪ್ರಸಾರವಾಗುವ ಬಿಗ್ ಬು’ಲೆಟಿನ್ ಕಾರ್ಯಕ್ರಮ ರಂಗಣ್ಣನನ್ನು ಎಲ್ಲಾ ಜನರಿಗೂ ಪರಿಚಯವಾಗುವಂತೆ ಮಾಡಿದೆ. ರಂಗಣ್ಣನ ನೇರ ನುಡಿ, ಮಾತಿನ ಶೈಲಿಗೆ ಮಾರುಹೋಗಿರುವ ಅನೇಕ ಅಭಿಮಾನಿಗಳಾಗಿದ್ದಾರೆ. ರಂಗನಾಥ್ ಅವರ ಪತ್ನಿಯ ಹೆಸರು ಶಾರದಾ ಎಂದು. ಈ ದಂಪತಿಗೆ ತೇಜಸ್ವಿನಿ ಎಂಬ ಒಬ್ಬ ಮಗಳಿದ್ದಾಳೆ. ರಂಗನಾಥ್ ಅವರು ಬೆಳೆದು ಬಂದ ದಾರಿ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿ ಎಂದರೆ ತ’ಪ್ಪಾಗುವುದಿಲ್ಲ. ಹಲವಾರು ಬಾರಿ ತಮ್ಮನ್ನ ಅರಸಿ ಬಂದ ಅವಾರ್ಡ್ ಗಳನ್ನು ತಿ’ರಸ್ಕರಿಸಿರುವ ರಂಗಣ್ಣ, 2016ರಲ್ಲಿ ಜೀ ಕನ್ನಡ ವಾಹಿನಿ ದಶಕದ ಜರ್ನಲಿಸ್ಟ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಸಮಾನ್ಯ ಪತ್ರಕರ್ತರಾಗಿದ್ದವರು ಒಂದು ನ್ಯೂಸ್ ಚಾಲೆನ್ ಕಟ್ಟುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ ಗ್ರೇಟ್ ಅಲ್ಲವೇ.. ರಂಗಣ್ಣನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ.