Advertisements

3 ತಿಂಗಳು ಬಳಿಕ ಅಪ್ಪು ಬಗ್ಗೆ ರಹಸ್ಯ ಬಿಚ್ಚಿಟ್ಟ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್.. ಹೇಳಿದ್ದೇನು ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ಅದೆಷ್ಟೋ ಕನಸುಗಳು ಇವತ್ತಿಗೆ ಮೂರು ತಿಂಗಳ ಹಿಂದೆ ವಿಧಿಯಾಟದ ಅಬ್ಬರಕ್ಕೆ ಕೊಚ್ಚಿ ಹೋದವು ಲೆಕ್ಕವೇ ಇಲ್ಲ ಆ ಒಂದು ರತ್ನ ಇನ್ನೊಂದಿಷ್ಟು ಕಾಲ ನಮ್ಮ ನಿಮ್ಮ ನಡುವೆ ಇದ್ದಿದ್ದರೆ ಅದೆಷ್ಟು ಹೊಸ ಸಿನಿ ಆವಿಷ್ಕಾರಗಳು
ಖಂಡಿತ ಹಾಗೆ ಆಗುತ್ತಿದ್ದವು. ಮರೆಯಲಾಗದ ಮಾಣಿಕ್ಯ ಕರ್ನಾಟಕದ ಪವರ್ ಸ್ಟಾರ್ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅಗಲಿ ಇಂದಿಗೆ ಮೂರು ತಿಂಗಳು, ಅಪ್ಪು ನೆನಪಿನ ಮೆರವಣಿಗೆ ನಾಡಿನ ತುಂಬಾ ಆಗುತ್ತಿರುವ ಈ ಹೊತ್ತಲ್ಲಿ ಅಪ್ಪು ಅಗಲಿ ಮೂರು ಮಾಸದ ನಂತರ ಆ ಒಂದು ರಹಸ್ಯ ಬಯಲಾಗಿದೆ.

[widget id=”custom_html-5″]

ನಮ್ಮ ಸ್ಯಾಂಡಲ್ ವುಡ್ ಎಂಥ ಅದ್ಭುತ ಕಾಂಬಿನೇಷನ್ ನ್ನ ಮಿಸ್ ಮಾಡಿಕೊಂಡಿದೆ ಗೊತ್ತಾ ಈ ಸ್ಟೋರಿ ಓದಿನೋಡಿ ಕನ್ನಡ ಸಿನಿಮಾರಂಗದ ಆಲ್ ಮೋಸ್ಟ್ ಎಲ್ಲಾ ಹೊಸ ಹೊಸ ಕನಸು ಕಾಣುವಂತಹ ನಿರ್ದೇಶಕರಿಗೆ ಒಂದು ಕನಸು ಮಾತ್ರ ಪರಮನೆಂಟ್ ಆಗಿ ಇದ್ದೇ ಇರುತ್ತೆ. ಜೀವನದಲ್ಲಿ ಒಮ್ಮೆಯಾದರೂ ಕೂಡ ದೊಡ್ಮನೆ ಕಲಾವಿದರಿಗೆ ಸಿನಿಮಾ ಮಾಡಬೇಕು ಅಂತ ಅದರಂತೆ ನಮ್ಮ ಸ್ಯಾಂಡಲ್ ವುಡ್ ನ ಹೆಮ್ಮೆಯ ನಿರ್ದೇಶಕರಿಗೂ ಕೂಡ ಆ ಕನಸಿತ್ತು.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಒಂದು ಸಿನಿಮಾ ಮಾಡಬೇಕು ಅನ್ನೋ ಆಸೆ ದೊಡ್ಡದಾಗಿಯೇ ಇತ್ತು. ಪುನೀತ್ ರಾಜಕುಮಾರ್ ಸಿನಿಮಾವನ್ನು ಡೈರೆಕ್ಷನ್ ಮಾಡುವುದಕ್ಕಾಗಿ ಸಂತೋಷ್ ಆನಂದ್ ರಾಮ್, ದಿನಾಕರ್ ತೂಗುದೀಪ, ಪವನ್ ಕುಮಾರ್ ಹಾಗೂ ಕೃಷ್ಣ ಸೇರಿದಂತೆ ಅನೇಕ ಪ್ರತಿಭಾವಂತರು ಅಪ್ಪು ಫಿಲಂ ಡೈರೆಕ್ಷನ್ ಗಾಗಿ ಕಾಯುತ್ತಿದ್ದರು. ಅದರಂತೆಯೇ ಆ ನಿರ್ದೇಶಕರು ಕೂಡ ಅಪ್ಪು ಸಿನಿಮಾಗಾಗಿ ಕಾದಿದ್ದರು.ಆ ಡೈರೆಕ್ಟರ್ ಅಷ್ಟೇ ಅಲ್ಲ ಸ್ವತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡ ಆ ನಿರ್ದೇಶಕ ರ ಜೊತೆ ಕೆಲಸ ಮಾಡಬೇಕು ಅನ್ನೋ ಆಸೆಯನ್ನು ವ್ಯಕ್ತಪಡಿಸಿ ಕಥೆಯನ್ನು ಕೂಡ ಕೇಳಿದ್ದರು ಆದರೆ ಆ ಕನಸು ನನಸಾಗಲೆ ಇಲ್ಲಾ ಹಾಗಾದರೆ ಯಾರು ಆ ಡೈರೆಕ್ಟರ್ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಉಗ್ರಂ ಚಿತ್ರದ ಮುಗೋರ್ ನ ಸೃಷ್ಟಿಕರ್ತ ಕೆಜಿಎಫ್ ಚಿತ್ರದ ನರಾಚಿ ಸಾಮ್ರಾಜ್ಯದ ಕ್ರಿಯೇಟರ್ ಒನ್ ಅಂಡ್ ಓನ್ಲಿ ಪ್ರಶಾಂತ್ ನೀಲ್, ಪ್ರಶಾಂತ್ ನೀಲ್ ಅವರು ಮಾತು ಕಡಿಮೆ ಕೆಲಸ ಜಾಸ್ತಿ ಕೆಲಸದ ಕೀರ್ತಿ ಕೂಡ ಹೆಚ್ಚು ಮಾಡಿದ್ದು ಒಂದು ಮತ್ತೊಂದು ಸಿನಿಮಾ..

[widget id=”custom_html-5″]

ಆದರೂ ಇಡೀ ಇಂಡಿಯಾನೆ ತನ್ನ ಕಡೆ ತಿರುಗಿ ನೋಡುವಂತೆ ಟಾಲಿವುಡ್ ಸ್ಟಾರ್ ನಟರೆಲ್ಲಾ ನನಗೆ ಒಂದು ಸಿನಿಮಾ ಮಾಡಿಕೊಡಿ ಎಂದು ಹಿಂದೆ ಬೀಳುವಂತೆ ಮಾಡಿರುವ ನಿರ್ದೇಶಕ ಅಂದರೆ ಪ್ರಶಾಂತ್ ನೀಲ್ ಅವರಿಗೆ ಪುನೀತ್ ರಾಜಕುಮಾರ್ ಅವರಿಗೊಂದು ಸಿನಿಮಾ ಮಾಡಬೇಕು ಅನ್ನೋ ಆಸೆ ಇತ್ತಂತೆ ಬರಿ ಆಸೆ ಮಾತ್ರ ಅಲ್ಲ ಒಂದು ಲೈನ್ ಕೂಡ ರೆಡಿ ಮಾಡಿ ಅಪರಂಜಿ ಅಂತಹ ವ್ಯಕ್ತಿತ್ವದ ಅಪ್ಪುಗೆ ಕತೆ ಹೇಳಿ ಒಪ್ಪಿಸಿದರಂತೆ. ಆ ಸಿನಿಮಾಗೆ ಆಹ್ವಾನ ಎನ್ನುವ ಹೆಸರು ಕೂಡ ನೀಲ್ ಅವರು ಇಟ್ಟಿದ್ದರು. ಕೆಜಿಎಫ್ ಸಿನಿಮಾ ನಿರ್ಮಾಣ ಮಾಡಿ ಇಡೀ ಇಂಡಿಯಾನೇ ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡುವಂತೆ ಮಾಡಿದ್ದ ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ನಾವೇ ಹೆಮ್ಮೆಯಿಂದ ಪ್ರೊಡ್ಯೂಸ್ ಮಾಡುತ್ತೇವೆ ಅಂತ ಮುಂದೆ ಕೂಡ ಬಂದಿದ್ದರು. ಒನ್ ಲೈನ್ ಕತೆ ರೆಡಿ ಇದ್ದರು ಖರ್ಚು ಮಾಡಲು ಹೊಂಬಾಳೆ ಫಿಲಂಸ್ ಸಿದ್ಧವಿದ್ದರೂ ಅದ್ಯಾಕೋ ಪ್ರಶಾಂತ್ ನೀಲ್ ಅಪ್ಪು ಅವರ ಸಿನಿಮಾ ಸೆಟ್ಟೇರಲಿಲ್ಲ ಅನ್ನೋದಕ್ಕೆ ಉತ್ತರ ಕಾಲ ಕೂಡಿ ಬರಲಿಲ್ಲ.

[widget id=”custom_html-5″]

ಸಾಲು ಸಾಲು ಫಿಲಂ ಗಳಲ್ಲಿ ಪುನೀತ್ ರಾಜಕುಮಾರ್ ಅವರು ಬಿಜಿ ಇದ್ದರು. ಇತ್ತ ಪ್ರಶಾಂತ್ ನೀಲ್ ಕೂಡ ಕೆಜಿಎಫ್ 2, ಸಲಾರ್, ಜೂನಿಯರ್ ಎನ್ಟಿಆರ್ ಅವರ ಹೊಸ ಮೂವಿಯಲ್ಲಿ ತಲ್ಲೀನರಾಗಿದ್ದರು. ಅಪ್ಪು ಮತ್ತು ನೀಲ್ ಇಬ್ಬರು ಕೂಡ ವೇಗವಾಗಿ ಕೆಲಸ ಮುಗಿಸಿ ಒಂದಾಗಿ ಸಿನಿಮಾ ಮಾಡೋಣ ಅಂತ ಮುಂದಾಗಿದ್ದರು ಪಾಪೀ ಕ’ರೋ’ನ ನಿರ್ಬಂಧನೆಗಳು ವೇಗವನ್ನು ತಗ್ಗಿಸಿದ್ದವು. ಆದರೆ ವಿಧಿ ಮಾತ್ರ ತನ್ನ ವೇಗವನ್ನು ಕಡಿಮೆ ಮಾಡಲೆ ಇಲ್ಲಾ. ಇವತ್ತಿಗೆ ಮೂರು ತಿಂಗಳ ಹಿಂದೆ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಿತ್ತು.ಕನಸುಗಳಿಗೆ ಕತ್ತಲು ಕವಿದಿತ್ತು. ನಗುಮುಖದ ರಾಜಕುಮಾರ ತನ್ನ ತಂದೆ ತಾಯಿಯ ಬಳಿ ಬಹಳ ಬೇಗನೆ ಹೊರಟು ಬಿಟ್ಟಿದ್ದರು. ಒಂದು ವೇಳೆ ಅಪ್ಪು ಅವರ ಪವರ್ ಫುಲ್ ಅಭಿನಯ ಪ್ರಶಾಂತ್ ನೀಲ್ ಡೈರೆಕ್ಷನ್ ಮೂಡಿಬಂದಿದ್ದರೆ ಇಡೀ ದೇಶಕ್ಕೆ ದೇಶವೇ ಚಿತ್ರರಂಗದ ಪ್ರೇಮಿಗಳಲ್ಲ ರೂ ಕೂಡ ನೋಡಿ ಕೊಂಡಾಡುತ್ತಿದ್ದರೇನೋ ಯಾರು ಬಲ್ಲವರು ಎಂತಹ ಚಾನ್ಸ್ ಮಿಸ್ ಆಯ್ತು ನೋಡಿ..

[widget id=”custom_html-5″]