Advertisements

ಆಸ್ಟ್ರೇಲಿಯಾದಲ್ಲಿ ಅಂದು ರಾತ್ರಿ ಅಪ್ಪು ದಾರಿತಪ್ಪಿ 1 ಗಂಟೆಯಿಂದ 3 ಗಂಟೆಯವರೆಗೂ ದಾರಿ ಪಕ್ಕದಲ್ಲೇ ಕೂತಿದ್ದಾಗ ಸಹಾಯಕ್ಕೆ ಬಂದವರು ಯಾರು ಗೊತ್ತಾ?

Cinema

ಪುನೀತ್ ರಾಜಕುಮಾರ್ ಅವರು ಸಮಯ ಸಿಕ್ಕರೆ ಸಾಕು ಫ್ಯಾಮಿಲಿಜೊತೆಗೆ ಪ್ರವಾಸ ಕೈಗೊಳ್ಳುತ್ತಿದ್ದರು. ಅದು ಯಾರೊಬ್ಬರೂ ಸಹಾಯಕರನ್ನು ಕರೆದುಕೊಂಡು ಹೋಗದೆ, ತಮ್ಮ ಫ್ಯಾಮಿಲಿಯನ್ ಅಷ್ಟೆ ಕರೆದುಕೊಂಡು ಹೋಗುತ್ತಿದ್ದರು. ಕುಟುಂಬದ ನಾಲ್ವರ ಬ್ಯಾಗನ್ನು ಅಪ್ಪು ತಾವೊಬ್ಬರೇ ಹೊತ್ತು ಸಾಗುತ್ತಿದ್ದರಂತೆ. ಅಹಂ ಇಲ್ಲದ ಹೃದಯ ಶ್ರೀಮಂತಿಕೆ ವ್ಯಕ್ತಿ ಪುನೀತ್ ಇನ್ನುವುದಕ್ಕೆ ಇದು ಸಾಕ್ಷಿ.

[widget id=”custom_html-5″]

ಪುನೀತ್ ಇರುವಷ್ಟು ದಿನವೂ ಇನ್ನೊಬ್ಬರ ಮೊಗದಲ್ಲಿ ನಗುವನ್ನು ಮುಡಿಸುತ್ತಿದ್ದರು. ಹಾಗೆ ನಡೆದುಕೊಂಡವರು. ಯಾರೊಬ್ಬರಿಗೂ ತನ್ನಿಂದ ನೋವಾಗಬಾರದು ಎನ್ನುವುದು ಅವರ ಆಸೆ. ಅದರಂತೆ ಕೊನೆವರೆಗು ನಡೆದುಕೊಂಡರು ಅಪ್ಪು. ಎಲ್ಲಿ ಹೋದರೂ ಅಲ್ಲಿಯ ಪರಿಸರವನ್ನು ಎಂಜಾಯ್ ಮಾಡುತ್ತಿದ್ದರು.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಅಲ್ಲಿ ಸಿಗುವ ಸ್ಥಳೀಯ ಆಹಾರವನ್ನು ಸವಿಯುವ ಸರಳ ಜೀವಿ. ಇಂತಹ ಅಪ್ಪು ಶೂಟಿಂಗ್ ಎಂದು ಆಸ್ಟ್ರೇಲಿಯಾಕ್ಕೆ ಹೋದಾಗ ಅಲ್ಲಿ ತಾವು ಇದ್ದ ಹೋಟೆಲ್ ದಾರಿಯನ್ನು ಮರೆತು ರಸ್ತೆಯಲ್ಲಿ ರಾತ್ರಿ ಕಳೆದರಂತೆ. ಈ ಪ್ರಸಂಗವನ್ನು ಇದೀಗ ಅಭಿಮಾನಿಗಳೊಂದಿಗೆ ಮತ್ತೆ ಹಂಚಿಕೊಳ್ಳೋಣ ಬನ್ನಿ. ಪುನೀತ್ ಅವರು ಸಿನಿಮಾಗಾಗಿ ಆಗಾಗ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದರು. ಅವರು ಸಹಾಯಕರೊಂದಿಗೆ ಹೆಚ್ಚಾಗಿ ಹೋಗುತ್ತಿರಲಿಲ್ಲ. ಹೀಗೆ ಚಿತ್ರೀಕರಣಕ್ಕೆ ಹೋದಾಗ ಹೋಟೆಲ್ ದಾರಿ ಮರೆತು ನಡುರಸ್ತೆಯಲ್ಲೇ ರಾತ್ರಿ ಕಳೆದಿದ್ದರಂತೆ ನಮ್ಮ ಪುನೀತ್ ಅವರು. ಹೌದು.. ಆಸ್ಟ್ರೆಲಿಯಾ ದೇಶಕ್ಕೆ ಚಿತ್ರೀಕರಣಕ್ಕೆಂದು ತೆರಳಿದ್ದ ಸಮಯದಲ್ಲಿ ಪುನೀತ್ ಚಿತ್ರೀಕರಣ ಮುಗಿದ ತಮ್ಮ ಮ್ಯಾನೇಜರ್ ಕುಮಾರ್ ಅವರನ್ನು ಕರೆದುಕೊಂಡು ಹೊರಗೆ ಊಟಕ್ಕೆ ಹೋದರು.

[widget id=”custom_html-5″]

ಊಟ ಮುಗಿಸಿ ಆಚೆ ಬಂದಾಗ ಸಮಯ 11.30 ರ ರಾತ್ರಿಯಾಗಿತ್ತು. ಊಟ ಆದಮೇಲೆ ನಡೆದುಕೊಂಡು ಹೊಟೆಲ್ ಕಡೆಗೆ ಬರುತ್ತಿದ್ದ ಅಪ್ಪು ಮತ್ತು ಮ್ಯಾನೇಜರ್ ದಾರಿ ತಪ್ಪಿ ಹೋಗಿದ್ದರು. ಅದಾಗಲೇ ಸಮಯ ರಾತ್ರಿ 1 ಗಂಟೆಯಾಗಿತ್ತು. ದಾರಿಯಲ್ಲಿ ಯಾರೊಬ್ಬರ ಸುಳಿವೂ ಇಲ್ಲ. ಆಗೆಲ್ಲಾ ಹೊರ ದೇಶಕ್ಕೆ ಹೋದಾಗ ಅಲ್ಲಿ ಸಂಪೂರ್ಣ ಪ್ರೊಡಕ್ಷನ್ ಇರುತ್ತದೆ. ಒಂದು ಫೋನ್ ಮಾತ್ರ ಇಟ್ಟುಕೊಂಡು ಅದರಲ್ಲಿಯೇ ಎಲ್ಲರೂ ಕುಟುಂಬಗಳಿಗೆ ಫೋನ್ ಮಾಡಲು ಬಳಸುತ್ತಿದ್ದರು. ಪುನೀತ್ ಅವರಿಗೆ ಹೊಟೆಲ್ ಹೆಸರು ಬಿಟ್ಟರೆ ಅಲ್ಲಿ ಯಾವ ದಾರಿಯ ಹೆಸರೂ ಸಹ ಗೊತ್ತಿರಲಿಲ್ಲ. ದಾರಿ ತಪ್ಪಿದ ಪುನೀತ್ ನಡೆದು ನಡೆದು ಅದಾಗಲೇ ಬೆಳಗ್ಗೆ 3 ಗಂಟೆ ಆಗಿ ಹೋಗಿತ್ತು.

[widget id=”custom_html-5″]

ಯಾರದ್ದಾದರೂ ಮನೆ ಬಾಗಿಲು ತಟ್ಟಿ ಹೊಟೆಲ್ ಹೆಸರು ಹೇಳಿ ಕೇಳೋಣ ಅಂದರೆ ಅವರು ನಮ್ಮನ್ನು ತಪ್ಪಾಗಿ ತಿಳಿದುಕೊಂಡು ಬಿಟ್ಟರೆ ಏನು ಮಾಡೊದು ಎಂದು ಸುಮ್ಮನಾಗಿ ಬಿಟ್ಟರು. ಜೊತೆಗೆ ನಾವು ಬೇರೆ ಕತ್ತಲ್ಲಿ ಚೈನ್ ಹಾಕಿದ್ದೆವು. ಎಂದು ಆ ದಿನ ಭ’ಯಪಟ್ಟುಕೊಂಡಿದ್ದನ್ನು ಕುಮಾರ್ ಅವರು ನೆನಪಿಸಿಕೊಂಡರು. ಆಗಲೂ ಸಹ ಆ ರಾತ್ರಿಯಲ್ಲಿ ದಾರಿ ತಪ್ಪಿ ಕೂತಿದ್ದರೂ ಸಹ ಪುನೀತ್ ಅವರು ಚಿತ್ರತಂಡದವರ ಬಗ್ಗೆಯೇ ಯೋಚಿಸಿ ನಾನು ಬೆಳಿಗ್ಗೆ ಚಿತ್ರೀಕರಣಕ್ಕೆ ಬೇಗ ಹೋಗ್ಬೇಕು. ನನ್ನಿಂದ ಅವರಿಗೆ ತೊಂ’ದ’ರೆ ಆಗಬಾರದು ಎನ್ನುತ್ತಿದ್ದರಂತೆ. ಆ ಸಮಯದಲ್ಲಿಯೂ ನನ್ನಿಂದ ಚಿತ್ರೀಕರಣಕ್ಕೆ ತೊಂ’ದ’ರೆಯಾಗುತ್ತದೆ ಎಂದು ಚಿಂತಿಸುತ್ತಲೇ ಇದ್ದರಂತೆ..

[widget id=”custom_html-5″]

ಬಹುಶಃ ಪುನೀತ್ ಅವರ ಒಳ್ಳೆಯ ಗುಣಕ್ಕೋ ಏನೋ ದೇವರಂತೆ ಅದೇ ದಾರಿಯಲ್ಲಿ ಒಬ್ಬ ವ್ಯಕ್ತಿ ಬಂದರಂತೆ. ಅದಾಗಲೇ ಸಮಯ 4 ಗಂಟೆಯಾಗಿ ಹೋಗಿತ್ತು. ಅದೃಷ್ಟ ಎಂದರೆ ಆತ ಕನ್ನಡದವನೇ ಆಗಿದ್ದು ಆತನೇ ಪುನೀತ್ ಅವರನ್ನು ನೋಡಿ ಓಡಿ ಬಂದು ಸಾರ್ ನೀವೇನ್ ಇಲ್ಲಿ ಕೂತಿದ್ದೀರಾ ಏನಾಯ್ತು ಎಂದು ಕೇಳಿದ್ದಾಗ ಸಂಕೋಚದಿಂದಲೇ ನಡೆದ ಘ’ಟ’ನೆಯನ್ನು ವಿವರಿಸಿದ್ದಾರೆ. ಹೋಟೆಲ್ ಹೆಸರು ಕೇಳಿದ ಅಭಿಮಾನಿ ಅಯ್ಯೋ ಸರ್ ನೀವು ನಿಮ್ ಹೊಟೆಲ್ ನಿಂದ 15 ಕಿಲೋಮೀಟರ್ ದೂರ ಬಂದಿದ್ದೀರಿ ಎಂದರಂತೆ. ಬನ್ನಿ ನಾನು ಕರೆದುಕೊಂಡು ಹೋಗ್ತೀನಿ ಎಂದು ಅಲ್ಲಿಯೇ ಪಕ್ಕದಲ್ಲಿದ್ದ ತನ್ನ ಮನೆಗೆ ಹೋಗಿ ಕಾರ್ ತಂದರಂತೆ.

[widget id=”custom_html-5″]

ತಕ್ಷಣ ಅಪ್ಪು ಅವರನ್ನು ಹಾಗೂ ಕುಮಾರ್ ಅವರನ್ನು ಹೊಟೆಲ್ ಗೆ ಬಿಟ್ಟರಂತೆ. ಆಗಲೂ ಸಹ ನಿಮ್ಮಿಂದ ಬಹಳ ಸಹಾಯ ಅಯಿತು.. ಚಿತ್ರೀಕರಣಕ್ಕೆ ಸರಿಯಾದ ಸಮಯಕ್ಕೆ ಹೋಗಬಹುದು ಎಂದು ಆತನಿಗೆ ಧನ್ಯವಾದಗಳನ್ನು ಹೇಳಿ.. ಮತ್ತೆ ವಿಶ್ರಾಂತಿಯನ್ನು ಪಡೆಯದೇ ತಕ್ಷಣ ರೆಡಿ ಆಗಿ ಚಿತ್ರೀಕರಣಕ್ಕೆ ತೆರಳಿದ್ದರಂತೆ. ಕೆಲಸದ ಮೇಲೆ ಅಪ್ಪುಗಿದ್ದ ಶ್ರದ್ಧೆ ನಿಜಕ್ಕೂ ಮೆಚ್ಚಲೇ ಬೇಕು. ಹೀಗೆ ಪುನೀತ್ ರಾಜಕುಮಾರ ಇರುವಷ್ಟು ದಿನ ತನ್ನಿಂದ ಇನ್ನೊಬ್ಬರಿಗೆ ನೋವಾಗಬಾರದು ಎಂದರೆ ಹೊರತು, ಯಾರೊಬ್ಬರ ಮನಸ್ಸು ನೋಯಿವ ಕೆಲಸ ಮಾಡಲಿಲ್ಲ. ಆದ್ದರಿಂದಲೇ ಅಭಿಮಾನಿಗಳ ಪಾಲಿಗೆ ಇಂದು ದೇವರಾಗಿದ್ದಾರೆ. ಪ್ರತಿ ದಿನ ಪೂಜಿಸಿಕೊಳ್ಳುತ್ತಿದ್ದಾರೆ.

[widget id=”custom_html-5″]