ಕನ್ನಡ ರಾಜಕುಮಾರ ಸರಳತೆಯ ಸಾಮ್ರಾಟ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮಿಂದ ದೂರವಾಗಿ ತುಂಬಾ ದಿನಗಳು ಕಳೆದುಹೋಗಿವೆ ಇದೇ ವೇಳೆಯಲ್ಲಿ ಅಪ್ಪು ಅವರ ಸಮಾಧಿ ದಿನದಿಂದ ದಿನಕ್ಕೆ ದೇವಸ್ಥಾನವಾಗಿ ಪರಿವರ್ತನೆಯಾಗುತ್ತಿದೆ. ಈಗಲೂ ಕೂಡ ಪ್ರತಿದಿನ ಸಾವಿರಾರು ಅಭಿಮಾನಿಗಳು ಅಪ್ಪು ಅವರ ಸ’ಮಾ’ಧಿಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಎರಡು ತಿಂಗಳ ಪುಣ್ಯತಿಥಿಯೊಂದು ಶಿವಣ್ಣ ಮತ್ತು ಕುಟುಂಬಸ್ಥರು ಕೂಡ ಭೇಟಿ ನೀಡಿದ್ದರು.ಶಿವಣ್ಣ ಮತ್ತು ಅಪ್ಪು ಅವರು ಬದುಕಿದ್ದಾಗ ಬಹಳ ಅನ್ಯೋನ್ಯವಾಗಿದ್ದರು. ಎಲ್ಲ ಕಾರ್ಯಕ್ರಮಗಳಲ್ಲೂ ಕೂಡ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು.ಅದಕ್ಕೂ ಮಿಗಿಲಾಗಿ ಸಮಯ ಸಿಕ್ಕಾಗಲೆಲ್ಲ ಇಬ್ಬರು ಒಟ್ಟಿಗೆ ಸೇರಿ ಎರಡು ಕುಟುಂಬಗಳ ಜೊತೆ ಅಮೂಲ್ಯವಾದ ಸಮಯವನ್ನು ಕಳೆಯುತ್ತಿದ್ದರಂತೆ.
[widget id=”custom_html-5″]

ಶಿವಣ್ಣ ಅವರು ತನ್ನ ತಮ್ಮ ಪುನೀತ್ ರಾಜಕುಮಾರ್ ಅವರನ್ನು ತನ್ನ ತಂದೆ ರಾಜಕುಮಾರ್ ನಂತೆ ನೋಡುತ್ತಿದ್ದರು ಅಪ್ಪು ಅವರನ್ನು, ಯಾಕೆಂದರೆ ತುಂಬಾ ಚಿಕ್ಕವಯಸ್ಸಿನಿಂದಲೂ ಅಪ್ಪು ಅವರು ತನ್ನ ತಂದೆಯ ಜೊತೆ ಆಕ್ಟಿಂಗ್ ಮಾಡಿಕೊಂಡು ತಂದೆಯ ಹಾದಿಯಲ್ಲಿ ಬದುಕು ಸಾಗಿಸುತ್ತಾ ಬಂದವರು ಅಪ್ಪು. ಶಿವಣ್ಣನು ಅಪ್ಪುವಿನ ಮೇಲೆ ಅತಿಯಾದ ಅಭಿಮಾನ ಪ್ರೀತಿಯನ್ನು ಇಟ್ಟುಕೊಂಡಿದ್ದರು ಹಾಗೂ ಅಪ್ಪು ನನ್ನ ತಮ್ಮನಾಗಿ ಪಡೆದಿದ್ದಕ್ಕೆ ನಾವೇ ಅದೃಷ್ಟವಂತರು ಎಂದು ಶಿವಣ್ಣನು ಒಂದು ಫಂಕ್ಷನ್ ವೇಳೆ ಹೇಳಿಕೊಂಡಿದ್ದರು ಅಷ್ಟರಮಟ್ಟಿಗೆ ಶಿವಣ್ಣನು ಅಪ್ಪು ಅವರನ್ನು ಗೌರವಿಸುತ್ತಿದ್ದರು.
[widget id=”custom_html-5″]

ಇನ್ನು ಅಪ್ಪು ಅವರು ಕೂಡ ಶೂಟಿಂಗ್ ಇಲ್ಲದಿದ್ದಾಗ ಅಥವಾ ಫ್ರೀ ಇದ್ದ ಸಮಯದಲ್ಲಿ ಶಿವಣ್ಣನ ಮನೆಗೆ ಹೋಗಿ ಅಲ್ಲಿ ಸಮಯ ಕಳೆದು ಬರುತ್ತಿದ್ದರು. ಹಾಗೆ ಅಪ್ಪು ಅವರು ಯಾವುದೇ ಸಿನಿಮಾ ಪ್ರಾಜೆಕ್ಟ್ ಒಪ್ಪಿಕೊಂಡರು ಶಿವಣ್ಣನ ಅತ್ತಿರ ಡಿಸ್ಕಸ್ ಮಾಡಿ ಮುಂದೆ ತನ್ನ ಕೆಲಸವನ್ನು ಸ್ಟಾರ್ಟ್ ಮಾಡುತ್ತಿದ್ದರಂತೆ ಅಪ್ಪು, ಅಣ್ಣ ತಮ್ಮನ ಬಾಂಧವ್ಯ ತುಂಬಾ ಪ್ರೀತಿಯಿಂದ ಕೂಡಿತ್ತು, ತನ್ನ ಪ್ರೀತಿ ತಮ್ಮ ಅಪ್ಪುವನ್ನು ಕಳೆದುಕೊಂಡು ಶಿವಣ್ಣನವರು ತುಂಬಾ ದುಃಖ ಪಟ್ಟಿದ್ದರು. ಯಾವಾಗಲೂ ಕೂಡ ಅಪ್ಪ ಅವರನ್ನು ನೆನೆಸಿಕೊಂಡು ಕಣ್ಣೀರಿಡುತ್ತಾರಂತೆ. ಅಪ್ಪು ಅವರು ನೆನಪಾದಾಗೆಲ್ಲ ಶಿವಣ್ಣ ಅವರು ಅಪ್ಪು ಸಮಾಧಿ ಬಳಿ ಹೋಗಿ ಬರುತ್ತಿದ್ದರಂತೆ..
[widget id=”custom_html-5″]