Advertisements

ಹಳ್ಳಿ ಹೈದ ರಾಜೇಶ ನೆನಪಿದ್ದಾನಾ! ಅಂದು ಅಪ್ಪು ರಾಜೇಶ್ ಗೆ ಮಾಡಿದ ಸಹಾಯ ನೆನೆದು ಸಮಾಧಿ ಬಳಿ ಬಂದಿರುವ ಈ ಮಗು ಯಾರದ್ದು ಗೊತ್ತೇ..

Cinema

ಪುನೀತ್ ರಾಜಕುಮಾರ್ ಅವರು ಅಗಲಿ ಇಂದು ಒಂದು ತಿಂಗಳು ಅದೆಷ್ಟು ಬೇಗ ಸಮಯ ಗಾಳಿಯ ವೇಗದಲ್ಲಿ ಸಾಗುತಿದೆ ಅನಿಸುತ್ತಿದೆ. ಆದರೆ ಇದ್ದಷ್ಟು ದಿನ ಮತ್ತೊಬ್ಬರಿಗೆ ನೆರವಾಗುತ್ತಲೆ ಬಂದ ಪುನೀತ್ ಅವರು ಪ್ರತಿಯೊಂದನ್ನು ಯಾರಿಗೂ ತಿಳಿಯದಂತೆ ಮಾಡುತ್ತಿದ್ದರು.ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದೆಂದು ದೊಡ್ಡ ಗುಣದ ಪುಣ್ಯಾತ್ಮ ನಾದ. ಆದರೆ ಎಲ್ಲರಿಗೂ ತಿಳಿದಂತೆ ಅಪ್ಪು ಮಾಡಿದ ಸಹಾಯ ಒಂದೆರಡು ಮಾತ್ರವೆ ಹೌದು ಕೋಟ್ಯಾಧಿಪತಿ ಶೋ ನಲ್ಲಿ ತಮ್ಮ ಕೈಯಲ್ಲಿದ್ದ ವಾಚ್ ನ್ನು ಒಬ್ಬ ಸ್ಪರ್ಧಿ ಇಷ್ಟಪಟ್ಟರೆಂದು ಹಿಂದೆ ಮುಂದೆ ಯೋಚಿಸದೆ ಬಹಳ ದುಬಾರಿ ವಾಚ್ ಆದರೂ ಸಹ ಆ ತಕ್ಷಣ ತೆಗೆದುಕೊಟ್ಟಿದ್ದರು. ಮತ್ತೊಂದು ಘ’ಟ’ನೆ ಎಂದರೆ ಅದು ಹಳ್ಳಿ ಹೈದ ರಾಜೇಶ್ ನಿಗೆ ಫಿನಾಲಿ ವೇದಿಕೆ ಮೇಲೆಯೆ ಅಪ್ಪು ತನ್ನ ಕತ್ತಲಿದ್ದ ಚಿನ್ನದ ಸರವನ್ನು ತೆಗೆದು ಆತನ ಕೊರಳಿಗೆ ಹಾಕಿದ್ದರು..

[widget id=”custom_html-5″]

Advertisements
Advertisements

ಹಳ್ಳಿ ಹೈದ ರಾಜೇಶ್ ಅಪ್ಪು ಅವರ ದೊಡ್ಡ ಅಭಿಮಾನಿಯೂ ಹೌದು ಬಹಳ ಮುಗ್ಧನಾಗಿದ್ದ ರಾಜೇಶ್ ಕಾಡಿನಿಂದ ಬಂದು ಆ ಶೋ ಕೂಡ ಗೆದ್ದ.ಆದರೆ ಜೀವನದಲ್ಲಿ ಸೋತುಬಿಟ್ಟ ಚಿಕ್ಕ ವಯಸ್ಸಿಗೆ ಎಲ್ಲರ ಮನಸ್ಸಿನಲ್ಲಿ ಉಳಿದು ತಾನೆ ದುಡುಕಿ ಇಹಲೋಕ ತ್ಯಜಿಸಿ ಬಿಟ್ಟ. ಆದರೆ ಇಂದು ಅಪ್ಪು ಅವರ ಸಮಾಧಿಯ ಬಳಿ ಒಂದು ಪುಟ್ಟ ಕಂದಮ್ಮ ಆಗಮಿಸಿತ್ತು. ಆ ಕಂದನ ಕೊರಳಲ್ಲಿ ಅಪ್ಪು ಕೊಟ್ಟಿದ್ದ ಅದೆ ಬಂಗಾರದ ಸರವಿತ್ತು. ಅಷ್ಟಕ್ಕು ಆ ಮಗು ಯಾರು ಎಂಬ ಕುತೂಹಲ ಎಲ್ಲರಿಗೂ ಇತ್ತು ಹೌದು ರಾಜೇಶ್ ಅಗಲಿದ ನಂತರ ವಿಚಾರ ತಿಳಿದ ಪುನೀತ್ ಅವರು ನೋವು ಪಟ್ಟಿದ್ದರು. ಒಮ್ಮೆ ಅವರ ಕುಟುಂಬ ಆರ್ಥಿಕವಾಗಿ ತೊಂದರೆಯಲ್ಲಿದೆ ಅಂತ ತಿಳಿದು ವ್ಯಕ್ತಿಯೊಬ್ಬರ ಕೈಯಲ್ಲಿ ಹಣವನ್ನು ಸಹಾ ಕೊಟ್ಟು ಕಳಿಸಿದರು. ಪ್ರತಿಯೊಬ್ಬರ ಕಷ್ಟಗಳಿಗೂ ದೇವರಂತೆ ಸ್ಪಂದಿಸುತ್ತಿದ್ದ ಅಪ್ಪು ಈಗ ದೇವರ ಬಳಿಯೆ ಹೋಗಿಬಿಟ್ಟರು.

[widget id=”custom_html-5″]

ಇನ್ನು ರಾಜೇಶ್ ಇದ್ದಷ್ಟು ದಿನ ಪುನೀತ್ ಅವರು ಕೊಟ್ಟ ಸರವನ್ನು ತಾನೆ ಹಾಕಿಕೊಂಡಿದ್ದ. ಇನ್ನೆರಡು ವರ್ಷದ ಹಿಂದೆ ರಾಜೇಶ್ ನ ಸಹೋದರಿಗೆ ಗಂಡು ಮಗುವಾಗಿದ್ದು ರಾಜೇಶನೆ ತಂಗಿ ಹೊಟ್ಟೆಯಲ್ಲಿ ಮಗುವಾಗಿ ಮತ್ತೆ ಹುಟ್ಟಿ ಬಂದಿದ್ದಾನೆಂದು ಆ ಸರವನ್ನು ಮಗುವಿನ ಕೊರಳಿಗೆ ಹಾಕಲಾಯಿತು. ಆದರೆ ಅಪ್ಪು ಅಗಲಿದ ಎರಡು ತಿಂಗಳ ಹಿಂದಷ್ಟೇ ತನ್ನ ತಂದೆಯನ್ನು ಉಳಿಸಿಕೊಳ್ಳುವ ಸಲುವಾಗಿ ಅಪ್ಪು ಕೊಟ್ಟಿದ್ದು ಸರವನ್ನು ಅಡವಿಟ್ಟಿದ್ದರು ರಾಜೇಶ್ ನ ಸಹೋದರಿ ಆದರೆ ಅತ್ತ ಅಪ್ಪುನೂ ಉಳಿಯಲಿಲ್ಲ ಇತ್ತ ಪುನೀತ್ ಅವರು ಕೊಟ್ಟ ಸರವು ಕೂಡ ಇಲ್ಲದಂತಾಗಿತ್ತು. ಬಳಿಕ ನಿಖಿಲ್ ಎಂಬ ಸ್ಥಳೀಯ ಮುಖಂಡರೊಬ್ಬರು ಆಕೆಗೆ ಸಹಾಯ ಮಾಡಿ ಸರವನ್ನು ಬಿಡಿಸಿಕೊಂಡಿದ್ದಾರೆ. ಆದರೆ ಆದಾದ ಮೂರು ದಿನದಲ್ಲಿ ಅಪ್ಪು ಇಹಲೋಕ ತ್ಯಜಿಸಿದರು . ಆದರೆ ಈಗ ಮಗುವಿನ ಜೊತೆ ಬೆಂಗಳೂರಿಗೆ ಬಂದಿರುವ ರಾಜೇಶ್ ನ ಸಹೋದರಿ ಮಂಜುಳಾ ಅವರು ಪುನೀತ್ ಅವರ ಸಮಾಧಿಗೆ ಮಗನಿಂದ ನಮಸ್ಕಾರ ಮಾಡಿಸಿ ಕರೆದುಕೊಂಡು ಹೋಗಿದ್ದಾರೆ.

[widget id=”custom_html-5″]