Advertisements

ಪುನೀತ್ ಮನೆಗೆ ಭೇಟಿ ಕೊಟ್ಟ ಕಿಚ್ಚ ಸುದೀಪ್ ಪತ್ನಿ! ಕಣ್ಣೀರಿಟ್ಟ ಅಶ್ವಿನಿ..

Cinema

ನಮಸ್ಕಾರ ವೀಕ್ಷಕರೇ ಕನ್ನಡದ ಖ್ಯಾತ ನಟ ನಗುವಿನ ರಾಜಕುಮಾರ ಸರಳತೆಯ ಸಾಹುಕಾರ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ನಮಗೆಲ್ಲಾ ನೆನಪಾಗಿ ಎಲ್ಲರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ತುಂಬು ಕುಟುಂಬದ ಫ್ಯಾಮಿಲಿ ಮ್ಯಾನ್ ಪುನೀತ್ ರಾಜಕುಮಾರ್ ಅವರ ನಿಧನದಿಂದ ಆ ಕಹಿ ಸುದ್ದಿ ಮತ್ತು ಕಹಿ ಘಟನೆಯಿಂದ ಇಡೀ ಕರ್ನಾಟಕವೂ ಹಾಗೂ ಎಲ್ಲಾ ಚಿತ್ರರಂಗವೂ ಕೂಡ ಒಂದು ಕ್ಷಣ ತಲ್ಲಣ ವಾಗಿತ್ತು. ಇನ್ನು ಅವರ ರಾಜ್ ಕುಟುಂಬಕ್ಕೆ ದೊಡ್ಡ ಸುನಾಮಿಯೇ ಬಂದು ಅಪ್ಪಳಿಸಿ ದಂತೆ ಆಗಿತ್ತು. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತುಂಬಾನೇ ನೊಂದು-ಬೆಂದು ಹೋಗಿದ್ದರು ಅಶ್ವಿನಿ ಅವರ ಬಾಳಲ್ಲಿ ಯಾವತ್ತಿಗೂ ಕೂಡ ನಡೆಯ ಬಾರದಂತ ಅಂತ ಘಟನೆ ನಡೆದು ಹೋಗಿತ್ತು. ಪುನೀತ್ ರಾಜಕುಮಾರ್ ಅವರ ಮನೆಗೆ ಪ್ರತಿದಿನ ದೊಡ್ಡ ದೊಡ್ಡ ಗಣ್ಯರು ಬಂದು ಸಮಾಧಾನದ ಮಾತುಗಳನ್ನಾಡಿ ಧೈರ್ಯ ತುಂಬಿ ಹೋಗಿದ್ದಾರೆ.

Advertisements
Advertisements

ಇದೀಗ ಪುನೀತ್ ಅವರ ಮನೆಗೆ ನಟ ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ಸುದೀಪ್ ಅವರು ಭೇಟಿ ನೀಡಿದ್ದಾರೆ ಅಶ್ವಿನಿ ಮೇಡಮ್ ಅವರಿಗೆ ಆ ನೋವನ್ನು ತಡೆದುಕೊಳ್ಳುವ ಮಾತುಗಳನ್ನು ಆಡಿ ಭರವಸೆಯ ಮಾತುಗಳನ್ನು ಕೂಡ ಹೇಳಿದ್ದಾರೆ. ಕಿಚ್ಚ ಸುದೀಪ್ ಹಾಗೂ ಪ್ರಿಯಾ ಅವರು ಪುನೀತ್ ರಾಜಕುಮಾರ್ ಅವರ ಮನೆಯಲ್ಲಿ ಪುನೀತ್ ಫೋಟೋಗೆ ನಮನ ಸಲ್ಲಿಸಿ ನಂತರ ಅಶ್ವಿನಿ ಮೇಡಮ್ ಅವರ ಜೊತೆ ಕುಳಿತು ಮಾತನಾಡಿದ್ದಾರೆ ನಾನು ಏನು ಹೇಳಲಿ ಈ ಸಂದರ್ಭದಲ್ಲಿ ನನಗೇನು ತಿಳಿಯುತ್ತಿಲ್ಲ ನಿಜಕ್ಕೂ ನಾನು ನಿಮ್ಮ ಮನೆಗೆ ಈ ವಿಷಯಕ್ಕೆ ಭೇಟಿ ನೀಡುತ್ತೇನೆ ಅಂತ ಯಾವತ್ತಿಗೂ ಅಂದುಕೊಂಡಿರಲಿಲ್ಲ.

ನೀವು ಆದಷ್ಟು ದೈರ್ಯ ತಂದುಕೊಳ್ಳಿ ಆಗ ನಿಮ್ಮ ಮಕ್ಕಳು ಸಹ ಧೈರ್ಯವಾಗಿ ಇರುತ್ತಾರೆ.ನಿಮಗೆ ಕಷ್ಟವನ್ನು ಎದುರಿಸುವ ಶಕ್ತಿ ಆ ಭಗವಂತ ನಿಮಗೆ ನೀಡಲಿ ಎಂದು ನಟ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಅವರು ಅಶ್ವಿನಿ ಅವರಿಗೆ ಸಮಾಧಾನಕರ ಮಾತುಗಳನ್ನು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಿಂದಲೂ ಬಹಳ ಒಳ್ಳೆಯ ಆಪ್ತ ಸ್ನೇಹಿತರಾಗಿದ್ದರು. ಕಿಚ್ಚ ಸುದೀಪ್ ಅವರ ಈ ಗುಣಗಳನ್ನು ಕಂಡು ಅಪ್ಪು ಅಭಿಮಾನಿಗಳು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.