Advertisements

ಅಪ್ಪು ಸಿನೆಮಾದ ಶೂಟಿಂಗ್ ಆರಂಭ.. ಅಪ್ಪು ಇಲ್ಲದೆ ಹೇಗೆ ಗೊತ್ತಾ ನೋಡಿ ಸಿಹಿಸುದ್ದಿ!

Cinema

ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಆಗಲೇ ಪುನೀತ್ ರಾಜ್ ಕುಮಾರ್ ರವರ ದ್ವಿತ್ವ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಬೇಕಿತ್ತು. ಹೌದು ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದು ಫಸ್ಟ್ ಲುಕ್ ಬಿಡುಗಡೆ ಕೂಡ ಆಗಿತ್ತು. ಸ್ಕ್ರಿಪ್ಟ್ ವರ್ಕ್ ಬಹುತೇಕ ಮುಗಿದಿದ್ದು ಪುನೀತ್ ರವರು ಅಗಲುವ ಎರಡು ದಿನ ಮುಂಚೆ ಕಾಸ್ಟ್ಯೂಮ್ ಬಗ್ಗೆ ನಿರ್ದೇಶಕ ಲೂಸಿಯಾ ಪವನ್ ಕುಮಾರ್ ಜೊತೆ ಮಾತೂ ಕೂಡ ಆಡಿದ್ದರು. ಆದರೆ ವಿಧಿಯಾಟಕ್ಕೆ ಪುನೀತ್ ಸಿಲುಕಿಬಿಟ್ಟರು.ಇನ್ನು ಪುನೀತ್ ರಾಜ್ ಕುಮಾರ್ ರವರು ಅಗಲುವುದಕ್ಕೂ ಮುನ್ನ ಐದು ಚಿತ್ರಗಳನ್ನು ಒಪ್ಪಿಕೊಂಡಿದ್ದು ಮೊದಲು ದ್ವಿತ್ವ ಆಗಬೇಕಿತ್ತು.

Advertisements
Advertisements

ಹೌದು ತದ ನಂತರ ತಮ್ಮದೇ ಬ್ಯಾನರ್ ನ ಚಿತ್ರದಲ್ಲಿ ಅವರು ನಟಿಸಬೇಕಿತ್ತು. ಇನ್ನು ಈ ಚಿತ್ರಕ್ಕೆ ಜೇಕಬ್ ವರ್ಗಿಸ್ ನಿರ್ದೇಶಕರಾಗಿದ್ದು ಸ್ವತಃ ಪುನೀತ್ ಅವರೇ ಈ ಚಿತ್ರದ ಕಥೆಯಲ್ಲಿ ಭಾಗಿಯಾಗಿದ್ದರು. ನಂತರ ಮಾಡಬೇಕಾಗಿದ್ದ ಚಿತ್ರ ಸಿನಿಮಾಟೋಗ್ರಾಫರ್ ಕಂ ನಿರ್ದೇಶಕ ಕೃಷ್ಣ ಅವರ ಜತೆಗಿನ ಸಿನಿಮಾ. ಹೌದು ಇವುಗಳ ಹೊರತಾಗಿಯೂ ದಿನಕರ್ ತೂಗುದೀಪ್ ಸಂತೋಷ್ ಆನಂದ್ ರಾಮ್ ಜೊತೆಯೂ ಅವರು ಒಂದೊಂದು ಸಿನಿಮಾ ಮಾಡಬೇಕಿತ್ತು. ಇವೆಲ್ಲವನ್ನೂ ಬದಿಗೆ ಸರಿಸಿ ಅಪ್ಪು ಹೊರಟೇ ಬಿಟ್ಟರು.

ಪುನೀತ್ ರಾಜ್ ಕುಮಾರ್ ಇಲ್ಲದೇ ನನ್ನ ಕಥೆಯನ್ನು ಸಿನಿಮಾ ಮಾಡಲಾರೆ ಎಂದು ನಿರ್ದೇಶಕ ಜೇಕಬ್ ಘೋಷಿಸಿಯಾಗಿದ್ದು ಉಳಿದವರು ಇನ್ನೂ ಕಥೆ ಹೆಣೆಯುವುದರಲ್ಲಿ ಇದ್ದರು. ಆದರೆ ಇನ್ನೇನು ಶುರುವಾಗಬೇಕಿದ್ದ ದ್ವಿತ್ವ ಸಿನಿಮಾ ಏನಾಗುತ್ತದೆ ಎನ್ನುವ ಚರ್ಚೆ ಗಾಂಧಿನಗರದಲ್ಲಿ ಶುರುವಾಗಬೇಕಿತ್ತು. ಅದಕ್ಕೀಗ ಉತ್ತರ ಸಿಗುವ ಕಾಲ ಬಂದಿದ್ದು ಇದೇ ಸಿನಿಮಾವನ್ನು ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಮಾಡಲಿ ಎನ್ನುವುದು ಅಭಿಮಾನಿಗಳ ಆಸೆ ಕೂಡ ಆಗಿದೆ. ಜೊತೆಗೆ ಸ್ಟಾರ್ ನಟರಿಗೂ ಈ ಕಥೆಯ ಮೇಲೆ ಕಣ್ಣು ಬಿದ್ದಿದೆ ಎನ್ನಲಾಗುತ್ತಿದೆ.

ಯಾವುದೇ ಕಾರಣಕ್ಕೂ ಈ ಸಿನಿಮಾ ನಿಲ್ಲುವುದಿಲ್ಲ. ಸಮರ್ಥ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಚಿತ್ರವನ್ನು ಮುಂದುವರೆಸುತ್ತೇವೆ. ಪುನೀತ್ ಅವರ ನೆನಪಿನಲ್ಲಿಯೇ ಈ ಸಿನಿಮಾ ಮಾಡುತ್ತೇವೆ ಎನ್ನುವ ಮೂಲಕ ಚಿತ್ರ ಆಗುವ ಕುರಿತು ಮುನ್ಸೂಚನೆ ನೀಡಿತ್ತು ಚಿತ್ರತಂಡ. ಆದರೆ ಇದೀಗ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಹೊರ ಬಂದಿದೆ. ದ್ವಿತ್ವ ಸಿನಿಮಾ ಪ್ರಾನ್ ಇಂಡಿಯಾ ಸಿನಿಮಾವಾಗಿದ್ದು ಈ ಸಿನಿಮಾದಲ್ಲಿ ಪುನೀತ್ ರವರನ್ನ ವಿಭಿನ್ನ ಗೆಟಪ್ ನಲ್ಲಿ ನೋಡಬಹುದಾಗಿತ್ತು.

ಇನ್ನು ಸದ್ಯದ ಮಾಹಿತಿ ಪ್ರಕಾರ ಈ ಚಿತ್ರದ 10% ಶೂಟಿಂಗ್ ಕೂಡ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಒಂದು ಮೂಲದ ಪ್ರಕಾರ 3d ರೆಂಡರಿಂಗ್ ಟೆಕ್ನಾಲಜಿಯನ್ನು ಉಪಯೋಗಿಸಿಕೊಂಡು ದ್ವಿತ್ವ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ರವರನ್ನ ಮರುಸೃಷ್ಟಿ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಹೊರ ಬರಬೇಕಿದೆ.