Advertisements

ಅಪ್ಪು ತೀರಿಕೊಂಡ ಅಂಥ ಗೊತ್ತಾದ ತಕ್ಷಣ ಅಕ್ಕ ಪೂರ್ಣಿಮಾಗೆ ಎನಾಗಿತ್ತು ಗೊತ್ತಾ? ಈ ವಿಷಯ ಹೊರಗೆ ತಿಳಿದೇ ಇಲ್ಲಾ!

Cinema

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇನ್ನಿಲ್ಲವಾಗಿ 8 ತಿಂಗಳು ಕಳೆದಿದೆ. ಹೌದು ಆದರೆ ಕುಟುಂಬದವರು ಮತ್ತು ಅಭಿಮಾನಿಗಳ ದುಃಖ ಈಗಲೂ ಸಹ ಕಡಿಮೆಯಾಗಿಲ್ಲ. ಎಲ್ಲರೂ ಅಪ್ಪು ಇಲ್ಲ ಎನ್ನುವ ನೋವನ್ನು ಒಪ್ಪಿಕೊಳ್ಳಲು ಈಗಲೂ ಕಷ್ಟಪಡುತ್ತಿದ್ದಾರೆ. ಈ ನಮಗಿಂತ ಹೆಚ್ಚಾಗಿ ಕುಟುಂಬದವರಿಗೆ ಇರುತ್ತದೆ. ಶಿವಣ್ಣ ರಾಘಣ್ಣ ಮತ್ತು ಇಡೀ ದೊಡ್ಮನೆ ಕುಟುಂಬಕ್ಕೆ ಅಪ್ಪು ಇಲ್ಲ ಎನ್ನುವ ನೋವು ಇದೆ. ಹೌದು ಈಗಲೂ ಕೂಡ ಅವರೆಲ್ಲರೂ ದುಃಖದಲ್ಲಿದ್ದಾರೆ. ಅದು ಶಿವಣ್ಣ ರಾಘಣ್ಣ ಅವರನ್ನು ನೋಡಿದರೆ ಗೊತ್ತಾಗುತ್ತದೆ. ಹೌದು ಆದರೆ ಇಲ್ಲಿ ಎಲ್ಲರಿಗಿಂತ ಹೆಚ್ಚಿನ ಅನುಭವಿಸುತ್ತಿರುವುದು ಪುನೀತ್ ಅವರ ಪತ್ನಿ ಅಶ್ವಿನಿ ಮತ್ತು ಮಕ್ಕಳು ಧೃತಿ ಹಾಗೂ ವಂದಿತಾ. ಹೌದು ಅದರಲ್ಲೂ ಅಶ್ವಿನಿ ಅವರು ಮಾನಸಿಕವಾಗಿ ಅನುಭವಿಸುತ್ತಿರುವ ದುಃಖವನ್ನು ಯಾರಿಂದಲು ಅಂದಾಜು ಮಾಡಲು ಸಾಧ್ಯವಿಲ್ಲ.

Advertisements
Advertisements

ದೊಡ್ಮನೆ ಕುಟುಂಬದ ಮುದ್ದಿನ ಕುಡಿ ಆಗಿದ್ದ ಅಪ್ಪು ಅವರನ್ನು ಇಡೀ ಕುಟುಂಬ ಮರೆತಿಲ್ಲ. ಹೌದು ಮನೆಯ ಮುದ್ದಿನ ಚಿಕ್ಕ ಮಗ ಆಗಿದ್ದರು ಅಪ್ಪು. ಕುಟುಂಬದಲ್ಲಿ ಎಲ್ಲರೊಡನೆ ಬಹಳ ಪ್ರೀತಿಯಿಂದ ಇರುತ್ತಿದ್ದರು. ಅಪ್ಪು ಅವರು ಕುಟುಂಬದ ಜೊತೆ ಎಷ್ಟು ಸಂತೋಷವಾಗಿದ್ದರು ಚೆನ್ನಾಗಿರುತ್ತಿದ್ದರು ಎಂದು ಹಲವು ಘಟನೆಗಳನ್ನು ಮನೆಯವರೇ ಹಂಚಿಕೊಂಡಿದ್ದಾರೆ.ಇತ್ತೀಚೆಗೆ ಅಪ್ಪು ಅವರ ಅಕ್ಕ ಅಣ್ಣಾವ್ರ ಮುದ್ದಿನ ಮಗಳು ನಟ ರಾಮ್ ಕುಮಾರ್ ಪತ್ನಿ ಪೂರ್ಣಿಮಾ ಅವರು ಖಾಸಗಿ ವಾಹಿನಿಯ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದರು ಅದರಲ್ಲಿ ಅಪ್ಪು ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಹಾಗೆಯೇ ಅಪ್ಪು ಅವರನ್ನು ನೆನೆದು ಭಾವುಕರಾಗಿದ್ದು ಅಂದು ಅಪ್ಪು ಅಗಲಿಕೆಯ ಸುದ್ದಿ ಗೊತ್ತಾಗಿದ್ದು ಹೇಗೆ ಎಂಬುದನ್ನ ತಿಳಿಸಿದ್ದಾರೆ.

ಹೌದು ಅಕ್ಟೋಬರ್ 29 ಪುನೀತ್ ರವರು ಅಗಲಿದ ದಿನ ಪೂರ್ಣಿಮಾ ರವರು ತಮ್ಮ ಮನೆಯ ಟೆರಸ್ ಮೇಲೆ ಗಿಡಗಳಿಗೆ ನೀರು ಹಾಕುತ್ತಿದ್ದರಂತೆ. ಇನ್ನು ಮಗ ದೀರನ್ ರಾಮ್ ಕುಮಾರ್ ರವರು ಭಜರಂಗಿ 2 ಸಿನಿಮಾಗೆ ಹೋಗಿದ್ದು ಇದಕ್ಕಿದ್ದ ಹಾಗೆ ಪೂರ್ಣಿಮಾ ರವರಿಗೆ ಕರೆ ಮಾಡಿ ಎಲ್ಲಿದ್ಯಾ ಅಮ್ಮ? ಎಂದರಂತೆ. ಇದಕ್ಕೆ ಉತ್ತರಿಸಿದ ಪೂರ್ಣಿಮಾ ಮನೆಯಲ್ಲಿ ಇರ್ತಿನಿ ಇನ್ನೆಲ್ಲಿಗೆ ಹೀಗ್ಲಿ? ಎಂದಿದ್ದಾರೆ. ತಕ್ಷಣ ಬಂದೆ ತಾಳು ಮನೆಗೆ ಎಂದು ದೀರನ್ ಹೇಳಿದ್ದು ಸಿನಿಮಾ ಇನ್ನು ಮುಗುದಿಲ್ಲ ಯಾಕೆ ಬರ್ತಿದ್ದಾನೆ ಎಂದು ಯೋಚಿಸಿಕೊಂಡೆ ಟೆರಸ್ ನಿಂದ ಕೆಳಕ್ಕೆ ಬಂದಿದ್ದಾರೆ ಪೂರ್ಣಿಮಾ ರವರು. ಸ್ವಲ್ಲ ಸಮಯ ಕಳೆದ ಬಳಿಕ ಸುಧಾ ನರಸಿಂಹ ರಾಜು ರವರು ಕರೆ ಮಾಡಿ ಪೂರ್ಣಿಮಾ ಅಪ್ಪುಗೆ ಏನಾಯ್ತು? ಯಾಕೆ ಆಸ್ಪತ್ರೆಯಲ್ಲಿದ್ದಾನೆ ಎಂದಿದ್ದಾರೆ.

ತಕ್ಷಣ ಗಾಬರಿ ಗೊಂಡ ಪೂರ್ಣಿಮಾ ರವರು ಏನು ಏನಾಯ್ತು ಎಂದು ಕೇಳಿದ್ದು ಅತ್ತ ಸಾರಿ ಮಾ ಸಾರಿ ಎಂದು ಹೇಳಿ ಸುಧಾ ನರಸಿಂಹರಾಜು ರವರು ಕಾಲ್ ಕಟ್ ಮಾಡಿದ್ದಾರೆ. ನಂತರ ಪೂರ್ಣಿಮಾ ರವರಿಗೆ ಯಾರಿಗೂ ಕೂಡ ಕಾಲ್ ಮಾಡಲು ಭಯವಾಯಿತಂತೆ.ಇತ್ತ ಮಗಳು ಧನ್ಯಾ ರಾಮ್ ಕುಮಾರ್ ರವರು ಗೋಕರ್ಣದಲ್ಲಿದ್ದು ತಕ್ಷಣ ತಾಯಿಗೆ ಕರೆ ಮಾಡಿದ್ದಾರೆ. ಹೌದರು ಕರೆ ಮಾಡಿ ಅಪ್ಪನಗೆ ಪೋನ್ ಕೋಡು ಅಮ್ಮಾ ಎಂದು ಹೇಳಿದ್ದು ತಂದೆ ರಾಮ್ ಕುಮಾರ್ ರವರಿಗೆ ಎಲ್ಲಾ ವಿಚಾರವನ್ನು ಹೇಳುವಾಗ ಪಕ್ಕದಲ್ಲೇ ಇದ್ದ ಪೂರ್ಣಿಮಾ ರವರು ಎಲ್ಲವನ್ನು ಕೇಳಿಸಿಕೊಂಡು ಕುಸಿದು ಬಿದ್ದಿದ್ದಾರೆ. ವಿಚಾರ ತಿಳಿದ ಕೂಡಲೇ ಓಡಿ ಹೋಗಿದ್ದು ಭಗವಂತ ಇಂತಹ ಸನ್ನೀವೇಶವನ್ನು ಯಾರ ಕುಟುಂಬಕ್ಕೂ ಕೂಡ ನೀಡದೇ ಇರಲಿ ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.