Advertisements

ಅಣ್ಣ ತಮ್ಮಂದಿರ ಸರಳತೆ ನೋಡಿ..

Cinema

ವರ ನಟ ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಮೇರುನಟ ಎಂಬುದು ಎಲ್ಲರಿಗೂ ತಿಳಿದ ವಿಷಯ ಡಾಕ್ಟರ್ ರಾಜಕುಮಾರ್ ಅವರು ಕೇವಲ ತಮ್ಮ ನಟನೆಯಿಂದ ಮೇರುನಟ ಅನಿಸಿ ಕೊಳ್ಳಲಿಲ್ಲ, ತಮ್ಮ ವ್ಯಕ್ತಿತ್ವದಿಂದ ಕನ್ನಡ ಚಿತ್ರರಂಗದಲ್ಲಿ ಬಂಗಾರದ ಮನುಷ್ಯ ಎನಿಸಿಕೊಂಡರು. ಡಾಕ್ಟರ್ ರಾಜಕುಮಾರ್ ಅವರ ಸರಳತೆ ಸೌಜನ್ಯ ಸಹನತೆ ಕನ್ನಡಿಗರಿಗೆ ಸ್ಫೂರ್ತಿದಾಯಕವಾಗಿದೆ. ಡಾಕ್ಟರ್ ರಾಜಕುಮಾರ್ ಅವರು ತಮ್ಮ ಅಭಿಮಾನಿಗಳನ್ನು ದೇವರು ಎಂದು ಕರೆದು ದೇವತಾ ಮನುಷ್ಯರಾದರು..

[widget id=”custom_html-5″]

Advertisements
Advertisements

ಇನ್ನು ಅಂಥವರ ಮಕ್ಕಳಾದ ಶಿವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರು ಕೂಡ ತಮ್ಮ ತಂದೆಯವರ ಸರಳತೆ ಸೌಜನ್ಯವನ್ನೆ ಮೈಗೂಡಿಸಿಕೊಂಡಿದ್ದಾರೆ. ತಾವು ಕನ್ನಡ ಸಿನಿಮಾರಂಗದಲ್ಲಿ ಎಷ್ಟೇ ಎತ್ತರಕ್ಕೂ ಬೆಳೆದಿದ್ದರು ಜನ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುತ್ತಾರೆ. ಇನ್ನು ಪುನೀತ್ ರಾಜ್ ಕುಮಾರ್ ಅವರಂತು ತೀರ ಸರಳವಾಗಿರುತ್ತಾರೆ. ಯಾರನ್ನೇ ಆದರೂ ಪ್ರೀತಿಯಿಂದ ಆತ್ಮೀಯತೆಯಿಂದ ಮಾತನಾಡಿಸುವ ಗುಣ ನಮ್ಮ ಪವರ್ ಸ್ಟಾರ್ ಪುನೀತ್ ಅವರದ್ದು.

[widget id=”custom_html-5″]

ಇನ್ನು ಪುನೀತ್ ಕೆಲವೊಮ್ಮೆ ರಸ್ತೆಬದಿಯಲ್ಲಿ ಸಾಮಾನ್ಯರಂತೆ ತಿಂಡಿ ತಿನ್ನುವುದು ಕಾಫಿ ಕುಡಿಯುವುದನ್ನು ಕಂಡು ಅಭಿಮಾನಿಗಳು ಪುನೀತ್ ರಾಜಕುಮಾರ್ ಸರಳತೆಯನ್ನು ಮನಸಾರೆ ಮೆಚ್ಚಿಕೊಳ್ಳುತ್ತಾರೆ. ಇನ್ನು ಪುನೀತ್ ರಾಜಕುಮಾರ್ ಕೂಡ ಅವರು ತಮ್ಮಅಭಿಮಾನಿಗಳನ್ನು ತುಂಬಾ ಪ್ರೀತಿಯಿಂದ ಆತ್ಮೀಯತೆಯಿಂದ ಕಾಣುತ್ತಾರೆ.. ಒಟ್ಟಿನಲ್ಲಿ ಕನ್ನಡ ಸಿನಿಮಾರಂಗದಲ್ಲಿ ದೊಡ್ಮನೆ ಕುಟುಂಬ ಸರಳತೆ ಸೌಜನ್ಯಗಳು ಕನ್ನಡ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳನ್ನು ತಮ್ಮ ಫ್ಯಾಮಿಲಿ ಅಂತೆ ನೋಡುತ್ತಾರೆ. ಎಲ್ಲರ ಜೊತೆ ತುಂಬ ಸಂತೋಷ ಸಹನೆಯಿಂದ ಇರುತ್ತಾರೆ..

[widget id=”custom_html-5″]