Advertisements

ಸಿನಿಮಾ ಶೂಟಿಂಗ್ ವೇಳೆ ಲೇಟಾಗಿ ಬಂದ ಸೆಟ್ ಬಾಯ್ ಗೆ ಅಪ್ಪು ಏನು ಮಾಡಿದ್ರು ಗೊತ್ತಾ? ನೋಡಿ..

Cinema

ನಮಸ್ಕಾರ ವೀಕ್ಷಕರೇ ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಕಾರ್ಯಗಳು ಹೆಚ್ಚು ಸಿನಿಮಾ ಕಲಾವಿದರಿಂದಲೇ ಹೊರಗಡೆ ಬರುತ್ತಿವೆ.ಅವರ ಸುತ್ತಮುತ್ತ ನಡೆದ ಕೆಲವು ವಿಚಾರಗಳನ್ನು ಮಾಧ್ಯಮದ ಮುಂದೆ ಹೇಳುತ್ತಾ ನಟ ಪುನೀತ್ ರಾಜಕುಮಾರ್ ಅವರು ಮಾಡಿದ ಸಹಾಯವನ್ನು ನೆನೆಯುತ್ತಿದ್ದಾರೆ. ಸಹಾಯ ಮಾಡುವ ಮನಸ್ಥಿತಿ ಎಲ್ಲರಲ್ಲಿಯೂ ಇರುವುದಿಲ್ಲ. ಆದರೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ ಪುನೀತ್ ಅವರಿಗೆ ಹೆಚ್ಚಾಗಿ ಇತ್ತು. ಅದಕ್ಕಾಗಿ ಇಂದು ಅವರನ್ನು ದೇವರಂತೆ ಅಭಿಮಾನಿಗಳು ಅವರಿಲ್ಲದಿದ್ದರೂ ಕೂಡ ಪ್ರತಿಯೊಂದು ಮನೆಯಲ್ಲೂ ಅಪ್ಪು ಫೋಟೋವನ್ನು ಇಟ್ಟುಕೊಂಡು ಪ್ರತಿದಿನ ಪೂಜಿಸುತ್ತಿದ್ದಾರೆ.

[widget id=”custom_html-5″]

Advertisements
Advertisements

ಅವರ ರೀತಿಯೇ ಜೀವನ ಮಾಡಲು ಮುಂದಾಗಿದ್ದು ಅಪ್ಪು ಅವರನ್ನು ಸ್ಪೂರ್ತಿದಾಯಕ ವಾಗಿ ತೆಗೆದುಕೊಂಡಿದ್ದಾರೆ. ಹೌದು ಇತ್ತೀಚೆಗಷ್ಟೇ ನಟ ಕಾಕ್ರೋಚ್ ಖ್ಯಾತಿಯ ಸುದ್ದಿ ಪುನೀತ್ ಅವರ ಬಗ್ಗೆ ಒಂದು ವಿಚಾರವನ್ನು ತೆರೆದಿಟ್ಟಿದ್ದರು. ಅದೇ ರೀತಿ ಇದೀಗ ಮತ್ತೊಂದು ತುಂಬಾ ಸರಳವಾಗಿ ಅಪ್ಪು ಮಾಡಿರುವ ಒಂದು ಸಹಾಯದ ಬಗ್ಗೆ ಹೇಳಿದ್ದಾರೆ. ಟಗರು ಖ್ಯಾತಿಯ ಕಾಕ್ರೋಚ್ ಸುದ್ದಿ ಒಂದು ಬಾರಿ ಸಿನಿಮಾ ಸೆಟ್ಟಿನಲ್ಲಿ ನಟ ಪುನೀತ್ ಅವರ ಜೊತೆ ನಟನೆ ಮಾಡುತ್ತಿದ್ದರಂತೆ. ಆಗ ನಡೆದ ಒಂದು ಘಟನೆ ಬಗ್ಗೆ ಇದೀಗ ವಿವರಿಸಿದ್ದಾರೆ. ಆ ಸೆಟ್ ಯಾವುದು ಎಂದು ಹೇಳುವುದಿಲ್ಲ ಹಾಗೆ ಸಹಾಯ ಪಡೆದವರು ಸಹ ಯಾರೆಂದು ನಾನು ಹೇಳುವುದಿಲ್ಲ ಸೆಟ್ ಬಾಯ್ ಹುಡುಗನೊಬ್ಬ ಸಿನಿಮಾ ಸೂಟಿಂಗ್ ಸ್ಥಳಕ್ಕೆ ಬರುವುದು ತಡವಾಗಿತ್ತು.

[widget id=”custom_html-5″]

ನಿರ್ದೇಶಕರು ಕಾದುಕಾದು ಬಳಿಕ ಹುಡುಗ ಬಂದ ಮೇಲೆ ಆ ಹುಡುಗನ ಜೊತೆ ವಾಗ್ವಾದಕ್ಕೆ ಇಳಿದಿದ್ದರು ಅದನ್ನು ಗಮನಿಸಿದ ಅಪ್ಪು ಅವರು ಯಾಕೆ ಈ ರೀತಿ ಲೇಟಾಗಿ ಬರುತ್ತೀರಾ ನಿಮ್ಮ ಒಬ್ಬರಿಂದ ಇಡಿ ಶೂಟಿಂಗ್ ಸಿನಿಮಾ ತೊಂದರೆಯಾಗಿದೆ ನೋಡಿ ಎಂಬುದಾಗಿ ಹೇಳಿದ್ದರಂತೆ. ಬಳಿಕ ಆ ಸೆಟ್ ಬಾಯ್ ಹುಡುಗ ಇಲ್ಲ ಅಣ್ಣ ನಾನು ಮೂರುವರೆಗೆ ಎದ್ದು ಬಂದೆ ಆದರೆ ಮೂರು ಬಸ್ಸುಗಳನ್ನು ಬದಲಾಯಿಸಿ ನಾನು ಇಲ್ಲಿಗೆ ಬರಬೇಕು. ತುಂಬಾ ದೂರ ಇದೆ ಸೀದಾ ಬಸ್ಸಿನಿಂದ ಇಳಿದು ಬರುವಾಗ ಆಟೋ ಬೇಗ ಸಿಗಲಿಲ್ಲ ಹಾಗಾಗಿ ಲೇಟಾಯ್ತು ಎಂದಿದ್ದನಂತೆ.

[widget id=”custom_html-5″]

ಬಳಿಕ ಪುನೀತ್ ಅವರು ಸಾಯಂಕಾಲದ ಹೊತ್ತು ಶೂಟಿಂಗ್ ಮುಗಿಯುತ್ತಿದ್ದಂತೆ ಅವರ ಮನೆಯಲ್ಲಿ ಇದ್ದ ಆರ್ ಎಕ್ಸ್ 1.35 ಬೈಕ್ ಅನ್ನು ಕೊಟ್ಟು ತಗೋ ನಿನ್ನ ಕಷ್ಟ ನನಗೆ ಅರ್ಥವಾಗುತ್ತದೆ. ಇದಕ್ಕೆ ಪೆಟ್ರೋಲ್ ಹಾಕಿಸಲು ನಿನಗೆ ಪೂರ್ತಿಯಾಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ತಿಂಗಳುಪೂರ್ತಿ ಪೆಟ್ರೋಲ್ ಖರ್ಚನ್ನು ಕೂಡ ನಾನೇ ಕೊಡುತ್ತೇನೆ ಎಂದು ಅಪ್ಪು ಅವರು ಹೇಳಿದ್ದರಂತೆ. ಇದು ಸತ್ಯ ಎಂದು ಕಾಕ್ರೋಚ್ ಸುದ್ದಿ ಹೇಳಿದ್ದು ಅಪ್ಪು ಅವರು ಮಾಡಿದ ಸಹಾಯ ನೆನೆದರು. ಅಂದು ಅಲ್ಲಿ ನೆರೆದಿದ್ದ ಎಲ್ಲರಿಗೂ ಕೂಡ ಈ ವಿಷಯ ಗೊತ್ತು ಎಂಬುದಾಗಿ ಪುನೀತ್ ಅವರು ಸೆಟ್ ಬಾಯ್ ಹುಡುಗನಿಗೆ ಮಾಡಿದ ಸಹಾಯವನ್ನು ತಿಳಿಸಿದರು..

[widget id=”custom_html-5″]