Advertisements

ಪುನೀತ್ ರಾಜ್ ಕುಮಾರ್ ಮಕ್ಕಳು ತಂದೆಯೊಂದಿಗಿನ ಸುಂದರ ಕ್ಷಣಗಳು..

Cinema

ಬಾಲ ಕಲಾವಿದನಾಗಿ ವೃತ್ತಿ ಆರಂಭಿಸಿದ ಪುನೀತ್ ತಂದೆ ಡಾ. ರಾಜಕುಮಾರ್ ಅವರ ಜೊತೆ ಸಿನಿಮಾ ಚಿತ್ರೀಕರಣಕ್ಕೆ ಹೋಗುತ್ತಿದ್ದರು.. ಅವರ ಜೊತೆನೆ ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರಿಗೂ ಮುನ್ನವೆ ಚಿತ್ರರಂಗಕ್ಕೆ ಕಾಲಿಟ್ಟ ಅಪ್ಪು ಈಗಲೂ ಸಿನಿಮಾ ವಿಚಾರದಲ್ಲಿ ಸಹೋದರರ ಸಲಹೆ ತೆಗೆದುಕೊಳ್ಳುತ್ತಿದ್ದರು.. ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹ. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಪುನೀತ್ ಗೆ ತನ್ನ ಪತ್ನಿ ಮೇಲೆ ಅಪಾರ ಪ್ರೀತಿ ಇತ್ತು. ಆದರೆ ಈಗ ಪತ್ನಿಯನ್ನು ಬಿಟ್ಟು ಭಾರದ ಲೋಕಕ್ಕೆ ತೆರಳಿದ್ದಾರೆ. ಇಡೀ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ.. ಪುನೀತ್ ಅವರು ಪಕ್ಕ ಫ್ಯಾಮಿಲಿ ಮ್ಯಾನ್. ಅಶ್ವಿನಿ ಬಗ್ಗೆ ಅವರು ಎಷ್ಟು ಪ್ರೀತಿ ಇಟ್ಟಿಕೊಂಡಿದ್ದರು ಎಂಬುದು ಸಾಕಷ್ಟು ಬಾರಿ ಸಾಬೀತು ಆಗಿತ್ತು..

Advertisements
Advertisements

ಪುನೀತ್ ರಾಜ್ ಕುಮಾರ್ ಅವರ ಮಕ್ಕಳ ವಿಷಯಕ್ಕೆ ಬರೋದಾದ್ರೆ ಸಾಮಾನ್ಯವಾಗಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಹಾಗೂ ಅವರ ಮಕ್ಕಳು ಮೀಡಿಯಾ ಮುಂದೆ ಕಾಣಿಸಿಕೊಳ್ಳುವುದು ಕಡಿಮೆ. ತಂದೆ ಪುನೀತ್ ರಾಜ್ ಕುಮಾರ್ ಅವರು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನೂ ಮಾಡಿದ ರೀತಿಯಲ್ಲಿ ಅವರ ಹಿರಿಯ ಮಗಳು ದೃತಿಯೂ ಕೂಡ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.. ಅದು ಇಷ್ಟು ಚಿಕ್ಕ ವಯಸ್ಸಿನಲ್ಲಿ.ಕಳೆದ ವರ್ಷವಷ್ಟೇ ನೇತ್ರದಾನ ವಿಚಾರವಾಗಿ ರೋಟರಿ ಕ್ಲಬ್ ಗೆ ಪುನೀತ್ ರಾಜ್ ಕುಮಾರ್ ಹಿರಿಯ ಮಗಳು ದೃತಿ ಬೆಂಬಲ ನೀಡಿದ್ದರು..