ಕರುನಾಡ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಮ್ಮಿಂದ ದೂರವಾಗಿ 72 ದಿನಗಳು ಕಳೆದುಹೋಗಿದೆ.. ಆದರೆ ಅವರ ಅಭಿಮಾನಿಗಳು ಮಾತ್ರ ಇನ್ನೂ ಅಪ್ಪು ಅವರ ನೆನಪಿನಲ್ಲಿ ಅವರು ಮಾಡ್ತಿದ್ದಂತಹ ಒಳ್ಳೆಯ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗ್ತಿದ್ದಾರೆ..
widget id=”custom_html-5″]
ಅಪ್ಪು ಅವರು ತಮ್ಮ ಮನೆಯ ಬಳಿ ಇರುವ ಪಾರ್ಕ್ ಗೆ ಪ್ರತಿದಿನ ವಾಕಿಂಗ್ ಗೆ ಹೋಗುತ್ತಿದ್ದರು.. ಆ ವೇಳೆಯಲ್ಲಿ ಹಿರಿಯರು ವೃದ್ದರು ಸಿಕ್ಕಾಗ ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಹಾಗು ತಾವು ತಮ್ಮ ಸ್ವಂತ ಕೆಲಸದ ಮೇಲೆ ಹೊರಗಡೆ ಹೋಗುವಾಗ ಯಾವುದೇ ಬಾಡಿಗಾರ್ಡ್ ಇಲ್ಲದೇ ಕೆಲವೊಮ್ಮೆ ಒಬ್ಬರೇ ಓಡಾಡುತ್ತಿದ್ದರು.
[widget id=”custom_html-5″]
[widget id=”custom_html-5″]

[widget id=”custom_html-5″]
ಸಿನಿಮಾ ಕೆಲಸಗಳು ಮುಗಿದ ನಂತರ ಒಮ್ಮೆ ಇವರಿಗೆ ಹೊರಗಡೆ ಹೋಗಿ ಅಂದರೆ ಲೋಕಲ್ ತಿಂಡಿ ಅಂಗಡಿಗಳಲ್ಲಿ ತಿಂಡಿಯನ್ನು ತಿಂದು ಅವರ ಬಗ್ಗೆ ವಿಚಾರಿಸುತ್ತಿದ್ದರು.. ಯಾವುದೇ ಬೇದ ಬಾವ ತೋರುತ್ತಿರಲಿಲ್ಲಾ. ಅದೇ ರೀತಿ ಇವರು ಮಾಂಸಾಹಾರಿ ಪ್ರಿಯ ಕೂಡ. ಇನ್ನೊಂದು ವಿಷಯ ಏನೆಂದರೆ ರೋಡ್ ಸೈಡ್ ನಲ್ಲಿ ಇರುವಂತಹ ಹೋಟೆಲ್ ಹೋಗಿ ಚಿಕನ್ ಮಟನ್ ಬಿರಿಯಾನಿಯನ್ನು ಸವೆಯುತ್ತಿದ್ದರು.. ಎಷ್ಟು ಸರಳ ಜೀವ ಅಲ್ಲವೇ.. ಕೆಲವರಿಗೆ ಎಲ್ಲವೂ ಪೈವ್ ಸ್ಟಾರ್ ಹೋಟೆಲ್ ನಲ್ಲೇ ಊಟ ಮಾಡಬೇಕು.. ಆದರೆ ಅಪ್ಪು ಆ ರೀತಿ ಅಲ್ಲಾ. ಇನ್ನೂ ಅಪ್ಪು ಧರಿಸುತ್ತಿದ್ದಂತಹ ಬಟ್ಟೆಗಳ ರೇಟ್ ಎಷ್ಟು ಇರುತ್ತಿತ್ತು ಗೊತ್ತಾ? ಮಿನಿಮಮ್ ಸಾವಿರ ಎರಡು ಸಾವಿರ ಒಳಗಡೆ ಇದ್ದಂತಹ ಬಟ್ಟೆಗಳನ್ನು ಧರಿಸುತ್ತಿದ್ದರು..
[widget id=”custom_html-5″]

ಅಪ್ಪು ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟಿಗೆ.. ಅವರಿಗೆ ಅವರೇ ಸರಿಸಾಟಿ ಮತ್ಯಾರು ಅಲ್ಲಾ.. ಆದರೆ ಇಂತಹ ದೇವರನ್ನು ಕಳೆದುಕೊಂಡು ಕರುನಾಡು ತುಂಬಾ ದುಃಖಿಸುತ್ತಿದೆ. ಅವರ ನೆನಪುಗಳು ಸಹ ತುಂಬಾ ಕಾಡುತ್ತಿದೆ.. ಇನ್ನೂ ನಂಬಲಾರದ ಸಂಗತಿ ಏನೆಂದರೆ ಅಪ್ಪು ಬದುಕಿದ್ದಾರೆ ಎಲ್ಲೂ ಹೋಗಿಲ್ಲಾ ಸಿನಿಮಾಗಳು ಮಾಡ್ತಾ ಇದ್ದಾರೆ ಎಂಬ ನೆನಪಲ್ಲೇ ಇದ್ದೇವೆ ನಾವು.. ಆದರೆ ಅವರು ಇಲ್ಲ ಎನ್ನುವುದು ವಾಸ್ತವ. ಒಟ್ಟಿನಲ್ಲಿ ಒಳ್ಳೆ ಕೆಲಸಗಳನ್ನು ಮಾಡಿ ಕರುನಾಡಿನ ಪಾಲಿಗೆ ಮನೆಯ ದೇವರಾಗಿಬಿಟ್ಟಿದ್ದಾರೆ.. ಇಂತಹ ಮಹಾನ್ ವ್ಯಕ್ತಿ ಮುಂದೆ ಸಿಗುವುದು ಕಷ್ಟ. ಯಾಕೆಂದರೆ ಅಪ್ಪು ಅವರು ಇದ್ದಿದ್ದರೆ ಇನ್ನೂ ಎಷ್ಟೋ ಸಾಮಾಜಿಕ ಕೆಲಸಗಳಿಗೆ ಕೈ ಜೋಡಿಸುತ್ತಿದ್ದರು.. ಏನೇ ಆಗಲಿ ಅಪ್ಪು ಮತ್ತೆ ಹುಟ್ಟಿ ಬರಲಿ ಎನ್ನುವುದೇ ನಮ್ಮ ಆಶಯ.
[widget id=”custom_html-5″]