Advertisements

ಅಪ್ಪು ಓಡಾಡುತ್ತಿದ್ದ ಕಾರನ್ನು ಅಶ್ವಿನಿ ದುಬೈನಲ್ಲಿರುವ ವ್ಯಕ್ತಿಗೆ ಕಳಿಸಿದ್ದೇಕೆ ಗೊತ್ತಾ? ಆ ವ್ಯಕ್ತಿ ಯಾರು ನೋಡಿ!

Cinema

ಸದ್ಯ ಕನ್ನಡ ಚಿತ್ರರಂಗದ ಪ್ರೀತಿಯ ಅಪ್ಪು ನಟ ಪುನೀತ್ ರಾಜ್‌ಕುಮಾರ್ ರವರು ಎಲ್ಲರ ಮನಸ್ಸಲ್ಲಿ ಅಳಿಯದ ಧ್ರುವತಾರೆಯಾಗಿ ಉಳಿದುಬಿಟ್ಟಿದ್ದು ಅಪ್ಪು ಎಂದರೆ ಪ್ರೀತಿಯಿಂದ ಸದಾ ಅಪ್ಪಿಕೊಳ್ಳುವಷ್ಟು ಸವಿ ನೆನಪುಗಳನ್ನೇ ಕೊಟ್ಟು ಹೋಗಿದ್ದಾರೆ ಪುನೀತ್ ರಾಜ್‌ಕುಮಾರ್ ರವರು.ಅಭಿಮಾನಿಗಳ ಪಾಲಿನ ಆರಾಧ್ಯ ದೈವರಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಲ್ಲವಾಗಿ 6 ತಿಂಗಳು ಕಳೆದುಹೋಗಿದ್ದು ಆದರೆ ಇಂದಿಗೂ ಸಹ ಅಪ್ಪು ಅವರ ನೆನಪುಗಳು ಅವರು ತೋರಿಸಿಕೊಟ್ಟ ಒಳ್ಳೆಯತನದ ಹಾದಿ ಎಲ್ಲರ ಎದುರು ಇದೆ. ಅವರು ಹಾಕಿಕೊಟ್ಟಿರುವ ಬುನಾದಿಯಲ್ಲೇ ಎಲ್ಲರೂ ಸಾಗುತ್ತಿದ್ದು ಅಪ್ಪು ಅವರ ಆ ಸರಳತೆ ಒಳ್ಳೆಯತನ ವೈಶಾಲ್ಯ ಹೃದಯವನ್ನು ಯಾರು ಮರೆಯುವ ಹಾಗಿಲ್ಲ. ಇನ್ನು ಅಪ್ಪು ಅವರು ಕನ್ನಡ ಚಿತ್ರರಂಗದಿಂದ ಸಿನಿಪ್ರಿಯರಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿ ದೊಡ್ಡ ಕನಸುಗಳನ್ನು ಕಂಡಿದ್ದರು.

Advertisements
Advertisements

ಆ ನಿಟ್ಟಿನಲ್ಲಿ ಯುವಪ್ರತಿಭೆಗಳಿಗೆ ಅವಕಾಶ ನೀಡಲು ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆ ಶುರು ಮಾಡಿದ್ದು ಇಂದು ಅಶ್ವಿನಿ ಅವರು ಅದನ್ನು ಮುಂದುವರೆಸಿಕೊಂಡು ಹೊಗುತ್ತಿದ್ದಾರೆ. ಅಪ್ಪು ಅವರು ಇದ್ದಾಗ ಜನರಿಗೆ ಎಷ್ಟೆಲ್ಲಾ ಸಹಾಯ ಮಾಡಿದ್ದಾರೆ ಎನ್ನುವ ವಿಚಾರ ತಮಗೆಲ್ಲ ಗೊತ್ತಿದೆ. ಇದೆಲ್ಲ ಒಳ್ಳೆಯ ಸ್ವಭಾವಗಳ ಜೊತೆಗೆ ಅಪ್ಪು ಅವರಿಗೆ ಕೆಲವು ಕ್ರೇಜ್ ಸಹ ಇತ್ತು. ಹೊಸ ಜಾಗಗಳನ್ನು ಎಕ್ಸ್ಪ್ಲೋರ್ ಮಾಡುವುದನ್ನು ಅಪ್ಪು ಅವರು ಬಹಳ ಇಷ್ಟಪಡುತ್ತಿದ್ದರು. ಹೌದು ಪುನೀತ್ ರಾಜ್‌ಕುಮಾರ್ ಅವರಿಗೆ ಹಲವು ಆಸಕ್ತಿಗಳಿದ್ದು ಚಿತ್ರರಂಗವನ್ನು ಹೊರತು ಪಡಿಸಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಇದ್ದ ಹಲವು ಆಸಕ್ತಿಗಳನ್ನು ಬೆಳೆಸಿಕೊಂಡಿದ್ದರು ಅಪ್ಪು. ಹೌದು ಹೊಸ ರುಚಿಯನ್ನು ಹುಡುಕಿಕೊಂಡು ಹೋಗುತ್ತಿದ್ದರು ಅಪ್ಪು ಹಾಗೆಯೇ ಹೊಸ ಜಾಗಳನ್ನು ಎಕ್ಸ್‌ಪ್ಲೋರ್ ಮಾಡುವ ಹವ್ಯಾಸಗಳನ್ನು ಅಪ್ಪು ಹೊಂದಿದ್ದರು ಎನ್ನಬಹುದು.

ಅದರಲ್ಲಿಯೂ ಅಪ್ಪುರವರಿಗೆ ಕಾರ್ ಮತ್ತು ಬೈಕ್ ಕ್ರೇಜ್ ಕೂಡ ಇತ್ತು. ಹೌದು ಹಾಗಾಗಿ ಹಲವು ಬಗೆಯ ದುಬಾರಿ ಕಾರು ಮತ್ತು ಬೈಕ್‌ಗಳು ಪುನೀತ್‌ ರಾಜ್‌ಕುಮಾರ್ ಅವರ ಬಳಿ ಇದ್ದು ಅದರಲ್ಲಿಯೂ ಅಪ್ಪುಗೆ ಲ್ಯಾಂಬೋರ್ಗಿನಿ ಕಾರು ಎಂದರೆ ಅಚ್ಚು ಮೆಚ್ಚು. ಹೌದಯ ಆದರೆ ಅಪ್ಪು ಬಳಿಕ ಆ ಕಾರು ಅವರ ಮನೆಯಲ್ಲಿ ಇಲ್ಲ. ನಟ ಪುನೀತ್ ರಾಜ್‌ಕುಮಾರ್ ರವರ ಮನೆಗೆ ಈ ಲ್ಯಾಂಬೋರ್ಗಿನಿ ಬಂದಿದ್ದು 2019ರಲ್ಲಿ. ಹೌದು ಈ ಕಾರನ್ನು ಪುನೀತ್ ರಾಜ್‌ಕುಮಾರ್ ತಮಗಾಗಿ ತೆಗೆದುಕೊಂಡಿದ್ದಲ್ಲ. ಬದಲಿಗೆ ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದು ಅದರಲ್ಲೂ ಕೂಡ ಈ ಕಾರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಅಪ್ಪು ಅಶ್ವಿನಿ ಅವರಿಗೆ ಉಡುಗೊರೆ ಮಾಡಿದ್ದರು.ಇನ್ನು ಈ ನೀಲಿ ಬಣ್ಣ ಲ್ಯಾಂಬೋರ್ಗಿನಿ ಕಾರಿನ ಬೆಲೆ ಸುಮಾರು 4 ಕೋಟಿ ರೂ ಆಗಿದ್ದು ಈ ಕಾರನ್ನು ಅಪ್ಪು ಪತ್ನಿಗಾಗಿ ಕೊಟ್ಟಿದ್ದರು.

ಹೌದು ಆದರೆ ಇದನ್ನು ಹೆಚ್ಚಾಗಿ ಅಪ್ಪು ಬಳಕೆ ಮಾಡುತ್ತಿದ್ದರು. ಇನ್ನು ಈ ಕಾರಿನಲ್ಲಿ ರೈಡ್ ಹೋಗುವುದು ಎಂದರೆ ಅಪ್ಪುಗೆ ಅಚ್ಚು ಮೆಚ್ಚು. ಹೌದು ಸ್ಯಾಂಡಲ್‌ವುಡ್‌ನಲ್ಲಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಕೆಲವರ ಬಳಿ ಮಾತ್ರವೇ ಈ ಕಾರು ಇದೆ. ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಲ್ಯಾಂಬೋರ್ಗಿನಿ ಕಾರನ್ನು ಯಾರು ಬಳಕೆ ಮಾಡುತ್ತಿರಲಿಲ್ಲವಂತೆ. ಹೌದು ಈಗ ಈ ಕಾರು ಪುನೀತ್ ರಾಜ್‌ಕುಮಾರ್ ನಿವಾಸದಲ್ಲಿ ಇಲ್ಲ. ದುಬೈನಲ್ಲಿ ಇದೆ ಎನ್ನಲಾಗಿದೆ. ಈ ಕಾರನ್ನು ಪುನೀತ್ ಧರ್ಮಪತ್ನಿ ಅಶ್ವಿನಿ ಅವರ ಸೋದರನ ಬಳಿ ಇದೆ ಎನ್ನಲಾಗಿದ್ದು ಅಪ್ಪು ಬಳಿಕ ಅಶ್ವಿನಿ ಅವರು ಕೂಡ ಈ ಕಾರನ್ನು ಬಳಸುತ್ತಿಲ್ಲ. ಅಂದಹಾಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಕಾರ್ ಕ್ರೇಜ್ ಬಾಲ್ಯದಿಂದನೂ ಇದ್ದು ಅಪ್ಪು ಸಾಕಷ್ಟು ಐಶಾರಾಮಿ ಕಾರುಗಳ ಒಡೆಯನಾಗಿದ್ದರು. ಹೌದು ಅವರ ಬಳಿ ಆಡಿ ರೇಂಜ್ ರೋವರ್ ಸೇರಿದಂತೆ ಅನೇಕ ಕಾರುಗಳಿದ್ದು ಅಷ್ಟೆಯಲ್ಲ ದುಬಾರಿ ಬೈಕ್‌ಗಳು ಕೂಡ ಪುನೀತ್ ಬಳಿ ಇದ್ದವು. ಈ ಲಿಸ್ಟ್‌ಗೆ ಲ್ಯಾಂಬೋರ್ಗಿನಿ ಕೂಡ ಸೇರಿಕೊಂಡಿತ್ತು.