Advertisements

ಪುನೀತ್ ರಾಜಕುಮಾರ್ ತನ್ನ ಅಕ್ಕನ ಮದುವೆಯಲ್ಲಿ ಹೇಗೆಲ್ಲಾ ಓಡಾಡ್ತಾ ಇದ್ರು ನೋಡಿ..

Cinema

ನಮಸ್ಕಾರ ವೀಕ್ಷಕರೆ ಪುನೀತ್ ರಾಜಕುಮಾರ್ ಅವರು ಆರು ತಿಂಗಳ ಮಗುವಾಗಿ ಇದ್ದಾಗಿನಿಂದಲೂ ಕೂಡ ಕ್ಯಾಮೆರಾಗಳಿಗೆ ಪೋಸ್ ಕೊಡುತ್ತಾ ಆಕ್ಟಿಂಗ್ ಮಾಡುತ್ತಾ ನಟನೆಯಲ್ಲಿ ಹಾಗೂ ಡ್ಯಾನ್ಸ್ ಮುಖಾಂತರ ಸೈ ಎಂದು ಅನಿಸಿಕೊಂಡು ಬಂದವರು.
ವಸಂತ ಗೀತ ಸಿನಿಮಾದ ಮೂಲಕ ಅವರ ಅಪ್ಪಾಜಿ ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ಅವರ ಜೊತೆ ನಟಿಸಲು ಆರಂಭಿಸಿದ ಪುನೀತ್ ರಾಜ್ ಕುಮಾರ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಚಿಕ್ಕವರಿದ್ದಾಗ ತಮ್ಮ ಮುಗ್ಧತೆಯಿಂದ ಮನೆ ಮಾತಾಗಿದ್ದಾ ಅಪ್ಪು ದೊಡ್ಡವರಾದ ಮೇಲೂ ಕೂಡ ಅದೇ ಮುಗ್ಧತೆ ಅದೇ ನಗುವಿನೊಂದಿಗೆ ಇಂದು ಈ ಲೋಕದಿಂದ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಆದರೆ ಅವರ ನಗು ಅವರ ಗುಣಗಳು ಮಾತ್ರ ಈ ಪ್ರಪಂಚದಲ್ಲಿ ಶಾಶ್ವತವಾಗಿ ಉಳಿಯಲಿದೆ. ಪುನೀತ್ ರಾಜಕುಮಾರ್ ಅವರು ಸಾ’ವ’ನ್ನಪ್ಪಿ ನೂರ ಇಪ್ಪತ್ತು ದಿನಗಳು ಕಳೆದಿವೆ. ಆದರೂ ಜನ ಇನ್ನೂ ಅಪ್ಪು ಅವರ ನೆನಪಿನಲ್ಲಿ ಜೀವಿಸುತ್ತಿದ್ದಾರೆ.

Advertisements
Advertisements

ಇನ್ನು ಡಾಕ್ಟರ್ ರಾಜಕುಮಾರ್ ಅವರ ಮಗಳು ಲಕ್ಷ್ಮಿ ಅವರ ಮದುವೆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ವಯಸ್ಸು ಕೇವಲ ಆರು ವರ್ಷ ಆಗಿನ್ನೂ ಕೆಲ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದರೂ ಅಷ್ಟೇ, ಚಿತ್ರಗಳಲ್ಲಿನ ಪುನೀತ್ ರಾಜ್ ಕುಮಾರ ಅವರ ನಟನೆಗೆ ಆದಗಲೆ ಲಕ್ಷಾಂತರ ಜನ ಅಭಿಮಾನಿಗಳು ಇದ್ದರು. ಇನ್ನೂ ರಾಜಕುಮಾರ್ ಅವರ ಮಗಳ ಮದುವೆಗೆ ಸಿನಿರಂಗದ ನಟರು ನಟಿಯರು ನಿರ್ದೇಶಕರು ನಿರ್ಮಾಪಕರು ಸೇರಿದಂತೆ ಹಲವು ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿತ್ತು. ಡಾಕ್ಟರ್ ರಾಜಕುಮಾರ್ ಅವರ ಕುಟುಂಬದಲ್ಲಿ ಯಾವುದೇ ಸಮಾರಂಭಗಳು ನಡೆದರೂ ಕೂಡ ಅದ್ದೂರಿಯಾಗಿ ನಡೆಯುತ್ತಿತ್ತು. ರಾಜಕುಮಾರ್ ಅವರು ಕೂಡ ಕುಟುಂಬದಲ್ಲಿ ಬೆಳೆದವರು. ಅವರ ಮನೆಯಲ್ಲೂ ಕೂಡ ತುಂಬಾ ಜನ ಸಂಬಂಧಿಕರು ಇದ್ದರು.

ಮದುವೆಗೆ ನಟಿ ಸರಿತಾ ನಟ ರಜನಿಕಾಂತ್ ಕಮಲ್ ಹಾಸನ್ ಅಂಬರೀಶ್ ಗಾಯಕಿ ಜಾನಕಿ ಹಾಗೂ ಉದಯ್ ಶಂಕರ್ ಸೇರಿದಂತೆ ತಾರಾ ಬಳಗವೇ ಡಾಕ್ಟರ್ ರಾಜಕುಮಾರ್ ಅವರ ಮಗಳ ಮದುವೆಗೆ ಸಾಕ್ಷಿಯಾಗಿತ್ತು. ಮದುವೆಮನೆಯಲ್ಲಿ ಪುನೀತ್ ರಾಜ್ ಕುಮಾರ್ ಅವರು ಅಮ್ಮನ ಸೆರೆಗಿಡಿದು ಓಡಾಡುತ್ತಿದ್ದರು. ಮದುವೆಗೆ ಬಂದ ಕಮಲ್ ಹಾಸನ್ ಅವರು ಪುನೀತ್ ರಾಜಕುಮಾರ್ ಅವರನ್ನು ಎತ್ತಿಕೊಂಡು ಮುದ್ದಾಡಿದರು.ಆ ವಿಡಿಯೋದಲ್ಲಿ ಪುನೀತ್ ರಾಜಕುಮಾರ್ ಅವರು ತುಂಬಾ ಮುದ್ದಾಗಿ ಕಾಣಿಸುತ್ತಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.