Advertisements

ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರ ಅಪರೂಪದ ದೃಶ್ಯ ನೋಡಿ..

Cinema

ಡಾ.ರಾಜಕುಮಾರ್ ಅವರು ಅಪಾರ ದೈವ ಭಕ್ತರು. ಇವರು ಮಂತ್ರಾಲಯದ ರಾಯರನ್ನು ಅಪಾರವಾಗಿ ನಂಬಿದವರು. ಅವರ ನಂತರ ಕುಟುಂಬಸ್ಥರು ಕೂಡ ಅಷ್ಟೇ ಧೈವ ಭಕ್ತರಾಗಿದ್ದು, ಕುಟುಂಬ ಸಮೇತ ರಾಯರ ಮಠಕ್ಕೆ ಭೇಟಿ ನೀಡುತ್ತಿದ್ದರು. ಇನ್ನು ಶಿವಣ್ಣ ಮತ್ತು ಅಪ್ಪು ಶಬರಿ ಮಲೈ ನ ಅಯ್ಯಪ್ಪನ ಭಕ್ತರಾಗಿದ್ದರು. ಪ್ರತಿವರ್ಷವೂ ಅಯ್ಯಪ್ಪನ ಮಾಲೆ ಹಾಕಿ ಕಾಲ್ನಡಿಗೆಯಲ್ಲಿ ಶಬರಿ ಮಲೈಗೆ ಹೋಗಿಬರುತ್ತಿದ್ದರು. ಈ ಹಿಂದೆ ತಂದೆ ರಾಜಕುಮಾರ್ ಅವರು ಶಬರಿಮಲೆಗೆ ಕಾಡಿನ ಮೂಲಕವೇ ಬರಿಗಾಲಲ್ಲಿ ಹೋಗಿ ಬಂದಿದ್ದರು. ಮುಂದೆ ಅವರ ಗಂಡುಮಕ್ಕಳು ಕೂಡಾ ಅದೇ ದಾರಿಯಲ್ಲೇ ನಡೆದರು. ಕಳೆದ 20 ವರ್ಷಗಳಿಂದ ಶಬರಿಮಲೆಗೆ ಮಾಲೆ ಹಾಕಿ ಹೋಗಿ ಬಂದಿದ್ದರು.

[widget id=”custom_html-5″]

Advertisements
Advertisements

ಶಿವ ರಾಮನ್ನರ ಸಾರಥ್ಯದಲ್ಲಿ ರಾಜಕುಮಾರ್ ಕುಟುಂಬ ಶಬರಿಮಲೆಗೆ ಸಾಗುತ್ತಿತ್ತು. ವಿಪರ್ಯಾಸವೆಂದರೆ ಅಪ್ಪು ಮತ್ತು ಶಿವರಾಮಣ್ಣರು ಇಬ್ಬರೂ ಒಂದೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದು. ಅಪ್ಪು ಅಗಲಿಕೆಯ ನೋವು ಸಹಿಸದ ಭಕ್ತರು ಅಪ್ಪು ಭಾವಚಿತ್ರಕ್ಕೆ ಈಗಲೂ ಪೂಜೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಯಾಕೆ ಶಬರಿಮಲೆಗೆ ಹೋಗುವ ಭಕ್ತರು ಇರುಮುಡಿಯ ಜೊತೆಗೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ತಲೆ ಮೇಲೆ ಹೊತ್ತು ಸಾಗಿದ್ದಾರೆ. ಅವರ ವಾಹನಗಳಿಗೂ ಕೂಡ ಪುನೀತ್ ರಾಜಕುಮಾರ್ ಅವರ ಭಾವಚಿತ್ರಗಳನ್ನು ಅಂಟಿಸಿಕೊಂಡು ಶಬರಿಮಲೆ ಯಾತ್ರೆ ಮಾಡಿದ್ದಾರೆ.

[widget id=”custom_html-5″]

18 ಮೆಟ್ಟಿಲುಗಳನ್ನು ಹತ್ತಿ ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ. ಈ ಯಾತ್ರೆ ನವೆಂಬರ್ ನ ಕಾರ್ತಿಕಮಾಸದಲ್ಲಿ ಆರಂಭವಾಗಿ ಜನವರಿಯ ಚಳಿಗಾಲದಲ್ಲಿ ಅಂತ್ಯವಾಗುತ್ತದೆ. ಇದು ಭಾರತದ ಅತೀ ಪ್ರಾಚೀನ ಕಾಲದ, ಅತ್ಯಂತ ಜನಪ್ರಿಯ ಮತ್ತು ತೀರ್ಥಕ್ಷೇತ್ರದಲ್ಲಿ ಒಂದಾಗಿದೆ. ಪ್ರತಿವರ್ಷ ಲಕ್ಷಾಂತರ ಜನ ತಲೆ ಮೇಲೆ ಇರುಮುಡಿ ಹೊತ್ತು ಸಾಗಿ ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಅಪ್ಪು ತಮ್ಮ ಜೀವಿತದ ಕೊನೆಯ ವರ್ಷದವರೆಗೂ ಅಯ್ಯಪ್ಪನ ದರ್ಶನ ಪಡೆದಿದ್ದರು ಅಪಾರ ಭಕ್ತಿಭಾವದಿಂದ ನಡೆದುಕೊಂಡರು.

[widget id=”custom_html-5″]

ಹಾಗೆ ಇನ್ನೂ ಅನೇಕ ಕಲಾವಿದರ ಶಬರಿಮಲೆಗೆ ಭೇಟಿ ನೀಡಿ ಪುನೀತರಾಗಿದ್ದಾರೆ. ಅಪಾರ ದೈವ ಭಕ್ತರಾದ ಪುನೀತ್ ಗೆ ಅಹಂಕಾರ ವೆನ್ನುವುದು ಇರಲಿಲ್ಲ. ಜನಸಾಮಾನ್ಯರೊಂದಿಗೆ ಅತಿ ಸರಳವಾಗಿ ಬರೆಯುತ್ತಿದ್ದವರು. ಆದ್ದರಿಂದಲೇ ಏನು ದೇವರಿಗೆ ಪುನೀತ್ ರಾಜಕುಮಾರ ಅವರನ್ನು ಕಂಡರೆ ಇಷ್ಟವಾಗಿದ್ದು. ಹಾಗೆ ಬಹುಬೇಗನೆ ಕರೆದೊಯ್ದಿದ್ದು. ನೀವು ಅಯ್ಯಪ್ಪನ ಭಕ್ತರಾಗಿದ್ದಾರೆ ಒಮ್ಮೆ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ. ಸ್ವಾಮಿ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗಿ.

[widget id=”custom_html-5″]