Advertisements

ದೇಹದ ಫಿಟ್ನೆಸ್ ಕಾಯ್ದುಕೊಳ್ಳಲು ಅಪ್ಪು ಮಾಡುತಿದ್ದ ಖರ್ಚು ಎಷ್ಟು ಗೊತ್ತಾ?

Cinema

ಪ್ರಿಯ ಸ್ನೇಹಿತರೆ ಇಂದಿನ ಸಿನೆಮಾ ಲೋಕ ವಿಭಿನ್ನತೆಯಿಂದ ಕೊಡೊದೆ. ಇವತ್ತಿನ ನಟರು ಅಭಿಯನದ ಜೊತೆಗೆ ತಮ್ಮ ಬಾಡಿ ಫಿಟ್ ನೆಸ್ ಕೂಡ ಚೆನ್ನಾಗಿ ನೋಡಿಕೊಳ್ಳಲು ಹರಸಾಹಸ ಪಡುತ್ತಾರೆ. ಜಿಮ್, ವಾಕಿಂಗ್, ಜಾಗಿಂಗ್‌ ಡೈಯೆಟ್ ಹೀಗೆ ತಮ್ಮ ಪ್ರತಿದಿನವನ್ನು ಕ್ರಮಬದ್ಧವಾಗಿ ಕಳೆಯುತ್ತಾರೆ. ಇನ್ನು ಕನ್ನಡ ಇಂಡಸ್ಟ್ರಿ ಲಿ ಅತಿ ಹೆಚ್ಚಾಗಿ ಫಿಟ್ನೆಸ್ ಕಾಯ್ದುಕೊಂಡಿದ್ದ ಮೋಸ್ಟ್ ಹಂಡ್ಸಂ ನಟ ಪುನೀತ್ ರಾಜಕುಮಾರ್ ತಮ್ಮ ಬಾಡಿಯನ್ನು ಸದಾ ವರ್ಕೌಟ್ ಮಾಡುತ್ತಾ ಫಿಟ್ ಅಂಡ್ ಫೈನೆ ಆಗಿ ಇಟ್ಟುಕೊಂಡಿದ್ದರು. ಬಾಡಿ ಬಿಲ್ಡರ್ ಮಾಡುವ ಮೂಲಕ ಏನನ್ನಾದರೂ ಸಾಧಿಸಬೇಕು ಅದೆಷ್ಟೊ ಹುಚ್ಚು ಆಸೆಯನ್ನು ಇಟ್ಟು ಜಿಮ್ನಲ್ಲಿ ವರ್ಕೌಟ್ ಮಾಡುವವರಿಗೆ ನಮ್ಮ ಪ್ರೀತಿಯ ಅಪ್ಪು ಅವರೇ ಸ್ಪೂರ್ತಿ. ಹೀಗಿರುವಾಗ ಅಪ್ಪು ತಮ್ಮ ಒಟ್ಟಾರೆ ವರ್ಕೌಟ್ ಮಾಡಲು ಖರ್ಚು ಮಾಡುತಿದ್ದ ಹಣ ಎಷ್ಟು ಗೋತ್ತಾ ತಿಳಿದುಕೊಳ್ಳಲು ಈ ಸುದ್ದಿಯನ್ನು ಕೊನೆವರೆಗೂ ಓದಿ…

[widget id=”custom_html-5″]

Advertisements
Advertisements

ಅಪ್ಪು ದಿನಬೆಳಗಾದರೆ ಜಿಮ್ ವರ್ಕೌಟ್ ಮಾಡುವ ಮೂಲಕ ತಮ್ಮ ದೇಹದ ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದರು. ಸದಾ ಯಂಗ್ ಆಗಿ ಕಾಣುತ್ತಿದ್ದ ಅಪ್ಪು ಅವರ ದಿ ಸಿಕ್ರೆಟ್ ಎಂದರೆ ವರ್ಕೌಟ್. ದಿನದಲ್ಲಿ ಮಿತವಾದ ಊಟ, ಸಮಯಕ್ಕೆ ಸರಿಯಾಗಿ ಜಾಗಿಂಗ್ ಎಲ್ಲದರಲ್ಲಿಯೂ ಪುನೀತ ಸದಾ ಮುಂದೆ. ಇದಷ್ಟೆ ಅಲ್ಲದೆ ಅಪ್ಪುರಿಗೆ ಸೈಕ್ಲಿಂಗ್ ಎಂದರೆ ಬಲು ಇಷ್ಟ. ಸೈಕ್ಲಿಂಗ್ನಲ್ಲಿ ಎಕ್ಸ್ಪರ್ಟ್ ಆಗಿದ್ದ ಇವರು ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಸೈಕಲ್ ಜಾತಾ ಮಾಡಿದ್ದು ಸಾಕ್ಷಿ. ಜೊತೆಗೆ ಪುನೀತ್ ರಾಜಕುಮಾರ್ ಅವರ ಫಿಟ್ನೆಸ್ ಕುರಿತು ನಮ್ಮ ಕನ್ನಡ ಇಂಡಸ್ಟ್ರಿಯ ಕಲಾವಿದರು ಮಾತ್ರವಲ್ಲದೆ ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಯವರು ಮೆಚ್ಚಿದನ್ನು ನಾವು ಹಲವಾರು ಕಾರ್ಯಕ್ರಮಗಳಲ್ಲಿ ನೋಡಿಯೇ ಇದ್ದೇವೆ.

[widget id=”custom_html-5″]

ಅಪ್ಪು ಯಾವುದಾದರೂ ಖಾಸಗಿ ಕಾರ್ಯಕ್ರಮಗಳಿಗೆ, ಸಮಾರಂಭಗಳಿಗೆ ಹಾಗೂ ಸಂದರ್ಶನ ಮತ್ತು ಅಭಿಮಾನಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಪ್ಪು ಅವರಿಗೆ ಎದುರಾಗುವ ಪ್ರಶ್ನೇ ಒಂದೆ. ಅಪ್ಪು ಸರ್ ನೀವು ಇಷ್ಟು ಫಿಟ್ ಆಗಿ ಹೇಗಿದ್ದೀರಾ. ನಿಮ್ಮ‌ ಫಿಟ್ ನೆಸ್ ಗಾಗಿ ಏನೆಲ್ಲಾ ವರ್ಕೌಟ್ ಮಾಡ್ತೀರಾ ಎಂಬುವುದಾಗಿ ಸೆಲೆಬ್ರಿಟಿಯಿಂದ ಹಿಡಿದು ಅಭಿಮಾನಿಗಳವರೆಗೂ ಫಿಟ್ನೆಸ್ ಟಿಪ್ಸ್ ಅನ್ನು ಕೇಳಿ ಪಡೆಯುತ್ತಿದ್ದರು. ಇನ್ನು ಸದಾ ವರ್ಕೌಟ್ ವರ್ಕೌಟ್ ಎಂದು ಗಮನ ಹರಿಸುತ್ತಿದ್ದ ಪುನೀತ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಮ್ಮ ವರ್ಕೌಟ್ ವಿಡಿಯೋಗಳನ್ನು ಹರಿಬಿಡುವ ಮೂಲಕ ದೇಹದ ಫಿಟ್ನೆಸ್ ಕಾಯ್ದುಕೊಳ್ಳಲು ಪ್ರೇರೇಪಿಸುತ್ತಿದ್ದರು. ಅಷ್ಟೇ ಅಲ್ಲದೆ ತಿಂಗಳಿಗೆ ಬರೋಬ್ಬರಿ 20 ಸಾವಿರ ಹಣವನ್ನು ಜಿಮ್ನಲ್ಲಿ ವರ್ಕೌಟ್ ಮಾಡಲು, ಬೇಕಾದ ವಸ್ತುಗಳು ಹಾಗೂ ಪ್ರೋಟೀನ್ ಡ್ರಿಂಕ್ ಸೇರಿದಂತೆ ಇನ್ನಿತರೆ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹಣ ವೆಚ್ಚ ಮಾಡುತಿದ್ದರು ಎಂದು ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಇಷ್ಟೆಲ್ಲ ವರ್ಕೌಟ್ ಮಾಡುತ್ತಿದ್ದ ಅಪ್ಪು ಇಂದು ನಮೊಂದಿಗಿಲ್ಲ ಎಂಬುವುದೊಂದೆ ವಿಪರ್ಯಾಸ.

[widget id=”custom_html-5″]